ಬಾಲ್ಕನಿಯಿಂದ 1.5 ಕೋಟಿ ರೂ. ಹಣ ಎಸೆದ ಮಹಿಳೆ

ಬಾಲ್ಕನಿಯಿಂದ 1.5 ಕೋಟಿ ರೂ. ಹಣ ಎಸೆದ ಮಹಿಳೆ: ಕಾರಣ ತಿಳಿದರೆ ಆಶ್ಚರ್ಯ.

ಜನಸ್ಪಂದನ ನ್ಯೂಸ್, ಡೆಸ್ಕ್ : ಬಹುಮಹಡಿ ಅಪಾರ್ಟ್‌ಮೆಂಟ್‌ನ ಬಾಲ್ಕನಿಯಿಂದ ಸುಮಾರು 1.5 ಕೋಟಿ ರೂ. ಹಣವನ್ನು ಮಹಿಳೆಯೋರ್ವಳು ಕೆಳಗೆ ಎಸೆದ ಘಟನೆ ನಡೆದಿದ್ದು, ಕಾರಣ ತಿಳಿದರೆ ನೀವು ಖಂಡಿತಾ ಆಶ್ಚರ್ಯ ಪಡುತ್ತಿರಾ. ಬನ್ನಿ ಹಾಗಾದ್ರೆ ಏಕೆ ಮಹಿಳೆ ಹಣವನ್ನು ಕೆಳಗೆ ಎಸೆದಳು ಅಂತ ತಿಳಿಯೋಣ.!

ಮನೆಯಲ್ಲಿ ಗಂಡ-ಹೆಂಡತಿ ನಡುವೆ ಉಂಟಾಗುವ ಸಣ್ಣಪುಟ್ಟ ಜಗಳಗಳು ಸಾಮಾನ್ಯವಾದದ್ದೇ ಆಗಿದ್ದರೂ, ಕೆಲವೊಮ್ಮೆ ಅವು ಅತಿರೇಕದ ಹಂತ ತಲುಪುವ ಘಟನೆಗಳೂ ನಡೆಯುತ್ತವೆ.

ಇದೀಗ ಅಂತಹದೇ ಒಂದು ವಿಚಿತ್ರ ಘಟನೆ ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದ ಶಾಂಟೌ ನಗರದಲ್ಲಿ ನಡೆದಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಲಭ್ಯ ಮಾಹಿತಿಯ ಪ್ರಕಾರ, ಗಂಡ ಮತ್ತು ಹೆಂಡತಿಯ ನಡುವೆ ತೀವ್ರ ವಾಗ್ವಾದ ಉಂಟಾಗಿದೆ. ಈ ಜಗಳದ ಕೋಪದಲ್ಲಿ ಮಹಿಳೆ ಮನೆಯಲ್ಲಿದ್ದ ದೊಡ್ಡ ಮೊತ್ತದ ಹಣವನ್ನು ಬಾಲ್ಕನಿಯಿಂದ ಕೆಳಗೆ ಎಸೆದಿದ್ದಾಳೆ. ಈ ಘಟನೆ ಬಹುಮಹಡಿ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.

ಇದನ್ನು ಓದಿ : ವರದಕ್ಷಿಣೆ ಕಿರುಕುಳ ಶಂಕೆ: ಬೆಳಗಾವಿಯಲ್ಲಿ ವಿವಾಹಿತ ಮಹಿಳೆ ಆತ್ಮಹತ್ಯೆ.

ಮಹಿಳೆ ಎಸೆದ ಹಣದಲ್ಲಿ ಹಾಂಗ್ ಕಾಂಗ್ ಕರೆನ್ಸಿಯ 1,000 ಮುಖಬೆಲೆಯ ನೋಟುಗಳು ಸೇರಿದ್ದು, ಒಟ್ಟು ಮೊತ್ತವು ಸುಮಾರು 162,000 ಹಾಂಗ್ ಕಾಂಗ್ ಡಾಲರ್ ಆಗಿದ್ದು, ಭಾರತೀಯ ರೂಪಾಯಿಯಲ್ಲಿ ಇದು ಸುಮಾರು 1.5 ಕೋಟಿ ರೂಪಾಯಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.

