ಜನಸ್ಪಂದನ ನ್ಯೂಸ್, ಡೆಸ್ಕ್ : ನಿಮಗೆ ರಾತ್ರಿ ಮಲಗುವ ಮುಂಚೆ ಲೈಟ್ ಆನ್ ಮಾಡಿ ನಿದ್ರೆ ಮಾಡುವ ಅಭ್ಯಾಸ ಇದೆಯೇ? ಆದರೆ ಈ ಅಭ್ಯಾಸ ಒಳ್ಳೆಯದಲ್ಲ.
ಅಧ್ಯಯನದ ಪ್ರಕಾರ ರಾತ್ರಿಯಲ್ಲಿ ಲೈಟ್ ಆರಿಸದೇ, ಅಂದರೆ ಆನ್ ಮಾಡಿ ಮಲಗುವುದು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿ ಎಂದಿದೆ.
ಇದನ್ನು ಓದಿ : ಕರ್ತವ್ಯದಲ್ಲಿದ್ದ ಮಹಿಳಾ ಡಿಎಸ್ಪಿ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ; ವಿಡಿಯೋ Viral.!
ನಿಮ್ಮ ನಿದ್ರೆಯ ಸಮಯದಲ್ಲಿ ಉರಿಯುವ ಲೈಟ್ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಬಹಿರಂಗ ಪಡಿಸಿದೆ.
ಆಸ್ಟ್ರೇಲಿಯಾದ ಫ್ಲಿಂಡರ್ಸ್ ವಿಶ್ವವಿದ್ಯಾಲಯ ದ ಸಂಶೋಧಕರು ಈ ಅಧ್ಯಯನವನ್ನು ನಡೆಸಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.
ಈ ಅಧ್ಯಯನದ ಪ್ರಮುಖ ಲೇಖಕ, ಡಾ. ಆಂಡ್ರ್ಯೂ ಫಿಲಿಪ್ಸ್, ರಾತ್ರಿಯಲ್ಲಿ ಪ್ರಕಾಶಮಾನವಾದ ಬೆಳಕಿಗೆ ಒಡ್ಡಿಕೊಳ್ಳುವುದು ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ ಎಂದಿದ್ದಾರೆ.
ಇದನ್ನು ಓದಿ : Health : ದೇಹದಲ್ಲಿನ ಕೊಲೆಸ್ಟ್ರಾಲ್ ಕರಗಿಸಲು ಈ 5 ಕೆಲಸಗಳನ್ನು ತಪ್ಪದೇ ಮಾಡಿ.
ರಾತ್ರಿಯಲ್ಲಿ ಬೆಳಕಿಗೆ ಅತಿಯಾಗಿ ಒಡ್ಡಿಕೊಳ್ಳುವುದು ನಮ್ಮ ಸಿರ್ಕಾಡಿಯನ್ ಲಯವನ್ನು ಅಡ್ಡಿಪಡಿಸುತ್ತದೆ, ಇದರಿಂದ ಇನ್ಸುಲಿನ್ ಸ್ರವಿಸುವಿಕೆ ಮತ್ತು ಚಯಾಪಚಯ ಕ್ರಿಯೆಯ ಬದಲಾವಣೆಗಳಿಗೆ ಕಾರಣವಾಗುತ್ತದೆ ಎಂದು ಡಾ. ಆಂಡ್ರ್ಯೂ ಫಿಲಿಪ್ಸ್ ಹೇಳಿದ್ದಾರೆ.
ಈ ಬದಲಾವಣೆಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ದೇಹದ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತವೆ, ಇದು ಅಂತಿಮವಾಗಿ ಟೈಪ್ 2 ಮಧುಮೇಹಕ್ಕೆ ಕಾರಣವಾಗುತ್ತದೆ.
ಇದನ್ನು ಓದಿ : ಅತ್ತೆ ಹೊಡೆದಿದ್ದಾರೆ ಎಂದು ಸಹಾಯವಾಣಿ ಕೇಂದ್ರಕ್ಕೆ Call ಮಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್; ಮುಂದೆನಾಯ್ತು ಗೊತ್ತಾ.?
ದೇಹವು (Body) ಕಡಿಮೆ ಮೆಲಟೋನಿನ್ ಹೊಂದಿದ್ದರೆ, ನಿದ್ದೆಯ ಗುಣಮಟ್ಟ ಕಡಿಮೆ ಯಾಗುತ್ತದೆ. ಇದು ರಾತ್ರಿಯ ಹೊತ್ತು ನೀವು ಹಲವಾರು ಬಾರಿ ಎಚ್ಚರಗೊಳ್ಳಲು ಕಾರಣವಾಗುತ್ತದೆ. ವಿಶ್ರಾಂತಿಯ ಕೊರತೆಯು ಬೆಳಿಗ್ಗೆ ಎದ್ದ ತಕ್ಷಣ ಮೈಗ್ರೇನ್ ಗೆ ಕಾರಣವಾಗುತ್ತದೆ. ಇದರಿಂದ ಕ್ರಮೇಣ ನಿದ್ರಾ ಹೀನತೆಯ ಸಮಸ್ಯೆ ಹೆಚ್ಚಾಗುತ್ತದೆ.
ಹೀಗಾಗಿ ನಿದ್ರೆ ಮಾಡುವಾಗ ಸಾಧ್ಯವಾದಷ್ಟು ಸುತ್ತ ಮುತ್ತ ಕತ್ತಲು ಇರುವಂತೆ ನೋಡಿಕೊಳ್ಳುವುದು ಉತ್ತಮ. ಇದರಿಂದ ಮಧುಮೇಹವನ್ನು ತಡೆಯಬಹುದು. ಅಲ್ಲದೇ ಹಾಸಿಗೆಯ ಬಳಿ ಅಥವಾ ಕೋಣೆಯ ಸುತ್ತಮುತ್ತ ಯಾವುದೇ ರೀತಿಯ ಬೆಳಕು ಇರದಂತೆ ಎಚ್ಚರಿಕೆ ವಹಿಸಬೇಕು.