ಜನಸ್ಪಂದನ ನ್ಯೂಸ್, ನೌಕರಿ : ಯೂನಿಯನ್ ಬ್ಯಾಂಕ್‌ನಲ್ಲಿ ಖಾಲಿ ಇರುವ (Union Bank Specialist Officer Posts) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಬೇಕಾದ ಎಲ್ಲಾ ಮಾಹಿತಿಯನ್ನು ಇಲ್ಲಿ ಕೊಟ್ಟಿದ್ದರೂ ಸಹ, ಒಮ್ಮೆ ಅಧಿಕೃತ ವೆಬ್‌ಸೈಟ್‌ನಲ್ಲಿ ಪರೀಕ್ಷಿಸಿ Online ಮೂಲಕ ಅರ್ಜಿ ಸಲ್ಲಿಸಿ.
ಇದನ್ನು ಓದಿ : ಟ್ಯೂಷನ್‌ಗೆ ಬರುತ್ತಿದ್ದ 11 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ 23 ವರ್ಷದ ಶಿಕ್ಷಕಿ.!
ಹುದ್ದೆಗಳ ಮಾಹಿತಿ :
- ನೇಮಕಾತಿ ಪ್ರಾಧಿಕಾರ : Union Bank.
- ಹುದ್ದೆಗಳ ಹೆಸರು : ಸಹಾಯಕ ವ್ಯವಸ್ಥಾಪಕ,
- ಸಹಾಯಕ ವ್ಯವಸ್ಥಾಪಕ (IT).
- ಹುದ್ದೆಗಳ ಸಂಖ್ಯೆ : 500.
* ಸಹಾಯಕ ವ್ಯವಸ್ಥಾಪಕ (ಕ್ರೆಡಿಟ್) : 250 ಹುದ್ದೆಗಳು ಹಾಗೂ
* ಸಹಾಯಕ ವ್ಯವಸ್ಥಾಪಕ (ಐಟಿ) : 250 ಹುದ್ದೆಗಳು.
ವೇತನ ಶ್ರೇಣಿ :
- ಈ ಹುದ್ದೆಗಳಿಗೆ ಆಯ್ಕೆ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ. 48,480/- ರಿಂದ ರೂ. 85,480/- ವರೆಗೆ ವೇತನ ಪಡೆಯಬಹುದಾಗಿದೆ.
ಇದನ್ನು ಓದಿ : Health : ಬೇಸಿಗೆಯಲ್ಲಿ ಯಾವುದು ಉತ್ತಮ ಮೊಸರು Or ಮಜ್ಜಿಗೆ.!
ಅರ್ಹತೆಯ ಮಾನದಂಡ ಏನು ?
- ಮೇಲೆ ತಿಳಿಸಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ವಿವರವಾದ ಅಧಿಸೂಚನೆಯ ಮೂಲಕ ಶೈಕ್ಷಣಿಕ ಅರ್ಹತೆ ಮತ್ತು ವಯಸ್ಸಿನ ಮಿತಿಯನ್ನು ಪರಿಶೀಲಿಸಬಹುದು.
ಆಯ್ಕೆ ಪ್ರಕ್ರಿಯೆ ಹೇಗೆ?
- ಆಯ್ಕೆ ಪ್ರಕ್ರಿಯೆಯು ಅರ್ಜಿದಾರರು/ಅರ್ಹ ಅಭ್ಯರ್ಥಿಗಳ ಸಂಖ್ಯೆಯನ್ನು ಅವಲಂಬಿಸಿ Online test/group discussion/ ಅರ್ಜಿಗಳ ಪರಿಶೀಲನೆ ಮತ್ತು/ಅಥವಾ ವೈಯಕ್ತಿಕ ಸಂದರ್ಶನವನ್ನು ಒಳಗೊಂಡಿರಬಹುದು.
- ಅಧಿಸೂಚಿತ ಹುದ್ದೆಗಳಿಗೆ ಆಯ್ಕೆ ಮಾಡಲು ಈ ಎಲ್ಲಾ ಅಥವಾ ಯಾವುದಾದರೂ ವಿಧಾನಗಳನ್ನು ಬಳಸಬೇಕೆ ಎಂದು ನಿರ್ಧರಿಸುವ ಸಂಪೂರ್ಣ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸಿದೆ.
ಇದನ್ನು ಓದಿ : 10th, 12th ಮತ್ತು ಡಿಗ್ರಿ ಪಾಸಾದವರಿಗೆ ಪಶುಸಂಗೋಪನಾ ಇಲಾಖೆಯಲ್ಲಿ 12,981 ಉದ್ಯೋಗವಕಾಶ.!
ಅರ್ಜಿ ಶುಲ್ಕ ಎಷ್ಟು?
- ಎಸ್‌ಸಿ/ಎಸ್‌ಟಿ/ಪಿ ಡಬ್ಲ್ಯೂ ಬಿ ಡಿ ಅಭ್ಯರ್ಥಿಗಳಿಗೆ : ರೂ. 177/- (GST ಸೇರಿದಂತೆ) ಮತ್ತು
- ಇತರ (OBC) ವರ್ಗದ ಅಭ್ಯರ್ಥಿಗಳಿಗೆ : ರೂ. 1180/- (GST ಸೇರಿದಂತೆ) ಪಾವತಿ ಮಾಡಬೇಕಿದೆ.
Note : ಅಭ್ಯರ್ಥಿಗಳು ಡೆಬಿಟ್ ಕಾರ್ಡ್‌ಗಳು (RuPay/Visa/MasterCard/Maestro), ಕ್ರೆಡಿಟ್ ಕಾರ್ಡ್‌ಗಳು, ಇಂಟರ್ನೆಟ್ ಬ್ಯಾಂಕಿಂಗ್, IMPS, ನಗದು ಕಾರ್ಡ್‌ಗಳು/ಮೊಬೈಲ್ ವ್ಯಾಲೆಟ್‌ಗಳು/ಯುಪಿಐ ಬಳಸಿ ಪಾವತಿ ಮಾಡಬಹುದು.
