ಜನಸ್ಪಂದನ ನ್ಯೂಸ್, ರಾಯಚೂರು : ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಕೊಪ್ಪರ ಕ್ರಾಸ್ ಹತ್ತಿರದ ಮನೆಯಲ್ಲಿ ಅಕ್ರಮ ಚಟುವಟಿಕೆ (Prostitution) ನಡೆಯುತ್ತಿದೆ ಎಂಬ ಮಾಹಿತಿ ಆಧರಿಸಿ ಬುಧವಾರ (ಸೆಪ್ಟೆಂಬರ್ 24) ರಾತ್ರಿ ಪೊಲೀಸರು ದಾಳಿ ನಡೆಸಿದರು. ಈ ಕಾರ್ಯಾಚರಣೆಯಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ದಾಳಿ ವಿವರಗಳು :
ರಾತ್ರಿ ಸುಮಾರು 7.20ರ ಸುಮಾರಿಗೆ ಪಿ.ಐ ಎಸ್. ಮಂಜುನಾಥ ನೇತೃತ್ವದಲ್ಲಿ ಪೊಲೀಸ್ ತಂಡ ದಾಳಿ ನಡೆಸಿ, ಮನೆಯಲ್ಲಿ ಅಕ್ರಮ ವೇಶ್ಯಾವಾಟಿಕೆ (Prostitution) ನಡೆಯುತ್ತಿರುವುದು ಪತ್ತೆಯಾಯಿತು. ಇದರಲ್ಲಿ ಸುಮಂಗಲಾ (55), ರಾಜವರ್ಧನ (21), ದ್ಯಾವಪ್ಪ (40) ಮತ್ತು ರವಿ (30) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
Student : ರಸ್ತೆ ಮಧ್ಯೆ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ದುಷ್ಕರ್ಮಿ ; ಸಿಸಿಟಿವಿ ದೃಶ್ಯ ವೈರಲ್.!
ಹಣಕಾಸು ವ್ಯವಹಾರ ಬಯಲು :
ತನಿಖೆಯ ಪ್ರಾಥಮಿಕ ವರದಿಯ ಪ್ರಕಾರ, ಆರೋಪಿತ ಸುಮಂಗಲಾ ತನ್ನ ಮನೆಯಲ್ಲಿ ಮಹಿಳೆಯರನ್ನು ಕರೆಸಿ ವೇಶ್ಯಾವಾಟಿಕೆ (Prostitution) ನಡೆಸುತ್ತಿದ್ದು, ಪ್ರತಿಯೊಬ್ಬರಿಂದ ರೂ.1,000 ವಸೂಲಿ ಮಾಡುತ್ತಿದ್ದಳು. ಅದರಲ್ಲಿ ರೂ.500 ತಾನೇ ಇಟ್ಟುಕೊಂಡು, ಉಳಿದ ಹಣವನ್ನು ಮಹಿಳೆಗೆ ನೀಡುತ್ತಿದ್ದಾಳೆ ಎಂಬುದು ತಿಳಿದುಬಂದಿದೆ.
ಮಹಿಳೆಯ ರಕ್ಷಣೆ :
ದಾಳಿಯ ವೇಳೆ ವೇಶ್ಯಾವಾಟಿಕೆ (Prostitution) ಸ್ಥಳದಿಂದ ನಾಲ್ಕು ಆಂಡ್ರಾಯ್ಡ್ ಮೊಬೈಲ್‌ಗಳು, 10 ನಿರೋಧ್, ರೂ.6 ಸಾವಿರ ನಗದನ್ನು ಪೊಲೀಸರು ವಶಕ್ಕೆ ವಶಪಡಿಸಿಕೊಂಡಿದ್ದಾರೆ. ಇನ್ನು ಗದಗ ಮೂಲದ ಮಹಿಳೆಯನ್ನು ರಕ್ಷಿಸಿದ್ದು, ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ದೇವದುರ್ಗ ಪೊಲೀಸರು ಕೈಗೊಂಡಿದ್ದಾರೆ.
