ಜನಸ್ಪಂದನ ನ್ಯೂಸ್, ರಾಯಚೂರು/ಬೆಳಗಾವಿ : ರಾಯಚೂರು ನಗರ ಹೊರವಲಯದ ಸಾತ್ ಮೈಲ್ ಕ್ರಾಸ್ ಬಳಿ ಶುಕ್ರವಾರ (ಸೆಪ್ಟೆಂಬರ್ 26) ಬೆಳಗ್ಗೆ 7 ಗಂಟೆಯ ಸುಮಾರಿಗೆ KSRTC ಸ್ಲೀಪರ್ ಕೋಚ್ ಬಸ್ ಪಲ್ಟಿಯಾದ (Accident) ಘಟನೆ ಸಂಭವಿಸಿದೆ.
ಈ ಅಪಘಾತ (Accident) ದಲ್ಲಿ ಕನಿಷ್ಠ 15 ಪ್ರಯಾಣಿಕರು ಗಾಯಗೊಂಡಿದ್ದು, ಅವರಲ್ಲಿ ಓರ್ವನ ಕಾಲಿಗೆ ಗಂಭೀರ ಗಾಯವಾಗಿದೆ.
“ಮಧುಮೇಹವನ್ನು ಬುಡದಿಂದಲೇ ಗುಣಪಡಿಸುವ ಶಕ್ತಿ ಹೊಂದಿದ ಈ ಹಣ್ಣು ; ವರ್ಷಕ್ಕೊಮ್ಮೆ ತಿಂದರೂ Blood Sugar ನಿಯಂತ್ರಣದಲ್ಲಿರುತ್ತದೆ.!”
ಬಸ್ ಪಲ್ಟಿಯಾದ ಘಟನೆ :
ದಾವಣಗೆರೆಯಿಂದ ರಾಯಚೂರು ಕಡೆಗೆ ಬರುತ್ತಿದ್ದ ಬಸ್, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಜಮೀನಿಗೆ ಉರುಳಿ ಬಿದ್ದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಚಾಲಕನ ನಿದ್ದೆ ಮಂಪರು ಹಾಗೂ ರಸ್ತೆಗೆ ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಪ್ರಯತ್ನ ಮಾಡಿದಾಗ ಬಸ್ ಪಲ್ಟಿಯಾಗಿದೆ ಎನ್ನಲಾಗಿದೆ.
ಅಪಘಾತ (Accident) ದ ವೇಳೆ ಬಸ್‌ನಲ್ಲಿ 10-15 ಮಂದಿ ಪ್ರಯಾಣಿಕರಿದ್ದು, ಬಹುತೇಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಓರ್ವ ಪ್ರಯಾಣಿಕನ ಕಾಲು ಬಸ್‌ನಲ್ಲಿ ಸಿಲುಕಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿ ಜಿಟಿ ಜಿಟಿ ಮಳೆಯ ನಡುವೆಯೇ ರಕ್ಷಣಾ ಕಾರ್ಯಾಚರಣೆ ನಡೆಸಿ ಅವರನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.
“Post Officeನ ಈ ಸ್ಕೀಮ್‌ನಿಂದ ತಿಂಗಳಿಗೆ 9,250 ರೂ.ವರೆಗೂ ನಿಯಮಿತ ಆದಾಯ”.!
ಗಾಯಾಳುಗಳನ್ನು ಅಂಬುಲೆನ್ಸ್ ಮೂಲಕ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಕ್ರೇನ್ ಮೂಲಕ ಬಸ್ ಎತ್ತಲಾಗಿದೆ. ಈ ಘಟನೆ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪಂಢರಾಪುರ ಪಾದಯಾತ್ರೆಯಲ್ಲಿ ಅಪಘಾತ :
ಇನ್ನೊಂದು ಘಟನೆಯಲ್ಲಿ, ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಿಡಕಲ್ ಮೂಲದ ಭಕ್ತರು ಪಂಢರಾಪುರಕ್ಕೆ ಪಾದಯಾತ್ರೆ ಹೊರಟಿದ್ದ ವೇಳೆ ಹಾರುಗೇರಿ ಕ್ರಾಸ್ ಬಳಿ ಈ ದುರ್ಘಟನೆ (Accident) ಸಂಭವಿಸಿದೆ.

ಅಥಣಿ ಮಾರ್ಗವಾಗಿ ಹೋಗುತ್ತಿದ್ದ ಯಾತ್ರಿಕರ ಮೇಲೆ ಒಂದು ಕಾರು ಹರಿದ ಪರಿಣಾಮ ಏಳು ಭಕ್ತರು ಗಾಯಗೊಂಡಿದ್ದಾರೆ.
