HomeGeneral Newsಪೋಕ್ಸೋ ಭಯ: ಠಾಣೆಯಲ್ಲೇ ಲಾಕರ್ ಕೀ ನುಂಗಿದ ಆರೋಪಿ; 10ಕೆಜಿ ಬಾಳೆಹಣ್ಣು ತಿನ್ನಿಸಿದ ಪೊಲೀಸರು.
spot_img
spot_img

ಪೋಕ್ಸೋ ಭಯ: ಠಾಣೆಯಲ್ಲೇ ಲಾಕರ್ ಕೀ ನುಂಗಿದ ಆರೋಪಿ; 10ಕೆಜಿ ಬಾಳೆಹಣ್ಣು ತಿನ್ನಿಸಿದ ಪೊಲೀಸರು.

ಜನಸ್ಪಂದನ ನ್ಯೂಸ್‌, ಬೆಂಗಳೂರು : ಪೋಕ್ಸೋ ಕೇಸ್‌ಗೆ ಹೆದರಿ ಆರೋಪಿಯೋರ್ವ ಠಾಣೆಯಲ್ಲೇ ಲಾಕರ್ ಕೀ ನುಂಗಿ ಹೈಡ್ರಾಮಾ ಸೃಷ್ಟಿಸಿದ ಹಿನ್ನಲೆಯಲ್ಲಿ ಪೊಲೀಸರು ಆತನನ್ನು ತಕ್ಷಣ ಆಸ್ಪತ್ರೆ ಸೇರಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಅಪ್ರಾಪ್ತ ಬಾಲಕಿ ನಾಪತ್ತೆ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿಯೊಬ್ಬನು ಠಾಣೆಯಲ್ಲೇ ಹೀಗೆ ವಿಚಿತ್ರ ಕೃತ್ಯ ಎಸಗಿ ಸಂಚಲನ ಮೂಡಿಸಿದ್ದಾನೆ. ಪೋಕ್ಸೋ (POCSO) ಪ್ರಕರಣದ ಭಯದಿಂದ ಮಾದನಾಯಕನಹಳ್ಳಿ ಪೊಲೀಸ್ ಠಾಣೆ (Madanayakanahalli Police Station) ನಲ್ಲಿ ವಿಚಾರಣೆ ವೇಳೆ ಲಾಕರ್ ಕೀ (Locker Key) ನುಂಗಿ ಆತ್ಮಹತ್ಯೆಗೆ (Suicide Attempt) ಯತ್ನಿಸಿದ ಘಟನೆ ನಡೆದಿದೆ.

ಬಳ್ಳಾರಿ ಮೂಲದ ಕಾರ್ತಿಕ್ ಅಲಿಯಾಸ್ ರಾಮು ಎಂಬಾತನೇ ಈ ಪ್ರಕರಣದ ಆರೋಪಿ ಎಂದು ಗುರುತಿಸಲಾಗಿದೆ. 17 ವರ್ಷದ ಅಪ್ರಾಪ್ತ ಬಾಲಕಿಯನ್ನು ಕರೆದುಕೊಂಡು ಹೋದ ಆರೋಪದ ಮೇಲೆ ಪೊಲೀಸರು ಆತನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದರು. ಈ ವೇಳೆ ಪೋಕ್ಸೋ ಕೇಸ್ ಭಯದಿಂದ ಆತ ಅಚಾನಕ್‌ವಾಗಿ ಲಾಕರ್ ಕೀ ನುಂಗಿದ್ದಾನೆ.

ಇದನ್ನು ಓದಿ : ಬೇಸಿಗೆಯಲ್ಲಿ ಮಜ್ಜಿಗೆ ಮತ್ತು ಲಸ್ಸಿ: ದೇಹಕ್ಕೆ ಯಾವುದು ಹೆಚ್ಚು ತಂಪು ಕೊಡುತ್ತದೆ?

ಘಟನೆಯಿಂದ ಬೆಚ್ಚಿಬಿದ್ದ ಪೊಲೀಸರು ತಕ್ಷಣ ಆರೋಪಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿಸಿದ್ದಾರೆ. ಲಾಕಪ್ ಡೆತ್ (Lockup Death) ಆರೋಪದ ಭೀತಿ ಹಿನ್ನೆಲೆಯಲ್ಲಿ ಪೊಲೀಸರು ಮೂರು ದಿನಗಳ ಕಾಲ ಆಸ್ಪತ್ರೆಯಲ್ಲೇ ಕಾವಲು ಕಾಯಬೇಕಾದ ಪರಿಸ್ಥಿತಿ ಎದುರಾಯಿತು.

