ಜನಸ್ಪಂದನ ನ್ಯೂಸ್, ಮೈಸೂರು : ಚಿರತೆ ಹಿಡಿಯಲು ಬೋನಿನಲ್ಲಿ ಹಸುವಿನ ಕರು (Calf) ಇಟ್ಟ ಘಟನೆಯೊಂದು ನಡೆದಿದ್ದು, ಇಲ್ಲಿ ಚಿರತೆ ಬೋನಿಗೆ ಬಿದ್ದರು ಕರುವನ್ನು ತಿನ್ನದೇ ಬಿಟ್ಟ ಅಪರೂಪದ ಘಟನೆಯ ವಿಡಿಯೋ ವೈರಲ್ ಆಗಿದೆ.
ಪರಂಪರೆಯಿಂದಲೂ ಎಲ್ಲರೂ ಕೇಳಿರುವ “ಪುಣ್ಯಕೋಟಿ ಕಥೆ” ಯಲ್ಲಿ ಹಸುವಿನ ಪ್ರಾಮಾಣಿಕತೆಗೆ ಮೆಚ್ಚಿದ ಹುಲಿ ಹಸುವನ್ನು ಬಿಟ್ಟುಕೊಡುತ್ತದೆ. ಇದೇ ರೀತಿಯ ಘಟನೆಯೊಂದು ಮೈಸೂರು ಜಿಲ್ಲೆಯ ಹೆಚ್‌ಡಿ ಕೋಟೆಯಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
Lawyers : ನ್ಯಾಯಾಲಯ ಆವರಣದಲ್ಲಿಯೇ ವಕೀಲರಿಂದ ಪೊಲೀಸರ ಮೇಲೆ ಹಲ್ಲೆ ; FIR ದಾಖಲು.!
ಚಿರತೆ ಹಾವಳಿಯಿಂದ ಬೇಸತ್ತ ಗ್ರಾಮಸ್ಥರು :
ಹೆಚ್‌ಡಿ ಕೋಟೆ ತಾಲೂಕಿನ ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದರಿಂದ ಸ್ಥಳೀಯರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಹಿಡಿಯಲು ಬೋನ್ ಇಟ್ಟರು. ಆದರೆ ಬೋನಿನೊಳಗೆ ಆಮಿಷವಾಗಿ ಪುಟ್ಟ ಕರು (Calf) ವನ್ನು ಕಟ್ಟಿದರು.
ಕರುವಿಗೆ ಏನೂ ಮಾಡದ ಚಿರತೆ :
ಬೋನಿಗೆ ಬಿದ್ದ ಚಿರತೆ ಕರು (Calf) ವನ್ನು ತಿನ್ನದೇ, ಅದಕ್ಕೆ ಯಾವುದೇ ಹಾನಿ ಮಾಡದೇ ಪಕ್ಕದಲ್ಲೇ ಸುಮ್ಮನೆ ಕುಳಿತು ಜನರತ್ತ ಆಕ್ರೋಶದಿಂದ ಗುರುಗುಡುತ್ತಿರುವ ದೃಶ್ಯ ವಿಡಿಯೋದಲ್ಲಿ ದಾಖಲಾಗಿದೆ. ಈ ವಿಡಿಯೋವನ್ನು gandhadagudi_namana ಇನ್ಸ್ಟಾಗ್ರಾಂ ಪೇಜ್ ಹಂಚಿಕೊಂಡಿದ್ದು, ಸಾವಿರಾರು ಮಂದಿ ವೀಕ್ಷಿಸಿ ಪ್ರತಿಕ್ರಿಯೆ ನೀಡಿದ್ದಾರೆ.