ಕತ್ತೆಕಿರುಬವ ತಪ್ಪಿಸಲು ಹೋಗಿ ಪಲ್ಟಿಯಾದ ಪೊಲೀಸ್ ಜೀಪ್ ; ASI ಸಾವು.!
ಕಾರಿನ ಚಾಲಕನ ಬೇಜವಾಬ್ದಾರಿಯೇ ಅಪಘಾತ (Accident) ಕ್ಕೆ ಕಾರಣ ಎನ್ನಲಾಗಿದ್ದು, ಗಾಯಾಳುಗಳನ್ನು ಹಾರೂಗೇರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಅದರಲ್ಲಿ ಇಬ್ಬರಿಗೆ ಗಂಭೀರವಾದ ಗಾಯಗಳಾದ ಹಿನ್ನಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಗೆ ರವಾನಿಸಲಾಗಿದೆ.
ಒಂದೇ ದಿನ ಎರಡು ಅಪಘಾತಗಳು ಸಂಭವಿಸಿದ ಪರಿಣಾಮ ಸ್ಥಳೀಯರು ಆತಂಕಗೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
“Post Officeನ ಈ ಸ್ಕೀಮ್‌ನಿಂದ ತಿಂಗಳಿಗೆ 9,250 ರೂ.ವರೆಗೂ ನಿಯಮಿತ ಆದಾಯ”.!
ಜನಸ್ಪಂದನ ನ್ಯೂಸ್, ಡೆಸ್ಕ್ : ಭಾರತೀಯ ಅಂಚೆ ಇಲಾಖೆಯ ಅಡಿಯಲ್ಲಿ ಲಭ್ಯವಿರುವ ಹಲವು ಸೇವಿಂಗ್ಸ್ ಸ್ಕೀಮ್‌ಗಳಲ್ಲಿ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (Post Office MIS) ಒಂದು ಪ್ರಮುಖ ಯೋಜನೆ.
ಮಾರುಕಟ್ಟೆಯ ಏರಿಳಿತ ಅಥವಾ ರಿಸ್ಕ್ ಇಲ್ಲದೆ, ನಿಗದಿತ ಪ್ರತಿಮಾಸ ಆದಾಯವನ್ನು ಬಯಸುವವರಿಗೆ ಇದು ಉತ್ತಮ ಹೂಡಿಕೆ ಆಯ್ಕೆಯಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಪ್ರತೀ ತಿಂಗಳು ಬಡ್ಡಿ ರೂಪದಲ್ಲಿ ಖಚಿತ ಆದಾಯ ಲಭ್ಯವಾಗುತ್ತದೆ.
ಗರ್ಭಪಾತ Pill ಸೇವಿಸಿದ ನಂತರ ಅಪ್ರಾಪ್ತೆಯ ಸಾವು ; ಟ್ಯೂಷನ್ ಶಿಕ್ಷಕನ ಬಂಧನ.!
ಹೂಡಿಕೆ ಮಿತಿಗಳು :
- ಸಿಂಗಲ್ ಅಕೌಂಟ್ : ಕನಿಷ್ಠ ರೂ.1,000ರಿಂದ ಗರಿಷ್ಠ ರೂ.9 ಲಕ್ಷವರೆಗೆ ಹೂಡಿಕೆ ಮಾಡಬಹುದು.
- ಜಂಟಿ ಅಕೌಂಟ್ : ಇಬ್ಬರು ಅಥವಾ ಮೂವರು ಸೇರಿ ತೆರೆಯಬಹುದಾದ ಖಾತೆಯಲ್ಲಿ ರೂ.15 ಲಕ್ಷವರೆಗೆ ಹೂಡಿಕೆ ಸಾಧ್ಯ.
- ಹೂಡಿಕೆಯ ಅವಧಿ 5 ವರ್ಷಗಳ ಲಾಕಿನ್ ಪೀರಿಯಡ್ ಆಗಿರುತ್ತದೆ. ಈ ಅವಧಿಯವರೆಗೆ ಪ್ರತಿ ತಿಂಗಳು ಬಡ್ಡಿ ಆದಾಯ ದೊರೆಯುತ್ತದೆ.
ಬಡ್ಡಿ ದರ :
ಪೋಸ್ಟ್ ಆಫೀಸ್ (Post Office) ಮಾಸಿಕ ಆದಾಯ ಯೋಜನೆಯಲ್ಲಿ ಪ್ರಸ್ತುತ 7.40% ವಾರ್ಷಿಕ ಬಡ್ಡಿ ನೀಡಲಾಗುತ್ತಿದೆ.
Student : ರಸ್ತೆ ಮಧ್ಯೆ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ದುಷ್ಕರ್ಮಿ ; ಸಿಸಿಟಿವಿ ದೃಶ್ಯ ವೈರಲ್.!