ಹೊರಗೆ ಬಂದ ಲಾಕರ್ ಕೀ :

ವಿಚಿತ್ರ ಸಂಗತಿ ಏನೆಂದರೆ, ಕೀ ಹೊರಬರುವಂತೆ ಮಾಡಲು ಪೊಲೀಸರು ಆರೋಪಿಗೆ ಸುಮಾರು 10 ಕೆಜಿ ಬಾಳೆಹಣ್ಣು ತಿನ್ನಿಸಿದರೆಂಬ ಮಾಹಿತಿ ಲಭ್ಯವಾಗಿದೆ. ಕೊನೆಗೆ ಮೂರು ದಿನಗಳ ಬಳಿಕ ಮಲದ ಮೂಲಕ ಕೀ ಹೊರಬಂದಿದ್ದು, ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.

ಈ ಘಟನೆ ತಮಾಷೆಯಂತೆ ಕಂಡರೂ, ಸ್ವಲ್ಪ ಹೆಚ್ಚು-ಕಡಿಮೆ ಆಗಿದ್ದರೆ ದೊಡ್ಡ ಸಮಸ್ಯೆಯಾಗಬಹುದಿತ್ತು ಎಂದು ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಬಂಧಿತ ಪೊಲೀಸ್ ಸಿಬ್ಬಂದಿಗೆ ವಾರ್ನಿಂಗ್ ನೀಡಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದ್ದು, ಅಪ್ರಾಪ್ತ ಬಾಲಕಿ ನಾಪತ್ತೆ ಪ್ರಕರಣದ ಬಗ್ಗೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ.

ಪೋಕ್ಸೋ (POCSO) :

  • ಪೋಕ್ಸೋ (POCSO) ಎಂದರೆ Protection of Children from Sexual Offences Act 2012 ಎಂಬ ಕಾನೂನು. ಈ ಕಾನೂನು ಮಕ್ಕಳ ಮೇಲೆ ನಡೆಯುವ ಲೈಂಗಿಕ ಅಪರಾಧಗಳನ್ನು ತಡೆಯಲು ಮತ್ತು ಶಿಕ್ಷಿಸಲು ರೂಪಿಸಲಾಗಿದೆ.
  • 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲ ಮಕ್ಕಳಿಗೆ ಇದು ಅನ್ವಯವಾಗುತ್ತದೆ. ಈ ಕಾಯ್ದೆಯಡಿ ಲೈಂಗಿಕ ದೌರ್ಜನ್ಯ, ಕಿರುಕುಳ (Harassment) ಮತ್ತು ಶೋಷಣೆ (Exploitation) ವಿರುದ್ಧ ಕಠಿಣ ಶಿಕ್ಷೆಗಳಿವೆ.
  • ಪೋಕ್ಸೋ ಕಾನೂನು ಮಕ್ಕಳ ಸುರಕ್ಷತೆ (Child Protection) ಮತ್ತು ಗೌರವವನ್ನು ಕಾಪಾಡಲು ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ ಪ್ರಕರಣಗಳ ವಿಚಾರಣೆ ವೇಗವಾಗಿ ನಡೆಯಲು ವಿಶೇಷ ನ್ಯಾಯಾಲಯಗಳ ವ್ಯವಸ್ಥೆಯೂ ಇದೆ.

ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ

ಒಟ್ಟಿನಲ್ಲಿ, ಪೋಕ್ಸೋ ಕಾಯ್ದೆ ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಅತ್ಯಂತ ಮಹತ್ವದ ಕಾನೂನು ಆಗಿದೆ.


Disclaimer: ಈ ಸುದ್ದಿ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ರಚಿಸಲಾಗಿದೆ. ತನಿಖೆ ಮುಂದುವರಿದಿರುವುದರಿಂದ ಮುಂದಿನ ಅಧಿಕೃತ ಮಾಹಿತಿ ಪ್ರಕಾರ ವಿವರಗಳಲ್ಲಿ ಬದಲಾವಣೆ ಸಾಧ್ಯ.

Janaspandhan News
Janaspandhan Newshttp://WWW.janaspandhan.com
Janaspandana News is a digital news platform that reports crime and local news from Karnataka.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments