ಡೆಸ್ಕ್ : ಉದ್ಯೋಗಕ್ಕಾಗಿ ಮಹಾರಾಷ್ಟ್ರಕ್ಕೆ ತೆರಳಿದ್ದ ಉತ್ತರ ಪ್ರದೇಶದ 25 ವರ್ಷದ ಯುವಕನೊಬ್ಬ ಬೆಲ್ಲ ತಯಾರಿಕಾ ಘಟಕ (ಆಲೆಮನೆ) ದಲ್ಲಿಯ ಬೃಹತ್ ಬೆಲ್ಲದ ಬಾಣಲೆಗೆ ಆಕಸ್ಮಿಕವಾಗಿ ಓರ್ವ ಯುವಕ ಬಿದ್ದಿರುವ ಆಘಾತಕಾರಿ ಘಟನೆ ನಡೆದಿದ್ದು, ಸದ್ಯ ಅದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕುದಿಯುತ್ತಿದ್ದ ಬೆಲ್ಲದ ಬೃಹತ್ ಪಾತ್ರೆಗೆ ಆಕಸ್ಮಿಕವಾಗಿ ಬಿದ್ದ ಯುವಕನನ್ನು ಸಹ ಕಾರ್ಮಿಕರು ರಕ್ಷಿಸಲು ಪ್ರಯತ್ನಿಸಿದರೂ, ಗಂಭೀರ ಸುಟ್ಟ ಗಾಯಗಳಿಂದಾಗಿ ಚಿಕಿತ್ಸೆ ಮಧ್ಯೆಯೇ ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ.
ಮೃತ ಯುವಕನನ್ನು ಉತ್ತರ ಪ್ರದೇಶದ ಲಖಿಂಪುರ ಜಿಲ್ಲೆಯ ಈಸಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮೂಡಿ ಗ್ರಾಮದ ನಿವಾಸಿ ದಾನಿಶ್ ಎಂದು ಗುರುತಿಸಲಾಗಿದೆ. ಕುಟುಂಬದ ಸಾಲ ತೀರಿಸುವ ಉದ್ದೇಶದಿಂದ ಉದ್ಯೋಗಕ್ಕಾಗಿ ಮಹಾರಾಷ್ಟ್ರಕ್ಕೆ ದಾನಿಶ್ ತೆರಳಿದ್ದನೆಂದು ಹೇಳಲಾಗುತ್ತಿದೆ.
ಮೃತ ದಾನಿಶ್, ಕಳೆದ ಸುಮಾರು ನಾಲ್ಕು ತಿಂಗಳಿಂದ ಅಲ್ಲಿನ ಬೆಲ್ಲ (Gaggery) ತಯಾರಿಕಾ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ದಾನಿಶ್ ಸೇರಿದಂತೆ ಸುಮಾರು 15 ಮಂದಿ ಉದ್ಯೋಗಕ್ಕಾಗಿ ಮಹಾರಾಷ್ಟ್ರಕ್ಕೆ ತೆರಳಿದ್ದರು.
ಇದನ್ನು ಓದಿ : ಮಾನಸಿಕ ಅಸ್ವಸ್ಥ ವ್ಯಕ್ತಿ ಶಾಲಾ ಮಕ್ಕಳ ಬಳಿ ಬಂದಾಗ ಬಾಲಕಿ ಮಾಡಿದ್ದೇನು? ವೈರಲ್ ವಿಡಿಯೋ ನೋಡಿ.!
ಸಂಭವಿಸಿದ ದುರಂತ :
ಈ ಘಟನೆ ಆಗಸ್ಟ್ 21ರಂದು ಮಧ್ಯಾಹ್ನ ಸುಮಾರು 2.25ರ ವೇಳೆಗೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಾನಿಶ್ ಬೆಲ್ಲ ಕುದಿಯುತ್ತಿದ್ದ ದೊಡ್ಡ ಬೆಲ್ಲದ ಬಾಣಲೆ ಅಂಚಿನ ಬಳಿ ನಿಂತಿದ್ದ ಸಂದರ್ಭದಲ್ಲಿ ಏಕಾಏಕಿ ತಲೆ ಸುತ್ತಿ ಸಮತೋಲನ ಕಳೆದುಕೊಂಡಿದ್ದಾನೆ. ಇದರಿಂದ ನಿಯಂತ್ರಣ ತಪ್ಪಿ ಕುದಿಯುತ್ತಿದ್ದ ಬೆಲ್ಲದ ಪಾತ್ರೆಯೊಳಗೆ ಬಿದ್ದಿದ್ದಾನೆ.