ಮಾಸಿಕ ಆದಾಯ ಎಷ್ಟು ಸಿಗುತ್ತದೆ?
- ಸಿಂಗಲ್ ಅಕೌಂಟ್ : ರೂ.9 ಲಕ್ಷ ಹೂಡಿಕೆ ಮಾಡಿದರೆ, ತಿಂಗಳಿಗೆ ಸುಮಾರು ರೂ.5,550 ಬಡ್ಡಿ ರೂಪದಲ್ಲಿ ಸಿಗುತ್ತದೆ.
- ಜಂಟಿ ಅಕೌಂಟ್ : ರೂ.15 ಲಕ್ಷ ಹೂಡಿಕೆ ಮಾಡಿದರೆ, ತಿಂಗಳಿಗೆ ಸುಮಾರು ರೂ.9,250 ಆದಾಯ ದೊರೆಯುತ್ತದೆ.
ಇನ್ನಷ್ಟು ಪ್ರಮುಖ ಅಂಶಗಳು :
- ಒಬ್ಬ ವ್ಯಕ್ತಿ ಬೇರೆ ಬೇರೆ ಪೋಸ್ಟ್ ಆಫೀಸ್ (Post Office) ಗಳಲ್ಲಿ ಹಲವು ಎಂಐಎಸ್ ಖಾತೆಗಳನ್ನು ತೆರೆಯಬಹುದಾದರೂ, ಒಟ್ಟು ಹೂಡಿಕೆ ಮೊತ್ತವು ಸಿಂಗಲ್ ಅಕೌಂಟ್‌ಗೆ ರೂ.9 ಲಕ್ಷ ಅಥವಾ ಜಂಟಿ ಅಕೌಂಟ್‌ಗೆ ರೂ.15 ಲಕ್ಷ ಮೀರಬಾರದು.
- ಈ ಯೋಜನೆ ಸಂಪೂರ್ಣ ಸುರಕ್ಷಿತವಾಗಿದ್ದು, ಯಾವುದೇ ಮಾರುಕಟ್ಟೆ ಅಪಾಯ ಇರುವುದಿಲ್ಲ.
- ಹೂಡಿಕೆಯ ಅವಧಿ ಪೂರ್ಣಗೊಂಡ ನಂತರ, ಠೇವಣಿ ಹಣವನ್ನು ವಾಪಸ್ ಪಡೆಯಬಹುದು ಅಥವಾ ಮತ್ತೊಂದು ಸ್ಕೀಮ್‌ಗೆ ಮರುಹೂಡಿಕೆ ಮಾಡಬಹುದು.
15 ವಿದ್ಯಾರ್ಥಿನಿಯರಿಂದ ಲೈಂಗಿಕ ಕಿರುಕುಳ ಆರೋಪ : Swamiji ವಿರುದ್ಧ FIR ದಾಖಲು.!
ಸಾರಾಂಶ : ಪೋಸ್ಟ್ ಆಫೀಸ್ (Post Office) ಮಾಸಿಕ ಆದಾಯ ಯೋಜನೆ ಕಡಿಮೆ ಅಪಾಯದೊಂದಿಗೆ ಖಚಿತ ಆದಾಯ ಬಯಸುವವರಿಗೆ ಉತ್ತಮ ಹೂಡಿಕೆ ಮಾರ್ಗವಾಗಿದೆ. ಸಿಂಗಲ್ ಅಥವಾ ಜಂಟಿ ಅಕೌಂಟ್ ಮೂಲಕ ಹೂಡಿಕೆ ಮಾಡಿದರೆ ಪ್ರತೀ ತಿಂಗಳು ನಿಗದಿತ ಬಡ್ಡಿ ಆದಾಯ ಸಿಗುತ್ತದೆ.
ನಿವೃತ್ತಿ ಹೊಂದಿದವರು ಅಥವಾ ಸ್ಥಿರ ಆದಾಯ ಬಯಸುವವರು ಈ Post Office montly income ಯೋಜನೆಗೆ ಸೇರಿಕೊಳ್ಳಬಹುದು.
Disclaimer : ಇಲ್ಲಿ ನೀಡಿರುವ ಮಾಹಿತಿ ಸಾಮಾನ್ಯ ಹಣಕಾಸು ವಿವರಗಳಾಗಿದ್ದು, ಹೂಡಿಕೆ ಮಾಡುವ ಮೊದಲು ಅಧಿಕೃತ ಪೋಸ್ಟ್ ಆಫೀಸ್ (Post Office) ಅಥವಾ ಹಣಕಾಸು ತಜ್ಞರ ಸಲಹೆ ಪಡೆಯುವುದು ಸೂಕ್ತ.