ಜನಸ್ಪಂದನ ನ್ಯೂಸ್, ಡೆಸ್ಕ್ : ವಲಸೆ ದಮನ ಕ್ರಮ ವಿರೋಧಿಸಿ ಅಮೆರಿಕ (America) ದಲ್ಲಿ ನಡೆದಿದ್ದ ಪ್ರತಿಭಟನೆಗಳು ಇದೀಗ ಹಿಂಸಾರೋಪ ತಳೆದಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ರಂಪ್ ಅವರ ವಲಸೆ ದಮನ ಕ್ರಮ ವಿರೋಧಿಸಿ ಅಮೆರಿಕ ಪ್ರತಿಭಟನೆಗಳು ಇದೀಗ ತೀವ್ರರೂಪ ಪಡೆದು ಹಿಂಸಾರೋಪ ತಳೆದಿದೆ.
ಅಮೆರಿಕ (America) ದ ಲಾಸ್ ಏಂಜಲೀಸ್‌ನಲ್ಲಿ ಪ್ರತಿಭಟನೆಗಳು ತೀವ್ರಗೊಂಡಿದ್ದು ಸಾವಿರಾರು ಪ್ರತಿಭಟನಾಕಾರರು ಬೀದಿಗಿಳಿದು, ಪ್ರಮುಖ ಹೆದ್ದಾರಿಯನ್ನು ತಡೆದು ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ಹಿನ್ನಲೆಯಲ್ಲಿ ಲಾಸ್ ಏಂಜಲೀಸ್ (America) ನಲ್ಲಿ 2000 ವಿಶೇಷ ಪಡೆ ನಿಯೋಜಿಸಲಾಗಿದೆ.
ಇದನ್ನು ಓದಿ : Maharashtra : ಚಲಿಸುತ್ತಿದ್ದ ರೈಲಿನಿಂದ ಬಿದ್ದು 5 ಪ್ರಯಾಣಿಕರ ಸಾವು.!
ಅರೆ ಸೇನಾ ಪಡೆಗಳು ಅಶ್ರುವಾಯು, ರಬ್ಬರ್ ಗುಂಡುಗಳನ್ನು ಹಾರಿಸುವ ಮೂಲಕ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪ್ರಯತ್ನಿಸಲಾಗುತ್ತಿದೆ. ಇದೇ ವೇಳೇ ಸಾವಿರಾರು ಪ್ರತಿಭಟನಾಕಾರರು ಬೀದಿಗಿಳಿದು, ಪ್ರಮುಖ ಹೆದ್ದಾರಿಯನ್ನು ತಡೆದು ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ.
ಸಾರ್ವಜನಿಕ ಉದ್ಯಾನವನದಿಂದ ಕುರ್ಚಿಗಳನ್ನು ತಂದು ತಾತ್ಕಾಲಿಕ ತಡೆಗೋಡೆಯನ್ನು ನಿರ್ಮೀಸಿದ ಪ್ರತಿಭಟನಾಕಾರರು, ಪೊಲೀಸ್ ಮತ್ತು ಅವರ ವಾಹನದ ಮೇಲೆ ಪ್ರತಿಭಟನಾಕಾರರು ಕಾಂಕ್ರೀಟ್, ಕಲ್ಲುಗಳನ್ನು ಎಸೆದಿದ್ದಾರೆ.
ಇದನ್ನು ಓದಿ : Bagalkot : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗವಕಾಶ.!
ಸ್ವಯಂ ಚಾಲಿತ ವೇಮೊ ಕಾರುಗಳಿಗೆ ಬೆಂಕಿ ಹಚ್ಚಿದ ಪರಿಣಾಮವಾಗಿ ಆಕಾಶಕ್ಕೆ ದೊಡ್ಡ ಕಪ್ಪು ಹೊಗೆ ಆವರಿಸಿದ್ದು, ರಾಷ್ಟ್ರೀಯ ಗಾರ್ಡ್ ಪಡೆಗಳು ಬಂದೂಕು ಮತ್ತು ಗುರಾಣಿಗಳನ್ನು ಹಿಡಿದು ಪ್ರತಿಭಟನೆ ಹತ್ತಿಕ್ಕಲು ಹೆಣಗಾಡುತ್ತಿದ್ದಾರೆ.
ಈ ಮಧ್ಯ ಪೊಲೀಸ್ ಪಡೆಗಳು ಪ್ರತಿಭಟನಾಕಾರರನ್ನು ಚದುರಿಸಲು ಗುಂಡು ಹಾರಿಸಿದ್ದಾರೆ. ಕಾನೂನು ಜಾರಿಯನ್ನು ಅಡ್ಡಿಪಡಿಸಿದ ಆರೋಪ ಹೊತ್ತಿರುವ ಪ್ರಮುಖ ಯೂನಿಯನ್ (America) ನಾಯಕ ಸೇರಿದಂತೆ ಇನ್ನೂ ಅನೇಕರನ್ನು ಬಂಧಿಸಲಾಗಿದೆ.