BSNL ರೂ. 199 ಪ್ರಿಪೇಯ್ಡ್ ಪ್ಲಾನ್ : ಕಡಿಮೆ ದರದಲ್ಲಿ ಹೆಚ್ಚು ಪ್ರಯೋಜನ ನೀಡುವ ಆಕರ್ಷಕ ಪ್ಯಾಕ್
ವಿಡಿಯೋದಲ್ಲಿ ಬಿಳಿ-ಕಂದು ಮಿಶ್ರಿತ ಬಣ್ಣದ ಕರು (Calf) ಭಯದಿಂದ ನಡುಗುತ್ತಿರುವುದು ಗೋಚರಿಸಿದರೆ, ಪಕ್ಕದಲ್ಲಿದ್ದ ಚಿರತೆ ಜನರತ್ತ ಕಣ್ಣಿಟ್ಟು ಆಕ್ರೋಶದಿಂದ ನೋಡುವುದನ್ನು ಕಾಣಬಹುದು.
ಗ್ರಾಮಸ್ಥರ ಮತ್ತು ನೆಟಿಜನ್‌ಗಳ ಆಕ್ರೋಶ :
ವಿಡಿಯೋ ನೋಡಿದ ಅನೇಕರು ಅರಣ್ಯ ಇಲಾಖೆಯ ಕ್ರಮವನ್ನು ಪ್ರಶ್ನಿಸಿದ್ದಾರೆ. “ಚಿರತೆಯನ್ನು ಹಿಡಿಯಲು ಕರು (Calf) ಕಟ್ಟುವುದು ಸರಿಯಲ್ಲ, ಬದಲಾಗಿ ಬೋನಿನಲ್ಲಿ ಆ ಕ್ರಮ ಕೈಗೊಂಡವರನ್ನೇ ಕಟ್ಟಬೇಕಿತ್ತು” ಎಂದು ಕೆಲವರು ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.
ಮತ್ತೊಬ್ಬರು, “ಪುಣ್ಯಕೋಟಿ ಕಥೆ ಕೇಳಿದ್ದೆವು, ಆದರೆ ನಿಜ ಜೀವನದಲ್ಲಿ ಇಂತಹ ದೃಶ್ಯ ನೋಡಿದ್ದೇವೆ” ಎಂದು ಬರೆದಿದ್ದಾರೆ. ಇನ್ನೊಬ್ಬರು “ಇಂತಹ ಮುಗ್ಧ ಪ್ರಾಣಿಯನ್ನು ಬಲಿಯಾಗಿ ಬಳಸುವುದು ತಪ್ಪು, ಇದಕ್ಕೆ ಕಾರಣರಾದವರಿಗೇ ಇದರ ಪರಿಣಾಮ ಎದುರಿಸಬೇಕಾಗುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“Wife on Rent” ; ಇಲ್ಲಿ ಸುಂದರ ಹೆಂಡತಿಯರು ಬಾಡಿಗೆಗೆ ಸಿಗುತ್ತಾರೆ.!
ಇತ್ತೀಚಿನ ಘಟನೆ ನೆನಪಿಗೆ :
ಇದಕ್ಕೂ ಮೊದಲು, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರದಲ್ಲಿ ಹುಲಿಯನ್ನು ಸೆರೆಹಿಡಿಯಲು ವಿಫಲವಾದ ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಗ್ರಾಮಸ್ಥರು ಬೋನಿನಲ್ಲಿ ಹಾಕಿ ಬಂಧಿಸಿದ್ದರು. ಆ ಘಟನೆಯ ನಂತರ ಗ್ರಾಮಸ್ಥರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
ವಿಡಿಯೋ ವೈರಲ್ ; ಅರಣ್ಯ ಇಲಾಖೆಗೆ ಟೀಕೆ :
ಈಗ ಹೆಚ್‌ಡಿ ಕೋಟೆಯ ಘಟನೆಯೂ ಅದೇ ರೀತಿಯಲ್ಲಿ ಜನರ ಗಮನ ಸೆಳೆದಿದೆ. ಪ್ರಾಣಿಗಳನ್ನು ಹಿಡಿಯುವಲ್ಲಿ ಸರಿಯಾದ ಕ್ರಮ ಕೈಗೊಳ್ಳದೇ, ನಿರಪರಾಧ ಕರು (Calf) ಗಳನ್ನು ಬೋನಿಗೆ ಕಟ್ಟಿರುವುದರಿಂದ ಅರಣ್ಯ ಇಲಾಖೆಯ ಮೇಲೆ ಟೀಕೆ ಹೆಚ್ಚಾಗಿದೆ.
