ಜನಸ್ಪಂದನ ನ್ಯೂಸ್, ಡೆಸ್ಕ್ : ಅನೇಕರು ಬೆಳಿಗ್ಗೆ ಎದ್ದ ತಕ್ಷಣ ಮನೆಯಿಂದ ಹೊರಗಡೆ ದೂರ ಹೋಗಿ ವಾಕಿಂಗ್ ಮಾಡಿ ಬರುತ್ತಾರೆ. ಹೀಗೆ ಬೆಳಿಗ್ಗೆ ನಡೆಯುವುದು ತುಂಬಾನೇ ಆರೋಗ್ಯಕ್ಕೆ ಒಳ್ಳೆಯದು ಎಂದು ಅನೇಕರು ಹೇಳುತ್ತಾರೆ.
ಪ್ರತಿಯೊಬ್ಬರೂ ಫಿಟ್ ಮತ್ತು ಫೈನ್ ಆಗಿರಲು ಬೆಳಗಿನ ಜಾವ ನಡೆಯುವುದು ಒಳ್ಳೆಯದು ಎಂದು ಹೇಳುತ್ತಾರೆ. 2 ರಿಂದ 3 ಕಿಲೋಮೀಟರ್‌ಗಳ ಬೆಳಗಿನ ನಡಿಗೆಯು ದೇಹವನ್ನು ದಿನವಿಡೀ ತಾಜಾ ಮತ್ತು ಶಕ್ತಿಯುತವಾಗಿರಿಸುತ್ತದೆ.
ಇದನ್ನು ಓದಿ : Special news : ಯಾವ ರಾಶಿಯವರು ಕಾಲಿಗೆ ಕಪ್ಪು ದಾರವನ್ನು ಕಟ್ಟಿಕೊಳ್ಳಬಾರದು ಗೊತ್ತಾ.?
ನಡಿಗೆಯ ಮೂಲಕ ದೇಹ ತೂಕವನ್ನು ಕಡಿಮೆ ಮಾಡಬಹುದು. ನೀವು ಹೊರಗಡೆ ಹೋಗಿ ನಡೆಯುವವರಾಗಿದ್ದರೆ ಕೊಂಚ ಬೆಟ್ಟ ಗುಡ್ಡಗಳಿರುವ, ತಿರುವು ಮುರುವುಗಳಿರುವ ಜಾಗಗಳನ್ನು ಆಯ್ಕೆ ಮಾಡುವುದು ಉತ್ತಮ. ಇದು ನಿಮ್ಮ ಸೊಂಟ, ಹೊಟ್ಟೆಯ ಕೊಬ್ಬನ್ನು ಕರಗಿಸುವುದರ ಜೊತೆಗೆ ದೇಹಕ್ಕೆ ಆಕಾರ ನೀಡಲು ಸಹಾಯಕವಾಗಿದೆ.
ಇಳಿಜಾರು, ಎತ್ತರದ ಪ್ರದೇಶಗಳಲ್ಲಿ ನಡೆದಾಡಿ, ವೇಗವಾದ ನಡಿಗೆ ಇಲ್ಲವೇ ಸಣ್ಣ ಜಾಗಿಂಗ್ ಅನ್ನು ಮಾಡಬಹುದು. ಇನ್ನೂ ನಿಮ್ಮ ದೇಹದ ತೂಕವನ್ನು ಬಳಸಿಕೊಂಡೇ ಪರಿಣಾಮಕಾರಿ ನಡೆಯುವ ಮೂಲಕ ದೇಹವನ್ನು ಫಿಟ್ ಆಗಿರಿಸಬಹುದು. ಬೆಟ್ಟ ಗುಡ್ಡಗಳಿರುವ ಸ್ಥಳದಲ್ಲಿ ವೇಗವಾದ ಬ್ರಿಸ್ಕ್ ವಾಕ್ ಮಾಡಿ ಇದರಿಂದ ಉತ್ತಮ ಪ್ರಯೋಜನವಿದೆ.
ಇದನ್ನು ಓದಿ : Video : ಪ್ರೇಯಸಿಯನ್ನು ಭೇಟಿಯಾಗಲು ಬುರ್ಖಾ ಧರಿಸಿ ಬಂದು ಸಿಕ್ಕಾಕೊಂಡ ಯುವಕ; ಮುಂದೆನಾಯ್ತು?
