Sunday, September 15, 2024
spot_img
spot_img
spot_img
spot_img
spot_img
spot_img
spot_img

ದುಡ್ಡಲ್ಲ, ಧಾನ್ಯಗಳನ್ನು ವಿತ್​ಡ್ರಾ ಮಾಡುವ ATM.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಇತ್ತೀಚೆಗೆ ಬೀದಿಗೊಂದು, ಶಾಪಿಂಗ್ ಮಾಲ್, ಬ್ಯಾಂಕ್, ಪ್ರಮುಖ ಸ್ಥಳಗಳಲ್ಲಿ ಎಟಿಎಂ ಮಿಷನ್​​ಗಳು ಕಾಣ ಸಿಗುತ್ತವೆ. ದುಡ್ಡು ವಿತ್​ಡ್ರಾ ಮಾಡುವುದಕ್ಕಾಗಿಯೇ ಎಟಿಎಂ ಬಳಸುತ್ತೇವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.

ಆದರೀಗ ಈ ಯಂತ್ರಗಳಲ್ಲಿ ಧಾನ್ಯಗಳನ್ನೂ ತೆಗೆದುಕೊಳ್ಳಬಹುದು ಎಂದರೆ ನೀವು ನಂಬುತ್ತೀರಾ?

ಇದನ್ನು ಓದಿ : ರಾತ್ರಿ Light’s ಆನ್ ಮಾಡಿ ಮಲಗುತ್ತೀರಾ? ಹಾಗಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ.!

ಹೌದು ಇದು ನಿಜ. ಒಡಿಶಾದ ರಾಜಧಾನಿ ಭುವನೇಶ್ವರದ ಮಂಚೇಶ್ವರದಲ್ಲಿ ನೀವು ಯಾವಾಗ ಬೇಕಾದರೂ ರೇಷನ್ ಪಡೆಯಬಹುದಾದ ಧಾನ್ಯಗಳ ಎಟಿಎಂ ಒಂದನ್ನು ಅಳವಡಿಕೆ ಮಾಡಲಾಗಿದೆ.

ಹೀಗಾಗಿ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಾರ್ವಜನಿಕ ಪಡಿತರ ವ್ಯವಸ್ಥೆಯಡಿ ಅಳವಡಿಸಲಾಗಿರುವ ಮೊಟ್ಟಮೊದಲ ಧಾನ್ಯಗಳ ಎಟಿಎಂ ಅಳವಡಿಸಿದ ಹೆಗ್ಗಳಿಕೆ ಒಡಿಶಾ ಸರ್ಕಾರದ ಪಾಲಾಗಿದೆ.

ಇದನ್ನು ಓದಿ : ದ್ವಿತೀಯ PUC ಪಾಸಾಗಿದ್ದೀರಾ.? ಗ್ರಾ. ಪಂ.ಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಈ ಎಟಿಎಂನಲ್ಲಿ ಧಾನ್ಯಗಳ ಟ್ಯಾಂಕ್ ಖಾಲಿಯಾದರೆ ಧಾನ್ಯಗಳ ಚೀಲಗಳಿಂದ ಧಾನ್ಯಗಳನ್ನು ಮತ್ತೆ ಟ್ಯಾಂಕ್ ಗಳಿಗೆ ತುಂಬಿಸಿಕೊಳ್ಳುವ ಸ್ವಯಂಚಾಲಿತ ವ್ಯವಸ್ಥೆ ಇದರಲ್ಲಿದೆ. ಜೊತೆಗೆ, ಇದಕ್ಕೆ ಹೆಚ್ಚು ಜಾಗವೂ ಬೇಕಾಗಿಲ್ಲ.

ವಿಶ್ವ ಆಹಾರ ಸಂಸ್ಥೆಯು ಭಾರತದಲ್ಲಿ ಆರಂಭಿಸಿರುವ ಪೌಷ್ಟಿಕಾಂಶ ಖಾತ್ರಿ ಯೋಜನೆಯ ಅಂಗವಾಗಿ ಒಡಿಶಾ ಸರ್ಕಾರದೊಂದಿಗೆ ಕೈ ಜೋಡಿಸಿ ಈ ಯಂತ್ರವನ್ನು ಜಾರಿಗೆ ತಂದಿದೆ.