ಇದನ್ನು ಓದಿ : Video : ಕಂಠಪೂರ್ತಿ ಕುಡಿದು ಜನನಿಬಿಡ ರಸ್ತೆಯಲ್ಲಿ ಯುವತಿಯ ಡೊಂಬರಾಟ.!
ಅಮೇರಿಕಾ (America) ಅಧ್ಯಕ್ಷ ಟ್ರಂಪ್ ಪ್ರತಿಭಟನಾಕಾರರಿಗೆ ಪ್ರಟಿಭಟನೆ ನಿಲ್ಲಿಸುವಂತೆ ಮನವಿ ಮಾಡಿದ್ದು, ಒಂದು ವೇಳೆ ಹೀಗೆಯೇ ಮುಂದುವರೆದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ. (ಏಜೇನ್ಸಿಸ್)
ಅಮೇರಿಕಾ (America) ದಲ್ಲಿ ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ ವಿಡಿಯೋ :
https://twitter.com/i/status/1931875366307815645
Video : ಕಂಠಪೂರ್ತಿ ಕುಡಿದು ಜನನಿಬಿಡ ರಸ್ತೆಯಲ್ಲಿ ಯುವತಿಯ ಡೊಂಬರಾಟ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಯುವತಿಯೋರ್ವಳು ಕಂಠಪೂರ್ತಿ ಕುಡಿದು ನಗರದ ಜನನಿಬಿಡ ರಸ್ತೆಯಲ್ಲಿ ಡೊಂಬರಾಟ ಮಾಡುತ್ತಿರುವ ವಿಡಿಯೋ (Video) ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ದಿನಬೆಳಗಾದರೂ ಪಾರ್ಟಿ – ಪಬ್ ಅಂತೇಲ್ಲಾ ಹೇಳಿ ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲಿಯೋ, ಗಟಾರದಲ್ಲಿ ಅಥವಾ ತಿಪ್ಪೆಗುಂಡಿಯಲ್ಲಿ ಬಿದ್ದು ಹೊರಳಾಡುವವರ ಸಂಖ್ಯೆಗೇನು ಕಮ್ಮಿ ಇಲ್ಲ.
ಇದನ್ನು ಓದಿ : PMAY : “ಪ್ರಧಾನ ಮಂತ್ರಿ ಅವಾಸ ಯೋಜನೆ” ; ಸ್ವಂತ ಮನೆ ನಿರ್ಮಿಣಕ್ಕೆ 1 ಲಕ್ಷ ನೆರವು.!
ಇತ್ತೀಚಿನ ಯುವತಿಯರಾಗಿರಲ್ಲಿ ಅಥವಾ ಮಹಿಳೆಯರಾಗಿರಲ್ಲಿ ಪಾರ್ಟಿ-ಪಬ್ ಅಂತ ಹೋಗಿ ಕಂಠಪೂರ್ತಿ ಕುಡಿದು ನಡು ರಸ್ತೆಯಲ್ಲಿ ತೇಲಾಡುತ್ತಾ, ಜೊತೆಗೆ ಒಂದಿಷ್ಟು ರಂಪಾಟ ಮಾಡಿದ ಹಲವಾರು ವಿಡಿಯೊ (Video) ಗಳು ಈ ಹಿಂದೆಯೂ ಸಹ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ.
ಇದೀಗ ಇದೇ ಸಾಲಿಗೆ ಸೇರಿದ ಒಂದು ವಿಡಿಯೋ (Video) ಸಾಮಾಜಿಕ ಜಾಣತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ಯುವತಿಯೋರ್ವಳು ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲಿಯೇ ಕುಳಿತು ಶೋ ಕೊಡುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಇದನ್ನು ಓದಿ : Suger : ಸಕ್ಕರೆ ಸೇವನೆಯಿಂದ ಬೊಜ್ಜು, ಮಧುಮೇಹ, ಕ್ಯಾನ್ಸರ್, ಹೃದ್ರೋಗ ಬರುತ್ತದೆಯೇ.?
ಡೆಹ್ರಾಡೂನ್‌ನ ರಾಯ್‌ಪುರದ ಜನನಿಬಿಡ ರಸ್ತೆಯಲ್ಲಿ ಯುವತಿಯೋರ್ವಳು ಕುಡಿದ ಮತ್ತಿನಲ್ಲಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral) ಆಗಿದೆ.