ಪಾತ್ರೆಗೆ ಬಿದ್ದ ಕೂಡಲೇ ದಾನಿಶ್ ಸಹಾಯಕ್ಕಾಗಿ ಕೂಗಿದ್ದಾನೆ. ಆತನ ಕೂಗು ಕೇಳಿದ ತಕ್ಷಣವೇ ಸಹ ಕಾರ್ಮಿಕರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಅತ್ಯಂತ ಅಪಾಯಕಾರಿಯಾಗಿದ್ದರೂ, ಆತನನ್ನು ರಕ್ಷಿಸಲು ಕಾರ್ಮಿಕರು ಪ್ರಯತ್ನಿಸಿದ್ದಾರೆ.
ಸೌಟುಗಳ ಮೂಲಕ ರಕ್ಷಿಸಲು ಪ್ರಯತ್ನ :
ಆರಂಭದಲ್ಲಿ ಇಬ್ಬರು ಕಾರ್ಮಿಕರು ದೊಡ್ಡ ಸೌಟುಗಳ ಸಹಾಯದಿಂದ ದಾನಿಶ್‌ನನ್ನು ಕುದಿಯುತ್ತಿದ್ದ ಪಾತ್ರೆಯಿಂದ ಹೊರಗೆಳೆಯಲು ಪ್ರಯತ್ನಿಸಿದ್ದಾರೆ. ಆದರೆ ಆ ಪ್ರಯತ್ನ ಯಶಸ್ವಿಯಾಗಲಿಲ್ಲ. ಬಳಿಕ 2-3 ಮಂದಿ ಕಾರ್ಮಿಕರು ಅಪಾಯವನ್ನೂ ಲೆಕ್ಕಿಸದೆ ಬೆಲ್ಲದ ಬಾಣಲೆ ಬಳಿ ತೆರಳಿ ದಾನಿಶ್‌ನನ್ನು ಹೊರಗೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಆದರೆ ಕುದಿಯುತ್ತಿದ್ದ ಬೆಲ್ಲಕ್ಕೆ ಬಿದ್ದ ಪರಿಣಾಮ ದಾನಿಶ್‌ಗೆ ದೇಹದ ಮೇಲೆ ಗಂಭೀರ ಸುಟ್ಟ ಗಾಯಗಳಾಗಿದ್ದವು. ಘಟನೆ ಬಳಿಕ ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಬೆಲ್ಲದ ಬಾಣಲೆಯಲ್ಲಿ ಬಿದ್ದು ತುಂಬಾ ಯಾಗವಾದ ಪರಿಣಾಮ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲೇ ದಾನಿಶ್ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಬೆಲ್ಲದ ಬಾಣಲೆಗೆ ಬಿದ್ದ ಯುವಕ :
महाराष्ट्र के गुड़ प्लांट में दर्दनाक हादसा, खौलती गुड़ की कढ़ाई में गिरने से यूपी के लखीमपुर खीरी निवासी 25 वर्षीय दानिश की मौत। pic.twitter.com/koxkU9LcOA
— Anjali Kumari (@AnjaliKumari009) August 24, 2026
ಸ್ವಗ್ರಾಮಕ್ಕೆ ತಲುಪಿದ ಮೃತದೇಹ :
ಮಹಾರಾಷ್ಟ್ರದಲ್ಲಿಯೇ ದಾನಿಶ್‌ನ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿತ್ತು. ಶನಿವಾರ ದಾನಿಶ್‌ನ ಮೃತದೇಹ ಸ್ವಗ್ರಾಮಕ್ಕೆ ತಲುಪಿದೆ. ಯುವಕನ ಸಾವಿನಿಂದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆಘಾತಕ್ಕೊಳಗಾಗಿದ್ದಾರೆ.
