ಜನಸ್ಪಂದನ ನ್ಯೂಸ್, ಡೆಸ್ಕ್ : ಶನಿವಾರ ಬಿಸಿ-ಗಾಳಿಯ ಬಲೂನ್ (Hot air balloon) ಒಂದು ಬೆಂಕಿಗೆ ಆಹುತಿಯಾಗಿ ಆಕಾಶದಿಂದ ಉರುಳಿಬಿದ್ದು ಎಂಟು ಜನರು ಸಜೀವ ದಹನವಾಗಿ ಸಾವನ್ನಪ್ಪಿರುವ ಘಟನೆಯೊಂದು ಬ್ರೆಜಿಲ್‌ನ ಸಾಂತಾ ಕ್ಯಾಟರಿನಾ ರಾಜ್ಯದ ಪ್ರಿಯಾ ಗ್ರಾಂಡೆ ಎಂಬಲ್ಲಿ ಸಂಭವಿಸಿದೆ.
ಆಗಸದಲ್ಲಿ ತೇಲುತ್ತಿದ್ದ ಈ ಹಾಟ್ ಏರ್ ಬಲೂನ್ (Hot air balloon) ನೋಡ ನೋಡುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದು, ಆ ನಂತರ ದೊಡ್ಡ ಸ್ಫೋಟ ಸಂಭವಿಸಿ ನೆಲಕುರುಳಿದೆ. ಈ ಹಾಟ್ ಏರ್ ಬಲೂನ್ 22 ಜನರನ್ನು ಹೊತ್ತೊಯ್ದಿತ್ತು ಎಂದು ಹೇಳಲಾಗುತ್ತಿದೆ.
ಇದನ್ನು ಓದಿ : ಕಿಟಕಿ ಪರದೆ ಹಾಕದೆ 5 ಸ್ಟಾರ್ Hotel ನಲ್ಲಿ ಜೋಡಿಗಳ ರೋಮ್ಯಾನ್ಸ್ ; ಫ್ರೀ ಶೋಗೆ ಟ್ರಾಫಿಕ್ ಜಾಮ್.̤!
ಬ್ರೆಜಿಲ್‌ನ ಸಾಂತಾ ಕ್ಯಾಟರಿನಾ ರಾಜ್ಯದ ಪ್ರಿಯಾ ಗ್ರಾಂಡೆ ಎಂಬಲ್ಲಿ 22 ಜನರನ್ನು ಹೊತ್ತೊಯ್ಯುತ್ತಿದ್ದ ಈ ಹಾಟ್ ಏರ್ ಬಲೂನ್ (Hot air balloon) ನೋಡ ನೋಡುತ್ತಿದ್ದಂತೆ ಒಮ್ಮಲೇ ಬೆಂಕಿಗೆ ಆಹುತಿಯಾಗಿದ್ದು, ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಸಿ ಗಾಳಿಯ ಬಲೂನ್ (Hot air balloon) ಪತನಗೊಂಡು ಹಿನ್ನಲೆಯಲ್ಲಿ ಅದರಲ್ಲಿ ಕನಿಷ್ಠ ಎಂಟು ಮಂದಿ ಸಜೀವ ದಹನವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಈ ಪ್ಯಾರಾಚೂಟ್ ಮಾದರಿಯ ಈ ಹಾಟ್ ಏರ್ ಬಲೂನ್‌ಗಳು ಬಹುತೇಕ ಸುರಕ್ಷಿತ ಎಂದೇ ಭಾವಿಸಲಾಗುತ್ತಿತ್ತಾದರೂ, ಇದೀಗ ಈ ದುರಂತದಿಂದ ಅದು ಹುಸಿಯಾಗಿಸಿದೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜೂನ 21 ರ ದ್ವಾದಶ ರಾಶಿಗಳ ಫಲಾಫಲ.!
