HomeGeneral Newsಪ್ರೀತಿ ನಿರಾಕರಿಸಿದ ಯುವತಿ; ಹೈಟೆನ್ಷನ್ ಕಂಬ ಹತ್ತಿದ ಯುವಕ: ಆನೇಕಲ್‌ನಲ್ಲಿ ಹೈಡ್ರಾಮಾ.!
spot_img
spot_img

ಪ್ರೀತಿ ನಿರಾಕರಿಸಿದ ಯುವತಿ; ಹೈಟೆನ್ಷನ್ ಕಂಬ ಹತ್ತಿದ ಯುವಕ: ಆನೇಕಲ್‌ನಲ್ಲಿ ಹೈಡ್ರಾಮಾ.!

ಬೆಂಗಳೂರು ಗ್ರಾಮಂತರ : ಯುವತಿಯೋರ್ವಳು ಪ್ರೀತಿ ನಿರಾಕರಿಸಿದ ಹಿನ್ನಲೆಯಲ್ಲಿ ಯುವಕನೋರ್ವ ಹೈಟೆನ್ಷನ್ ಕಂಬ (ವಿದ್ಯುತ್ ಕಂಬ) ಹತ್ತಿದ ಹೈಡ್ರಾಮಾ ಸೃಷ್ಟಿದ ಘಟನೆ ಬೆಂಗಳೂರು ಗ್ರಾಮಾಂತರದ ಆನೇಕಲ್ಲಿನಲ್ಲಿ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಚಿನ್ನಯ್ಯನಪಾಳ್ಯದಲ್ಲಿ (Chinnayyanapalya) ಪ್ರೇಮ ವೈಫಲ್ಯ (Love Failure) ಹಿನ್ನೆಲೆ ಯುವಕನೊಬ್ಬ ಹೈಟೆನ್ಷನ್ ವಿದ್ಯುತ್ ಕಂಬ ಹತ್ತಿ ಭಾರೀ ಹೈಡ್ರಾಮಾ ಸೃಷ್ಟಿಸಿದ ಘಟನೆ ನಡೆದಿದೆ.

ಮದುವೆಗೆ ನಿರಾಕರಣೆ, ಹೈಡ್ರಾಮಾ ಸೃಷ್ಟಿಸಿದ ಯುವಕ :

ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿ ಮದುವೆಗೆ ನಿರಾಕರಿಸಿದ್ದರಿಂದ ಮನನೊಂದು ಯುವಕ ಈ ಆತಂಕಕಾರಿ ನಡೆ ತಳೆದಿದ್ದಾನೆ ಎನ್ನಲಾಗಿದೆ. ಸೋಮಶೇಖರ್ ಎಂಬ ಯುವಕನೇ ಹೈಟೆನ್ಷನ್ ಕಂಬ ಹತ್ತಿ ಭಾರೀ ಹೈಡ್ರಾಮಾ ಸೃಷ್ಟಿಸಿದ ಯುವಕ.

ಇತ ಕಳೆದ ಮೂರು ವರ್ಷಗಳಿಂದ ಯುವತಿಯೊಬ್ಬಳೊಂದಿಗೆ ಪ್ರೇಮ ಸಂಬಂಧದಲ್ಲಿದ್ದನು ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಆದರೆ ಇತ್ತೀಚೆಗೆ ಯುವತಿ ಮದುವೆಗೆ ನಿರಾಕರಿಸಿದ್ದಲ್ಲದೆ, ಪ್ರೇಮ ಸಂಬಂಧವನ್ನೇ ಮುರಿದುಕೊಳ್ಳಲು ಮುಂದಾಗಿದ್ದಾಳೆ ಎಂದು ಹೇಳಲಾಗುತ್ತಿದೆ.

ಯುವತಿ ಮದುವೆಗೆ ನಿರಾಕರಿಸಿದ್ದರಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾದ ಸೋಮಶೇಖರ್ ಆಕ್ರೋಶಗೊಂಡು ಮೊದಲು ತನ್ನ ಮನೆಯಲ್ಲೇ ದಾಂಧಲೆ ನಡೆಸಿದ್ದಾನೆ.

ಯುವತಿ ಬರುವವರೆಗೂ ಕೆಳಗೆ ಇಳಿಯುವುದಿಲ್ಲ :

ಮನೆಯ ಮೇಲ್ಛಾವಣಿಯ ಶೀಟ್‌ಗಳನ್ನು ಒಡೆದು ಹಾಕಿದ ಬಳಿಕವೂ ಕೋಪ ಶಮನವಾಗದೆ, ಮನೆ ಸಮೀಪದಲ್ಲಿದ್ದ ಹೈಟೆನ್ಷನ್ (High Tension) ವಿದ್ಯುತ್ ಕಂಬವನ್ನು ಹತ್ತಿ ಕುಳಿತುಕೊಂಡಿದ್ದಾನೆ. “ಯುವತಿ ಬರುವವರೆಗೂ ಕೆಳಗೆ ಇಳಿಯುವುದಿಲ್ಲ” ಎಂದು ಆತ ಹಠ ಹಿಡಿದಿದ್ದಾನೆ ಎನ್ನಲಾಗಿದೆ.

ಯುವಕ ಕಂಬ ಹತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ತಕ್ಷಣವೇ ಆನೇಕಲ್ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಬೆಸ್ಕಾಂ (BESCOM) ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಹರಸಾಹಸಪಟ್ಟರು.

