ನೌಕರಿ ಮಾಹಿತಿ : ನೀವು ಪಿಯುಸಿ ಪಾಸಾಗಿದ್ದೀರಾ? ಹಾಗಾದ್ರೆ ಇಲ್ಲಿದೆ ನಿಮಗಾಗಿ ಒಂದು ಗುಡ್ ನ್ಯೂಸ್. ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 1600 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದ್ದು, ಕೊನೆಯ ದಿನಾಂಕಕ್ಕೆ ಕಾಯದೆ ಇಂದೇ ಅರ್ಜಿ ಸಲ್ಲಿಸಿ.
ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ರಾಜ್ಯದ ಯುವ ಜನಾಂಗಕ್ಕೆ ದೊಡ್ಡ ಅವಕಾಶ ಸಿಕ್ಕಿದ್ದು, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಬರೋಬ್ಬರಿ “1600 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ (ಸಶಸ್ತ್ರ)” ಭರ್ತಿಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ.
ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ನೇಮಕಾತಿ ಅಧಿಸೂಚನೆಯಲ್ಲಿ ಆಯ್ಕೆ ವಿಧಾನ, ವಯೋಮಿತಿ, ವಿದ್ಯಾರ್ಹತೆ, ಶುಲ್ಕ ಸೇರಿದಂತೆ ಹಲವು ಪ್ರಮುಖ ಮಾಹಿತಿಗಳನ್ನು ನೀಡಲಾಗಿದೆ.
1600 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ ವಿವರ :
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಅಧಿಸೂಚನೆಯ ಪ್ರಕಾರ ಒಟ್ಟು “1600 ಹುದ್ದೆಗಳು” ಇದ್ದು, ಇದರಲ್ಲಿ ಸಾಮಾನ್ಯ ವೃಂದ ಹಾಗೂ ಕಲ್ಯಾಣ ಕರ್ನಾಟಕ ವೃಂದ ಎರಡೂ ಸೇರಿವೆ.
- ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (CAR / DAR – RPC) : 1421 ಹುದ್ದೆಗಳು.
- ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (CAR / DAR – KK) : 179 ಹುದ್ದೆಗಳು.
ಆಯ್ಕೆಯಾದ ಅಭ್ಯರ್ಥಿಗಳಿಗೆ ಕರ್ನಾಟಕ ರಾಜ್ಯದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆಯಲಿದೆ.
ಮಾಸಿಕ ವೇತನ :
ನೇಮಕಾತಿ ಅಧಿಸೂಚನೆಯ ಪ್ರಕಾರ, ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ. 37,500 ರಿಂದ 76,100 ವರೆಗೆ ವೇತನ ನೀಡಲಾಗುತ್ತದೆ. ಸರ್ಕಾರಿ ಸೇವೆಯ ಜೊತೆಗೆ ವಿವಿಧ ಭತ್ಯೆಗಳ ಸೌಲಭ್ಯವೂ ದೊರೆಯಲಿದೆ.
ವಯೋಮಿತಿ ಮತ್ತು ಸಡಿಲಿಕೆ :
ವಯೋಮಿತಿ :
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು,
- ಕನಿಷ್ಠ 18 ವರ್ಷ ವಯಸ್ಸು ಕಡ್ಡಾಯ ಮತ್ತು
- ಗರಿಷ್ಠ 33 ವರ್ಷ ಮೀರಿರಬಾರದು.
ಸಡಿಲಿಕೆ :
ಸರ್ಕಾರದ ಮೀಸಲಾತಿ ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ಕೂಡ ನೀಡಲಾಗಿದೆ.
- OBC, 2A, 2B, 3A, 3B ಅಭ್ಯರ್ಥಿಗಳಿಗೆ : 2 ವರ್ಷ.
- SC/ST ಅಭ್ಯರ್ಥಿಗಳಿಗೆ : 5 ವರ್ಷ ಮತ್ತು
- PWD ಅಭ್ಯರ್ಥಿಗಳಿಗೆ : 10 ವರ್ಷ.
ಅರ್ಜಿ ಶುಲ್ಕ :
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು, ಅರ್ಜಿ ಸಲ್ಲಿಸುವ ವೇಳೆ ಕೆಳಕಂಡ ಶುಲ್ಕ ಪಾವತಿಸಬೇಕಾಗುತ್ತದೆ.