ರಾಯ್‌ಪುರದ ಜನನಿಬಿಡ ರಸ್ತೆಯಲ್ಲಿ ಕುಡಿದ ಮತ್ತಿನಲ್ಲಿದ್ದ ಯುವತಿಯೋಬ್ಬಳು ರಸ್ತೆಯಲ್ಲಾ ನಂದೆ ಎಂಬ ಬಾವದಲ್ಲಿ ಕುಳಿತ ಹಿನ್ನಲೆಯಲ್ಲಿ ವಾಹನ ಚಾಲಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಇದನ್ನು ಓದಿ : Maharashtra : ಚಲಿಸುತ್ತಿದ್ದ ರೈಲಿನಿಂದ ಬಿದ್ದು 5 ಪ್ರಯಾಣಿಕರ ಸಾವು.!
ವೈರಲ್ ವಿಡಿಯೊದಲ್ಲಿ, ಕುಡಿದ ಮತ್ತಿನಲ್ಲಿರುವ ಯುವತಿ ಕಪ್ಪು ಬಣ್ಣದ ಸ್ಲಿವ್‍ಲೆಸ್ ಟಾಪ್ ಮತ್ತು ಡೆನಿಮ್ ಧರಿಸಿ ರಸ್ತೆಯ ಮಧ್ಯದಲ್ಲಿ ಕುಳಿತು ಹೈಡ್ರಾಮಾ ಮಾಡಿದ್ದಾಳೆ. ನಡುರಸ್ತೆಯಲ್ಲಿ ಕುಳಿತ ಕಾರಣ ವಾಹನ ಸಂಚಾರಕ್ಕೆ ತೊಂದರೆಯಾಗಿರುವುದನ್ನು ನೀವೂ ವಿಡಿಯೋ (Video) ದಲ್ಲಿ ನೋಡಬಹುದಾಗಿದೆ.
ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದ ಹಿನ್ನಲೆಯಲ್ಲಿ ಅಲ್ಲಿದ ಓರ್ವ ಭದ್ರತಾ ಸಿಬ್ಬಂದಿ ಯುವತಿಗೆ ಪಕ್ಕಕ್ಕೆ ಸರಿಯುವಂತೆ ಹೇಳುತ್ತಾರೆ. ಆದರೂ ಯುವತಿ ಮಾತ್ರ ಅಲ್ಲಿಂದ ಕದಲಲ್ಲೇ ಇಲ್ಲ. ಅದೇ ವೇಳೆ 3/4 ಧರಿಸಿದ್ದ ಓರ್ವ ವ್ಯಕ್ತಿ ಆಗಮಿಸಿ ಯುವತಿಗೆ ರಸ್ತೆಯೀಬ ಎದ್ದೇಳುವಂತೆ ಹೇಳುತ್ತಾರೆ.
ಇದನ್ನು ಓದಿ : Bagalkot : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗವಕಾಶ.!
ಈ ವೇಳೆ 3/4 ಧರಿಸಿದ್ದ ವ್ಯಕ್ತಿಗೆ ಕೈ ಕೊಟ್ಟು ಎಬ್ಬಿಸಲು ಕೋರುತ್ತಾಳೆ. ವ್ಯಕ್ತಿಯ ಸಹಾಯದಿಂದ ಎದ್ದ ಯುವತಿ ಎನು ಆಗಿಯೇ ಇಲ್ಲವೇನೋ ಎಂಬಂತೆ ರಸ್ತೆ ಬದಿಯಿಂದ ನಡೆಯುತ್ತ ಸಾಗುವುದನ್ನು ದೃಶ್ಯ (Video) ತೋರಿಸುತ್ತೆ.
ಸದ್ಯ Pyara Uttarakhand प्यारा उत्तराखंड (@PyaraUKofficial) ಎಂಬ ಹೆಸರಿನ X ಫ್ಲಾಟ್‌ಫಾರಂನಲ್ಲಿ ಈ ಘಟನೆಯ ವಿಡಿಯೊ (Video) ಹಂಚಿಕೊಳ್ಳಲಾಗಿದ್ದು, ಈ ವಿಷಯದ ಬಗ್ಗೆ ಪೊಲೀಸ್ ಕ್ರಮ ಕೈಗೊಂಡಿರುವ ಯಾವುದೇ ವರದಿಗಳಿಲ್ಲ.
ವಿಡಿಯೋ (Video) :
देहरादून, रायपुर। बीच सड़क पर नशे की हालत में धुत लड़की सड़क में बैठकर ट्रैफिक को बाधित करना न केवल खुद के लिए खतरनाक है, बल्कि दूसरों की जान को भी जोखिम में डालता है#Dehradun #Uttarakhand pic.twitter.com/gbb53xsjeG
— Pyara Uttarakhand प्यारा उत्तराखंड (@PyaraUKofficial) June 8, 2025






