ಕೇವಲ ₹225ಕ್ಕೆ 75GB ಡೇಟಾ, ಅನ್‌ಲಿಮಿಟೆಡ್ ಕಾಲ್; ಖಾಸಗಿ ಕಂಪನಿಗಳಿಗೆ ಟಕ್ಕರ್ ಕೊಟ್ಟ BSNL.

ಖಾಸಗಿ ಕಂಪನಿಗಳಿಗೆ ಟಕ್ಕರ್ ಕೊಟ್ಟ BSNL.

ಡೆಸ್ಕ್‌ : ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಸೃಷಿಸುವಂತಾ ಸಂದೇಶ ಒಂದನ್ನು BSNL ನೀಡಿದ್ದು, ಸದ್ಯ ಖಾಸಗಿ ಕಂಪನಿಗಳಿಗೆ ಟಕ್ಕರ್ ಕೊಡಲು ಮುಂದಾಗಿದೆ. BSNL ತನ್ನ ಗ್ರಾಹಕರಿಗೆ ಭರ್ಜರಿ ಆಫರ್‌ ನಿಡಿದ್ದು, ಕೇವಲ ₹225ಕ್ಕೆ 75GB ಡೇಟಾ, ಅನ್‌ಲಿಮಿಟೆಡ್ ಕಾಲ್ ಸೌಲಭ್ಯವನ್ನು ನೀಡುತ್ತಿದೆ.

ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಮತ್ತೊಮ್ಮೆ ಸರ್ಕಾರಿ ಕಂಪನಿ BSNL ಹೊಸ ಸಂಚಲನ ಸೃಷ್ಟಿಸಿದೆ. ಖಾಸಗಿ ಟೆಲಿಕಾಂ ಕಂಪನಿಗಳಾದ Reliance Jio ಮತ್ತು Bharti Airtel ಗೆ ನೇರ ಸ್ಪರ್ಧೆ ನೀಡುವ ರೀತಿಯಲ್ಲಿ ಬಿಎಸ್‌ಎನ್‌ಎಲ್ ಹೊಸ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಪರಿಚಯಿಸಿದೆ. ಕಡಿಮೆ ವೆಚ್ಚದಲ್ಲಿ ಹೆಚ್ಚು ಸೌಲಭ್ಯ ನೀಡುವ ಈ ಪ್ಲಾನ್ ಈಗ ಗ್ರಾಹಕರ ಗಮನ ಸೆಳೆಯುತ್ತಿದೆ.

ಕೌಂಟರ್‌ ಕೊಟ್ಟ BSNL :

ಬಿಎಸ್‌ಎನ್‌ಎಲ್ ಬಿಡುಗಡೆ ಮಾಡಿರುವ ಹೊಸ ಪ್ಲಾನ್ ಕೇವಲ ₹225 ಬೆಲೆಯಲ್ಲಿ ಲಭ್ಯವಿದ್ದು, 30 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಪ್ಲಾನ್‌ನಲ್ಲಿ ಗ್ರಾಹಕರಿಗೆ ಒಟ್ಟು 75GB ಹೈಸ್ಪೀಡ್ ಡೇಟಾ ಸಿಗಲಿದ್ದು, ಪ್ರತಿದಿನ 2.5GB ಡೇಟಾ ಬಳಕೆಯ ಅವಕಾಶ ಇದೆ. ಜೊತೆಗೆ ಅನ್‌ಲಿಮಿಟೆಡ್ ವಾಯ್ಸ್ ಕಾಲಿಂಗ್ ಸೌಲಭ್ಯ ಮತ್ತು ದಿನಕ್ಕೆ 100 ಉಚಿತ SMS ಸೌಲಭ್ಯವೂ ನೀಡಲಾಗುತ್ತಿದೆ.

ಇದನ್ನು ಓದಿ : ಮೈಸೂರು–ಅಜ್ಮೇರ್ ಎಕ್ಸ್‌ಪ್ರೆಸ್‌ಗೆ ಹೊಸ ಸ್ಟಾಪ್; ರೈಲು ಸಮಯದಲ್ಲೂ ಮಹತ್ವದ ಬದಲಾವಣೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳು ಇದೇ ರೀತಿಯ 30 ದಿನಗಳ ವ್ಯಾಲಿಡಿಟಿಯೊಂದಿಗೆ ನೀಡುತ್ತಿರುವ ಪ್ಲಾನ್‌ಗಳು ಸಾಮಾನ್ಯವಾಗಿ ₹300ಕ್ಕಿಂತ ಹೆಚ್ಚು ಬೆಲೆ ಹೊಂದಿವೆ. ಆದರೆ ಬಿಎಸ್‌ಎನ್‌ಎಲ್ ಇದೇ ಸೇವೆಯನ್ನು ಕಡಿಮೆ ದರದಲ್ಲಿ ನೀಡುವ ಮೂಲಕ ಗ್ರಾಹಕರ ವೆಚ್ಚ ಕಡಿಮೆ ಮಾಡುವ ಪ್ರಯತ್ನ ನಡೆಸಿದೆ.

₹51 ರೀಚಾರ್ಜ್ 28 ದಿನಗಳ ವ್ಯಾಲಿಡಿಟಿ :

ಇದರ ಜೊತೆಗೆ ಬಿಎಸ್‌ಎನ್‌ಎಲ್ ಮತ್ತೊಂದು ಕಡಿಮೆ ಬೆಲೆಯ ವಿಶೇಷ ಪ್ಲಾನ್ ಕೂಡ ಪರಿಚಯಿಸಿದೆ. ಕೇವಲ ₹51 ರೀಚಾರ್ಜ್ ಮೂಲಕ 28 ದಿನಗಳ ವ್ಯಾಲಿಡಿಟಿ ನೀಡಲಾಗುತ್ತಿದ್ದು, ಈ ಪ್ಲಾನ್‌ನಲ್ಲಿ ರಾಷ್ಟ್ರೀಯ ರೋಮಿಂಗ್, ಪ್ರತಿದಿನ 2GB ಹೈಸ್ಪೀಡ್ ಡೇಟಾ ಹಾಗೂ ದಿನಕ್ಕೆ 100 SMS ಸೌಲಭ್ಯಗಳು ಸೇರಿವೆ.

ಟೆಲಿಕಾಂ ಕ್ಷೇತ್ರದಲ್ಲಿ ಸ್ಪರ್ಧೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಕಡಿಮೆ ದರದಲ್ಲಿ ಹೆಚ್ಚು ಸೌಲಭ್ಯ ನೀಡುವ ಮೂಲಕ ಬಿಎಸ್‌ಎನ್‌ಎಲ್ ಮತ್ತೆ ತನ್ನ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಮುಂದಾಗಿದೆ. ಹೊಸ ಪ್ಲಾನ್‌ಗಳು ಸಾಮಾನ್ಯ ಗ್ರಾಹಕರಿಗೆ ಹೆಚ್ಚು ಆಕರ್ಷಕವಾಗಿದ್ದು, ಖಾಸಗಿ ಕಂಪನಿಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಸಾಧ್ಯತೆ ಇದೆ.

ಪ್ರಮುಖ ಸುದ್ದಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ.


Disclaimer : BSNL ಲೇಖನವು ಸಾರ್ವಜನಿಕವಾಗಿ ಲಭ್ಯವಿರುವ ಟೆಲಿಕಾಂ ಮಾಹಿತಿ ಮತ್ತು ವರದಿಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ರೀಚಾರ್ಜ್ ಮಾಡುವ ಮೊದಲು ಅಧಿಕೃತ ಪ್ಲಾನ್ ವಿವರಗಳನ್ನು ಪರಿಶೀಲಿಸುವುದು ಸೂಕ್ತ.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top