ನಡೆಯುವುದಷ್ಟೇಯಲ್ಲದೇ ಸ್ಕ್ವಾಟ್ಸ್, ಲಂಜಸ್, ಪುಶಪ್ಸ್, ಬರ್ಪೀಸ್ ಈ ತರದ ವ್ಯಾಯಾಮಗಳನ್ನು ಸೇರಿಸಿಕೊಳ್ಳಿ. ನಡಿಗೆಯ ನಂತರ ಇಲ್ಲವೇ ನಡಿಗೆಗೂ ಮೊದಲು ಈ ವ್ಯಾಯಾಮ ಮಾಡಿ. ಇಂತಹ ವ್ಯಾಯಾಮಗಳು ವೇಗವಾಗಿ ದೇಹದ ಕೊಬ್ಬನ್ನು ಕರಗಿಸಬಹುದು.
ನಿಮ್ಮ ಪಾದಗಳಲ್ಲಿ ನೀವು ಧರಿಸಿರುವ ಹೆಚ್ಚುವರಿ ತೂಕವು ನಡಿಗೆಯೊಂದಿಗೆ ಹೆಚ್ಚಿನ ಕ್ಯಾಲೊರಿಯನ್ನು ಬರ್ನ್ ಮಾಡುತ್ತದೆ. ಹಾಗಾಗಿ ಆಯಂಕಲ್ ವೈಟ್ಸ್ ಧರಿಸಿ ನಡೆಯುವುದು ಉತ್ತಮ.
ಇದನ್ನು ಓದಿ : Health : ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವವರೇ ಈ ಸುದ್ದಿಯನ್ನೊಮ್ಮೆ ಓದಿ.
ಇದು ನಿಮ್ಮ ಕಾಲುಗಳನ್ನು ಟೋನ್ ಮಾಡುತ್ತದೆ ಹಾಗೂ ಮೀನ ಖಂಡ ತೊಡೆಗಳ ಹೆಚ್ಚುವರಿ ಕೊಬ್ಬನ್ನು ಕರಗಿಸುತ್ತದೆ. ಈ ರೀತಿ ನೀವು ನಡೆಯುವಾಗ ಸಮತೋಲನ ಸಾಧಿಸಲು ಆಯಂಕಲ್ ವೈಟ್ಸ್ ಸಹಕಾರಿಯಾಗಿದೆ.
ನಿಮಗೆ ಎಷ್ಟು ಸಾಧ್ಯವೋ ಅಷ್ಟು ನಡೆದಾಡಲು ಪ್ರಯತ್ನಿಸಿ. ಅದು ಸಣ್ಣ ದೂರವಾದರೂ ಪರವಾಗಿಲ್ಲ ಆದಷ್ಟು ನಡೆದಾಡಿ. ಹತ್ತಿರದ ಶಾಪ್‌ಗೆ ಹೋಗುವುದಾಗಿರಬಹುದು, ದಿನಸಿ ತರುವುದಾಗಿರಬಹುದು. ಕಚೇರಿಗೆ ಹೋಗುವುದಾಗಿರಬಹುದು. ಮೆಟ್ಟಿಲುಗಳನ್ನು ಬಳಸಿ. ವಾಹನಗಳ ಬಳಕೆ ಆದಷ್ಟು ಕಡಿಮೆ ಮಾಡಿ, ಆದಷ್ಟು ನಡೆಯುವುದು ಒಳ್ಳೆಯದು.
ಇದನ್ನು ಓದಿ : ಗಂಡನನ್ನು ಫಾರಿನ್ ಗೆ ಕಳುಹಿಸಿ ಮಾವನೊಂದಿಗೆ ರೊಮ್ಯಾನ್ಸ್; YouTube ನಲ್ಲಿದೆ ಈ ಮೂವಿ.!
ನಡಿಗೆಯೊಂದಿಗೆ ಕ್ಯಾಲೊರಿ ಡಿಫಿಸಿಟ್‌ನಲ್ಲಿದ್ದ ವ್ಯಕ್ತಿಗಳು ಕೆಲವು ವಾರಗಳಲ್ಲಿ ದೇಹದ ತೂಕವನ್ನು ಇಳಿಸಿಕೊಂಡು, ಸೊಂಟ, ಹೊಟ್ಟೆಯ ಕೊಬ್ಬು ಕರಗಿಸಲು ಸಾಧ್ಯವಾಗಿದೆ ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿದೆ.
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.