ಜನಸ್ಪಂದನ ನ್ಯೂಸ್, ಬೆಂಗಳೂರು : ಪ್ರಕರಣ ದಾಖಲಾದ ಕೂಡಲೇ ವಿಚಾರಣೆ ನಡೆಸದೇ ತರಾತುರಿಯಲ್ಲಿ ಮುಂಬೈ ಮೂಲದ ಮಾಡೆಲ್‍ಗೆ ಕಿರುಕುಳ ನೀಡಿದ ಹಿನ್ನೆಲೆ, ಆಂಧ್ರದ ಮೂವರು ಐಪಿಎಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ.
ಐಪಿಎಸ್ ಅಧಿಕಾರಿಗಳಾದ ಪಿ. ಸೀತಾರಾಮ ಆಂಜನೇಯಲು, ಕ್ರಾಂತಿ ರಾಣಾ ಟಾಟಾ ಹಾಗೂ ವಿಜಯವಾಡದ ಮಾಜಿ ಡಿಸಿಪಿ ವಿಶಾಲ್ ಗುನ್ನಿ ಅಮಾನತುಗೊಂಡ ಅಧಿಕಾರಿಗಳು.
ಇದನ್ನು ಓದಿ : ಸಾಮಾಜಿಕ ಜಾಲತಾಣಗಳಲ್ಲಿ ಪೋಟೋ Upload ಮಾಡ್ತೀರಾ.? ಹಾಗಿದ್ರೆ ಈ ಸುದ್ದಿಯನ್ನೊಮ್ಮೆ ಓದಿ.
ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ನಾಯಕರೊಬ್ಬರು ಫೆಬ್ರುವರಿ 2 ರಂದು ನಟಿ ಹಾಗೂ ಮಾಡೆಲ್ ಕಾದಂಬರಿ ಜೆಟ್ವಾನಿ ಅವರು ತಮಗೆ ವಂಚಿಸಿದ್ದಾರೆ ಎಂದು ಆಂಧ್ರ ಪೊಲೀಸರಿಗೆ ದೂರು ನೀಡಿದ್ದರು.
ಈ ಹಿನ್ನೆಲೆ ಪಿ. ಸೀತಾರಾಮ ಆಂಜನೆಯಲು ಅವರು ಕಾದಂಬರಿ ಅವರನ್ನು ಅರೆಸ್ಟ್ ಮಾಡಲು ತಮ್ಮ ಅಧೀನದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ತಮ್ಮ ಬಂಧನ ವಿರುದ್ಧ ಕಾದಂಬರಿ ಮೇಲಾಧಿಕಾರಿಗಳಿಗೆ ದೂರು ನೀಡಿದ್ದರು. ಈ ಕುರಿತು ಇಲಾಖಾ ತನಿಖೆ ನಡೆಸಿದಾಗ ಸೀತಾರಾಮ ಆಂಜನೆಯಲು, ಕಾಂತಿ ರಾಣಾ ಟಾಟಾ ಹಾಗೂ ವಿಶಾಲ್ ಗುನ್ನಿ ತಪ್ಪಿತಸ್ಥರೆಂದು ತಿಳಿದು ಬಂದಿದೆ.
ತಾನು ಮುಂಬೈನಲ್ಲಿ ಕಾರ್ಪೋರೇಟ್ ಕಂಪನಿ ಅಧಿಕಾರಿಯೊಬ್ಬರ ವಿರುದ್ಧ ನೀಡಿರುವ ದೂರಿನ ವಿಚಾರವಾಗಿ ನನ್ನ ಮೇಲೆ ಸೇಡು ತೀರಿಸಿಕೊಳ್ಳಲು, ನನ್ನನ್ನು ತೊಂದರೆಗೆ ಸಿಲುಕಿಸಲು ಆಂಧ್ರದಲ್ಲಿ ದೂರು ದಾಖಲಿಸಲಾಗಿತ್ತು.
ಇದನ್ನು ಓದಿ : Special news : ರಾತ್ರಿ ಮಲಗುವ ಮುನ್ನ ಒಂದು ಎಸಳು ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ.?
ಕಾರ್ಪೋರೆಟ್ ಕಂಪನಿ ಅಧಿಕಾರಿ ವಿರುದ್ಧದ ದೂರು ಹಿಂಪಡೆಯಲು ಆಂಧ್ರ ಪೊಲೀಸ್ ಅಧಿಕಾರಿಗಳು ನನಗೆ ಬೆದರಿಕೆ ಹಾಕಿ ಕಿರುಕುಳ ನೀಡುತ್ತಿದ್ದರು. ಅಲ್ಲದೇ ನನ್ನ ಬಂಧನವೂ ದುರುದ್ದೇಶಪೂರಿತವಾಗಿತ್ತು ಎಂದು ಕಾದಂಬರಿ ಆರೋಪಿಸಿದ್ದಾರೆ.