ಆಗಸದಲ್ಲಿ ತೇಲುತ್ತಿದ್ದ ಹಾಟ್ ಏರ್ ಬಲೂನ್ (Hot air balloon) ನೋಡ ನೋಡುತ್ತಿದ್ದಂತೆ ಬ್ಲಾಸ್ಟ್ ಆಗಿ ಬೆಂಕಿ ಹೊತ್ತಿಕೊಂಡಿದ್ದು, ಆ ನಂತರ ದೊಡ್ಡ ಸ್ಫೋಟ ಸಂಭವಿಸಿದೆ. ಸ್ಫೋಟಗೊಂಡ ಈ ಹೋಟ್ ಏರ್ ಬಲೂನ್‌ನಲ್ಲಿದ್ದ 8 ಮಂದಿ ಸಜೀವ ದಹನವಾಗಿದ್ದು, ಸದ್ಯ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬ್ರೆಜಿಲ್‌ನ ಸಾಂಟಾ ಕ್ಯಾಟರಿನಾದಲ್ಲಿ ಕ್ಯಾಪ್ಟನ್‌ನ ಉರಿಯುತ್ತಿರುವ ಬಿಸಿ-ಗಾಳಿಯ ಬಲೂನ್ (Hot air balloon) ಅಪಘಾತಕ್ಕೀಡಾದ ದೃಶ್ಯವು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅದು ಬೆಚ್ಚಿಬೀಳಿಸುವಂತಿದೆ.
ಇದನ್ನು ಓದಿ : ಯುವಕನಿಗೆ ಕಚ್ಚಿದ 5 ನಿಮಿಷದಲ್ಲಿಯೇ ನೆಗೆದುಬಿದ್ದ ವಿಷಕಾರಿ Sneck.!
ಸ್ಥಳೀಯ ಸುದ್ದಿ ಸಂಸ್ಥೆ G1 ಹಂಚಿಕೊಂಡಿರುವ ತಣ್ಣನೆಯ ದೃಶ್ಯಗಳು ಬಲೂನ್ ನೆಲದ ಕಡೆಗೆ ಬೀಳುತ್ತಿದ್ದಂತೆ ಜ್ವಾಲೆಗಳಲ್ಲಿ ಹೊಗೆ ಬರುತ್ತಿರುವುದನ್ನು ತೋರಿಸಿದೆ.
ಬಿಸಿ-ಗಾಳಿಯ ಬಲೂನ್ (Hot air balloon) ನಲ್ಲಿದ್ದ 22 ಜನರ ಪೈಕಿ ಹದಿಮೂರು ಜನರು ಬದುಕುಳಿದಿದ್ದು, ಅವರನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು ಎಂದು ಸಾಂಟಾ ಕ್ಯಾಟರಿನಾ ಮಿಲಿಟರಿ ಅಗ್ನಿಶಾಮಕ ದಳ ತಿಳಿಸಿದೆ. ಬಿಸಿ-ಗಾಳಿಯ ಬಲೂನ್‌ನಲ್ಲಿ ಪೈಲಟ್ ಸೇರಿದಂತೆ ಒಟ್ಟು 22 ಜನರಿದ್ದರು ಎಂದು ಹೇಳಿದರು.
ಇದನ್ನು ಓದಿ : fiancee’s : ಮಗನ ಭಾವಿ ಪತ್ನಿ ಜೊತೆ ಪರಾರಿಯಾದ 6 ಮಕ್ಕಳ ತಂದೆ.!
ಕಳೆದ ಭಾನುವಾರ, ಸಾವೊ ಪಾಲೊ ರಾಜ್ಯದಲ್ಲಿ ಬಲೂನ್ ಬಿದ್ದು 27 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದರು ಮತ್ತು 11 ಜನರು ಗಾಯಗೊಂಡರು ಎಂದು G1 ವರದಿ ಮಾಡಿದೆ.
ಪ್ರಿಯಾ ಗ್ರಾಂಡೆ ಬಿಸಿ ಗಾಳಿಯ ಬಲೂನಿಂಗ್‌ಗೆ ಸಾಮಾನ್ಯ ತಾಣವಾಗಿದೆ, ಇದು ಜೂನ್ ಹಬ್ಬಗಳ ಸಮಯದಲ್ಲಿ ಬ್ರೆಜಿಲ್‌ನ ದಕ್ಷಿಣದ ಕೆಲವು ಭಾಗಗಳಲ್ಲಿ ಜನಪ್ರಿಯ ಚಟುವಟಿಕೆಯಾಗಿದೆ, ಇದು ಸೇಂಟ್ ಜಾನ್‌ನಂತಹ ಕ್ಯಾಥೋಲಿಕ್ ಸಂತರನ್ನು ಆಚರಿಸುತ್ತದೆ. (ಏಜೇನ್ಸಿಸ್)
ಸ್ಫೋಟ್‌ಗೊಂಡ ಹಾಟ್ ಏರ್ ಬಲೂನ್ (Hot air balloon) ನ ಭೀಕರ ವಿಡಿಯೋ ಇಲ್ಲಿದೆ :
Moment burning hot air balloon PLUMMETS to ground
Terrifying footage of tragedy in southern Brazil
Officials say at least 8 dead and 2 SURVIVORS pic.twitter.com/Q2bC3qZNWW
— RT (@RT_com) June 21, 2025
fiancee’s : ಮಗನ ಭಾವಿ ಪತ್ನಿ ಜೊತೆ ಪರಾರಿಯಾದ 6 ಮಕ್ಕಳ ತಂದೆ.!
