ಜನಸ್ಪಂದನ ನ್ಯೂಸ್, ವಿಜಯಪೂರ : ವಿದ್ಯಾರ್ಥಿನಿಯೋರ್ವಳು ಪಾಕ್ ಪರ ಪೋಸ್ಟ್ ಹಾಕಿದ ಘಟನೆ ರಾಜ್ಯದ ವಿಜಯಪೂರದಲ್ಲಿ ನಡೆದಿದೆ.
ಭಾರತದ ದಾಳಿಯಿಂದ ಪತರಗುಟ್ಟುತ್ತಿರುವ ವೈರಿ ರಾಷ್ಟ್ರದ ಪರ ನಮ್ಮದೇ ರಾಜ್ಯದ ವಿದ್ಯಾರ್ಥಿನಿಯೋರ್ವಳು ಪೋಸ್ಟ್ ಹಾಖಿರುವುದಯ ನಿಜಕ್ಕೂ ದುರದೃಷ್ಟ ಸಂಗತಿಯಾಗಿದೆ. ದೇಶದೆಲ್ಲಡೆ ಸೈನಿಕರಿಗೆ ಜೈಕಾರ ಹಾಕುತ್ತ ನೈತಿಕ ಬೆಂಬಲ ಸೂಚಿಸುತ್ತಿರುವಾಗ ಈ ರೀತಿ ವೈರಿ ರಾಷ್ಟ್ರದ ಪರ ಪೋಸ್ಟ್ ಹಾಕುವುದು ದೇಶ ದ್ರೊಹವೇ ಸರಿ.
ಇದನ್ನು ಓದಿ : ಪಿಯುಸಿ ಆದವರಿಗೆ NIAಯಲ್ಲಿ ಬೃಹತ್ ಉದ್ಯೋಗವಕಾಶ.
ಹೀಗೆ ಪಾಕ್ ಪರ ಪೋಸ್ಟ್ ಹಾಕಿದ ವಿದ್ಯಾರ್ಥಿನಿಯನ್ನು ವಿಜಯಪುರದ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ ತಶೌದ್ದಾ ಫಾರೂಕಿ ಶೇಖ್.
ಪೋಸ್ಟ್ನಲ್ಲಿ ಏನಿದೆ?
ವಿದ್ಯಾರ್ಥಿನಿ ತಶೌದ್ದಾ ಫಾರೂಖಿ ಶೇಖ್ ‘@hoodyyyyyyy’ ಎಂಬ ಹೆಸರಿನ ಖಾತೆಯಲ್ಲಿ “ನನ್ನ ಪಾಕಿಸ್ತಾನಿ ಸ್ನೇಹಿತರಿಗೆ, ಐಒಜೆಕೆ, ಎಜೆಕೆ ಜನರು ಸರ್ಕಾರಿ ಮಿಲಿಟರಿ ಸ್ಥಳಗಳಿಗೆ ಹೋಗಬೇಡಿ. ಗಡಿಯಿಂದ 200 ಕಿಲೋ ಮೀಟರ್ ಹೋಗಬೇಡಿ. ಅಲ್ಲಾ ಪಾಕಿಸ್ತಾನ ಹಾಗೂ ನಮ್ಮೆಲ್ಲರನ್ನೂ ಭಾರತದಿಂದ ರಕ್ಷಿಸಲಿ ಅಮೀನ್#sos” ಎಂದು ದೇಶ ವಿರೋಧಿ ಪೋಸ್ಟ್ ಸಾಮಾಜಿಕ ಜಾಲತಣದಲ್ಲಿ ಹಾಕಿದ್ದಾಳೆ.
ಇದನ್ನು ಓದಿ : Reels : ನಿಮಗೂ ರೀಲ್ಸ್ ಹುಚ್ಚಾ.? ಹಾಗಾದ್ರೆ ಮೈ ಜುಂ ಎನ್ನೋ ವಿಡಿಯೋ ನೋಡಿ.
ವಿದ್ಯಾರ್ಥಿನಿ ತಶೌದ್ದಾ ಫಾರೂಕಿ ಶೇಖ್ ಅವರ ವೈರಲ್ ಪೋಸ್ಟ್ ನಂತರ, ಹಿಂದೂ ಪರ ಸಂಘಟನೆಗಳು ಆಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿವೆ. ನಂತರ, ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ವಿನೋದ್ ದೊಡಮನಿ ಸ್ವಯಂಪ್ರೇರಿತ ದೂರು ದಾಖಲಿಸಿದ್ದಾರೆ.
