ಜನಸ್ಪಂದನ ನ್ಯೂಸ್, ಬೆಳಗಾವಿ : ಕೃಷಿಹೊಂಡ (farm pond) ದಲ್ಲಿ ಈಜಲು ಹೋದ ಮೂರು ಮಕ್ಕಳು ಮುಳುಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಸಮೀಪದ ಅಂಕಲಿ (Ankali) ಗ್ರಾಮದಲ್ಲಿ ಶನಿವಾರ ನಡೆದಿರುವ ಬಗ್ಗೆ ವರದಿಯಾಗಿದೆ.
ಸಾವಿಗೀಡಾದ ಬಾಲಕರು ಇಂಗಳಿ ಗ್ರಾಮದ ಪ್ರಥಮೇಶ ಕೆರಬಾ (13), ಅಥರ್ವ ಸೌಂದಲಗೆ (15), ಸಮರ್ಥ ಚೌಗಲೆ (13) ಎಂದು ತಿಳಿದು ಬಂದಿದೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಮೇ 03 ರ ದ್ವಾದಶ ರಾಶಿಗಳ ಫಲಾಫಲ.!
ಈ ಮೂವರು ಸ್ನೇಹಿತರು ಸೇರಿಕೊಂಡು ಕೃಷಿ ಹೊಂಡದಲ್ಲಿ ಈಜಲು (swimming) ಹೋಗಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಬಾಲಕರು ಮನೆಗೆ ಬರದ ಹಿನ್ನೆಲೆ ಪೋಷಕರು ಹುಡುಕಾಟ ಆರಂಭಿಸಿದ್ದಾರೆ. ಇನ್ನೂ ಬಾಲಕರು ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿರುವ ಮಾಹಿತಿ ಪೊಲೀಸರಿಗೆ ಸ್ಥಳೀಯರಿಂದ ಸಿಕ್ಕಿದೆ ಎಂದು ತಿಳಿದು ಬಂದಿದೆ.
ಇದನ್ನು ಓದಿ : ಹಿಂದೂ ಕಾರ್ಯಕರ್ತನ ಬರ್ಬರ ಹತ್ಯೆ ; ದಾಳಿಯ ವಿಡಿಯೋ ವೈರಲ್.!
ಸ್ಥಳಕ್ಕೆ ಚಿಕ್ಕೋಡಿ ತಹಶೀಲ್ದಾರ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಗೆ ಮೃತದೇಹಗಳನ್ನು ರವಾನಿಸಲಾಗಿದೆ.
ಬೆಳಗಾವಿ ಜಿಲ್ಲೆ ಅಂಕಲಿ ಪೊಲೀಸ್ ಠಾಣೆ (Ankali Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹಿಂದಿನ ಸುದ್ದಿ : ನಿಮ್ಮ ಸ್ಮಾರ್ಟ್‌ಫೋನ್ Update ಮಾಡದೇ ಇದ್ದರೆ ಏನಾಗುತ್ತೆ.?
ಜನಸ್ಪಂದನ ನ್ಯೂಸ್, ಡೆಸ್ಕ್ : ಈಗಂತೂ ಎಲ್ಲರ ಕೈಯಲ್ಲಿ ಸ್ಮಾರ್ಟ್ ಫೋನ್ ಗಳು ಇವೆ. ಇನ್ನೂ ಸ್ಮಾರ್ಟ್ ಫೋನ್ ಎಂದಮೇಲೆ ಅದರಲ್ಲಿ ಅಪ್ಡೇಟ್ಗಳು ಬರುವುದು ಸಾಮಾನ್ಯ. ಆದರೆ ಬಹಳಷ್ಟು ಜನ ಅದರ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ.
ಈ ಅಪ್ಡೇಟ್ ಸೂಚನೆ ತಿಂಗಳುಗಳ ಕಾಲ ಕಾಣಿಸುತ್ತಲೇ ಇರುತ್ತದೆ. ನೀವು ಅಪ್ಡೇಟ್ ಮಾಡದಿದ್ದರೆ ಸಮಸ್ಯೆ ಏನು? ಅಪ್ಡೇಟ್ ಮಾಡದೇ ಹೋದ್ರೆ ನಿಮ್ಮ ಫೋನ್‌ನಲ್ಲಿ ಹಲವಾರು ಸಮಸ್ಯೆಗಳು ಕಾಣಿಸುತ್ತವೆ.
ಇದನ್ನು ಓದಿ : ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡವರಿಗೆ SC ಸ್ಥಾನಮಾನ ಸಿಗುವುದಿಲ್ಲ : ಹೈಕೋರ್ಟ್
ನೀವು ನಿಮ್ಮ ಸ್ಮಾರ್ಟ್ ಫೋನ್ ಸಾಫ್ಟ್‌ವೇರ್ ಅನ್ನು ದೀರ್ಘಕಾಲದವರೆಗೆ ಅಪ್ಡೇಟ್ ಮಾಡದೇ ಬಿಟ್ಟರೆ, ಮದರ್ ಬೋರ್ಡ್ ಒಂದು ಹಂತದಲ್ಲಿ ಕೆಟ್ಟದಾಗಿ ಹೋಗಬಹುದು. ಪರಿಣಾಮವಾಗಿ, ಫೋನ್ ಸಂಪೂರ್ಣವಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ. ಅಥವಾ ಫೋನ್ ಪದೇ ಪದೇ Hang ಆಗುವ ಸಾಧ್ಯತೆ ಇದೆ.