ಹೈಟೆನ್ಷನ್ ಕಂಬದ ವಿದ್ಯುತ್ ಕಡಿತ :

ಹೈವೋಲ್ಟೇಜ್ ವಿದ್ಯುತ್ ಹರಿಯುತ್ತಿದ್ದ ಹಿನ್ನೆಲೆಯಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಅಧಿಕಾರಿಗಳು ವಿದ್ಯುತ್ ಸಂಪರ್ಕವನ್ನು ತಾತ್ಕಾಲಿಕವಾಗಿ ಕಡಿತಗೊಳಿಸಿದರು. ಬಳಿಕ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಯುವಕನೊಂದಿಗೆ ಮಾತುಕತೆ ನಡೆಸಿ ಮನವೊಲಿಸಲು ಪ್ರಯತ್ನಿಸಿದರು.

ಇದನ್ನು ಓದಿ : ರಾಜ್ಯದಲ್ಲಿ ಮುಂದಿನ 48 ಗಂಟೆ ಭಾರಿ ಮಳೆ ಎಚ್ಚರಿಕೆ; 10 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್.

ಕೆಲ ಗಂಟೆಗಳ ಕಾರ್ಯಾಚರಣೆಯ ಬಳಿಕ ಅಧಿಕಾರಿಗಳು ಅತ್ಯಂತ ಎಚ್ಚರಿಕೆಯಿಂದ ಯುವಕನನ್ನು ಸುರಕ್ಷಿತವಾಗಿ ಕೆಳಗಿಳಿಸುವಲ್ಲಿ ಯಶಸ್ವಿಯಾದರು. ನಂತರ ಆತನನ್ನು ವಶಕ್ಕೆ ಪಡೆದ ಪೊಲೀಸರು ಕೌನ್ಸೆಲಿಂಗ್ (Counselling) ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಈ ಘಟನೆ ಪ್ರೇಮ ವೈಫಲ್ಯದಿಂದಾಗಿ ಕೆಲ ಯುವಕರು ಮಾನಸಿಕ ಸಮತೋಲನ ಕಳೆದುಕೊಂಡು ಅಪಾಯಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದಕ್ಕೆ ಮತ್ತೊಂದು ಉದಾಹರಣೆಯಾಗಿದೆ. ತಜ್ಞರ ಪ್ರಕಾರ, ಇಂತಹ ಸಂದರ್ಭಗಳಲ್ಲಿ ಕುಟುಂಬದ ಬೆಂಬಲ ಹಾಗೂ ಮಾನಸಿಕ ಆರೋಗ್ಯ ತಜ್ಞರ ಸಲಹೆ ಅತ್ಯಂತ ಮುಖ್ಯವಾಗುತ್ತದೆ.

ಸಂಪಾದಕೀಯ :

ಪ್ರೀತಿ ಮತ್ತು ಸಂಬಂಧಗಳು ವೈಯಕ್ತಿಕ ಆಯ್ಕೆಯ ವಿಷಯವಾಗಿದ್ದು, ನಿರಾಕರಣೆಯನ್ನು ಸಹ ಸಮಾಧಾನದಿಂದ ಸ್ವೀಕರಿಸುವ ಮನಸ್ಥಿತಿ ಬೆಳೆಸಿಕೊಳ್ಳುವುದು ಯುವಕ ಯುವತಿಯರಲ್ಲಿ ಅಗತ್ಯವಾಗಿದೆ. ಭಾವನಾತ್ಮಕ ಆಘಾತದ ಸಮಯದಲ್ಲಿ ಆತುರದ ನಿರ್ಧಾರಗಳು ಜೀವಕ್ಕೂ, ಸಾರ್ವಜನಿಕರ ಸುರಕ್ಷತೆಯಕ್ಕೂ ಅಪಾಯ ಉಂಟುಮಾಡಬಹುದು.

ಇಂದಿನ ಎಲ್ಲಾ ತಾಜಾ ಸುದ್ದಿಗಳನ್ನು ಇಲ್ಲಿ ಓದಿ

ಕುಟುಂಬದವರು ಮತ್ತು ಸ್ನೇಹಿತರು ಇಂತಹ ಸಂದರ್ಭಗಳಲ್ಲಿ ಮಾನಸಿಕ ಬೆಂಬಲ ನೀಡುವುದು ಬಹಳ ಮುಖ್ಯ. ಯುವಕರು, ಯುವತಿಯರು ಸಮಸ್ಯೆಗಳಿಗೆ ಅಪಾಯಕಾರಿ ದಾರಿ ಹಿಡಿಯುವ ಬದಲು ಕೌನ್ಸೆಲಿಂಗ್‌ (Counselling) ಮತ್ತು ಮಾನಸಿಕ ಆರೋಗ್ಯ ತಜ್ಞರ ನೆರವು ಪಡೆಯಬೇಕು.


Disclaimer: ಈ ಸುದ್ದಿಯಲ್ಲಿರುವ (ಹೈಟೆನ್ಷನ್ ಕಂಬ ಹತ್ತಿದ ಯುವಕ) ಮಾಹಿತಿ ವಿವಿಧ ಸ್ಥಳೀಯ ಮೂಲಗಳು ಮತ್ತು ಲಭ್ಯ ಮಾಹಿತಿಯ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ತನಿಖೆಯ ಅಂತಿಮ ವರದಿ ಹಾಗೂ ಪೊಲೀಸ್ ಮಾಹಿತಿಯ ಆಧಾರದ ಮೇಲೆ ಮುಂದಿನ ವಿವರಗಳಲ್ಲಿ ಬದಲಾವಣೆ ಸಂಭವಿಸಬಹುದು.

Janaspandhan News
Janaspandhan Newshttp://WWW.janaspandhan.com
Janaspandana News is a digital news platform that reports crime and local news from Karnataka.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments