ಜನಸ್ಪಂದನ ನ್ಯೂಸ್, ಡೆಸ್ಕ್ : ಪ್ರಣಯ ಹಕ್ಕಿಗಳು ಹಿಂದು ಮುಂದು ನೋಡದೆ ಎಲ್ಲೆಂದರಲ್ಲಿ ಮೈಮರೆತು ಕಿಸ್ಸಿಂಗ್, ಹಗ್ಗಿಂಗ್ ಅಂತ ಶುರು ಮಾಡುತ್ತಾರೆ.
ಬಸ್ಸಿನಲ್ಲಿ ಆಗಿರಬಹುದು, ಕಾರಿನಲ್ಲಿ ಆಗಿರಬಹುದು, ರೈಲ್ವೆ, ಮೆಟ್ರೋವನ್ನು ಸಹ ಇವರು ಬಿಟ್ಟಿಲ್ಲ. ಇನ್ನೂ ಸೋಶಿಯಲ್ ಮೀಡಿಯಾದಲ್ಲಿ ಪ್ರಣಯ ಜೋಡಿಗಳ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಸ್ವಲ್ಪ ನಾಚಿಕೆ, ಮುಜುಗರ ಇಲ್ಲದೇ ನಡು ರಸ್ತೆಯಲ್ಲಿಯೇ ಮೈಮರೆತು ಎಲ್ಲೆಂದರಲ್ಲಿ ಜೋಡಿಗಳು ಕಿಸ್ ಮಾಡುವ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ.
ಇದನ್ನು ಓದಿ : ಅಶ್ಲೀಲ ಕಮೆಂಟ್ ಮಾಡಿದಾತನ ಮನೆಗೆ ನುಗ್ಗಿ ಹಿಗ್ಗಾಮುಗ್ಗಾ ಥಳಿಸಿದ ಯುವತಿ; ವಿಡಿಯೋ Viral.!
ಸದ್ಯ ಇಂತಹದ್ದೇ ಇನ್ನೊಂದು ವಿಡಿಯೋ ವೈರಲ್ ಆಗಿದೆ. ಪ್ರೇಮಿಗಳಿಬ್ಬರು ರೊಮ್ಯಾನ್ಸ್ ಮಾಡ್ತಾ ಬೈಕ್‌ನಲ್ಲಿ ಜಾಲಿ ರೈಡ್ ಹೊರಟಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ಘಟನೆ ದೆಹಲಿಯ ವಿಕಾಸಪುರಿ ಫ್ಲೈಓವರ್‌ನಲ್ಲಿ ನಡೆದಿದ್ದು, ಯುವಕನೊಬ್ಬ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ತನ್ನ ಪ್ರೇಯಸಿಯನ್ನು ತೊಡೆಯ ಮೇಲೆ ಕೂರಿಸಿಕೊಂಡು, ರೊಮ್ಯಾನ್ಸ್ ಮಾಡುತ್ತಾ ಬೈಕ್ ಚಲಾಯಿಸುತ್ತಿದ್ದಾನೆ, ಇದನ್ನು ಯಾರೋ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಇದನ್ನು ಓದಿ : Special news : ಭಾರತದ ಈ ಗ್ರಾಮದಲ್ಲಿ ಯುವತಿ ವಾರಕ್ಕೊಬ್ಬನ ಜೊತೆ ಲಿವ್ ಇನ್ ರಿಲೇಷನ್‌ಶಿಪ್’ನಲ್ಲಿರಬಹುದಂತೆ.!
ಗಗನ್ ದೀಪ್ ಸಿಂಗ್ (GagandeepNews) ಎಂಬವರು ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ.
ರಾತ್ರಿ ವೇಳೆ ದೆಹಲಿಯ ಹೈವೇ ರಸ್ತೆಯಲ್ಲಿ ಯುವಕನೊಬ್ಬ ತನ್ನ ಪ್ರೇಯಸಿಯನ್ನು ತೊಡೆಯ ಮೇಲೆ ಕೂರಿಸಿಕೊಂಡು, ರೊಮ್ಯಾನ್ಸ್ ಮಾಡ್ತಾ ಜಾಲಿ ರೈಡ್ ಹೋಗ್ತಾ ಇರುವ ದೃಶ್ಯವನ್ನು ವೈರಲ್ ವಿಡಿಯೋದಲ್ಲಿ ನೋಡಬಹುದು.
ಇದನ್ನು ಓದಿ : ವಿದ್ಯಾರ್ಥಿಗಿಂತ ಸೂಪರ್ ಆಗಿ ಡ್ಯಾನ್ಸ್ ಮಾಡಿದ ಪ್ರೊಫೆಸರ್; ವಿಡಿಯೋ Viral.!
ಸೆಪ್ಟೆಂಬರ್ 15 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 14 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಕೆಲವರು ದೆಹಲಿ ಪೊಲೀಸರನ್ನು ಟ್ಯಾಗ್ ಮಾಡಿ ದಯವಿಟ್ಟು ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.
ಸಾರ್ವಜನಿಕವಾಗಿ ಅಸಭ್ಯ ವರ್ತನೆಯನ್ನು ತೋರಿದ್ದು, ಟ್ರಾಫಿಕ್ ರೂಲ್ಸ್ ಅನ್ನು ಬ್ರೇಕ್ ಮಾಡಿ ಹುಚ್ಚಾಟ ಮೆರೆದ ಈ ಪ್ರೇಮಿಗಳ ವಿರುದ್ಧ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ.
चलती बाइक पर कपल ने किया खुल्लम-खुल्ला रोमांस, युवती ने किया लड़के को Kiss, वायरल हुआ वीडियो, मामला राजधानी दिल्ली के विकासपुरी फ्लाईओवर का है, देखिए इन लोगों को ना तो कानून का डर है और ना ही जिंदगी प्यारी, बस इन्हें लगी है रोमांस करने की बीमारी। @CPDelhi @dtptraffic… pic.twitter.com/s5kcpyZSRc
— Gagandeep Singh (@GagandeepNews) September 15, 2024