ದೇಶದ ಸಾರ್ವಭೌಮತೆ ಮತ್ತು ಸಮಗ್ರತೆಗೆ ಹಾನಿಕಾರಕ ಮತ್ತು ದೇಶದ ಏಕತೆಗೆ ಹಾನಿಕಾರಕವಾದ ಪೋಸ್ಟ್ ಅನ್ನು ಪೋಸ್ಟ್ ಮಾಡಿದ್ದಕ್ಕಾಗಿ ದಂತ ವೈದ್ಯಕೀಯ ವಿದ್ಯಾರ್ಥಿ ತಶೌದ್ದಾ ವಿರುದ್ಧ ಬಿಎನ್ಎಸ್ 152. 197.3(5) ಅಡಿಯಲ್ಲಿ ದೂರು ದಾಖಲಿಸಲಾಗಿದೆ.
ಇದನ್ನು ಓದಿ : Alert : ನಿಮ್ಮ ಬ್ಲಡ್ ಗ್ರೂಪ್ ಇದಾಗಿದ್ದರೆ ಹಾರ್ಟ್ ಅಟ್ಯಾಕ್ ಅಪಾಯ ತಪ್ಪಿದ್ದಲ್ಲ.
ಯು-ಟರ್ನ್ :
ಏತನ್ಮಧ್ಯೆ, ದೂರು ದಾಖಲಾಗುತ್ತಿದ್ದಂತೆ, ವಿದ್ಯಾರ್ಥಿ ತಶೌದ್ದಾ ಯು-ಟರ್ನ್ ತೆಗೆದುಕೊಂಡರು. “ಇದು ನನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿನ ನನ್ನ ಕಾಮೆಂಟ್‌ಗೆ ಸಂಬಂಧಿಸಿದೆ. ನಾನು ಕಮೆಂಟ್ ಮಾಡಿದ್ದು ಮೂರ್ಖತನದ ಕೃತ್ಯವಾಗಿದೆ. ನಿಜವಾಗಿಯೂ ಎಲ್ಲರಿಗೂ ಕ್ಷಮೆಯಾಚಿಸುವೆ. ಮುಂದೆ ನಾನು ಎಂದಿಗೂ ಈ ರೀತಿಯ ತಪ್ಪನ್ನು ಮಾಡುವುದಿಲ್ಲ ಎಂದು ಖಚಿತಪಡಿಸಿತ್ತೇನೆ. ಜೈ ಹಿಂದ್” ಎಂದು ಪೋಸ್ಟ್ ಮಾಡಿದ್ದಾಳೆ.
ಹಿಂದಿನ ಸುದ್ದಿ : Health : ನಿಮ್ಮ ಮನೆ ಅಕ್ಕಪಕ್ಕದಲ್ಲಿ ಸಿಗುವ ಈ ಹಣ್ಣಿನಿಂದ ಸಿಗುತ್ತೆ ಮಧುಮೇಹದಿಂದ ಮುಕ್ತಿ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಸೀಮೆ ಹುಣಸೆ ಹಣ್ಣು, ಇಲಾಚಿ ಹಣ್ಣು ಎಂದು ಕರೆಯುವ ಈ ಹಣ್ಣು ಜಂಗಲ್ ಜಿಲೇಬಿ (Jungle Jilebi) ಎಂದೇ ಖ್ಯಾತಿ ಪಡೆದಿದೆ. ಪ್ರತಿದಿನ ಇಪ್ಪತ್ತರಿಂದ ಮೂವತ್ತು ಗ್ರಾಂ ಇಲಾಚಿ ಹಣ್ಣು ತಿನ್ನುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ದೂರ ಆಗುತ್ತವೆ.
ಪಿಥೆಸೆಲ್ಲೋಬಿಯಂ ಡುಲ್ಸ್ (Pithecellobium dulce) ಎಂದು ಕರೆಯಲ್ಪಡುವ ಸೀಮೆ ಹುಣಸೆ ಹಣ್ಣು, ವಿಶಿಷ್ಟವಾದ ರುಚಿ ಹೊಂದಿದೆ. ಇದರ ಔಷಧೀಯ ಗುಣಗಳು ಆರೋಗ್ಯಕ್ಕೂ ವರದಾನವಿದ್ದಂತೆ.
ಇದನ್ನು ಓದಿ : Revenue Department : ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಜಂಗಲ್ ಜಲೇಬಿಯನ್ನು ಊಟ ಮಾಡುವುದಕ್ಕಿಂತ ಒಂದು ಗಂಟೆ ಮುಂಚೆ ಅಥವಾ ಒಂದು ಗಂಟೆ ನಂತರ ತಿನ್ನಬೇಕು (Eat one hour before or one hour after) ಎನ್ನುತ್ತಾರೆ ಹಿರಿಯರು.
ಈ ಹಣ್ಣು ವಿಟಮಿನ್ ಸಿ, ಪ್ರೋಟೀನ್, ಕೊಬ್ಬು, ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಥಯಾಮಿನ್, ರಿಬೋಫ್ಲಾವಿನ್ ಮುಂತಾದ ಅನೇಕ ಅಂಶಗಳನ್ನು ಹೊಂದಿದೆ.