ಚಿರತೆ ಹಿಡಿಯಲು ಬೋನಿನಲ್ಲಿ ಕರು (Calf) ಇಟ್ಟ ವಿಡಿಯೋ :
View this post on Instagram
ಈ ಲಕ್ಷಣಗಳಿದ್ದರೆ ಅದು Liver Cancer ಆಗಿರಬಹುದು ; ತಕ್ಷಣ ವೈದ್ಯರನ್ನು ಸಂಪರ್ಕಿಸಿ.!

ಜನಸ್ಪಂದನ ನ್ಯೂಸ್, ಆರೋಗ್ಯ : ಯಕೃತ್ತಿನ ಕ್ಯಾನ್ಸರ್ (Liver Cancer) ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಈ ಕಾಯಿಲೆಯನ್ನು ಆರಂಭದಲ್ಲೇ ಪತ್ತೆ ಮಾಡುವುದು ಅತೀ ಅಗತ್ಯ, ಈ ಕಾಯಿಲೆಯನ್ನು ಸಾಮಾನ್ಯವಾಗಿ ಅಂತಿಮ ಹಂತದಲ್ಲೇ ಪತ್ತೆಹಚ್ಚಲಾಗುವುದರಿಂದ, ಚಿಕಿತ್ಸೆಯ ಯಶಸ್ಸಿನ ಪ್ರಮಾಣ ಕಡಿಮೆ.
ಇನ್ನು ಕ್ಯಾನ್ಸರ್‌ನಲ್ಲಿಯೂ ಕೂಡ ಹಲವಾರು ವಿಧಗಳಿದ್ದು, ಅದರಲ್ಲಿ ಯಕೃತ್ ಅಥವಾ ಲಿವರ್ ಕ್ಯಾನ್ಸರ್ (Liver Cancer) ಕೂಡ ಒಂದು. ತಜ್ಞರ ಪ್ರಕಾರ, ಹೊಟ್ಟೆಯ ಮೇಲಿನ ಬಲಭಾಗದಲ್ಲಿ ನಿರಂತರ ನೋವು ಕಾಣಿಸಿಕೊಂಡರೆ, ಅದನ್ನು ನಿರ್ಲಕ್ಷಿಸದೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಅಗತ್ಯ.
Lawyers : ನ್ಯಾಯಾಲಯ ಆವರಣದಲ್ಲಿಯೇ ವಕೀಲರಿಂದ ಪೊಲೀಸರ ಮೇಲೆ ಹಲ್ಲೆ ; FIR ದಾಖಲು.!
ಲಿವರ್ ಕ್ಯಾನ್ಸರ್ (Liver Cancer) ನ ಲಕ್ಷಣಗಳು ಯಾವುವು?
ಪ್ರಾರಂಭಿಕ ಹಂತದಲ್ಲಿ ಲಕ್ಷಣಗಳು ಹೆಚ್ಚು ಸ್ಪಷ್ಟವಾಗದಿದ್ದರೂ, ಕೆಲವೇ ಸಮಯದಲ್ಲಿ ಕೆಳಗಿನಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ:
- ಹೊಟ್ಟೆಯ ಬಲಭಾಗದಲ್ಲಿ ತೀವ್ರ ಅಥವಾ ಮಧ್ಯಂತರ ನೋವು.
- ಬೆನ್ನು ಹಾಗೂ ಬಲಭುಜಕ್ಕೆ ಹರಡುವ ನೋವು.
- ದೇಹದಲ್ಲಿ ನಿರಂತರ ಆಯಾಸ, ಶಕ್ತಿ ಕುಂದುವುದು.
