ಜನಸ್ಪಂದನ ನ್ಯೂಸ್, ಡೆಸ್ಕ್ : ಕಪ್ಪು ದಾರವನ್ನು ಕೈಗೆ ಅಥವಾ ಕಾಲಿಗೆ ಕಟ್ಟಿಕೊಳ್ಳುವುದು ಸಾಮಾನ್ಯ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೇಳುವುದಾದರೆ ಕಪ್ಪು ದಾರವನ್ನು ಶನಿಯ ಅಂಶದ ಪ್ರತೀಕ ಎಂಬುದಾಗಿ ಪರಿಗಣಿಸಲಾಗುತ್ತದೆ.
ಪ್ರತಿಯೊಂದು ರಾಶಿಯವರು ಕಪ್ಪು ದಾರ ಕಟ್ಟಿದರೆ ಲಾಭ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಕೆಲವು ರಾಶಿಯವರಿಗೆ ಇದರಿಂದ ನಷ್ಟ ಕೂಡ ಇರುತ್ತದೆ ಅನ್ನೋದನ್ನ ವೈದಿಕ ಜ್ಯೋತಿಷ್ಯ ಶಾಸ್ತ್ರ ಪ್ರತಿಪಾದಿಸುತ್ತದೆ.
ಇದನ್ನು ಓದಿ : Video : ಅಪಹರಿಸಿದವನ ಬಿಟ್ಟು ಬರಲ್ಲೊಪ್ಪದ ಮಗು : ಆತ ಕಿಡ್ನ್ಯಾಪರ್ ಅಲ್ಲ, ಹಾಗಾದ್ರೆ ಮತ್ಯಾರು.?
ಹಾಗಾಗಿ ಯಾವೆಲ್ಲ ರಾಶಿಯವರು ಕಪ್ಪು ದಾರ ಕಟ್ಟಿದರೆ ಒಳ್ಳೆಯದಾಗುವುದಿಲ್ಲ ಅಂತ ತಿಳಿಯೋಣ ಬನ್ನಿ.
ಸಿಂಹ ರಾಶಿ :
ಕಪ್ಪು ದಾರವನ್ನು ಕಟ್ಟಿಕೊಳ್ಳುವುದು ಸಿಂಹ ರಾಶಿಯವರಿಗೆ ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಾನಿದಾಯಕವಾಗಲಿದೆ. ಏಕೆಂದರೆ ಸಿಂಹ ರಾಶಿಯ ಸ್ವಾಮಿ ಗ್ರಹ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಗ್ರಹಗಳ ರಾಜ ಆಗಿರುವಂತಹ ಸೂರ್ಯ ಆಗಿರುತ್ತಾನೆ.
ಇದನ್ನು ಓದಿ : ಅತ್ತೆ ಹೊಡೆದಿದ್ದಾರೆ ಎಂದು ಸಹಾಯವಾಣಿ ಕೇಂದ್ರಕ್ಕೆ Call ಮಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್; ಮುಂದೆನಾಯ್ತು ಗೊತ್ತಾ.?
ಕಪ್ಪು ದಾರವನ್ನು ಕಟ್ಟಿಕೊಳ್ಳುವುದರಿಂದ ಸಿಂಹ ರಾಶಿಯವರ ಆತ್ಮವಿಶ್ವಾಸದಲ್ಲಿ ಕೊರತೆ ಕಂಡು ಬರಲಿದೆ. ಅಲ್ಲದೇ ತಂದೆ ಹಾಗೂ ಮಗನ ನಡುವೆ ಭಿನ್ನಾಭಿಪ್ರಾಯಗಳು ಮೂಡಿ ಬರುವಂತಹ ಸಾಧ್ಯತೆ ಇದೆ. ಕುಟುಂಬದಲ್ಲಿ ಸಂತೋಷ ಕೂಡ ದೂರವಾಗುವಂತಹ ಘಟನೆಗಳು ನಡೆಯಲಿವೆ.
ಮೇಷ ರಾಶಿ :
ಮೇಷ ರಾಶಿಯವರಿಗೆ ಕೂಡ ಕಪ್ಪು ದಾರವನ್ನು ಕಟ್ಟಿಕೊಳ್ಳುವುದರಿಂದಾಗಿ ಶುಭ ಲಾಭ ಉಂಟಾಗುವುದಿಲ್ಲ ಎಂದು ವೈದಿಕ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕಪ್ಪು ದಾರದ ಸಂಬಂಧ ಇರುವುದು ಶನಿ ಹಾಗೂ ರಾಹುವಿನ ಜೊತೆಗೆ. ಹೀಗಾಗಿ ಮೇಷ ರಾಶಿಯವರ ಸ್ವಾಮಿ ಗ್ರಹ ಮಂಗಳ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕಾಗುತ್ತದೆ.
