ಜನಸ್ಪಂದನ ನ್ಯೂಸ್, ಬೆಂಗಳೂರು : ಪತ್ನಿಯೋರ್ವಳು ತನ್ನ ಪತಿಗೆ ಇಷ್ಟವಾದ ಮತ್ತೊಬ್ಬ ಯುವತಿಯನ್ನು ತಾನೇ ಮುಂದೆ ನಿಂತು ಮದುವೆ ಮಾಡಿಸಿದ ಘಟನೆ ತೆಲಂಗಾಣದ ಮೆಹಬೂಬಾಬಾದ್ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಬಹುಶಃ ದಂಪತಿಗೆ ಮಕ್ಕಳು ಇಲ್ಲದಿದ್ದಕ್ಕೆ ಮದುವೆ ಮಾಡಿರಬಹುದು ಅಂತ ನೀವು ಅಂದುಕೊಂಡಿರುತ್ತೀರಾ. ಆದರೆ ನಿಮ್ಮ ಊಹೆ ತಪ್ಪು. ಏಕೆಂದರೆ, ದಂಪತಿಗೆ ಮಗು ಇದ್ದು, ಈ ಮಹಿಳೆ ತನ್ನ ಪತಿಗೆ ಎರಡನೇ ಮದುವೆ ಮಾಡಿಸಿದ್ದಾಳೆ.
ಇದನ್ನು ಓದಿ : ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಗಸ್ಟ್ 30 ಕೊನೆಯ ದಿನಾಂಕ.!
ಸದ್ಯ ಈ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸುರೇಶ್ ಹಾಗೂ ಸರಿತಾ ಮೆಹಬೂಬಾಬಾದ್ ಜಿಲ್ಲೆಯವರಾಗಿದ್ದು, ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದರು. ಅವರಿಗೆ ಗಂಡು ಮಗುವಿದೆ. ಅದೇ ಸಮಯದಲ್ಲಿ ಸುರೇಶ್ಗೆ ಸಂಧ್ಯಾ ಎಂಬ ಯುವತಿ ಮೇಲೆ ಲವ್ ಆಗಿದೆ.
ಸಂಧ್ಯಾ ಬಗ್ಗೆ ಹೇಳುವುದಾದರೆ ಆಕೆ ಮಾನಸಿಕ ಅಸ್ವಸ್ಥೆ. ಈ ಸಂಧ್ಯಾ, ಸುರೇಶ್ ಅವರ ಸಂಬಂಧಿಕರ ಮಗಳು. ಸುರೇಶ್ ನಿಗೆ ಮದುವೆಯಾಗಿರುವುದು ಗೊತ್ತಿದ್ದರೂ ಸಂಧ್ಯಾ ಕೂಡ ಆತನನ್ನು ಇಷ್ಟಪಟ್ಟಿದ್ದಳು ಎನ್ನಲಾಗಿದೆ.
ಇದನ್ನು ಓದಿ : ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿರುವ ಅಕ್ಬರ್ ಪಾಷಾ ಬೆಳಗಾವಿ ಹಿಂಡಲಗಾ ಜೈಲಿಗೆ ಶಿಫ್ಟ್.!
ಸಂಧ್ಯಾ ಮಾನಸಿಕ ಅಸ್ವಸ್ಥೆಯಾಗಿರುವುದರಿಂದ ಆಕೆಯನ್ನು ಬೇರೆಯವರಿಗೆ ಕೊಟ್ಟು ಮದುವೆ ಮಾಡಿದರೆ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಕುಟುಂಬಸ್ಥರು ಭಾವಿಸಿದ್ದರು. ಹೀಗಾಗಿ ಸುರೇಶನ ಜತೆ ಮದುವೆ ಮಾಡಲು ಬಯಸಿದ್ದರು.
ಇದಕ್ಕೆ ಪತ್ನಿ ಸರಿತಾ ಕೂಡ ಒಪ್ಪಿಕೊಂಡಿದ್ದು ಇಲ್ಲಿನ ಅಚ್ಚರಿಯ ಸಂಗತಿ. ಎರಡೂ ಕುಟುಂಬಸ್ಥರ ಸಮ್ಮುಖದಲ್ಲಿ ಸುರೇಶ್, ಸಂಧ್ಯಾಳನ್ನು ಶಾಸ್ತ್ರೋಕ್ತವಾಗಿ ವರಿಸಿದ್ದಾರೆ.
ಇದನ್ನು ಓದಿ : ಅಪ್ಪನನ್ನೇ ಬಂಧಿಸುವಂತೆ ಕಂಪ್ಲೆಂಟ್ ಕೊಟ್ಟ 5 ವರ್ಷದ ಮಗ ; ಅಂತ ಕಾರಣವಾದ್ರು ಏನು ಗೊತ್ತೇ.?
ನನ್ನ ಗಂಡ ಎರಡನೇ ಮದುವೆ ಬಗ್ಗೆ ಕೇಳಿದಾಗ ಮಾನವೀಯ ಹೃದಯದಿಂದ ನಾನಿದನ್ನು ಮಾಡಿದ್ದೇನೆ. ಸಂಧ್ಯಾ ಕೂಡ ನನ್ನ ತಂಗಿಯಂತೆ ಎಂದು ಮೊದಲನೇ ಪತ್ನಿ ಸರಿತಾ ಹೇಳಿದ್ದಾಳೆ.
ಸುರೇಶ್ ಮತ್ತು ಸಂಧ್ಯಾ ಅವರ ಮದುವೆ ಸಮಾರಂಭವನ್ನು ಸರಿತಾ ಮುಂದೆ ನಿಂತು ಮದುವೆ ಮಾಡಿಕೊಟ್ಟಳು. ಅಲ್ಲದೇ ಸುರೇಶ್, ಸಂಧ್ಯಾಳ ಕುತ್ತಿಗೆಗೆ ತಾಳಿ ಕಟ್ಟುವಾಗಲೂ ಸರಿತಾ ಜತೆಯಲ್ಲೇ ಇದ್ದರು. ಸರಿತಾ ದಂಪತಿಯ ಈ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮದುವೆಗೆ ಸಂಬಂಧಿಸಿದ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.