ಜನಸ್ಪಂದನ ನ್ಯೂಸ್, ಡೆಸ್ಕ್ : ತನ್ನ ಮಗ ಮದುವೆಯಾಗಬೇಕಾದ ಮಹಿಳೆಯ (fiancee’s) ಜೊತೆ ತಂದೆಯೇ ಪರಾರಿಯಾಗಿ ಮದುವೆಯಾದ ವಿಲಕ್ಷಣ ಹಾಗೂ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಉತ್ತರ ಪ್ರದೇಶದ ರಾಂಪುರದಲ್ಲಿ ನಡೆದ ಆಘಾತಕಾರಿ ಘಟನೆ ಇದಾಗಿದ್ದು, ಆರು ಮಕ್ಕಳ ತಂದೆಯೊಬ್ಬ ತಮ್ಮ ಕಿರಿಯ ಮಗನ ಭಾವಿ ಪತ್ನಿಯ (fiancee’s) ಮನೆಗೆ ಭೇಟಿ ನೀಡಿದ ಸಮಯದಲ್ಲಿ ಸಂಬಂಧ ಬೆಳೆಸಿಕೊಂಡು, ನಂತರ ಓಡಿಹೋಗಿ ಮದುವೆಯಾಗಿದ್ದಾನೆ.
ಇದನ್ನು ಓದಿ : NIACL : ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ ನಲ್ಲಿ ಉದ್ಯೋಗವಕಾಶ.!
ಹೀಗೆ ತನ್ನ ಮಗನ ಭಾವಿ ಪತ್ನಿಯನ್ನು (fiancee’s) ಮದುವೆಯಾದ ತಂದೆಯನ್ನು ಶಕೀಲ್ ಎಂದು ಗುರುತಿಸಲಾಗಿದೆ. ಶಬಾನ ಎಂಬುವವರ ಜೊತೆ ಈಗಾಗಲೇ ಮದುವೆಯಾಗಿರುವ ಶಕೀಲ್‌ಗೆ ಆರು ಜನ ಮಕ್ಕಳು ಜನಿಸಿದ್ದಾರೆ.
ಶಕೀಲ್ ಎಂಬಾತ ಪ್ರಾರಂಭದಲ್ಲಿ ತನ್ನ ಅಪ್ರಾಪ್ತ ಮಗನೊಂದಿಗೆ ಮಹಿಳೆ (ಯುವತಿ) ಯೊಬ್ಬಳ ಮದುವೆ ಮಾಡಲು ಮುಂದಾಗಿದ್ದಾನೆ. ಆದರೆ ಕುಟುಂಬ ಸದಸ್ಯರು ಈ ಸಂಬಂದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಈತ ಕುಟುಂಬ ಸದಸ್ಯರ ಮೇಲೆಯೇ ಹಲ್ಲೆ ಮಾಡಿದ್ದಾನೆ.
ಇದನ್ನು ಓದಿ : ರಾತ್ರಿ ಈ 6 ಲಕ್ಷಣಗಳು ಕಂಡು ಬರುತ್ತಿವೆಯೇ.? Kidney ಫೇಲ್ಯೂರ್ ಆಗುವ ಮುನ್ಸೂಚನೆ.!
