ಜನಸ್ಪಂದನ ನ್ಯೂಸ್, ಡೆಸ್ಕ್ : ಯುವಕನೋರ್ವ ತನ್ನ ಪ್ರೇಯಸಿಯನ್ನು ಭೇಟಿಯಾಗುವ ಸಲುವಾಗಿ ಬುರ್ಖಾ ಧರಿಸಿ ಬಂದು ಸ್ಥಳೀಯರ ಕೈಗೆ ತಗ್ಲಾಕೊಂಡಿದ್ದಾನೆ. ಈತ ಮಕ್ಕಳ ಕಳ್ಳ ಇರಬೇಕೆಂದು ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ.
ಇದನ್ನು ಓದಿ : NUHM : ರಾಷ್ಟ್ರೀಯ ನಗರ ಆರೋಗ್ಯ ಮಿಷನ್‌ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಈ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಗೆಳತಿಯನ್ನು ಭೇಟಿಯಾಗಲು ಯುವಕ ಬುರ್ಖಾ ಧರಿಸಿ ಬಂದಿದ್ದ. ಆತನ ವಿಚಿತ್ರ ವರ್ತನೆಯನ್ನು ಗಮನಿಸಿ ಅನುಮಾನಗೊಂಡ ಸ್ಥಳೀಯರು ಮುಖ ಗವಸು ತೆರೆದಿದ್ದಾರೆ. ಈತ ಮಕ್ಕಳ ಕಳ್ಳನೇ ಇರಬೇಕೆಂದು ಅಲ್ಲಿನ ಜನ ಹಿಗ್ಗಾಮುಗ್ಗ ಥಳಿಸಿ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ವಿಚಾರಣೆಯ ವೇಳೆ ಗೆಳತಿಯನ್ನು ಭೇಟಿಯಾಗಲು ಬುರ್ಖಾ ಧರಿಸಿ ಬಂದಿರುವುದಾಗಿ ಹೇಳಿಕೊಂಡಿದ್ದಾನೆ.
ಇದನ್ನು ಓದಿ : ನಾಗರ ಹಾವನ್ನು ಪ್ರೀತಿಯಿಂದ ಮುದ್ದಿಸಲು ಬಂದ ಎಮ್ಮೆ ; ಮುಂದೆನಾಯ್ತು.? ಈ ವಿಡಿಯೋ ನೋಡಿ.!
ತಮ್ಮ ಎಕ್ಸ್ ಖಾತೆಯಲ್ಲಿ, ಸಚಿನ್ ಗುಪ್ತಾ ಎಂಬುವರು ಈ ಕುರಿತ ಪೋಸ್ಟ್‌ನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ 15 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಕಮೆಂಟ್ಸ್ ಪಡೆದುಕೊಂಡಿದೆ.
‘ಅಯ್ಯೋ ಇದೆಂಥಾ ಅವಸ್ಥೆ’ ಎಂದು ಕೆಲವರು ಕಮೆಂಟ್ ಮಾಡಿದರೆ, ಇನ್ನೂ ಕೆಲವರು ‘ಆತ ಇನ್ನೊಂದು ಸಲ ಗೆಳತಿಯನ್ನು ಭೇಟಿಯಾಗಲು ಹೋಗಲಾರ’ ಎಂದು ಕಮೆಂಟ್ ಮಾಡಿದ್ದಾರೆ.
उत्तर प्रदेश के जिला मुरादाबाद में गर्लफ्रेंड से मिलने के लिए चांद भूरा नामक युवक बुर्का पहनकर पहुंच गया। लोगों को शक हुआ और उसे पकड़ लिया। तलाशी में एक लाइटर पिस्टल भी मिली। फिर उसकी पिटाई हुई। पुलिस को सौंप दिया गया। pic.twitter.com/lJvA8NVnnq
— Sachin Gupta (@SachinGuptaUP) September 2, 2024