ಕಣ್ಣಿನ ಸಮಸ್ಯೆ ಮತ್ತು ಚರ್ಮದ ಕಾಯಿಲೆಗೆ (Eye problems and skin disease) ಈ ಹಣ್ಣು ತುಂಬಾ ಉಪಯೋಗಕರ ಎಂದು ಪರಿಗಣಿಸಲಾಗಿದೆ.
ಇದನ್ನು ಓದಿ : ಅತ್ಯಂತ ದುರ್ಬಲ ಪಾಸ್‌ವರ್ಡ್ ಗಳಿವು; 1 ನಿಮಿಷ ಸಾಕು ಖಾತೆ ಹ್ಯಾಕ್ ಮಾಡಲು.!
ಇದು ದೇಹವನ್ನು ಸ್ವತಂತ್ರ ರಾಡಿಕಲ್‌ಗಳಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತದೆ. ಈ ಗುಣವು ವಯಸ್ಸಾಗುವುದನ್ನು ತಡೆಯುತ್ತದೆ (Prevents aging) ಮತ್ತು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ.
ಈ ಹಣ್ಣು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುವುದು (To strengthen the digestive system).
ಜಂಗಲ್ ಜಲೇಬಿಯನ್ನು ಒಂದು ತಿಂಗಳು ನಿಯಮಿತವಾಗಿ ಸೇವಿಸಿದರೆ, ಸಕ್ಕರೆಯನ್ನು ನಿಯಂತ್ರಿಸಬಹುದಂತೆ.
ಇದನ್ನು ಓದಿ : Pahalgam attack : ಭಾರತದಿಂದ ಪ್ರತಿಕಾರದ ಭಯ ; ಪಾಕಿಸ್ತಾನ ಸೈನಿಕರ ಸಾಮೂಹಿಕ ರಾಜೀನಾಮೆ.?
ಇದರಲ್ಲಿರುವ ಆಂಟಿಆಕ್ಸಿಡೆಂಟ್, ಆಂಟಿಇನ್ಫ್ಲಾಮೇಟರಿ, ಆಂಟಿಡಿಯಾಬೆಟಿಕ್ ಅಂಶಗಳು ಕ್ಯಾನ್ಸರ್ ರೋಗಿಗಳಿಗೆ ಉಪಯುಕ್ತವಾಗಿವೆ (Useful for cancer patients).
ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು (To maintain body temperature) ಮತ್ತು ಶಾಖ ಸಂಬಂಧಿತ ಅಸ್ವಸ್ಥತೆಯನ್ನು ತಡೆಯಲು ಸಹಾಯ ಮಾಡುತ್ತದೆ.
ನೈಸರ್ಗಿಕ ನೋವು ನಿವಾರಕವಾಗಿಯೂ ಕಾರ್ಯನಿರ್ವಹಿಸುತ್ತದೆ
ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
ಇದನ್ನು ಓದಿ : Health : ಏಕಾಏಕಿ ಕೈಗಳು ನಡುಗುವುದು ಈ ಗಂಭೀರ ಕಾಯಿಲೆಯಾಗಿರಬಹುದು.!
ಫೈಲೇರಿಯಾಸಿಸ್ ಎಂಬ ಸಾರವನ್ನು ಈ ಹಣ್ಣಿನ ಎಲೆ ಮತ್ತು ಬೀಜಗಳು ಹೊಂದಿದ್ದು, ಇದು ಸೊಳ್ಳೆಗಳನ್ನು ಹಿಮ್ಮೆಟ್ಟಿಸಲು ಉಪಯುಕ್ತವಾಗಿದೆ. ಅಲ್ಲದೇ ಸೊಳ್ಳೆಗಳ ವಿರುದ್ಧ ನೈಸರ್ಗಿಕ ಕೀಟನಾಶಕವಾಗಿಯೂ (Natural insecticide against mosquitoes) ಈ ಹಣ್ಣು ಕೆಲಸ ಮಾಡುತ್ತದೆ.
ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ.
ಇದು ಮಧುಮೇಹ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಇದನ್ನು ಓದಿ : ಬೇಡ, ಬೇಡ ಅಂದ್ರು ಮಧ್ಯರಾತ್ರಿ ಮಹಿಳೆ ಮನೆಯೊಳಗೆ ನುಗ್ಗಿದ Teacher ; ಮುಂದೆನಾಯ್ತು.!
ಕೆಮ್ಮು ಮತ್ತು ಅಸ್ತಮಾದಂತಹ ರೋಗಗಳನ್ನು ಗುಣಪಡಿಸಬಹುದು.
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು ಮತ್ತು ಮಾಹಿತಿಗಳನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan News) ಈ ಲೇಖನಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ನಾವು ಜವಾಬ್ದಾರರಲ್ಲ.