ಬೆಂಟ್ಲಿ ಕಾರು ಕಂಡ ಕ್ಷಣ ಆಕೆಯ ರಿಯಾಕ್ಷನ್ ವೈರಲ್

ಹೂ ಕೊಟ್ಟಾಗ ಬಟ್ಟೆ ನೋಡಿ ತಿರಸ್ಕಾರ; ಬೆಂಟ್ಲಿ ಕಾರು ಕಂಡ ಕ್ಷಣ ಆಕೆಯ ರಿಯಾಕ್ಷನ್ ವೈರಲ್!

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಪ್ರೀತಿ ಎಂದರೆ ಹೃದಯಗಳ ನಡುವಿನ ಬಂಧ ಎಂದು ಹಲವರು ನಂಬುತ್ತಾರೆ. ಆದರೆ ನೈಜ ಜೀವನದಲ್ಲಿ ಹಣ ಮತ್ತು ಸ್ಥಾನಮಾನವೂ ಸಂಬಂಧಗಳಿಗೆ ಪ್ರಭಾವ ಬೀರುತ್ತವೆ ಎಂಬುದನ್ನು ಸೂಚಿಸುವ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಚೀನಾದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಈ ಘಟನೆಯ ವಿಡಿಯೋದಲ್ಲಿ, ಸಾಮಾನ್ಯ ವೇಷಭೂಷಣದಲ್ಲಿದ್ದ ಯುವಕನೊಬ್ಬ ಏರ್‌ಹೋಸ್ಟೆಸ್‌ ಆಗಿ ಕೆಲಸ ಮಾಡುತ್ತಿದ್ದ ಯುವತಿಯ ಮುಂದೆ ಹೂವಿನ ದೊಡ್ಡ ಬೊಕ್ಕೆಯನ್ನು ನೀಡಿ ಪ್ರೇಮ ನಿವೇದನೆ ಮಾಡುತ್ತಿರುವುದು ಕಾಣಿಸುತ್ತದೆ.

ಆತ ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡರೂ, ಆತನ ಸರಳ ವೇಷಭೂಷಣೆ ಮತ್ತು ಸಾಮಾನ್ಯ ಕಾಣಿಕೆಯ ಹಿನ್ನೆಲೆಯಲ್ಲಿ ಆ ಯುವತಿ ಆತನ ಪ್ರಪೋಸಲ್ ಅನ್ನು ನೇರವಾಗಿ ತಿರಸ್ಕರಿಸುತ್ತಾಳೆ.

“ನಾನು ನಿನ್ನನ್ನು ಮದುವೆಯಾಗಲು ಸಾಧ್ಯವಿಲ್ಲ” ಎಂದು ಸ್ಪಷ್ಟವಾಗಿ ಹೇಳಿದ ಆಕೆ, ಯಾವುದೇ ಸಂಕೋಚವಿಲ್ಲದೆ ಅಲ್ಲಿಂದ ಹಿಂದೆ ಸರಿಯುವ ದೃಶ್ಯ ಕೂಡ ವಿಡಿಯೋದಲ್ಲಿ ಸೆರೆಯಾಗಿದೆ. ಈ ಘಟನೆಗೆ ಸಾಕ್ಷಿಯಾದವರು ಕೂಡ ಆ ಕ್ಷಣವನ್ನು ಕುತೂಹಲದಿಂದ ಗಮನಿಸುತ್ತಿರುವುದು ಕಂಡುಬರುತ್ತದೆ.

ಈ ಸುದ್ದಿನೂ ಓದಿ : “ನೋ ಜಿಮ್, ನೋ ಡಯಟ್; ಕಪ್ಪು ಕವುನಿ ಅಕ್ಕಿ ಗಂಜಿ ತೂಕ ಇಳಿಕೆಗೆ ಸಹಾಯಕವೇ?”

ಆದರೆ, ಕೆಲವು ಕ್ಷಣಗಳಲ್ಲೇ ಪರಿಸ್ಥಿತಿ ತೀವ್ರ ತಿರುವು ಪಡೆಯುತ್ತದೆ. ಆ ಸ್ಥಳಕ್ಕೆ ಅತಿ ಐಷಾರಾಮಿ ‘ಬೆಂಟ್ಲಿ ಕಾರುʼ ಆಗಮಿಸುತ್ತದೆ. ಕಾರಿನಿಂದ ಇಳಿದ ಚಾಲಕ ನೇರವಾಗಿ ಆ ಯುವಕನ ಬಳಿ ಬಂದು ಗೌರವದಿಂದ ವರ್ತಿಸಿ, ಆತನಿಗಾಗಿ ಕಾರಿನ ಬಾಗಿಲನ್ನು ತೆರೆಯುತ್ತಾನೆ. ಇದನ್ನು ಕಂಡ ಏರ್‌ಹೋಸ್ಟೆಸ್‌ ಅಚ್ಚರಿಗೊಂಡು ನಿಂತುಕೊಳ್ಳುತ್ತಾಳೆ.

