ಜನಸ್ಪಂದನ ನ್ಯೂಸ್, ಡೆಸ್ಕ್ : ಆಗ್ನೇಯ ಏಷ್ಯಾದ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾದ ಥೈಲ್ಯಾಂಡ್ ಈಗ ಒಂದು ವಿಚಿತ್ರ ಸಾಮಾಜಿಕ ಪ್ರವೃತ್ತಿಯಿಂದ ಜಾಗತಿಕ ಚರ್ಚೆಗೆ ಕಾರಣವಾಗಿದೆ. ಇಲ್ಲಿ “ವೈಫ್ ಆನ್ ರೆಂಟ್” (Wife on Rent) ಅಥವಾ “ವೈಫ್ ಆನ್ ಹೈರ್” ಎಂಬ ಸೇವೆಯ ಬಗ್ಗೆ ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಪಟ್ಟಾಯಾದಲ್ಲಿ ಪ್ರಾರಂಭವಾಗಿರುವ ಈ ಸೇವೆಯಲ್ಲಿ, ನಿರ್ದಿಷ್ಟ ಹಣ ಪಾವತಿಸಿದರೆ ಮಹಿಳೆಯರು ತಾತ್ಕಾಲಿಕವಾಗಿ ಪತ್ನಿಯ ಪಾತ್ರವಹಿಸುತ್ತಾರೆ. ಅವರು ಅಡುಗೆ, ಶಾಪಿಂಗ್ ಮತ್ತು ದಿನನಿತ್ಯದ ಕೆಲಸಗಳಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಇದು ಕಾನೂನುಬದ್ಧ ವಿವಾಹವಲ್ಲ, ಕೇವಲ ಒಪ್ಪಂದದ ಆಧಾರದ ಮೇಲೆ ತಾತ್ಕಾಲಿಕ ಸಂಬಂಧ ಮಾತ್ರ.
ವರ್ಷಕ್ಕೆ ಕೇವಲ ರೂ.520 ಕಟ್ಟಿದರೆ 10 ಲಕ್ಷ Insurance cover ; ಪೋಸ್ಟ್ ಆಫೀಸ್‌ನ ವಿಶೇಷ ಯೋಜನೆ.!
ಸಾಮಾಜಿಕ ಚರ್ಚೆಗೆ ಕಾರಣವಾದ ಈ ವಿಷಯವನ್ನು “Thai Taboo – The Rise of Wife Rental in Modern Society” ಎಂಬ ಪುಸ್ತಕದಲ್ಲೂ ವಿವರಿಸಲಾಗಿದೆ.
ಲೇಖಕ ಲಾವರ್ಟ್ ಎ. ಎಮ್ಯಾನುಯೆಲ್ ಪ್ರಕಾರ, ಬಡತನದಿಂದ ಬಳಲುತ್ತಿರುವ ಕೆಲವು ಮಹಿಳೆಯರು ತಮ್ಮ ಕುಟುಂಬವನ್ನು ಪೋಷಿಸಲು ಸ್ವಇಚ್ಛೆಯಿಂದ ಈ ಕೆಲಸದಲ್ಲಿ ತೊಡಗುತ್ತಿದ್ದಾರೆ. ಹೆಚ್ಚಿನವರು ಬಾರ್‌ಗಳು ಮತ್ತು ನೈಟ್‌ಕ್ಲಬ್‌ಗಳಲ್ಲಿ ಕೆಲಸ ಮಾಡುವ ವೇಳೆ ವಿದೇಶಿ ಪ್ರವಾಸಿಗರನ್ನು ಪರಿಚಯಿಸಿಕೊಂಡು ಒಪ್ಪಂದಕ್ಕೆ ಬರುತ್ತಾರೆ.
“ಬೆಳಗ್ಗೆ ಎದ್ದಾಗ ಈ 3 ಲಕ್ಷಣಗಳು ಕಂಡು ಬಂದರೆ, ಅದು Kidney ಹಾನಿಯಾಗಿರುವ ಸಂಕೇತವಾಗಿರಬಹುದು”
ಬಾಡಿಗೆ ಪತ್ನಿಯರ (Wife on Rent) ಶುಲ್ಕ :
- ಮಹಿಳೆಯ ವಯಸ್ಸು,
- ಸೌಂದರ್ಯ ಮತ್ತು
- ಒಪ್ಪಂದದ ಅವಧಿಯನ್ನು ಅವಲಂಬಿಸಿರುತ್ತದೆ.
ಕೆಲವು ದಿನಗಳಿಂದ ಹಿಡಿದು ತಿಂಗಳುಗಳವರೆಗೆ ಈ ಸಂಬಂಧ ಮುಂದುವರಿಯಬಹುದು.
ಬಾಡಿಗೆ ಪತ್ನಿಯರ (Wife on Rent) ದರ :
ವರದಿಗಳ ಪ್ರಕಾರ, ಬಾಡಿಗೆ ಪತ್ನಿಯರ ದರ 1,600 ಡಾಲರ್ (ಸುಮಾರು ರೂ.1.3 ಲಕ್ಷ) ರಿಂದ 1,16,000 ಡಾಲರ್‌ವರೆಗೆ (ಸುಮಾರು ರೂ.96 ಲಕ್ಷ) ತಲುಪುತ್ತದೆ.
Uric-acid : “ಕೇವಲ 2 ರೂ.ನ ಈ ಎಲೆ ಹರಳುಗಟ್ಟಿದ Uric Acid ನ್ನು ಕರಗಿಸುತ್ತದೆ.!”
ಈ ಅಭ್ಯಾಸವು ಜಪಾನ್ ಮತ್ತು ಕೊರಿಯಾದಲ್ಲಿನ ಇದೇ ರೀತಿಯ ಸೇವೆಗಳಿಂದ ಪ್ರೇರಿತವಾಗಿದೆ. ಅಲ್ಲಿ ‘ಗರ್ಲ್‌ಫ್ರೆಂಡ್ ಫಾರ್ ಹೈರ್’ ಸೇವೆಗಳು ಈಗಾಗಲೇ ಜನಪ್ರಿಯವಾಗಿವೆ. ಇದೀಗ ಥೈಲ್ಯಾಂಡ್ ಕೂಡ Wife on Rent ನ್ನು ಅಳವಡಿಸಿಕೊಂಡಿದೆ.

ಥೈಲ್ಯಾಂಡ್ ಸರ್ಕಾರ Wife on Rent ಈ ಪ್ರವೃತ್ತಿಯನ್ನು ಗಮನಕ್ಕೆ ತೆಗೆದುಕೊಂಡಿದ್ದು, ಮಹಿಳೆಯರ ಹಕ್ಕು ಮತ್ತು ಸುರಕ್ಷತೆಗಾಗಿ ನಿಯಂತ್ರಣ ಕಾನೂನು ಜಾರಿಗೆ ತರಲು ಚಿಂತನೆ ನಡೆಸುತ್ತಿದೆ. ಸಮಾಜದಲ್ಲಿ ಬದಲಾಗುತ್ತಿರುವ ಮನೋಭಾವ ಮತ್ತು ಪ್ರವಾಸಿಗರ ಆಸಕ್ತಿ ಈ ವಿಚಿತ್ರ ಸೇವೆಗೆ ಉತ್ತೇಜನ ನೀಡುತ್ತಿದೆ.
ವರ್ಷಕ್ಕೆ ಕೇವಲ ರೂ.520 ಕಟ್ಟಿದರೆ 10 ಲಕ್ಷ Insurance cover ; ಪೋಸ್ಟ್ ಆಫೀಸ್‌ನ ವಿಶೇಷ ಯೋಜನೆ.!