ಇದನ್ನು ಓದಿ : Health : ಖಾಲಿ ಹೊಟ್ಟೆಯಲ್ಲಿ ಕಪ್ಪು ಒಣ ದ್ರಾಕ್ಷಿ ತಿನ್ನುವುದರಿಂದ ಆಗುವ ಪ್ರಯೋಜನಗಳು.!
ಪ್ರತಿಯೊಂದು ಸನ್ನಿವೇಶಗಳನ್ನ ಎದುರಿಸುವಂತಹ ಈ ರಾಶಿಯವರ ಧೈರ್ಯ ಹಾಗೂ ಸಾಹಸದಲ್ಲಿ ಈ ಸಂದರ್ಭದಲ್ಲಿ ಕಪ್ಪು ದಾರವನ್ನು ಕಟ್ಟುವುದರಿಂದಾಗಿ ಕೊರತೆಯುಂಟಾಗುತ್ತದೆ. ಹೀಗಾಗಿ ನಿಮ್ಮಲ್ಲಿ ವೀಕ್ನೆಸ್ ತರುವಂತಹ ಈ ಕಪ್ಪು ದಾರವನ್ನು ನೀವು ಕಟ್ಟಿಕೊಳ್ಳದೆ ಇರುವುದೇ ಒಳ್ಳೆಯದು.
ವೃಶ್ಚಿಕ ರಾಶಿ :
ವೃಶ್ಚಿಕ ರಾಶಿಯವರು ಕಪ್ಪು ದಾರವನ್ನು ಧರಿಸುವುದು ಅಷ್ಟೊಂದು ಒಳ್ಳೆಯ ಕೆಲಸ ಅಲ್ಲ. ವೃಶ್ಚಿಕ ರಾಶಿಯವರು ಯಾವುದೇ ಕಾರಣಕ್ಕೂ ಕೂಡ ಕಪ್ಪು ದಾರವನ್ನು ಅದು ಎಷ್ಟೇ ಪವಿತ್ರ ಭಾವನೆಯನ್ನು ಹಾಗೂ ಶಕ್ತಿಯನ್ನು ಹೊಂದಿರಲಿ ಅದನ್ನ ಧರಿಸಬೇಡಿ.
ಇದನ್ನು ಓದಿ : Job : 10ನೇ ತರಗತಿ ಆಗಿದ್ರೆ ಸಾಕು ; ಟಾಟಾ ಸಮೂಹದಿಂದ 4,000 ಮಹಿಳೆಯರಿಗೆ ಉದ್ಯೋಗಾವಕಾಶ.!
ಒಂದು ವೇಳೆ ಹಠ ಮಾಡಿ ನೀವು ಕಪ್ಪು ದಾರವನ್ನು ಧರಿಸುವುದಕ್ಕೆ ಹೋದರೆ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ನೀವು ಎದುರಿಸಬೇಕಾಗುತ್ತದೆ. ಅವುಗಳನ್ನು ಎದುರಿಸುವಂತಹ ಸಾಮರ್ಥ್ಯ ಕೂಡ ನಿಮ್ಮಲ್ಲಿ ಕಡಿಮೆ ಆಗುವಂತಹ ಸಾಧ್ಯತೆ ಇದೆ.
ಕರ್ಕ ರಾಶಿ :
ಕರ್ಕ ರಾಶಿಯವರು ಕಪ್ಪು ದಾರವನ್ನು ತಮ್ಮ ಕಾಲು ಅಥವಾ ಕೈಗೆ ಹಾಕಿಕೊಂಡರೆ ಅದರಿಂದ ಅಪಶಕುನ ಹೆಚ್ಚಾಗುತ್ತದೆ. ಆರ್ಥಿಕ ಸಂಕಷ್ಟಗಳು ಮಾತ್ರವಲ್ಲದೆ ಮಾನಸಿಕವಾಗಿ ಕೂಡ ಕರ್ಕ ರಾಶಿಯವರು ಈ ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಈ ಪ್ರಭಾವದಿಂದಾಗಿ ಸರಿಯಾಗಿ ನಡೆಯಬೇಕಾಗಿರುವಂತಹ ಕೆಲಸಗಳು ಕೂಡ ಅರ್ಧಕ್ಕೆ ನಿಲ್ಲುವಂತಹ ಹಾಗೂ ತಡೆಯನ್ನು ಉಂಟು ಮಾಡಬಹುದಾದಂತಹ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.