ಜನಸ್ಪಂದನ ನ್ಯೂಸ್, ಡೆಸ್ಕ್ : ಜಗತ್ತಿನಲ್ಲಿ ಜನರ ಸ್ವಭಾವ ಮತ್ತು ಹವ್ಯಾಸಗಳು ವಿಭಿನ್ನವಾಗಿರುತ್ತವೆ. ಕೆಲವರಿಗೆ ಪುಸ್ತಕ ಓದುವುದು, ಸಿನಿಮಾ ನೋಡುವುದು, ಕ್ರಾಫ್ಟ್ ಮಾಡುವುದು ಇಷ್ಟವಾಗಿದೆಯಾದರೆ, ಕೆಲವರು ರೀಲ್ಸ್ ಮಾಡುವುದು ಅಥವಾ ಸಂಗೀತದಲ್ಲಿ ತಲ್ಲೀನರಾಗುವುದು ಇಷ್ಟಪಡುತ್ತಾರೆ.
ಆದರೆ ಇತ್ತೀಚೆಗೆ ಒಬ್ಬ ವ್ಯಕ್ತಿಯ ಹವ್ಯಾಸ ಎಲ್ಲರನ್ನೂ ಆಶ್ಚರ್ಯಕ್ಕೊಳಪಡಿಸಿದೆ. ಅವನ ಹವ್ಯಾಸವೇನೆಂದರೆ, ಸಾಯಿಸಿದ ಸೊಳ್ಳೆ (Mosquito) ಗಳನ್ನು ಸಂಗ್ರಹಿಸುವುದು.!
“Heart Blockage ನ ಆರಂಭಿಕ ಲಕ್ಷಣಗಳಿವು! ಒಂದೇ ಬದಲಾವಣೆ ಕಂಡರೂ ನಿರ್ಲಕ್ಷ್ಯ ಬೇಡ”.!
ಸೊಳ್ಳೆ (Mosquito) ಗಳನ್ನು ಸಾಯಿಸಿ ಸಂಗ್ರಹಿಸುವ ಹವ್ಯಾಸ :
ಫೇಸ್‌ಬುಕ್‌ನ Bright Life ಎಂಬ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ವ್ಯಕ್ತಿಯೊಬ್ಬನು ತನ್ನನ್ನು ಕಚ್ಚಿದ ಸೊಳ್ಳೆ (Mosquito) ಗಳನ್ನು ಸಾಯಿಸಿ ಒಂದು ವಿಶೇಷ ರೀತಿಯಲ್ಲಿ ಸಂಗ್ರಹಿಸುತ್ತಿರುವುದು ಕಾಣಬಹುದು.
ಆತ ಸೊಳ್ಳೆ (Mosquito) ಯನ್ನು ಹಿಡಿದು ಡಬ್ಬಿಯೊಳಗೆ ಹಾಕಿ, ಶಾಕ್ ಟ್ರೀಟ್ಮೆಂಟ್ ನೀಡುವ ಮೂಲಕ ಸಾಯಿಸುತ್ತಾನೆ. ನಂತರ ಬಿಳಿ ಹಾಳೆಯ ಮೇಲೆ ಅಂಟಿಸಿ, ಅದರ ಸಾಯಿಸಿದ ದಿನಾಂಕ ಹಾಗೂ ಸಮಯವನ್ನು ಬರೆದು ಸಂಗ್ರಹಿಸುತ್ತಾನೆ.
“Wife on Rent” ; ಇಲ್ಲಿ ಸುಂದರ ಹೆಂಡತಿಯರು ಬಾಡಿಗೆಗೆ ಸಿಗುತ್ತಾರೆ.!
ವೈರಲ್ ವಿಡಿಯೋಗೆ ನೆಟ್ಟಿಗರ ಪ್ರತಿಕ್ರಿಯೆ :
ಈ ವಿಚಿತ್ರ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಹಲವರು ವೀಕ್ಷಿಸಿ ತರಹೇವಾರಿ ಪ್ರತಿಕ್ರಿಯೆ ನೀಡಿದ್ದಾರೆ.
- ಒಬ್ಬ ಬಳಕೆದಾರ, “ಸೊಳ್ಳೆ (Mosquito) ಕೂಡ ದೇವರ ಸೃಷ್ಟಿಯೇ, ಅದು ತನ್ನ ಏಳು ದಿನಗಳ ಜೀವನದಲ್ಲಿ ಒಮ್ಮೆ ರಕ್ತ ಕುಡಿಯುವುದು ಸಹಜ. ಆದರೂ ನಾನು ದಿನಕ್ಕೆ ಕನಿಷ್ಠ 20 ಸೊಳ್ಳೆ ಹೊಡೆದು ಸಾಯಿಸುತ್ತೇನೆ” ಎಂದು ಕಾಮೆಂಟ್ ಮಾಡಿದ್ದಾರೆ.
- ಇನ್ನೊಬ್ಬರು ವ್ಯಂಗ್ಯವಾಗಿ, “ಈತನಿಗೆ ಬೇರೆ ಕೆಲಸವಿಲ್ಲವೇ? ಸೊಳ್ಳೆಗಳನ್ನು ಸಾಯಿಸಿ ಹಾಳೆಗೆ ಅಂಟಿಸಿ ಮರಣ ದಿನಾಂಕ ಬರೆಯೋದು ಒಂದು ವಿಭಿನ್ನ ಅಂತ್ಯಸಂಸ್ಕಾರದಂತೆ ಇದೆ” ಎಂದು ಬರೆದಿದ್ದಾರೆ.