- ಸಾಮಾನ್ಯ, OBC, 2A, 2B, 3A, 3B ಅಭ್ಯರ್ಥಿಗಳು : ರೂ. 750/-
- SC/ST ಅಭ್ಯರ್ಥಿಗಳು : ರೂ. 500/-
ವಿದ್ಯಾರ್ಹತೆ :
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ನಿಯಮಗಳ ಪ್ರಕಾರ,
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ಶಿಕ್ಷಣ ಸಂಸ್ಥೆಯಿಂದ 12ನೇ ತರಗತಿ (PUC/Equivalent) ಪೂರ್ಣಗೊಳಿಸಿರಬೇಕು.
ಆಯ್ಕೆ ಪ್ರಕ್ರಿಯೆ :
ನೇಮಕಾತಿ ಪ್ರಕ್ರಿಯೆಯಲ್ಲಿ ಹಲವು ಹಂತಗಳ ಪರೀಕ್ಷೆಗಳು ನಡೆಯಲಿವೆ.
- ಲಿಖಿತ ಪರೀಕ್ಷೆ (OMR ಆಧಾರಿತ ಆಫ್‌ಲೈನ್ ಪರೀಕ್ಷೆ).
- ಸಹಿಷ್ಣುತೆ ಪರೀಕ್ಷೆ.
- ದೈಹಿಕ ಗುಣಮಟ್ಟ ಪರೀಕ್ಷೆ.
- ವೈದ್ಯಕೀಯ ಪರೀಕ್ಷೆ.
Note : ಈ ಎಲ್ಲ ಹಂತಗಳಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಅಂತಿಮ ಆಯ್ಕೆಗೆ ಅವಕಾಶ ದೊರೆಯಲಿದೆ.
ಅರ್ಜಿ ಸಲ್ಲಿಸುವ ವಿಧಾನ :
ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ನೇಮಕಾತಿ ಅಧಿಸೂಚನೆಯನ್ನು ಗಮನದಿಂದ ಓದಬೇಕು. ನಂತರ ಆನ್‌ಲೈನ್ ಅರ್ಜಿ ಲಿಂಕ್ ಮೂಲಕ ಅರ್ಜಿ ನಮೂನೆ ಭರ್ತಿ ಮಾಡಿ ಅಗತ್ಯ ದಾಖಲೆಗಳು, ಫೋಟೋ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಬೇಕು. ಅರ್ಜಿ ಶುಲ್ಕ ಪಾವತಿಸಿದ ಬಳಿಕ ಅಂತಿಮವಾಗಿ ಫಾರ್ಮ್ ಸಬ್‌ಮಿಟ್ ಮಾಡಿ ಪ್ರಿಂಟ್ ಕಾಪಿ ಉಳಿಸಿಕೊಳ್ಳಬೇಕು.
ಪ್ರಮುಖ ಲಿಂಕ್ :
1600 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಯ ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/
ಪ್ರಮುಖ ದಿನಾಂಕಗಳು :
- ಅರ್ಜಿ ಸಲ್ಲಿಕೆಯ ಆರಂಭಿಕ ದಿನಾಂಕ : 22 June 2026.
- ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕ : 22 July 2026.
ಪ್ರಮುಖ ಸುದ್ದಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ.
Disclaimer : ಈ 1600 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ ಲೇಖನವು ಸಾರ್ವಜನಿಕ ವಲಯದಲ್ಲಿ ಲಭ್ಯ ನೇಮಕಾತಿ ಮಾಹಿತಿ ಹಾಗೂ ಪ್ರಾಥಮಿಕ ಅಧಿಸೂಚನೆ ಆಧರಿಸಿ ಸಿದ್ಧಪಡಿಸಲಾಗಿದೆ. ಅರ್ಜಿ ಸಲ್ಲಿಸುವ ಮೊದಲು ಸಂಬಂಧಿತ ಇಲಾಖೆಯ ಅಧಿಕೃತ ಪ್ರಕಟಣೆ ಪರಿಶೀಲಿಸುವುದು ಅಭ್ಯರ್ಥಿಗಳ ಜವಾಬ್ದಾರಿಯಾಗಿದೆ.







