ಜನಸ್ಪಂದನ ನ್ಯೂಸ್, ಡೆಸ್ಕ್ : ಪ್ರಿಸ್ಬಯೋಪಿಯಾ ಚಿಕಿತ್ಸೆಗಾಗಿ ಮುಂಬೈ ಮೂಲದ ಫಾರ್ಮಾಸ್ಯುಟಿಕಲ್ ಕಂಪನಿಯು ಐ ಡ್ರಾಪ್ಸ್ಗಳನ್ನು ಮಾರುಕಟ್ಟೆಗೆ ತರಲು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ (ಡಿಸಿಜಿಐ) ಅನುಮೋದನೆ ಪಡೆದಿದೆ.
ಇದನ್ನು ಓದಿ : ಅತ್ತೆ ಹೊಡೆದಿದ್ದಾರೆ ಎಂದು ಸಹಾಯವಾಣಿ ಕೇಂದ್ರಕ್ಕೆ Call ಮಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್; ಮುಂದೆನಾಯ್ತು ಗೊತ್ತಾ.?
PresVu ಕಣ್ಣಿನ ಹನಿಗಳಿಗೆ ಅಂತಿಮ ಅನುಮೋದನೆಯನ್ನು ಪಡೆದುಕೊಂಡಿದೆ. ಅಲ್ಲದೇ ಅಕ್ಟೋಬರ್ ಮೊದಲ ವಾರದಲ್ಲಿ ಅವುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಪರಿಚಯಿಸಲು ಯೋಜಿಸಿದೆ ಎಂದು ಎಂಟಾಡ್ ಫಾರ್ಮಾಸ್ಯುಟಿಕಲ್ಸ್ ಹೇಳಿದೆ.
ಹೀಗಾಗಿ ಇನ್ಮುಂದೆ ಓದಲು ಕನ್ನಡಕ ಬೇಕೇಬೇಕು ಎಂದೇನಿಲ್ಲ. ಅದರ ಬದಲಿಗೆ ಐ ಡ್ರಾಪ್ ಹಾಕಿದರೆ ಸಾಕು. ಎಲ್ಲ ಅಕ್ಷರಗಳು ಸ್ಪಷ್ಟವಾಗಿ ಗೋಚರಿಸುತ್ತವೆ.
ಇದನ್ನು ಓದಿ : Video : ಪ್ರೇಯಸಿಯನ್ನು ಭೇಟಿಯಾಗಲು ಬುರ್ಖಾ ಧರಿಸಿ ಬಂದು ಸಿಕ್ಕಾಕೊಂಡ ಯುವಕ; ಮುಂದೆನಾಯ್ತು?
ಮುಂಬೈಯಲ್ಲಿರುವ ಎಂಟೋಡ್ ಫಾರ್ಮಾಸ್ಯೂಟಿ ಕಲ್ಸ್ ಎಂಬ ಕಂಪನಿ “ಪ್ರಸ್‌ವು’ ಎಂಬ ಕಣ್ಣಿನ ಹನಿ (ಐ ಡ್ರಾಪ್ಸ್) ಸಿದ್ಧಪಡಿಸಿದೆ. ಇದು ಕಣ್ಣಿನ ಪಾಪೆಯ ಗಾತ್ರವನ್ನು ತಗ್ಗಿಸಿ, ವಸ್ತುಗಳು ಸ್ಪಷ್ಟವಾಗಿ ಗೋಚರಿಸುವಂತೆ ಮಾಡುತ್ತದೆ.
ಇನ್ನೂ ಈ ಕುರಿತು ಎಂಟೋಡ್ ಫಾರ್ಮಾ ಕಂಪೆನಿಯ ಸಿಇಒ ನಿಖೀಲ್ ಕೆ. ಮಸೂರ್ಕರ್, ಇದನ್ನು ಬಳಸಿದರೆ ಮುಂದಿನ 6 ತಾಸುಗಳ ಕಾಲ ಸನಿಹದಲ್ಲಿರುವ ವಸ್ತುಗಳನ್ನು ಸ್ಪಷ್ಟವಾಗಿ ನೋಡಬಹುದು. ಮೊದಲ ಹನಿ ಹಾಕಿ 3ರಿಂದ 6 ತಾಸುಗಳ ಬಳಿಕ ಇನ್ನೊಂದು ಹನಿ ಹಾಕಿದರೆ ಈ ನೋಟದ ಅವಧಿ ಇನ್ನಷ್ಟು ದೀರ್ಘವಾಗಲಿದೆ ಎಂದು ಹೇಳಿದ್ದಾರೆ.
ಭಾರತೀಯ ಫಾರ್ಮಸಿಗಳಲ್ಲಿ ಅಕ್ಟೋಬರ್ ಮೊದಲ ವಾರದಿಂದ ಐ ಡ್ರಾಪ್ ಸಿಗಲಿದೆ. 40 ರಿಂದ 55 ವಯಸ್ಸಿನವರು ಇದನ್ನು ಬಳಸಬಹುದು. ಇದಕ್ಕೆ 350 ರೂ. ಗಳನ್ನು ನಿಗದಿಪಡಿಸಲಾಗಿದೆ. ಆದರೆ ನೋಂದಾಯಿತ ವೈದ್ಯರ ಸೂಚನೆಯ ಮೇರೆಗೆ ಮಾತ್ರ ಇದನ್ನು ಖರೀದಿಸಬಹುದು ಎಂದೂ ಮಸೂರ್ಕರ್ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ : ತಾನೇ ಮುಂದೆ ನಿಂತು ಪತಿಗೆ 2ನೇ Marriage ಮಾಡಿಸಿದ ಪತ್ನಿ; ಕಾರಣ ಕೇಳಿದ್ರೆ ಅಚ್ಚರಿಪಡ್ತೀರಾ.?
ಇನ್ನೂ ಈ ಔಷಧವನ್ನು ಭಾರತೀಯರ ಕಣ್ಣುಗಳಿಗೆ 2 ವರ್ಷ ಹಾಕಿ ಪರಿಶೀಲಿಸಲಾಗಿದೆ. ಒಟ್ಟು 10 ಸ್ಥಳಗಳಲ್ಲಿ 250 ಮಂದಿಯ ಮೇಲೆ ಇದರ ಪರೀಕ್ಷೆ ನಡೆಸಲಾಗಿದೆ. ಇದಕ್ಕೆ ಔಷಧ ನಿಯಂತ್ರಣ ಸಂಸ್ಥೆ ಅನುಮತಿಯನ್ನೂ ನೀಡಿದೆ.