Sunday, September 8, 2024
spot_img
spot_img
spot_img
spot_img
spot_img
spot_img
spot_img

2 ವರ್ಷದಿಂದ ಲೈಂಗಿಕ ಕ್ರಿಯೆ ನಡೆಸಿಲ್ಲ ಎಂದು SI ಪತಿಯ ವಿರುದ್ಧ ಠಾಣೆಯ ಮುಂದೆ ಪತ್ನಿಯ ಪ್ರತಿಭಟನೆ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಮಹಿಳೆಯೋರ್ವರು, ಕಳೆದ ಎರಡು ವರ್ಷಗಳಿಂದ ತನ್ನೊಂದಿಗೆ ಲೈಂಗಿಕ ಸಂಬಂಧ (sexual relationship) ಹೊಂದಿಲ್ಲ ಎಂದು ಪೊಲೀಸ್ ಗಂಡನ ವಿರುದ್ಧ ಆರೋಪಿಸಿದ್ದು, ತೆಲುಗು ರಾಜ್ಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ನನ್ನಿಬ್ಬರು ಮಕ್ಕಳಿಂದಲೂ ನನ್ನನ್ನು ದೂರವಿಟ್ಟಿದ್ದಾರೆ ಎಂದು ಆರೋಪಿಸಿರುವ ಮಾನಸ ಎಂಬ ಮಹಿಳೆ, ಪತಿ ಬೇರೊಬ್ಬ ಮಹಿಳೆಯನ್ನು ಮದುವೆಯಾಗಿರುವ ಕಾರಣಕ್ಕೆ ನನ್ನನ್ನೂ ದೂರ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನು ಓದಿ : 10th ಪಾಸಾಗಿದ್ದೀರಾ : ತಿಂಗಳಿಗೆ ರೂ.14,480 ಹಣದೊಂದಿಗೆ ITI ತತ್ಸಮಾನ ಪ್ರಮಾಣಪತ್ರ.!

ಗಂಡನ ವಿರುದ್ಧ ಮಾನಸ ಆರೋಪ ಮಾಡಿದ್ದು, ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದರೂ ನಿರ್ಲಕ್ಷಿಸಲಾಗುತ್ತಿದೆ (neglected) ಎಂದು ಠಾಣೆಯ ಮುಂದೆಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.

ಮಾನಸ ಮತ್ತು ನಾಗರಾಜು ಇಬ್ಬರು ಕರೀಂನಗರ ಜಿಲ್ಲೆಗೆ ಸೇರಿದವರು. ಹತ್ತು ವರ್ಷಗಳ ಹಿಂದೆಯೇ ವಿವಾಹವಾದರು (marriage). ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

ಆದರೆ ಎರಡು ವರ್ಷಗಳ ಹಿಂದೆ ಎಸ್‌ಐ ನಾಗರಾಜು ಬೇರೊಬ್ಬ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಇಟ್ಟುಕೊಂಡು ಮಾನಸಾಳಿಗೆ ಕಿರುಕುಳ (harassment) ನೀಡುತ್ತಿದ್ದ. ಅಲ್ಲದೆ, ಪತ್ನಿ ಮತ್ತು ಮಕ್ಕಳನ್ನು ತನ್ನೊಂದಿಗೆ ಇರಿಸಿಕೊಳ್ಳದೇ ಕರೀಂನಗರದಲ್ಲಿ ಇರಿಸಿದ್ದ. ಯಾರಿಗೂ ಅನುಮಾನ ಬರಬಾರದು ಅಂತ ಆಗಾಗ ಕರೀಂನಗರಕ್ಕೆ ಬರುತ್ತಿದ್ದ.

ಈ ನಡುವೆ ಸಂಬಂಧ ಹೊಂದಿದ್ದ ಮಹಿಳೆಯೊಂದಿಗೆ ನಾಗರಾಜು ಎರಡನೇ ಮದುವೆಯಾಗಿದ್ದು, ಎರಡು ತಿಂಗಳ ಹಿಂದೆ ಕರೀಂನಗರಕ್ಕೆ ಬಂದು ಮಕ್ಕಳನ್ನು ಬಲವಂತವಾಗಿ (forcible) ಕರೆದೊಯ್ದಿದ್ದಾರೆ ಎಂದು ಮಾನಸ ಆರೋಪಿಸಿದ್ದಾರೆ.

ಇನ್ನೂ ಮಕ್ಕಳು ಎಲ್ಲಿದ್ದಾರೆ ಎಂದು ಹೇಳುತ್ತಿಲ್ಲ. ವಿಚ್ಛೇದನ (divorce) ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಮಾನಸ ಅಧಿಕಾರಿಗಳಿಗೆ ಪತ್ರ ಬರೆದಿರುವುದಾಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನು ಓದಿ : SSLCಯಲ್ಲಿ 625ಕ್ಕೆ 623 ಅಂಕ : ಕೋರ್ಟ್‌ನಲ್ಲಿ ಕೆಲಸ ; ಓದಕ್ಕೂ ಬರೆಯಕ್ಕೂ ಬರೊಲ್ಲ.!

ಎಸ್‌ಐ ನಾಗರಾಜು ಮತ್ತು ಎರಡನೇ ಪತ್ನಿಯಿಂದಾಗಿ ಇಬ್ಬರು ಮಕ್ಕಳು ಅಪಾಯದಲ್ಲಿದ್ದು, ಮಕ್ಕಳಿಗೆ ನ್ಯಾಯ ಕೊಡಿಸುವಂತೆ ಕೋಮುರವಳ್ಳಿ ಪೊಲೀಸ್ ಠಾಣೆ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು. ಎಸ್‌ಐ ನಾಗರಾಜು ರಜೆಯಲ್ಲಿರುವುದಾಗಿ ಠಾಣೆ ಸಿಬ್ಬಂದಿ ಇದೇ ಸಂದರ್ಭದಲ್ಲಿ ತಿಳಿಸಿದರು. ಆದರೂ ನ್ಯಾಯ ಸಿಗುವವರೆಗೂ ಪ್ರತಿಭಟನೆ ನಡೆಸುವುದಾಗಿ ಮಾಸನ ಹೇಳಿದ್ದಾರೆ.

ಈ ಕುರಿತು ಅವರನ್ನು ಸಂಪರ್ಕಿಸಿದಾಗ ಮಾನಸ ಅವರು ಇತ್ತೀಚೆಗೆ ತಮ್ಮ ಗಮನಕ್ಕೆ ತಂದಿದ್ದಾರೆ. ಕೌನ್ಸೆಲಿಂಗ್ ನಡೆಸಲಾಗಿದ್ದು, ಮೇಲಧಿಕಾರಿಗಳ ಆದೇಶದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಐ ಶ್ರೀನು ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img