ನಂತರ ಈ ಶಕೀಲ್ ಎಂಬ ವ್ಯಕ್ತಿ ಮಹಿಳೆಯ (fiancee’s) ಜೊತೆ ದಿನವೂ ಫೋನ್‌ನಲ್ಲಿ ಮಾತನಾಡಲು ಶುರು ಮಾಡಿದ್ದಾನೆ. ಇದಲ್ಲದೇ ಮಹಿಳೆಯ ಜೊತೆ ಆತ ದಿನವೂ ವೀಡಿಯೋ ಕಾಲ್ (Video Call) ಮಾಡುತ್ತಾ ಇರುತ್ತಿದ್ದ ಎಂದು ಶಕೀಲ್‌ನ ಪತ್ನಿ ಶಬಾನ ಆರೋಪ ಮಾಡಿದ್ದಾರೆ.
ಮಗನಿಗೆ ಮದುವೆ ಮಾಡಬೇಕೆಂದಿರುವ ಮಹಿಳೆಯ (fiancee’s) ಜೊತೆ ಈ ಮೊದಲೇ ಅನೈತಿಕ ಸಂಬಂಧ ಇರುವ ಬಗ್ಗೆ ಮೊದಲೇ ಸಂಶಯ ಬಂದಿತ್ತು. ಅಲ್ಲದೇ ಈ ವ್ಯಕ್ತಿ ಮಹಿಳೆಯ ಜೊತೆ ಇರುವಾಗ ಎರಡು ಬಾರಿ ಆತ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ಎಂದು ಆರೋಪಿಸಲಾಗುತ್ತಿದೆ.
ಇದನ್ನು ಓದಿ : ಪ್ರಿಯಕರನೊಂದಿಗೆ ಹೋಟೆಲ್ Room ನಲ್ಲಿ ಪತ್ನಿಯ ಮೋಜು ; ಪತಿಯ ಆಗಮನ.!
ಆರಂಭದಲ್ಲಿ ನನ್ನ ಮಾತನ್ನು ಯಾರೋ ನಂಬಲಿಲ್ಲ (Someone didn’t believe.), ನಂತರ ನನ್ನ ಮಗ ಹಾಗೂ ನಾನು ಸೇರಿ ಆತನ ವಿರುದ್ಧ ಸಾಕ್ಷ್ಯ ಕಲೆ ಹಾಕಿದೆವು ಎಂದು ಶಬಾನಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ನನ್ನ 15 ವರ್ಷದ ಮಗ, ತನ್ನ ತಂದೆಯ ಜೊತೆಗೆಯೇ ಅನೈತಿಕ ಸಂಬಂಧ ಇರುವುದನ್ನು ತಿಳಿದ ನಂತರ ಅವಳನ್ನು (fiancee’s) ಮದುವೆಯಾಗಲು ನಿರಾಕರಿಸಿದನು. ಈ ಮಧ್ಯ ತನ್ನ ಅಜ್ಜ ಅಜ್ಜಿಯರಿಗೂ ಈ ಸಂಬಂಧದ ಬಗ್ಗೆ ತಿಳಿದಿದ್ದರು ಸಹ ಸುಮ್ಮನಿದ್ದು, ಅವರಿಬ್ಬರು ಮದುವೆಯಾಗಲು ಸಹಾಯ ಮಾಡಿದರು ಎಂದು ಮಗ ಆರೋಪಿಸಿದ್ದಾನೆ.
ಇದನ್ನು ಓದಿ : ಕಿಟಕಿ ಪರದೆ ಹಾಕದೆ 5 ಸ್ಟಾರ್ Hotel ನಲ್ಲಿ ಜೋಡಿಗಳ ರೋಮ್ಯಾನ್ಸ್ ; ಫ್ರೀ ಶೋಗೆ ಟ್ರಾಫಿಕ್ ಜಾಮ್.̤!
ಶಕೀಲ್ ತನ್ನ ಮಗನ ಭಾವಿ ಪತ್ನಿಯನ್ನು (fiancee’s) ಮದುವೆಯಗಲು ಮನೆ ತೊರೆಯುವ ಮೊದಲು ಮನೆಯಿಂದ 2 ಲಕ್ಷ ನಗದು ಹಾಗೂ 17 ಗ್ರಾಂ. ಚಿನ್ನಭಾರಣವನ್ನು ತೆಗೆದುಕೊಂಡು ಹೋಗಿದ್ದಾನೆ ಎಂದು ಕುಟುಂಬದವರು ಆರೋಪಿಸಿದ್ದಾರೆ.