ಇದನ್ನು ಓದಿ : ಹಠ ಮಾಡುತ್ತಾರೆ ಅಂತ ಮಕ್ಕಳ ಕೈಗೆ ಮೊಬೈಲ್ ಕೊಡುವ ಪಾಲಕರೇ ಈ Video ನಿಮಗಾಗಿ.!
ಪ್ರಮುಖ ದಾಖಲೆಗಳು :
ಈ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಈ ಎಲ್ಲಾ ದಾಖಲೆಗಳನ್ನು ಹೊಂದಿರಬೇಕು.
- 10ನೇ ತರಗತಿ ಅಂಕ ಪ್ರಮಾಣಪತ್ರ.
- 12ನೇ ತರಗತಿ ಅಂಕ ಪ್ರಮಾಣಪತ್ರ.
- ಜಾತಿ, ಆದಾಯ ಪ್ರಮಾಣಪತ್ರ.
- ಆಧಾರ್ ಕಾರ್ಡ್.
- ನೋಂದಾಯಿತ ಮೊಬೈಲ್ ಸಂಖ್ಯೆ.
- ಇಮೇಲ್ ಐಡಿ.
- ಛಾಯಾಚಿತ್ರ.
- ಸಹಿ.
Note : ಹೆಚ್ಚಿನ ಸಂಬಂಧಿತ ವಿವರಗಳಿಗಾಗಿ ಅಭ್ಯರ್ಥಿಗಳು ಯೂನಿಯನ್ ಬ್ಯಾಂಕಿನ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಬಹುದು.
ಇದನ್ನು ಓದಿ : NPCIL ಯಲ್ಲಿ ಖಾಲಿ ಇರುವ 400 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಪ್ರಮುಖ ದಿನಾಂಕ :
- ಈ ಹುದ್ದೆಗಳಿಗೆ ಅಧಿಸೂಚನೆಯನ್ನು ಏಪ್ರಿಲ್ 30 ರಂದು ಬಿಡುಗಡೆ.
- ಕೊನೆಯ ದಿನಾಂಕ : ಮೇ 20, 2025.
ಪ್ರಮುಖ ಲಿಂಕ್ :
ಅರ್ಹ ಅಭ್ಯರ್ಥಿಗಳು unionbankofindia.co.in ನಲ್ಲಿ ಅರ್ಜಿ ಸಲ್ಲಿಸಬಹುದು.
Disclaimer : The above given information is available On online, candidates should check it properly before applying. This is for information only.
ಹಿಂದಿನ ಸುದ್ದಿ : Harassment : ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಅರಣ್ಯ ವೀಕ್ಷಕ.!
ಜನಸ್ಪಂದನ ನ್ಯೂಸ್, ಮೈಸೂರು : ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನಲ್ಲಿ (Saraguru taluk of Mysore district) ಮೇಲಾಧಿಕಾರಿಗಳ ಕಿರುಕುಳ (Harassment) ಕ್ಕೆ ಬೇಸತ್ತು ಅರಣ್ಯ ವೀಕ್ಷಕರೊಬ್ಬರು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಗುಂಡ್ಲುಪೇಟೆ ತಾಲ್ಲೂಕಿನ ಬೇರಂಬಾಡಿ ನಿವಾಸಿ ಸುರೇಶ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನು ಓದಿ : ಹಠ ಮಾಡುತ್ತಾರೆ ಅಂತ ಮಕ್ಕಳ ಕೈಗೆ ಮೊಬೈಲ್ ಕೊಡುವ ಪಾಲಕರೇ ಈ Video ನಿಮಗಾಗಿ.!
ಅರಣ್ಯ ವೀಕ್ಷಕ (Forest observer) ಸುರೇಶ್, ACF ಅಮೃತ ಎಂಬುವವರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದು, ಶವ ಅರಣ್ಯ ಸಿಬ್ಬಂದಿಗೆ ನೀಡುವ ಕ್ವಾರ್ಟರ್ಸ್‌ನಲ್ಲಿ ಸುರೇಶ್ ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಇನ್ನೂ ಡೆತ್‌ನೋಟ್ ಇದ್ದರೂ ಅಧಿಕಾರಿಗಳ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ. ಪೊಲೀಸರು ಹಿರಿಯ ಅಧಿಕಾರಿಗಳ ರಕ್ಷಣೆಗೆ ಮುಂದಾಗಿದ್ದಾರೆ ಎಂದು ಸುರೇಶ್ ಕುಟುಂಬದವರು ಗಂಭೀರ ಆರೋಪ ಮಾಡಿದ್ದಾರೆ.
ಇದನ್ನು ಓದಿ : Health : ಹೆಚ್ಚು ಎಣ್ಣೆಯುಕ್ತ ಆಹಾರ ತಿನ್ನುತ್ತೀರಾ.? ಹಾಗಿದ್ರೆ ಈ ಸುದ್ದಿ ಓದಿ.!
ನನ್ನ ಮಗನ ಸಾವಿಗೆ ನ್ಯಾಯ ಕೊಡಿಸಿ ಎಂದು ಕುಟುಂಬಸ್ಥರು ಹಾಗೂ ಸ್ಥಳೀಯರು (ಕುಟುಂಬಸ್ಥರು ಹಾಗೂ ಸ್ಥಳೀಯರು) ಆಗ್ರಹಿಸಿದ್ದಾರೆ.