ಸಮಯಕ್ಕೆ ಸರಿಯಾಗಿ mobile update ಆಗದೇ ಇದ್ದಾಗ ಅದು Heat ಆಗಲು ಪ್ರಾರಂಭಿಸುತ್ತದೆ.
ಸೆಕ್ಯುರಿಟಿ ಸಮಸ್ಯೆ ಕಾಣಿಸಬಹುದು.
ಇದನ್ನು ಓದಿ : Bike ಮೇಲೆ ನಿಂತು ಸ್ಟಂಟ್ ಮಾಡಲು ಹೋದಾತ ಏನಾದ ಗೊತ್ತಾ.? ಈ ವಿಡಿಯೋ ನೋಡಿ.!
ಫೋನ್ ಹ್ಯಾಕ್ ಆಗುವ ಸಾಧ್ಯತೆ ಕೂಡ ಇರುತ್ತದೆ.
ಸ್ಮಾರ್ಟ್‌ಫೋನ್ ಸಾಫ್ಟ್‌ವೇರ್ ಅನ್ನು ನವೀಕರಿಸಿದಾಗಲೆಲ್ಲಾ ಅದು ಸ್ಮಾರ್ಟ್‌ಫೋನ್‌ನ ವೇಗವನ್ನು ಬಹಳಷ್ಟು ಹೆಚ್ಚಿಸುತ್ತದೆ. ಆಗ ಫೋನ್‌ನಲ್ಲಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.
ಹ್ಯಾಂಗ್ ಆಗುವ ಸಮಸ್ಯೆ ಬರುವುದಿಲ್ಲ. ನೀವು ಮೊಬೈಲ್ನಲ್ಲಿ ತೊಂದರೆ ಅನುಭವಿಸುತ್ತಿದ್ದರೆ ಅಪ್ಡೇಟ್ ಕೊಡಲೇ ಬೇಕು.
ಇದನ್ನು ಓದಿ : ಹಠ ಮಾಡುತ್ತಾರೆ ಅಂತ ಮಕ್ಕಳ ಕೈಗೆ ಮೊಬೈಲ್ ಕೊಡುವ ಪಾಲಕರೇ ಈ Video ನಿಮಗಾಗಿ.!
ಫೋನ್‌ನಲ್ಲಿ ಯಾವುದೇ ದೋಷ ಅಥವಾ ವೈರಸ್ ಇದ್ದರೆ, ಅವುಗಳನ್ನು ಅಪ್‌ಡೇಟ್ ಮೂಲಕ ತೆಗೆದು ಹಾಕಬಹುದು. ಹಾಗಾಗಿ Ciber crimr ಜಗತ್ತಿನಲ್ಲಿ ಫೋನ್ ಅನ್ನು ಹ್ಯಾಕಿಂಗ್ ನಿಂದ ತಪ್ಪಿಸಿಕೊಳ್ಳಲು ಸರಿಯಾದ ಸಮಯಕ್ಕೆ ಸ್ಮಾರ್ಟ್‌ಫೋನ್ Software ಅನ್ನು Update ಮಾಡಬೇಕು.
ಮೊಬೈಲ್ ಕಂಪನಿಗಳು ಅಪ್ಡೇಟ್ ನೀಡುವುದು ಏಕೆಂದರೆ ನಿಮ್ಮ ಸ್ಮಾರ್ಟ್ಫೋನ್ಗಳಿಗೆ ಯಾವುದೇ ತೊಂದರೆ ಅಥವಾ ವೈರಸ್ ಅಟ್ಯಾಕ್ ಆಗದಿರಲಿ ಮತ್ತು ಸುರಕ್ಷತೆಗಾಗಿ ನವೀಕರಣಗಳನ್ನು ನೀಡಲಾಗುತ್ತದೆ. ಕಂಪನಿ ಈ ಅಪ್ಡೇಟ್ ಸಂದೇಶ ನೀಡುವುದನ್ನು ನಿಲ್ಲಿಸಿದಾಗ ಫೋನ್ ಬದಲಾವಣೆ ಮಾಡುವುದು ಉತ್ತಮ ನಿರ್ಧಾರ.
ಇದನ್ನು ಓದಿ : Health : ನಿಮ್ಮ ಮನೆ ಅಕ್ಕಪಕ್ಕದಲ್ಲಿ ಸಿಗುವ ಈ ಹಣ್ಣಿನಿಂದ ಸಿಗುತ್ತೆ ಮಧುಮೇಹದಿಂದ ಮುಕ್ತಿ.!
ಫೋನ್ ಅಪ್‌ಡೇಟ್ ಆದ ತಕ್ಷಣ ಫೋನ್‌ನಲ್ಲಿರುವ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ. ಅಲ್ಲದೆ ಫೋನಿನ ಸೆಕ್ಯುರಿಟಿ ಕೂಡ ಸಾಕಷ್ಟು ಹೆಚ್ಚುತ್ತದೆ.
ಹಾಗಾಗಿಯೇ ಸ್ಮಾರ್ಟ್‌ಫೋನ್ ಸಾಫ್ಟ್ ವೇರ್ಗಳನ್ನು ಸರಿಯಾದ ಸಮಯಕ್ಕೆ ಅಪ್ಡೇಟ್ ಮಾಡುವುದು ಬಹಳ ಮುಖ್ಯ ಎನ್ನುವುದು ಟೆಕ್ ತಜ್ಞರ ಅಭಿಪ್ರಾಯ.