Tuesday, September 17, 2024
spot_img
spot_img
spot_img
spot_img
spot_img
spot_img
spot_img

ಇನ್ಮುಂದೆ ಕಣ್ಣಿಗೆ ಕನ್ನಡಕ ಬೇಕಿಲ್ಲ, ಈ Eye drops ಸಾಕು.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಪ್ರಿಸ್ಬಯೋಪಿಯಾ ಚಿಕಿತ್ಸೆಗಾಗಿ ಮುಂಬೈ ಮೂಲದ ಫಾರ್ಮಾಸ್ಯುಟಿಕಲ್ ಕಂಪನಿಯು ಐ ಡ್ರಾಪ್ಸ್​ಗಳನ್ನು ಮಾರುಕಟ್ಟೆಗೆ ತರಲು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ (ಡಿಸಿಜಿಐ) ಅನುಮೋದನೆ ಪಡೆದಿದೆ.

ಇದನ್ನು ಓದಿ : ಅತ್ತೆ ಹೊಡೆದಿದ್ದಾರೆ ಎಂದು ಸಹಾಯವಾಣಿ ಕೇಂದ್ರಕ್ಕೆ Call ಮಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್; ಮುಂದೆನಾಯ್ತು ಗೊತ್ತಾ.?

PresVu ಕಣ್ಣಿನ ಹನಿಗಳಿಗೆ ಅಂತಿಮ ಅನುಮೋದನೆಯನ್ನು ಪಡೆದುಕೊಂಡಿದೆ. ಅಲ್ಲದೇ ಅಕ್ಟೋಬರ್ ಮೊದಲ ವಾರದಲ್ಲಿ ಅವುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಪರಿಚಯಿಸಲು ಯೋಜಿಸಿದೆ ಎಂದು ಎಂಟಾಡ್ ಫಾರ್ಮಾಸ್ಯುಟಿಕಲ್ಸ್ ಹೇಳಿದೆ.

ಹೀಗಾಗಿ ಇನ್ಮುಂದೆ ಓದಲು ಕನ್ನಡಕ ಬೇಕೇಬೇಕು ಎಂದೇನಿಲ್ಲ. ಅದರ ಬದಲಿಗೆ ಐ ಡ್ರಾಪ್‌ ಹಾಕಿದರೆ ಸಾಕು. ಎಲ್ಲ ಅಕ್ಷರಗಳು ಸ್ಪಷ್ಟವಾಗಿ ಗೋಚರಿಸುತ್ತವೆ.

ಇದನ್ನು ಓದಿ : Video : ಪ್ರೇಯಸಿಯನ್ನು ಭೇಟಿಯಾಗಲು ಬುರ್ಖಾ ಧರಿಸಿ ಬಂದು ಸಿಕ್ಕಾಕೊಂಡ ಯುವಕ; ಮುಂದೆನಾಯ್ತು?

ಮುಂಬೈಯಲ್ಲಿರುವ ಎಂಟೋಡ್‌ ಫಾರ್ಮಾಸ್ಯೂಟಿ ಕಲ್ಸ್‌ ಎಂಬ ಕಂಪನಿ “ಪ್ರಸ್‌ವು’ ಎಂಬ ಕಣ್ಣಿನ ಹನಿ (ಐ ಡ್ರಾಪ್ಸ್‌) ಸಿದ್ಧಪಡಿಸಿದೆ. ಇದು ಕಣ್ಣಿನ ಪಾಪೆಯ ಗಾತ್ರವನ್ನು ತಗ್ಗಿಸಿ, ವಸ್ತುಗಳು ಸ್ಪಷ್ಟವಾಗಿ ಗೋಚರಿಸುವಂತೆ ಮಾಡುತ್ತದೆ.

ಇನ್ನೂ ಈ ಕುರಿತು ಎಂಟೋಡ್‌ ಫಾರ್ಮಾ ಕಂಪೆನಿಯ ಸಿಇಒ ನಿಖೀಲ್‌ ಕೆ. ಮಸೂರ್ಕರ್‌, ಇದನ್ನು ಬಳಸಿದರೆ ಮುಂದಿನ 6 ತಾಸುಗಳ ಕಾಲ ಸನಿಹದಲ್ಲಿರುವ ವಸ್ತುಗಳನ್ನು ಸ್ಪಷ್ಟವಾಗಿ ನೋಡಬಹುದು. ಮೊದಲ ಹನಿ ಹಾಕಿ 3ರಿಂದ 6 ತಾಸುಗಳ ಬಳಿಕ ಇನ್ನೊಂದು ಹನಿ ಹಾಕಿದರೆ ಈ ನೋಟದ ಅವಧಿ ಇನ್ನಷ್ಟು ದೀರ್ಘ‌ವಾಗಲಿದೆ ಎಂದು ಹೇಳಿದ್ದಾರೆ.

ಭಾರತೀಯ ಫಾರ್ಮಸಿಗಳಲ್ಲಿ ಅಕ್ಟೋಬರ್‌ ಮೊದಲ ವಾರದಿಂದ ಐ ಡ್ರಾಪ್‌ ಸಿಗಲಿದೆ. 40 ರಿಂದ 55 ವಯಸ್ಸಿನವರು ಇದನ್ನು ಬಳಸಬಹುದು. ಇದಕ್ಕೆ 350 ರೂ. ಗಳನ್ನು ನಿಗದಿಪಡಿಸಲಾಗಿದೆ. ಆದರೆ ನೋಂದಾಯಿತ ವೈದ್ಯರ ಸೂಚನೆಯ ಮೇರೆಗೆ ಮಾತ್ರ ಇದನ್ನು ಖರೀದಿಸಬಹುದು ಎಂದೂ ಮಸೂರ್ಕರ್‌ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ : ತಾನೇ ಮುಂದೆ ನಿಂತು ಪತಿಗೆ 2ನೇ Marriage ಮಾಡಿಸಿದ ಪತ್ನಿ; ಕಾರಣ ಕೇಳಿದ್ರೆ ಅಚ್ಚರಿಪಡ್ತೀರಾ.?

ಇನ್ನೂ ಈ ಔಷಧವನ್ನು ಭಾರತೀಯರ ಕಣ್ಣುಗಳಿಗೆ 2 ವರ್ಷ ಹಾಕಿ ಪರಿಶೀಲಿಸಲಾಗಿದೆ. ಒಟ್ಟು 10 ಸ್ಥಳಗಳಲ್ಲಿ 250 ಮಂದಿಯ ಮೇಲೆ ಇದರ ಪರೀಕ್ಷೆ ನಡೆಸಲಾಗಿದೆ. ಇದಕ್ಕೆ ಔಷಧ ನಿಯಂತ್ರಣ ಸಂಸ್ಥೆ ಅನುಮತಿಯನ್ನೂ ನೀಡಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img