ಜನಸ್ಪಂದನ ನ್ಯೂಸ್, ವಿಶೇಷ : ಮಾನವನ ಆಯಸ್ಸು ಎಷ್ಟರವರೆಗೆ ಎಂಬುದನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಅಕಾಲಿಕ ಸಾವು ಅಥವಾ ಅಪಘಾತದಂತಹ ಅನಾಹುತಗಳ ಸಂದರ್ಭದಲ್ಲಿ ಕುಟುಂಬದ ಭವಿಷ್ಯವನ್ನು ಭದ್ರಗೊಳಿಸಲು ವಿಮೆ (Insurance) ಯ ಅಗತ್ಯತೆ ಹೆಚ್ಚಾಗಿದೆ. ಆದರೆ ಬಹುತೇಕ ವಿಮಾ ಪಾಲಿಸಿಗಳಿಗೆ ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ.
ಈ ಹಿನ್ನೆಲೆಯಲ್ಲಿ ಭಾರತೀಯ ಅಂಚೆ ಪೇಮೆಂಟ್ಸ್ ಬ್ಯಾಂಕ್ (IPPB) ಮೂಲಕ ಲಭ್ಯವಿರುವ ಒಂದು ಆಕರ್ಷಕ ಯೋಜನೆ ವರ್ಷಕ್ಕೆ ಕೇವಲ ರೂ.520 ಪಾವತಿಸಿದರೆ ರೂ.10 ಲಕ್ಷದವರೆಗೆ ವಿಮಾ (Insurance) ರಕ್ಷಣೆ ಒದಗಿಸುತ್ತದೆ.
ಮದುವೆ ಭರವಸೆ ನೀಡಿ ವಕೀಲೆ ಮೇಲೆ ದುರುಳತನ : Police ಕಾನ್ಸ್‌ಟೇಬಲ್ ಅರೆಸ್ಟ್.!
🔹 ರೂ.520 ಪಾವತಿಸಿದರೆ ಸಿಗುವ ಸೌಲಭ್ಯಗಳು :
- ಅಪಘಾತದಿಂದ ಸಾವನ್ನಪ್ಪಿದಲ್ಲಿ ಅಥವಾ ಶಾಶ್ವತ ಅಂಗವೈಕಲ್ಯ ಉಂಟಾದಲ್ಲಿ ರೂ.10 ಲಕ್ಷ ಪರಿಹಾರ.
- ಇಬ್ಬರು ಮಕ್ಕಳಿಗೆ ತಲಾ ರೂ.1 ಲಕ್ಷದವರೆಗೆ ಶಿಕ್ಷಣ ಸಹಾಯಧನ.
- ಆಸ್ಪತ್ರೆ ಪ್ರವೇಶಕ್ಕೆ ದಿನಕ್ಕೆ ರೂ.1,000 (ಗರಿಷ್ಠ 10 ದಿನಗಳವರೆಗೆ).
- ಕುಟುಂಬ ಬೇರೆ ನಗರದಲ್ಲಿ ವಾಸಿಸುತ್ತಿದ್ದರೆ ಸಾರಿಗೆ ವೆಚ್ಚಕ್ಕೆ ರೂ.25,000.
- ಅಂತ್ಯಕ್ರಿಯೆಗೆ ರೂ.5,000 ನೆರವು.
Blood cancer : ರಕ್ತ ಕ್ಯಾನ್ಸರ್‌ನ 7 ಎಚ್ಚರಿಕೆ ಲಕ್ಷಣಗಳಿವು ; ಇವುಗಳನ್ನು ನಿರ್ಲಕ್ಷಿಸಬೇಡಿ.!
🔹 ರೂ.755 ಪಾವತಿಸಿದರೆ ಸಿಗುವ ಹೆಚ್ಚುವರಿ ಪ್ರಯೋಜನಗಳು :
- ರೂ.15 ಲಕ್ಷದವರೆಗೆ ವಿಮಾ ಸುರಕ್ಷತೆ.