- ಮತ್ತೊಬ್ಬರು, “ಇವನೊಬ್ಬ ಮಾನಸಿಕ ಸಮಸ್ಯೆಗೊಳಗಾದವನಿರಬೇಕು” ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
ವಿಡಿಯೋ :
BSNL ರೂ. 199 ಪ್ರಿಪೇಯ್ಡ್ ಪ್ಲಾನ್ : ಕಡಿಮೆ ದರದಲ್ಲಿ ಹೆಚ್ಚು ಪ್ರಯೋಜನ ನೀಡುವ ಆಕರ್ಷಕ ಪ್ಯಾಕ್
ನೆಟ್ಟಿಗರ ಚರ್ಚೆಗೆ ಕಾರಣ :
ಸಾಧಾರಣವಾಗಿ ಜನರು ಹವ್ಯಾಸಗಳ ಮೂಲಕ ಮನರಂಜನೆ ಪಡೆಯುತ್ತಾರೆ. ಆದರೆ ಈ ವ್ಯಕ್ತಿಯಂತಹ ವಿಚಿತ್ರ ಹವ್ಯಾಸಗಳು ಸಾಮಾಜಿಕ ಜಾಲತಾಣದಲ್ಲಿ ಸದಾ ಕುತೂಹಲ ಹುಟ್ಟಿಸುತ್ತವೆ. ಕೆಲವರಿಗೆ ಇದು ನಗುವಿಗೆ ಕಾರಣವಾದರೆ, ಕೆಲವರಿಗೆ ಆಕ್ರೋಶಕ್ಕೂ ಕಾರಣವಾಗಿದೆ.
Accident : ಕಾರು ಪಲ್ಟಿಯಾಗಿ ಬಸ್‌ಗೆ ಡಿಕ್ಕಿ ; ಸ್ಥಳದಲ್ಲೇ 3 ಜನರ ದುರ್ಮರಣ.!

ಜನಸ್ಪಂದನ ನ್ಯೂಸ್, ಗದಗ : ಗದಗ ಜಿಲ್ಲೆಯ ಹರ್ಲಾಪೂರ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಸಂಜೆ ಸಂಭವಿಸಿದ ಭೀಕರ ಅಪಘಾತ (Accident) ದಲ್ಲಿ ಮೂವರು ವ್ಯಕ್ತಿಗಳು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಕೊಪ್ಪಳ ದಿಕ್ಕಿನಿಂದ ಗದಗ ಕಡೆಗೆ ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ, ರಸ್ತೆ ವಿಭಜಕ (ಡಿವೈಡರ್) ದಾಟಿ ಎದುರುಗಡೆಯಿಂದ ಬರುತ್ತಿದ್ದ ಗೋವಾ ನೋಂದಣಿ ಹೊಂದಿದ ಬಸ್‌ಗೆ ಡಿಕ್ಕಿ ಹೊಡೆದಿದೆ.
Lawyers : ನ್ಯಾಯಾಲಯ ಆವರಣದಲ್ಲಿಯೇ ವಕೀಲರಿಂದ ಪೊಲೀಸರ ಮೇಲೆ ಹಲ್ಲೆ ; FIR ದಾಖಲು.!
ಅಪಘಾತ (Accident) ದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತ (Accident) ದಲ್ಲಿ ಮೃತರನ್ನು ಹಾವೇರಿ ಮೂಲದವರು ಎಂದು ಗುರುತಿಸಲಾಗಿದೆ. ಮೃತಪಟ್ಟವರಲ್ಲಿ ಹಾವೇರಿ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೇದೆಯಾದ ಅರ್ಜುನ್ ನೆಲ್ಲೂರು (34), ಆತನ ಸಂಬಂಧಿ ರವಿ ನೆಲ್ಲೂರು (35) ಹಾಗೂ ಈರಣ್ಣ ಉಪ್ಪಾರ (38) ಸೇರಿದ್ದಾರೆ.
3.65 ಲಕ್ಷ ಅನರ್ಹ BPL Ration Card ರದ್ದು ; ನೋಟಿಸ್ ನೀಡಲು ಆಹಾರ ಇಲಾಖೆ ಕ್ರಮ.!
ಅಪಘಾತ (Accident) ದ ವಿಷಯ ತಿಳಿದ ತಕ್ಷಣ ಗದಗ ಗ್ರಾಮೀಣ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ.

ಪ್ರಾಥಮಿಕ ತನಿಖೆ ಪ್ರಕಾರ, ಗೋವಾ, ಹುಬ್ಬಳ್ಳಿ, ಗದಗ ಮಾರ್ಗವಾಗಿ ಹೊಸಪೇಟೆ ಗೆ ಹೊರಡಿದ್ದ ಬಸ್ ಗೆ ಕೊಪ್ಪಳ ಕಡೆಯಿಂದ ಗದಗ ಮಾರ್ಗವಾಗಿ ಬಂಕಾಪೂರ ಕಡೆಗೆ ಹೊರಟಿದ್ದ ಕಾರು ಢಿಕ್ಕಿ ಹೊಡೆದು ಅಪಘಾತ (Accident) ಸಂಭವಿಸಿದೆ.
ಸೇತುವೆ ಕೆಳಗೆ ಚೀಲದಲ್ಲಿ ಸುತ್ತಿದ Woman ಶವ ಪತ್ತೆ ; ಶಾಕ್ ಆದ ಸ್ಥಳೀಯರು.!
ಕಾರು ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಶಂಕಿಸಲಾಗಿದೆ.
ಈ ಘಟನೆ ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ. ಅಪಘಾತ (Accident) ದ ವಿಡಿಯೋ ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.