“Post Officeನ ಈ ಸ್ಕೀಮ್‌ನಿಂದ ತಿಂಗಳಿಗೆ 9,250 ರೂ.ವರೆಗೂ ನಿಯಮಿತ ಆದಾಯ”.!
ಈ ದಾಳಿಯಿಂದ ಸ್ಥಳೀಯರಲ್ಲಿ ಚರ್ಚೆ ಶುರುವಾಗಿದೆ. ಅಕ್ರಮ ಚಟುವಟಿಕೆಗಳ (Prostitution) ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವುದನ್ನು ಜನರು ಮೆಚ್ಚಿದ್ದಾರೆ.
👉 ಸಾರಾಂಶ : ಮನೆಯಲ್ಲಿ ಅಕ್ರಮ ವೇಶ್ಯಾವಾಟಿಕೆ (Prostitution) ನಡೆಸುತ್ತಿದ್ದ ಪ್ರಕರಣದಲ್ಲಿ ನಾಲ್ವರು ಬಂಧಿತರಾಗಿದ್ದಾರೆ. ಹಣ ಹಾಗೂ ಮೊಬೈಲ್‌ಗಳನ್ನು ವಶಪಡಿಸಿಕೊಂಡ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
Disclaimer : ಈ ಲೇಖನದಲ್ಲಿ ನೀಡಿರುವ ಮಾಹಿತಿ ಕಾನೂನು ಸಂಬಂಧಿತ ವರದಿಗಳ ಆಧಾರಿತವಾಗಿದ್ದು, ಯಾವುದೇ ವ್ಯಕ್ತಿ ಅಥವಾ ಸಮುದಾಯವನ್ನು ಹೀನಾಯವಾಗಿ ತೋರಿಸುವ ಉದ್ದೇಶ ಹೊಂದಿಲ್ಲ.
Accident : KSRTC ಬಸ್ ಪಲ್ಟಿ ; 15 ಪ್ರಯಾಣಿಕರಿಗೆ ಗಾಯ ; ಪಂಢರಾಪುರ ಪಾದಯಾತ್ರೆ ವೇಳೆ ಕಾರು ಹರಿದು 6 ಭಕ್ತರಿಗೆ ಗಾಯ.!
ಜನಸ್ಪಂದನ ನ್ಯೂಸ್, ರಾಯಚೂರು/ಬೆಳಗಾವಿ : ರಾಯಚೂರು ನಗರ ಹೊರವಲಯದ ಸಾತ್ ಮೈಲ್ ಕ್ರಾಸ್ ಬಳಿ ಶುಕ್ರವಾರ (ಸೆಪ್ಟೆಂಬರ್ 26) ಬೆಳಗ್ಗೆ 7 ಗಂಟೆಯ ಸುಮಾರಿಗೆ KSRTC ಸ್ಲೀಪರ್ ಕೋಚ್ ಬಸ್ ಪಲ್ಟಿಯಾದ (Accident) ಘಟನೆ ಸಂಭವಿಸಿದೆ.
ಈ ಅಪಘಾತ (Accident) ದಲ್ಲಿ ಕನಿಷ್ಠ 15 ಪ್ರಯಾಣಿಕರು ಗಾಯಗೊಂಡಿದ್ದು, ಅವರಲ್ಲಿ ಓರ್ವನ ಕಾಲಿಗೆ ಗಂಭೀರ ಗಾಯವಾಗಿದೆ.
“ಮಧುಮೇಹವನ್ನು ಬುಡದಿಂದಲೇ ಗುಣಪಡಿಸುವ ಶಕ್ತಿ ಹೊಂದಿದ ಈ ಹಣ್ಣು ; ವರ್ಷಕ್ಕೊಮ್ಮೆ ತಿಂದರೂ Blood Sugar ನಿಯಂತ್ರಣದಲ್ಲಿರುತ್ತದೆ.!”