ಮೇಲಿನಿಂದ ಹಣ ಬೀಳುತ್ತಿರುವ ದೃಶ್ಯ ಕಂಡು ರಸ್ತೆಯಲ್ಲಿ ಸಂಚರಿಸುತ್ತಿದ್ದ ಜನರು ಆ ಹಣವನ್ನು ಸಂಗ್ರಹಿಸಲು ಮುಗಿಬಿದ್ದಿದ್ದಾರೆ. ಈ ಘಟನೆ ಕೆಲವೇ ಕ್ಷಣಗಳಲ್ಲಿ ಸ್ಥಳೀಯವಾಗಿ ಸಂಚಾರ ದಟ್ಟಣೆಗೂ ಕಾರಣವಾಗಿದೆ.

ಜನರು ಹಣವನ್ನು ಪಡೆಯಲು ಗುಂಪುಗೂಡಿದ ಹಿನ್ನೆಲೆ ಪರಿಸ್ಥಿತಿ ಗೊಂದಲಮಯವಾಗಿ ಪರಿಣಮಿಸಿದೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದು, ಸಂಗ್ರಹಿಸಿದ ಹಣವನ್ನು ವಾಪಸ್ ನೀಡುವಂತೆ ತಿಳಿಸಿದ್ದಾರೆ. ಚೀನಾದಲ್ಲಿ ಸಿಸಿಟಿವಿ ಕಣ್ಗಾವಲು ವ್ಯವಸ್ಥೆ ವ್ಯಾಪಕವಾಗಿರುವುದರಿಂದ, ಹಣವನ್ನು ತೆಗೆದುಕೊಂಡವರನ್ನು ಗುರುತಿಸುವುದು ಸುಲಭವಾಗಿದ್ದು, ಹೆಚ್ಚಿನ ಮೊತ್ತವನ್ನು ಈಗಾಗಲೇ ಸಂಬಂಧಿತ ಮಹಿಳೆಗೆ ಹಿಂತಿರುಗಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಹೆಚ್ಚಿನ ಬ್ರೇಕಿಂಗ್ ನ್ಯೂಸ್‌ಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಈ ಘಟನೆ ದಾಂಪತ್ಯ ಜೀವನದಲ್ಲಿ ಕ್ಷಣಿಕ ಕೋಪ ಹೇಗೆ ಅತಿರೇಕದ ನಿರ್ಧಾರಗಳಿಗೆ ಕಾರಣವಾಗಬಹುದು ಎಂಬುದಕ್ಕೆ ಉದಾಹರಣೆಯಾಗಿ ಪರಿಣಮಿಸಿದೆ. ಜೊತೆಗೆ, ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದ್ದು, ಜನರಿಂದ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಬಾಲ್ಕನಿಯಿಂದ 1.5 ಕೋಟಿ ರೂ. ಹಣ ಎಸೆದ ಮಹಿಳೆ ವಿಡಿಯೋ :

Courtesy : Social Media / Twitter


Disclaimer: ಈ ಸುದ್ದಿ (ಬಾಲ್ಕನಿಯಿಂದ 1.5 ಕೋಟಿ ರೂ. ಹಣ ಎಸೆದ ಮಹಿಳೆ) ಸಾರ್ವಜನಿಕವಾಗಿ ಲಭ್ಯವಿರುವ ವರದಿಗಳು ಮತ್ತು ಮಾಹಿತಿಗಳ ಆಧಾರದ ಮೇಲೆ ರಚಿಸಲಾಗಿದೆ. ಯಾವುದೇ ವ್ಯಕ್ತಿ ಅಥವಾ ಘಟನೆಯನ್ನು ತಪ್ಪಾಗಿ ಚಿತ್ರಿಸುವ ಉದ್ದೇಶವಿಲ್ಲ. ಮಾಹಿತಿ ಸಮಯದೊಂದಿಗೆ ಬದಲಾಗುವ ಸಾಧ್ಯತೆ ಇದೆ. ಈ ಲೇಖನವು ಮಾಹಿತಿ ಉದ್ದೇಶಕ್ಕಾಗಿ ಮಾತ್ರವಾಗಿದ್ದು, ಇದನ್ನು ಅಧಿಕೃತ ದೃಢೀಕರಣವೆಂದು ಪರಿಗಣಿಸಬಾರದು.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top