ಇನ್‌ಸ್ಟಾಗ್ರಾಮ್ ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಂದ ಪತ್ನಿ

ಕಾಕಿನಾಡ: ಇನ್‌ಸ್ಟಾಗ್ರಾಮ್ ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಂದ ಪತ್ನಿ; 3 ತಿಂಗಳ ಬಳಿಕ ಸಿಕ್ಕಿಬಿದ್ದಿದ್ದು ಹೇಗೆ?

ಡೆಸ್ಕ್ : ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಲೆ ಮಾಡಿದ್ದ ಪತ್ನಿಯೊಬ್ಬಳು, ಕೇವಲ ಮೂರು ತಿಂಗಳ ಬಳಿಕ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಆಂಧ್ರಪ್ರದೇಶದ ಕಾಕಿನಾಡ ಪ್ರದೇಶದಲ್ಲಿ ನಡೆದಿದೆ.

ಇಂದಿನ ದಿನಮಾನದಲ್ಲಿ ಮದುವೆ ಮತ್ತು ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಕೇವಲ ಕ್ಷಣಿಕ ಸುಖ, ಅನೈತಿಕ ಸಂಬಂಧ ಅಥವಾ ವೈವಾಹಿಕ ಜೀವನದ ಅಸಮಾಧಾನ ಕೆಲವೊಮ್ಮೆ ಊಹಿಸಲೂ ಸಾಧ್ಯವಾಗದ ಭೀಕರ ಘಟನೆಗಳಿಗೆ ಕಾರಣವಾಗುತ್ತವೆ. ಅಂತಹದ್ದೇ ಬೆಚ್ಚಿಬೀಳಿಸುವ ಘಟನೆ ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

ಪತ್ನಿಯೊಬ್ಬಳು ಸಾಮಾಜಿಕ ಜಾಲತಾಣದಿಂದ ಪರಿಚಯವಾದ ಪ್ರಿಯಕರನ ಜೊತೆ ಸೇರಿ ಅನಾರೋಗ್ಯದಿಂದ ಬಳಲುತ್ತಿದ್ದ ಗಂಡನನ್ನೇ ಸಂಚು ರೂಪಿಸಿ ಹತ್ಯೆ ಮಾಡಿದ ಆರೋಪದಲ್ಲಿ ಹಿನ್ನಲೆಯಲ್ಲಿ ಇದೀಗ ಇಬ್ಬರು ಪೊಲೀಸರ ಬಲೆಗೆ ಬಿದ್ದಿದ್ದಾಳೆ.

ಇನ್‌ಸ್ಟಾಗ್ರಾಮ್‌ದಿಂದ ಪರಿಚಯ, ಬಳಿಕ ಆಪ್ತ ಸಂಬಂಧ :

ಮೃತ ವ್ಯಕ್ತಿಯನ್ನು 35 ವರ್ಷದ ದುರ್ಗಾಪ್ರಸಾದ್ ಎಂದು ಗುರುತಿಸಲಾಗಿದೆ. ಆತ ಆಟೋ ಚಾಲಕರಾಗಿದ್ದು ಕುಟುಂಬದ ನಿರ್ವಹಣೆ ಮಾಡುತ್ತಿದ್ದರು. ಕೆಲವು ವರ್ಷಗಳ ಹಿಂದೆ ಹೃದಯ ಸಂಬಂಧಿ ಸಮಸ್ಯೆಯಿಂದ ಚಿಕಿತ್ಸೆ ಪಡೆದು ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು.

ಇದೇ ಅವಧಿಯಲ್ಲಿ ಅವರ ಪತ್ನಿ ರಮಾದೇವಿಗೆ ಸಾಮಾಜಿಕ ಜಾಲತಾಣದ ಮೂಲಕ ಗೋಪಿಸಾಯಿ ಎಂಬ ಯುವಕನ ಪರಿಚಯವಾಗಿದ್ದು, ಅದು ಬಳಿಕ ಆಪ್ತ ಸಂಬಂಧವಾಗಿ ಮಾರ್ಪಟ್ಟಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಈ ಸಂಬಂಧದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಗಂಡ ಪತ್ನಿಗೆ ಎಚ್ಚರಿಕೆ ನೀಡಿದ್ದಾನೆ ಎನ್ನಲಾಗಿದೆ. ಇದರಿಂದ ಕುಪಿತಗೊಂಡ ಪತ್ನಿ, ತನ್ನ ಪ್ರಿಯಕರನ ಜೊತೆ ಸೇರಿ ಹೇಗಾದರು ಮಾಡಿ ಗಂಡನನ್ನು ತನ್ನ ದಾರಿಯಿಂದ ತೆಗೆಯಲು ಹಾಕಲು ಸಂಚು ರೂಪಿಸಿದ್ದಾಳೆಂಬ ಆರೋಪ ಕೇಳಿಬಂದಿದೆ.