ಈ ಸುದ್ದಿಯನ್ನು ಓದಿ : ಗೃಹಲಕ್ಷ್ಮಿ ಯೋಜನೆಗೆ ಬಿಗ್ ಅಪ್‌ಡೇಟ್ : ಫಲಾನುಭವಿಗಳಿಗೆ ಹೊಸ ಅರ್ಜಿ ಕಡ್ಡಾಯ? ಮನೆ-ಮನೆ ಸಮೀಕ್ಷೆ ಶುರು.!
ಕುಟುಂಬದ ಸಾಲ ತೀರಿಸಲು ಕೆಲಸಕ್ಕಾಗಿ ದೂರದ ಮಹಾರಾಷ್ಟ್ರಕ್ಕೆ ತೆರಳಿದ್ದ ಯುವಕ ದಾರುಣವಾಗಿ ಮೃತಪಟ್ಟಿರುವುದು ಕುಟುಂಬಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದೆ.
ನಿರ್ಲಕ್ಷ್ಯದ ಆರೋಪ :
ಘಟನೆ ನಡೆದ ಆರಂಭಿಕ ಹಂತದಲ್ಲಿ ದಾನಿಶ್ ಜೊತೆ ಮಹಾರಾಷ್ಟ್ರಕ್ಕೆ ತೆರಳಿದ್ದ ಕಾರ್ಮಿಕರ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಕುಟುಂಬಸ್ಥರು ಆರೋಪಿಸಿ ಗಲಾಟೆ ನಡೆಸಿದ್ದರು. ಆದರೆ ಪೊಲೀಸರು ಘಟನೆಯ ಸಿಸಿಟಿವಿ ದೃಶ್ಯಗಳನ್ನು ಕುಟುಂಬಸ್ಥರಿಗೆ ತೋರಿಸಿದ ಬಳಿಕ ಪರಿಸ್ಥಿತಿ ಶಾಂತಗೊಂಡಿದೆ ಎಂದು ವರದಿಯಾಗಿದೆ.
ಈ ಘಟನೆ ಮಹಾರಾಷ್ಟ್ರದ ಬೆಲ್ಲ ತಯಾರಿಕಾ ಘಟಕದಲ್ಲಿ ಸಂಭವಿಸಿದೆ ಎಂದು ಸಿಒ ಶಮ್ಶೇರ್ ಬಹದ್ದೂರ್ ಸಿಂಗ್ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಈವರೆಗೆ ಯಾವುದೇ ಲಿಖಿತ ದೂರು ದಾಖಲಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆಯ ಸಂಪೂರ್ಣ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕೆಲಸದ ಸ್ಥಳಗಳಲ್ಲಿ ಸುರಕ್ಷತಾ ಕ್ರಮಗಳ ಅಗತ್ಯತೆಯ ಕುರಿತು ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದೆ. ಕುದಿಯುವ ವಸ್ತುಗಳು ಮತ್ತು ಭಾರೀ ಕೈಗಾರಿಕಾ ಉಪಕರಣಗಳ ಬಳಿ ಕೆಲಸ ಮಾಡುವ ಕಾರ್ಮಿಕರಿಗೆ ಸೂಕ್ತ ಸುರಕ್ಷತಾ ವ್ಯವಸ್ಥೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳು ಎಷ್ಟು ಮುಖ್ಯ ಎಂಬುದನ್ನು ಈ ಘಟನೆ ನೆನಪಿಸಿದೆ.
ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ
Disclaimer : ಈ ಸುದ್ದಿಯಲ್ಲಿರುವ ಮಾಹಿತಿಯನ್ನು ಲಭ್ಯವಿರುವ ವರದಿಗಳು ಹಾಗೂ ಪೊಲೀಸ್ ಮೂಲಗಳ ಆಧಾರದ ಮೇಲೆ ನೀಡಲಾಗಿದೆ. ಓದುಗರು ವೈರಲ್ ವಿಡಿಯೋ ಅಥವಾ ಸಾಮಾಜಿಕ ಜಾಲತಾಣದ ಮಾಹಿತಿಯನ್ನು ಪರಿಶೀಲಿಸದೆ ಸತ್ಯವೆಂದು ಪರಿಗಣಿಸಬಾರದು.