ಇದನ್ನು ಓದಿ : ಅತ್ತೆ ಹೊಡೆದಿದ್ದಾರೆ ಎಂದು ಸಹಾಯವಾಣಿ ಕೇಂದ್ರಕ್ಕೆ Call ಮಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್; ಮುಂದೆನಾಯ್ತು ಗೊತ್ತಾ.?

ಪಡಿತರ ಪಡೆಯುವುದು ಹೇಗೆ?
ರೇಷನ್ ಕಾರ್ಡ್ ಹೊಂದಿರುವವರು ಈ ಮೆಷೀನ್ ನಲ್ಲಿ ತಮ್ಮ ಆಧಾರ್ ಕಾರ್ಡ್ ಸಂಖ್ಯೆ ಅಥವಾ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕು. ಬಳಿಕ ಮೆಷೀನ್ ಪರದೆಯ ಮೇಲೆ ಬಯೋಮೆಟ್ರಿಕ್ ಖಾತ್ರಿ ಪಡಿಸುವ ಸಂದೇಶ ಮೂಡುತ್ತದೆ. ಆಗ, ನಿಗದಿತ ಸ್ಥಳದಲ್ಲಿ (ಫಿಂಗರ್ ಪ್ರಿಂಟ್ ಸ್ಕ್ಯಾನಿಂಗ್ ಸ್ಪಾಟ್) ಬೆರಳನ್ನಿಟ್ಟು ತಮ್ಮ ಜೈವಿಕ ಗುರುತನ್ನು ಖಾತ್ರಿಪಡಿಸಬೇಕು.

ಇದು ಖಾತ್ರಿಯಾದ ನಂತರ ಯಂತ್ರವು, ಆ ಕಾರ್ಡ್ ಗೆ ನಿಗದಿಪಡಿಸಿರುವ ಧಾನ್ಯಗಳನ್ನು ಒಂದೊಂದ ನಂತರ ಒಂದರಂತೆ ವಿತರಿಸಲು ಆರಂಭಿಸುತ್ತದೆ. ಹಿಟ್ಟಿನ ಗಿರಣಿಯಲ್ಲಿ ಹಿಟ್ಟು ಬರಲು ಪೈಪ್ ಇರುವಂತೆ ಈ ಮೆಷೀನ್ ಗೆ ಪೈಪ್ ಜೋಡಿಸಲಾಗಿದ್ದು, ಅದರಿಂದ ಧಾನ್ಯಗಳು ವಿತರಣೆಯಾಗುತ್ತವೆ. ಅದನ್ನು ತಾವು ತಂದಿರುವ ಬ್ಯಾಗುಗಳಲ್ಲಿ ಪಡೆಯಬಹುದಾಗಿದೆ.

ಇದನ್ನು ಓದಿ : Video : ಅಪಹರಿಸಿದವನ ಬಿಟ್ಟು ಬರಲ್ಲೊಪ್ಪದ ಮಗು : ಆತ ಕಿಡ್ನ್ಯಾಪರ್ ಅಲ್ಲ, ಹಾಗಾದ್ರೆ ಮತ್ಯಾರು.?

ಒಂದು ಧಾನ್ಯವನ್ನು ಬ್ಯಾಗಿನಲ್ಲಿ ತುಂಬಿಸಿಕೊಂಡ ನಂತರ, ಮತ್ತೊಂದು ಧಾನ್ಯವನ್ನು ಪಡೆಯುವ ಮುನ್ನ ಗ್ರಾಹಕರು ಬ್ಯಾಗನ್ನು ಬದಲಾಯಿಸಿಕೊಳ್ಳಲು ಕೆಲವು ಸೆಕೆಂಡ್ ಗಳ ಕಾಲಾವಕಾಶವನ್ನು ನೀಡಲಾಗುತ್ತದೆ. ಹೀಗೆ, ನಿಗದಿತ ಕಾರ್ಡ್ ಗೆ ಧಾನ್ಯಗಳನ್ನು ಈ ರೀತಿ ನೀಡಲಾಗುತ್ತದೆ.

ನ್ಯಾಯಬೆಲೆ ಅಂಗಡಿಗಳಿಗೆ ಹೋಲಿಸಿದರೆ ಈ ಮೆಷೀನ್ ನ ಮುಂದೆ ನಿಂತು ಧಾನ್ಯಗಳನ್ನು ಪಡೆಯುವುದು ಸುಲಭವೂ ಆಗಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img