ನಿದ್ದೆ ಮಾತ್ರೆ, ಉಸಿರುಗಟ್ಟಿಸಿ ಕೊಲೆ :

ಪೂರ್ವಯೋಜನೆಯಂತೆ ಪ್ರಿಯಕರನು ನಿದ್ದೆ ಮಾತ್ರೆಗಳನ್ನು ತಂದುಕೊಟ್ಟಿದ್ದಾನೆ. ಬಳಿಕ ಮಹಿಳೆ ಅದನ್ನು ಜ್ಯೂಸ್‌ನಲ್ಲಿ ಬೆರೆಸಿ ಗಂಡನಿಗೆ ಕುಡಿಸಿದ್ದಾಳೆ. ಮಾತ್ರೆಗಳ ಪ್ರಭಾವದಿಂದ ಪತಿ ಅಸ್ವಸ್ಥಗೊಂಡ ತಕ್ಷಣ, ಉಸಿರುಗಟ್ಟುವಂತೆ ಮಾಡಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಓದಿ : ರಸ್ತೆಯಲ್ಲೇ ಸರ್ಕಾರಿ ಮಹಿಳಾ ಸಿಬ್ಬಂದಿಯ ಮೇಲೆ ಮಾರಕಾಸ್ತ್ರದಿಂದ ಭೀಕರ ಹಲ್ಲೆ: ಆರೋಪಿ ಪರಾರಿ.!

ನಂತರ ಇದು ಸಹಜ ಹೃದಯಾಘಾತದಿಂದ ಸಂಭವಿಸಿದ ಮರಣ ಎಂದು ಕುಟುಂಬಸ್ಥರನ್ನು ನಂಬಿಸುವ ಮೂಲಕ ನಂಬಿಸಿ ಶವ ಸಂಸ್ಕಾರವನ್ನೂ ಮುಗಿಸಿದ್ದಾಳೆ ಎಂದು ತಿಳಿದುಬಂದಿದೆ.

ಕಥೆಗೆ ಅಚ್ಚರಿಯ ತಿರುವು :

ಗಂಡ ಸಾವನ್ನಪ್ಪಿ ಮೂರು ತಿಂಗಳು ಕೂಡ ಪೂರ್ಣವಾಗುವ ಮುನ್ನವೇ ಕಥೆಗೆ ರೋಚಕ ತಿರುವು ಸಿಕ್ಕಿದೆ.  ರಮಾದೇವಿ ತನ್ನ ಪ್ರಿಯಕರ ಗೋಪಿಸಾಯಿಯಿಂದ ದೂರವಾಗಿ ಮತ್ತೊಬ್ಬ ಹೊಸ ಪ್ರಿಯಕರನ ಜೊತೆ ಸಂಬಂಧ ಬೆಳೆಸಿದ್ದಳು ಎನ್ನಲಾಗಿದೆ.

ಇದರಿಂದ ಕೋಪಗೊಂಡ ಹಳೆ ಪ್ರಿಯಕರ ಗೋಪಿಸಾಯಿ, ನಡೆದ ಕೊಲೆ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಬಹಿರಂಗಪಡಿಸಲು ಮುಂದಾಗಿದ್ದಾನೆ. ಹೀಗಾಗಿ ರಮಾದೇವಿಯ ಮಗಳ ಮೊಬೈಲ್‌ಗೆ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಿದ್ದಾನೆ.

ಇದನ್ನು ಓದಿ : ತಂಪು ಪಾನೀಯ ಕುಡಿಸಿ ಮಹಿಳೆ ಮೇಲೆ ಸಾಮೂಹಿಕ ಲೈಂಗಿಕ ದೌರ್ಜನ್ಯ ಆರೋಪ; 10 ಮಂದಿ ಬಂಧನ.

ವಾಟ್ಸಾಪ್ ಸಂದೇಶದಲ್ಲಿ ಆತ ಕೊಲೆ ಸಂಚಿಗೆ ಬಳಸಿದ್ದ ನಿದ್ದೆ ಮಾತ್ರೆಗಳ ಖರೀದಿ ದಾಖಲೆ ಹಾಗೂ ಇತರೆ ಸಾಕ್ಷ್ಯಾಧಾರಗಳಾಗಿ ಹೇಗೆ ಕೊಲೆ ಮಾಡಲಾಯಿತು ಎಂಬ ಬಗ್ಗೆ ಹಂಚಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇಬ್ಬರ ಬಂಧನ :

ಈ ಮಾಹಿತಿ ಆಧರಿಸಿ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದು, ತನಿಖೆ ಆರಂಭಿಸಿದ ಅಧಿಕಾರಿಗಳು ರಮಾದೇವಿ ಮತ್ತು ಆಕೆಯ ಪ್ರಿಯಕರ ಗೋಪಿಸಾಯಿಯನ್ನು ಬಂಧಿಸಿದ್ದಾರೆ.

ಈ ಘಟನೆ ಸ್ಥಳೀಯವಾಗಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಕುಟುಂಬ ಸಂಬಂಧಗಳು ಮತ್ತು ಸಾಮಾಜಿಕ ಜಾಲತಾಣಗಳಿಂದ ಹುಟ್ಟುವ ಅಪಾಯಗಳ ಬಗ್ಗೆ ಮತ್ತೊಮ್ಮೆ ಚರ್ಚೆ ಶುರುವಾಗಿದೆ.

ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ


Disclaimer: ಈ ಲೇಖನವು ವಿವಿಧ ಮಾಧ್ಯಮ ವರದಿಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿರುವ ಕಾರಣ ಅಧಿಕೃತ ಮಾಹಿತಿ ಕಾಲಾನುಗತವಾಗಿ ಬದಲಾಗುವ ಸಾಧ್ಯತೆ ಇದೆ.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top