- ಭಾಗಶಃ ಅಥವಾ ಸಂಪೂರ್ಣ ಅಂಗವೈಕಲ್ಯಕ್ಕೆ ಪರಿಹಾರ.
- ವೈದ್ಯಕೀಯ ವೆಚ್ಚಗಳಿಗೆ ರೂ.1 ಲಕ್ಷದವರೆಗೆ ಕವರ್.
- ಮಕ್ಕಳ ಉನ್ನತ ಶಿಕ್ಷಣ ಮತ್ತು ಮದುವೆಗೆ ರೂ.1 ಲಕ್ಷ ಸಹಾಯ.
🔹 ಯಾವ ಅಪಘಾತಗಳಿಗೆ ಕವರ್ (Insurance cover) ಸಿಗುತ್ತದೆ?
ರಸ್ತೆ ಅಪಘಾತ ಮಾತ್ರವಲ್ಲದೆ, ರೈಲು ಅಥವಾ ಬಸ್ ಪ್ರಯಾಣದ ವೇಳೆ, ಎಲೆಕ್ಟ್ರಿಕ್ ಶಾಕ್, ಹಾವು ಕಡಿತ ಸೇರಿದಂತೆ ಹಲವಾರು ಅಪಘಾತಗಳಿಗೆ ಈ ವಿಮೆ (Insurance) ಅನ್ವಯಿಸುತ್ತದೆ.
Blood cancer : ರಕ್ತ ಕ್ಯಾನ್ಸರ್‌ನ 7 ಎಚ್ಚರಿಕೆ ಲಕ್ಷಣಗಳಿವು ; ಇವುಗಳನ್ನು ನಿರ್ಲಕ್ಷಿಸಬೇಡಿ.!
🔹 ಯಾರು ಪಾಲಿಸಿಗೆ ಅರ್ಹರು?
- ವಯಸ್ಸು 18 ರಿಂದ 65 ವರ್ಷದೊಳಗಿನವರು.
- ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಖಾತೆ ಹೊಂದಿರಬೇಕು.
- ಖಾತೆ ತೆರೆಯಲು ಕೇವಲ ರೂ.100 ಸಾಕು.
ಈ ಯೋಜನೆ ಪಡೆಯಲು ಸಮೀಪದ ಪೋಸ್ಟ್ ಆಫೀಸ್ ಪೇಮೆಂಟ್ಸ್ ಬ್ಯಾಂಕ್ ಶಾಖೆಗೆ ಭೇಟಿ ನೀಡಿ. ಪ್ರತಿವರ್ಷ ಪಾವತಿ ನೇರವಾಗಿ ಬ್ಯಾಂಕ್ ಖಾತೆಯಿಂದ ಕಟ್ ಮಾಡಿಸಿಕೊಳ್ಳುವ ವ್ಯವಸ್ಥೆಯೂ ಇದೆ.
ಹಗಲು ರಾತ್ರಿ Phone ಬಳಕೆ ಮಾಡುತ್ತಿದ್ದೀರಾ? ಹಾಗಾದ್ರೆ ನಿಮ್ಮ ದೇಹಕ್ಕೆ ಅಪಾಯ ಕಾದಿದೆ.!
👉 ಇದು ಕಡಿಮೆ ಪ್ರೀಮಿಯಂನಲ್ಲಿ ಹೆಚ್ಚಿನ ವಿಮಾ (Insurance) ಕವರ್ ನೀಡುವ ಅಂಚೆ ಇಲಾಖೆಯ ವಿಶೇಷ ಯೋಜನೆ. ಕುಟುಂಬದ ಭವಿಷ್ಯವನ್ನು ಭದ್ರಗೊಳಿಸಲು ಇಂತಹ ಯೋಜನೆಗಳ ಪ್ರಯೋಜನ ಪಡೆಯುವುದು ಒಳಿತು.