ಬಸ್ ಪಲ್ಟಿಯಾದ ಘಟನೆ :
ದಾವಣಗೆರೆಯಿಂದ ರಾಯಚೂರು ಕಡೆಗೆ ಬರುತ್ತಿದ್ದ ಬಸ್, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಜಮೀನಿಗೆ ಉರುಳಿ ಬಿದ್ದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಚಾಲಕನ ನಿದ್ದೆ ಮಂಪರು ಹಾಗೂ ರಸ್ತೆಗೆ ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಪ್ರಯತ್ನ ಮಾಡಿದಾಗ ಬಸ್ ಪಲ್ಟಿಯಾಗಿದೆ ಎನ್ನಲಾಗಿದೆ.
ಅಪಘಾತ (Accident) ದ ವೇಳೆ ಬಸ್‌ನಲ್ಲಿ 10-15 ಮಂದಿ ಪ್ರಯಾಣಿಕರಿದ್ದು, ಬಹುತೇಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಓರ್ವ ಪ್ರಯಾಣಿಕನ ಕಾಲು ಬಸ್‌ನಲ್ಲಿ ಸಿಲುಕಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿ ಜಿಟಿ ಜಿಟಿ ಮಳೆಯ ನಡುವೆಯೇ ರಕ್ಷಣಾ ಕಾರ್ಯಾಚರಣೆ ನಡೆಸಿ ಅವರನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.
“Post Officeನ ಈ ಸ್ಕೀಮ್‌ನಿಂದ ತಿಂಗಳಿಗೆ 9,250 ರೂ.ವರೆಗೂ ನಿಯಮಿತ ಆದಾಯ”.!
ಗಾಯಾಳುಗಳನ್ನು ಅಂಬುಲೆನ್ಸ್ ಮೂಲಕ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಕ್ರೇನ್ ಮೂಲಕ ಬಸ್ ಎತ್ತಲಾಗಿದೆ. ಈ ಘಟನೆ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪಂಢರಾಪುರ ಪಾದಯಾತ್ರೆಯಲ್ಲಿ ಅಪಘಾತ :
ಇನ್ನೊಂದು ಘಟನೆಯಲ್ಲಿ, ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಿಡಕಲ್ ಮೂಲದ ಭಕ್ತರು ಪಂಢರಾಪುರಕ್ಕೆ ಪಾದಯಾತ್ರೆ ಹೊರಟಿದ್ದ ವೇಳೆ ಹಾರುಗೇರಿ ಕ್ರಾಸ್ ಬಳಿ ಈ ದುರ್ಘಟನೆ (Accident) ಸಂಭವಿಸಿದೆ.

ಅಥಣಿ ಮಾರ್ಗವಾಗಿ ಹೋಗುತ್ತಿದ್ದ ಯಾತ್ರಿಕರ ಮೇಲೆ ಒಂದು ಕಾರು ಹರಿದ ಪರಿಣಾಮ ಏಳು ಭಕ್ತರು ಗಾಯಗೊಂಡಿದ್ದಾರೆ.
ಕತ್ತೆಕಿರುಬವ ತಪ್ಪಿಸಲು ಹೋಗಿ ಪಲ್ಟಿಯಾದ ಪೊಲೀಸ್ ಜೀಪ್ ; ASI ಸಾವು.!
ಕಾರಿನ ಚಾಲಕನ ಬೇಜವಾಬ್ದಾರಿಯೇ ಅಪಘಾತ (Accident) ಕ್ಕೆ ಕಾರಣ ಎನ್ನಲಾಗಿದ್ದು, ಗಾಯಾಳುಗಳನ್ನು ಹಾರೂಗೇರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಅದರಲ್ಲಿ ಇಬ್ಬರಿಗೆ ಗಂಭೀರವಾದ ಗಾಯಗಳಾದ ಹಿನ್ನಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಗೆ ರವಾನಿಸಲಾಗಿದೆ.
ಒಂದೇ ದಿನ ಎರಡು ಅಪಘಾತಗಳು ಸಂಭವಿಸಿದ ಪರಿಣಾಮ ಸ್ಥಳೀಯರು ಆತಂಕಗೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.







