Saturday, July 13, 2024
spot_img
spot_img
spot_img
spot_img
spot_img
spot_img

ವೇದಿಕೆ ಮೇಲೆಯೇ ನೆಚ್ಚಿನ ಗಾಯಕನ ಕೆನ್ನೆಗೊಂದು Kiss ಮಾಡಿ ಸಸ್ಪೆಂಡ್ ಆದ ಮಹಿಳಾ ಕಾನ್ಸ್‌ಟೇಬಲ್‌.!

spot_img

ಜನಸ್ಪಂದನ ನ್ಯೂಸ್‌, ಡೆಸ್ಕ್ : ವೇದಿಕೆ ಮೇಲೆಯೇ ನೆಚ್ಚಿನ ಗಾಯಕನ ಕೆನ್ನೆಗೊಂದು ಮುತ್ತು ಕೊಟ್ಟು ಅಭಿಮಾನ ಮೆರೆಯಲು ಹೋಗಿದ್ದ ಓರ್ವ ಲೇಡಿ ಕಾನ್ಸ್‌ಟೇಬಲ್‌ (Lady Constable) ಅಮಾನತ್ತಾಗಿರುವ ಘಟನೆ ನಡೆದಿದೆ.

ಹೀಗೆ ನೆಚ್ಚಿನ ಗಾಯಕನ ಕೆನ್ನೆಗೊಂದು ಮುತ್ತು ಕೊಟ್ಟು ಅಮಾನತ್ತು ಶಿಕ್ಷೆಗೊಳಗಾದ ಘಟನೆ ಅಸ್ಸಾಂನಲ್ಲಿ (Assam) ನಡೆದಿದ್ದು, ಘಟನೆಯ ವಿಡಿಯೋ ಸೊಶಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ. ಕಾರ್ಯಕ್ರಮವೊಂದರಲ್ಲಿ ಲೇಡಿ ಕಾನ್ಸ್‌ಟೇಬಲ್‌ ಒಬ್ಬರು ಮೆಚ್ಚಿದ ಗಾಯಕನನ್ನು ವೇದಿಕೆ ಮೇಲೆಯೇ ತಬ್ಬಿಕೊಂಡು, ಗಾಯಕನ ಕೆನ್ನೆಗೊಂದು ಮುತ್ತು ಕೊಟ್ಟು ಅಭಿಮಾನ ಮೆರೆದಿದ್ದಾರೆ.

ಇದನ್ನು ಓದಿ : Health : ಕುಳಿತಲ್ಲೇ ಕಾಲು ಅಲ್ಲಾಡಿಸ್ತೀರಾ.? ಹಾಗಿದ್ರೆ ಈ ಸುದ್ದಿ ಓದಿ.!

ಆದರೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆಯೇ ಮುತ್ತುಕೊಟ್ಟ ಮಹಿಳಾ ಕಾನ್ಸ್‌ಟೇಬಲ್‌ ಮಿಲಿಪ್ರಭಾ ಚುಟಿಯಾ ಅವರನ್ನು ಪೊಲೀಸ್‌ ಇಲಾಖೆಯ ಶಿಸ್ತು ಹಾಗೂ ಸಾರ್ವಜನಿಕ ವರ್ತನೆಯ ನಿಯಮಗಳನ್ನು ಮೀರಿದ ಆರೋಪದಲ್ಲಿ ಅಮಾನತು ಮಾಡಲಾಗಿದೆ.

ಅಸ್ಸಾಂನ ದಿಬ್ರುಗಢದಲ್ಲಿ ಮೇ 10ರಂದು ಮ್ಯೂಸಿಕ್‌ ಕನ್ಸರ್ಟ್‌ ಆಯೋಜಿಸಲಾಗಿತ್ತು.ಅಲ್ಲಿ ಖ್ಯಾತ ಜುಬೀನ್‌ ಗರ್ಗ್‌ ಅವರು ಮ್ಯೂಸಿಕ್‌ ಕನ್ಸರ್ಟ್‌ ನಡೆಸಿಕೊಟ್ಟರು. ಅವರ ಮನಮೋಹಕ ಹಾಡಿಗೆ ಅಲ್ಲಿ ನೆರೆದಿದ್ದ ಎಲ್ಲರೂ ಚಪ್ಪಾಳೆ, ಕೇಕೆ ಮೂಲಕ ಪ್ರೋತ್ಸಾಹ ನೀಡಿದರು.

ಇದನ್ನು ಓದಿ : Urine : ನಿಮ್ಮ ಮೂತ್ರದ ಬಣ್ಣದಿಂದಲೇ ತಿಳಿಯುತ್ತೇ ನಿಮ್ಮ ಆರೋಗ್ಯದ ಹೇಗಿದೆ ಎಂದು.!

ಆದರೆ, ಅಲ್ಲಿಯೇ ಇದ್ದ ಮಹಿಳಾ ಪೇದೆ ಮಿಲಿಪ್ರಭಾ ಚುಟಿಯಾ ಅವರು ವೇದಿಕೆ ಮೇಲೆ ಹತ್ತಿ ಜುಬೀನ್‌ ಗರ್ಗ್‌ ಅವರ ಕೆನ್ನೆಗೆ ಪದೇಪದೆ ಮುತ್ತು ಕೊಟ್ಟರು. ಅಷ್ಟೇ ಅಲ್ಲ, ಗಾಯಕನ ಪಾದ ಮುಟ್ಟಿ ನಮಸ್ಕಾರ ಮಾಡಿದರು. ವಿಡಿಯೊ ವೈರಲ್‌ ಆಗುತ್ತಲೇ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಯಿತು.

ಸಾಮಾಜಿಕ ಜಾಲತಾಣಗಳಲ್ಲಿ ಪೇದೆ ವರ್ತನೆ ಬಗ್ಗೆ ಪರ-ವಿರೋಧ ಚರ್ಚೆಯಾಗಿದೆ. ನೆಚ್ಚಿನ ಗಾಯಕನನ್ನು ತಬ್ಬಿಕೊಂಡು, ಮುತ್ತು ಕೊಡುವುದರಲ್ಲಿ ಅಶ್ಲೀಲತೆ ಏನಿದೆ ಎಂದು ಒಂದಷ್ಟು ಜನ ಹೇಳಿದರೆ, ಪೊಲೀಸ್‌ ಅಧಿಕಾರಿಯಾದವರು ಸಾರ್ವಜನಿಕವಾಗಿ ಹೇಗಿರಬೇಕು ಎಂಬುದು ಗೊತ್ತಿರಬೇಕು ಎಂದು ಒಂದಷ್ಟು ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.‌

spot_img
spot_img
- Advertisment -spot_img