- ಇದ್ದಕ್ಕಿದ್ದಂತೆ ತೂಕ ಕಡಿಮೆಯಾಗುವುದು.
- ಹಸಿವು ಕಡಿಮೆಯಾಗುವುದು ಅಥವಾ ಆಹಾರ ತಿನ್ನಲು ಇಷ್ಟವಿಲ್ಲದಿರುವುದು.
- ಕಾಮಾಲೆ – ಚರ್ಮ ಹಾಗೂ ಕಣ್ಣು ಹಳದಿ ಬಣ್ಣ ತಾಳುವುದು.
- ಹೊಟ್ಟೆ ಉಬ್ಬುವುದು ಅಥವಾ ಭಾರವಾದಂತೆ ಅನುಭವವಾಗುವುದು.
- ಆಗಾಗ್ಗೆ ವಾಕರಿಕೆ ಅಥವಾ ವಾಂತಿ.
ತಜ್ಞರ ಪ್ರಕಾರ, ಈ ಲಕ್ಷಣಗಳಲ್ಲಿ ಒಂದಾದರೂ ಮುಂದುವರಿದರೆ ತಕ್ಷಣ ವೈದ್ಯಕೀಯ ತಪಾಸಣೆ ಮಾಡಿಸುವುದು ಅತ್ಯಂತ ಮುಖ್ಯ.
ಸೇತುವೆ ಕೆಳಗೆ ಚೀಲದಲ್ಲಿ ಸುತ್ತಿದ Woman ಶವ ಪತ್ತೆ ; ಶಾಕ್ ಆದ ಸ್ಥಳೀಯರು.!
ಲಿವರ್ ಕ್ಯಾನ್ಸರ್ (Liver Cancer) ಅಪಾಯ ಹೆಚ್ಚಾಗಲು ಕಾರಣಗಳೇನು?
- ದೀರ್ಘಕಾಲೀನ ಮದ್ಯಪಾನ – ನಿಯಮಿತವಾಗಿ ಮದ್ಯ ಸೇವಿಸುವವರು ಯಕೃತ್ತಿನ ಹಾನಿಗೆ ಹೆಚ್ಚು ಒಳಗಾಗುತ್ತಾರೆ.
- ಹೆಪಟೈಟಿಸ್ ಬಿ ಮತ್ತು ಸಿ ವೈರಸ್ ಸೋಂಕು – ದೀರ್ಘಕಾಲದ ಸೋಂಕಿನಿಂದ ಯಕೃತ್ತಿನ ಸಿರೋಸಿಸ್ ಹಾಗೂ ಕ್ಯಾನ್ಸರ್ ಅಪಾಯ ಹೆಚ್ಚುತ್ತದೆ.
- ಕೊಬ್ಬಿನ ಯಕೃತ್ತಿನ ಸಮಸ್ಯೆ (Fatty Liver) – ಅತಿಯಾದ ಕೊಬ್ಬಿನ ಸಂಗ್ರಹಣೆಯಿಂದ ಯಕೃತ್ತಿನ ಕಾರ್ಯ ಕುಗ್ಗುತ್ತದೆ.
- ಬೊಜ್ಜು ಮತ್ತು ಅಸಮತೋಲಿತ ಆಹಾರ ಪದ್ಧತಿ – ದೇಹದ ತೂಕ ನಿಯಂತ್ರಣ ತಪ್ಪಿದಾಗ ಅಪಾಯ ಹೆಚ್ಚಾಗುತ್ತದೆ.
- ಧೂಮಪಾನ ಮತ್ತು ಅನಾರೋಗ್ಯಕರ ಜೀವನಶೈಲಿ – ಯಕೃತ್ತಿನ ಕಾರ್ಯಕ್ಷಮತೆ ಹಾಳಾಗಲು ಪ್ರಮುಖ ಕಾರಣ.
ಯಾರಿಗೆ ಹೆಚ್ಚು ಅಪಾಯ?
- ನಿಯಮಿತವಾಗಿ ಮದ್ಯಪಾನ ಮಾಡುವವರು.
- ಹೆಪಟೈಟಿಸ್ ಬಿ ಅಥವಾ ಸಿ ಸೋಂಕು ಹೊಂದಿರುವವರು.
- ಮಧುಮೇಹ ರೋಗಿಗಳು.
- ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ (NAFLD) ಇರುವವರು.
- ಕುಟುಂಬದಲ್ಲಿ ಯಕೃತ್ತಿನ ಕಾಯಿಲೆ ಅಥವಾ ಕ್ಯಾನ್ಸರ್ (Liver Cancer) ಇತಿಹಾಸ ಇರುವವರು.
Lions : “ಜೀಪ್‌ನಿಂದ ಇಳಿದ ಸಿಬ್ಬಂದಿಯನ್ನು ಎಳೆದೊಯ್ದು ಬಲಿ ಪಡೆದ ಸಿಂಹಗಳ ಗುಂಪು.!”
ಲಿವರ್ ಕ್ಯಾನ್ಸರ್ (Liver Cancer) ತಡೆಗಟ್ಟಲು ಏನು ಮಾಡಬೇಕು?
ತಜ್ಞರು ನೀಡಿರುವ ಕೆಲವು ಸಲಹೆಗಳು :
- ಮದ್ಯಪಾನ ಮತ್ತು ಧೂಮಪಾನವನ್ನು ಸಂಪೂರ್ಣವಾಗಿ ನಿಲ್ಲಿಸಿ.
- ಸಮತೋಲಿತ, ಪೌಷ್ಠಿಕ ಆಹಾರ ಸೇವಿಸಿ – ಹಣ್ಣು, ತರಕಾರಿ, ಹಸಿರು ಸೊಪ್ಪು ಸೇರಿಸಿಕೊಳ್ಳಿ.
- ನಿಯಮಿತ ವ್ಯಾಯಾಮ ಮಾಡಿ ಮತ್ತು ತೂಕ ನಿಯಂತ್ರಣದಲ್ಲಿಡಿ.
- ಯಕೃತ್ತಿನ ತಪಾಸಣೆಗಳನ್ನು ನಿರಂತರವಾಗಿ ಮಾಡಿಸಿಕೊಳ್ಳಿ.
- ಹೆಪಟೈಟಿಸ್ ಬಿ ವಿರುದ್ಧ ಲಸಿಕೆ ಹಾಕಿಸಿಕೊಳ್ಳಿ.
- ಶುದ್ಧ ಆಹಾರ ಮತ್ತು ಶುದ್ಧ ನೀರು ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಿ.
ತಜ್ಞರ ಎಚ್ಚರಿಕೆ :
ವೈದ್ಯರ ಪ್ರಕಾರ, ಲಿವರ್ ಕ್ಯಾನ್ಸರ್ (Liver Cancer) ಒಂದು “ಸೈಲೆಂಟ್ ಕಿಲ್ಲರ್” ಆಗಿದ್ದು, ಪ್ರಾರಂಭಿಕ ಹಂತದಲ್ಲಿ ಪತ್ತೆ ಮಾಡದಿದ್ದರೆ ಚಿಕಿತ್ಸೆಯ ಪರಿಣಾಮಕಾರಿ ಸಾಧ್ಯತೆ ಕಡಿಮೆ. ಆದ್ದರಿಂದ, ಹೊಟ್ಟೆಯ ಬಲಭಾಗದಲ್ಲಿ ನಿರಂತರ ನೋವು, ತೂಕ ಕಡಿಮೆಯಾಗುವುದು, ಕಾಮಾಲೆ ಮುಂತಾದ ಲಕ್ಷಣಗಳನ್ನು ಗಂಭೀರವಾಗಿ ಪರಿಗಣಿಸುವುದು ಅಗತ್ಯ.







