Friday, June 14, 2024
spot_img
spot_img
spot_img
spot_img
spot_img
spot_img

ಚಲಿಸುತ್ತಿರುವ ಬೈಕ್‌ನಲ್ಲಿ ಜೋಡಿಯ ಕಿಸ್ಸಿಂಗ್ ; video viral.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ತಮ್ಮ ಪ್ರೀತಿಯನ್ನು ಜನರಿಗೆ ತೋರಿಸಲು ಹೋಗಿ ಪ್ರೇಮಿಗಳಿಬ್ಬರು (lover’s) ಪೊಲೀಸರ ಅತಿಥಿಯಾಗಿದ್ದಾರೆ.

ಏನಿದು ಘಟನೆ ಅಂತೀರಾ.? ಹಾಗಾದ್ರೆ ತಿಳಿಯೋಣ ಬನ್ನಿ.
ಜೋಡಿಯೊಂದು ರಸ್ತೆ ಮೇಲೆ ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಪರಸ್ಪರ ಕಿಸ್ ಮಾಡಿದ್ದು ಇವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ ಆಗಿದೆ.

ಇದನ್ನು ಓದಿ : ​”ನನ್ನ ಹುಡುಗ ನನ್ನಿಂದ ದೂರ ಆಗಲಿ, IAS ಅಧಿಕಾರಿ ಜೊತೆ ಮದುವೆ ಮಾಡಿಸು” ; ಬನಶಂಕರಿದೇವಿಗೆ ಯುವತಿಯ ಮನವಿ.!

ರಾಜಸ್ಥಾನದ ಕೋಟಾದಲ್ಲಿ ಈ ಘಟನೆ ನಡೆದಿದ್ದು, ವೈರಲ್ ಆದ ವೀಡಿಯೋದಲ್ಲಿ ಪ್ರೇಮಿಗಳಿಬ್ಬರು ಚಲಿಸುವ (riding) ಬೈಕ್‌ನಲ್ಲೇ ಸರಸವಾಡಿದ್ದಾರೆ. ಈ ಬೈಕ್ ಹಿಂದೆ ಚಲಿಸುತ್ತಿದ್ದ ಇತರ ವಾಹನ ಸವಾರರು ಘಟನೆಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.

ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಜೋಡಿಯನ್ನು (pair) ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ದು ಅಲ್ಲಿ ಕ್ಷಮೆ ಕೇಳಿಸಿ ಬಿಟ್ಟು ಕಳುಹಿಸಿದ್ದಾರೆ.

ಆದರೆ ಜೋಡಿಯ ಕಿಸ್ಸಿಂಗ್ ವಿಡಿಯೋ ಹಾಗೂ ಕ್ಷಮೆ (sorry) ಕೇಳಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಯುವತಿಯನ್ನು ಬೈಕ್‌ ಮುಂಭಾಗದಲ್ಲಿ ತನ್ನತ್ತ ಮುಖ ಮಾಡಿ ಯುವಕ ಕೂರಿಸಿದ್ದು, ಬೈಕ್ ಚಾಲನೆಯಲ್ಲಿರುವಾಗಲೇ ಇಬ್ಬರು ಕಿಸ್ಸಿಂಗ್‌ನಲ್ಲಿ ಮಗ್ನರಾಗಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಇದನ್ನು ಓದಿ : ಮೊಬೈಲ್ ಚಾರ್ಜ್ ಬೇಗನೆ ಖಾಲಿಯಾಗ್ತಿದೆಯಾ? ಈ ರೀತಿ ಸೆಟ್ಟಿಂಗ್ಸ್ ಚೇಂಜ್ ಮಾಡಿ.!

ಅಲ್ಲದೇ ಅವರು ಕ್ಷಮೆ ಕೇಳುವ ವೀಡಿಯೋ ಕೂಡ ವೈರಲ್ ಆಗಿದೆ. ನಾವು ರಸ್ತೆಯಲ್ಲಿ ಚಲಿಸುವ ಬೈಕ್‌ನಲ್ಲಿ ಅಸಭ್ಯವಾಗಿ ವರ್ತಿಸಿದ್ದು, ನಮ್ಮ ಜೀವಕ್ಕೆ ಅಪಾಯ (danger) ತರುವುದರ ಜೊತೆಗೆ ರಸ್ತೆಯಲ್ಲಿ ಸಾಗುವ ಇತರರ ಜೀವಕ್ಕೂ ಅಪಾಯವಾಗುವಂತೆ ಮಾಡಿದ್ದೇವೆ. ಇಂತಹ ಘಟನೆಯನ್ನು ನಾವು ಇನ್ನು ಮುಂದೆ ಮಾಡುವುದಿಲ್ಲ ಎಂದು ಪೊಲೀಸ್ ಠಾಣೆಯಲ್ಲಿ ಕ್ಷಮೆ ಕೇಳಿದ್ದಾರೆ.

spot_img
spot_img
- Advertisment -spot_img