ಬೆಂಟ್ಲಿ ಕಾರು ಕಂಡ ಕ್ಷಣದಲ್ಲೇ ಆಕೆ ತಾನು ತಿರಸ್ಕರಿಸಿದ್ದ ಯುವಕ ಸಾಮಾನ್ಯ ವ್ಯಕ್ತಿಯಲ್ಲ, ಬದಲಿಗೆ ಶ್ರೀಮಂತ ವ್ಯಕ್ತಿ ಎಂಬುದು ಅರಿಯುತ್ತಾಳೆ. ತಕ್ಷಣವೇ ತನ್ನ ನಿರ್ಧಾರವನ್ನು ಬದಲಿಸಲು ಯತ್ನಿಸಿ, ಆತನೊಂದಿಗೆ ಮಾತನಾಡಲು ಮುಂದಾಗುತ್ತಾಳೆ.

ಆದರೆ ಯುವಕ ಆಕೆಯನ್ನು ಗಮನಿಸದೇ, ಮೌನವಾಗಿಯೇ ಕಾರಿನಲ್ಲಿ ಕುಳಿತು ಅಲ್ಲಿಂದ ತೆರಳುತ್ತಾನೆ. ಆಕೆಯ ವರ್ತನೆ ಹಣ ಮತ್ತು ಸ್ಥಾನಮಾನವನ್ನು ಆಧರಿಸಿದೆ ಎಂಬ ಸಂದೇಶವನ್ನು ಆತ ನೀಡಿದಂತಾಗುತ್ತದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲ್ಪಡುತ್ತಿದ್ದು, ನೆಟ್ಟಿಗರ ನಡುವೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ಯುವಕನ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿ, “ಸರಿಯಾದ ಪಾಠ ಕಲಿಸಿದ್ದಾನೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಬೆಂಟ್ಲಿ ಕಾರು ಕಂಡ ಏರ್‌ಹೋಸ್ಟೆಸ್‌ ರಿಯಾಕ್ಷನ್ ವಿಡಿಯೋ:

Courtesy : Social Media / Twitter

ಇನ್ನು ಕೆಲವರು ಈ ಘಟನೆ ನಿಜವಾಗಿಯೇ ನಡೆದಿದೆಯೇ ಅಥವಾ ಕೇವಲ ಸಾಮಾಜಿಕ ಜಾಗೃತಿ ಅಥವಾ ವೈರಲ್ ಉದ್ದೇಶಕ್ಕಾಗಿ ಸೃಷ್ಟಿಸಲಾದ ‘ಸ್ಟೇಜ್ಡ್’ ವಿಡಿಯೋವೋ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ : ಹಾವಿಗೆ ಕಿಸ್ ಮಾಡಲು ಹೋದ ಯುವಕ; ವಿಡಿಯೋ ನೋಡಿ ಬೆಚ್ಚಿಬಿದ್ದ ನೆಟ್ಟಿಗರು.

ಈ ಘಟನೆ ನಡೆದ ನಿಖರ ಸ್ಥಳ, ವಿಡಿಯೋದಲ್ಲಿರುವ ವ್ಯಕ್ತಿಗಳ ವಿವರಗಳ ಕುರಿತು ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದರೂ, ಈಗೀನ ಪ್ರೀತಿ ಸಂಬಂಧಗಳಲ್ಲಿ ವ್ಯಕ್ತಿತ್ವ ಮತ್ತು ಗುಣಕ್ಕಿಂತ ಹಣವೇ ಮುಖ್ಯ ಎಂಬ ಸಂದೇಶವನ್ನು ಈ ವಿಡಿಯೋ ಸಾರುತ್ತದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.


ಗಮನಿಸಿ : ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಆಧಾರದ ಮೇಲೆ ಈ ಸುದ್ದಿ (ಬೆಂಟ್ಲಿ ಕಾರು ಕಂಡ ಕ್ಷಣ ಆಕೆಯ ರಿಯಾಕ್ಷನ್) ನೀಡಲಾಗಿದೆ. ಘಟನೆಯ ಪ್ರಾಮಾಣಿಕತೆ ಬಗ್ಗೆ ಅಧಿಕೃತ ದೃಢೀಕರಣ ಲಭ್ಯವಿಲ್ಲ.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top