Friday, June 14, 2024
spot_img
spot_img
spot_img
spot_img
spot_img
spot_img

ಮೊಬೈಲ್ ಚಾರ್ಜ್ ಬೇಗನೆ ಖಾಲಿಯಾಗ್ತಿದೆಯಾ? ಈ ರೀತಿ ಸೆಟ್ಟಿಂಗ್ಸ್ ಚೇಂಜ್ ಮಾಡಿ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ನಮಗೆ ಸ್ಮಾರ್ಟ್​ಫೋನ್ (Smartphone) ಹೇಗೆ ಅಗತ್ಯವಾಗಿದೆಯೋ, ಅದನ್ನು ಬಳಕೆ ಮಾಡುವ ವಿಧಾನ ಸಹ ಬಹಳ ಮುಖ್ಯವಾಗಿರುತ್ತದೆ.

ಆದ್ರೆ ಸ್ಮಾರ್ಟ್​​ಫೋನ್​ ಬಳಸುವಾಗ ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಹೀಗಿದ್ರೆ ಮಾತ್ರ ನಿಮ್ಮ ಸ್ಮಾರ್ಟ್​ಫೋನ್​​ ಸುರಕ್ಷಿತವಾಗಿರುತ್ತದೆ (Safety).

ಇದನ್ನು ಓದಿ : Special news : ಮದುವೆಯಾಗದೇ ಏಕಾಂಗಿ ಜೀವನ ನಡೆಸಲು ಇಷ್ಟ ಪಡುತ್ತಾರೆ ಈ 4 ರಾಶಿಯವರು.!

ಕೆಲವರು ತಮ್ಮ ಸ್ಮಾರ್ಟ್​ಫೋನ್​ಗಳ ಚಾರ್ಜ್ ಬೇಗ ಖಾಲಿಯಾಗುತ್ತೆ, ಸ್ಪೀಡ್ ಚಾರ್ಜ್ ಆಗೋದೆ ಇಲ್ಲ ಎಂದು ಚಿಂತಿಸುತ್ತಾರೆ. ಅದಕ್ಕಾಗಿ ಈ ಟಿಪ್ಸ್ ಫಾಲೋ (Follow) ಮಾಡಿದ್ರೆ ನಿಮ್ಮ ಸ್ಮಾರ್ಟ್​​ಫೋನ್​ ಸ್ಪೀಡ್​ ಚಾರ್ಜ್ ಆಗುತ್ತೆ.

ಸ್ಮಾರ್ಟ್​​ಫೋನ್​ ಚಾರ್ಜ್​ನಲ್ಲಿಡುವಾಗ ಕೆಲವರು ಬ್ಲೂಟೂತ್​ ಆನ್​ (Bluetooth) ಮಾಡಿ ಇಡುತ್ತಾರೆ. ಯಾಕಂದ್ರೆ ಕೆಲವರು ಸ್ಮಾರ್ಟ್​ವಾಚ್​, ಇಯರ್​ಬಡ್ಸ್​ ಈ ರೀತಿಯ ಸಾಧನಗಳಿಗೆ ಕನೆಕ್ಟ್​ (Connect) ಮಾಡಿರುತ್ತಾರೆ. ಅದಕ್ಕಾಗಿ ಬ್ಲೂಟೂತ್​ ಆಫ್ ಮಾಡಲು ಮರೆತೇ ಬಿಡುತ್ತಾರೆ. ಆದ್ರೆ ಬ್ಲೂಟೂತ್ ಆಫ್​ ಮಾಡಿ ಮೊಬೈಲ್​ ಚಾರ್ಜ್​ಗೆ ಇಟ್ರೆ ಚಾರ್ಜಿಂಗ್ ಸ್ಪೀಡ್ ಆಗುತ್ತದೆ.

ಇನ್ನು ಕೆಲವರು ಸ್ಮಾರ್ಟ್​​ಫೋನ್​ ಚಾರ್ಜ್​ನಲ್ಲಿಡುವಾಗ ಲ್ಯಾಪ್‌ಟಾಪ್ ಕೇಬಲ್, ಪವರ್ ಬ್ಯಾಂಕ್ ಬಳಸುತ್ತಾರೆ. ಆದರೆ ವಾಲ್ ಚಾರ್ಜರ್ ಇಟ್ಟು ಚಾರ್ಜ್ (Charge) ಮಾಡಿದ್ರೆ ಸ್ಪೀಡ್ ಆಗಿ ಚಾರ್ಜ್ ಆಗುತ್ತದೆ.

ಇನ್ನು ನೀವು ಸ್ಮಾರ್ಟ್​ಫೋನ್​ಗಳನ್ನು ಚಾರ್ಜ್​ನಲ್ಲಿಡುವಾಗ ಮೊದಲು ನಿಮ್ಮ ಮೊಬೈಲ್​ ಅನ್ನು ಸ್ವಿಚ್ ಆಫ್ (Switch off) ಮಾಡಿ. ಇದರಿಂದ ನಿಮ್ಮ ಸ್ಮಾರ್ಟ್​ಫೋನ್ ವೇಗವಾಗಿ ಚಾರ್ಜ್ ಆಗುತ್ತೆ.

ಕೆಲವರಂತೂ ವೈರ್​ಲೆಸ್​ ಚಾರ್ಜರ್ ಅನ್ನು ಬಳಸುತ್ತಾರೆ. ಆದ್ರೆ ಇದು ವಾಲ್​ ಚಾರ್ಜರ್​ಗಿಂತ ಸ್ಪೀಡ್​ ಆಗಿ ನಿಮ್ಮ ಮೊಬೈಲ್ ಅನ್ನು ಚಾರ್ಜ್​ ಮಾಡೋದಿಲ್ಲ. ಆದ್ದರಿಂದ ವೈರ್​ಲೆಸ್ ಚಾರ್ಜರ್​ ಅನ್ನು ಬಳಸಬಾರದು.

ಮೊಬೈಲ್​ ಚಾರ್ಜ್​ನಲ್ಲಿಟ್ಟಾಗ ಚಾರ್ಜ್​ ಸ್ಲೋ ಆಗ್ತಿದೆ ಅಂದ್ರೆ ಮೊಬೈಲ್​ನಲ್ಲಿ ಏರೋಪ್ಲೇನ್​ ಮೋಡ್ ಅನ್ನು ಆನ್​ ಮಾಡ್ಬಹುದು. ಇನ್ನು ಇದರಿಂದ ನಿಮ್ಮ ಸ್ಮಾರ್ಟ್​ಫೋನ್​ ಬಹಳ ಬೇಗನೆ ಚಾರ್ಜ್​ ಸಹ ಆಗುತ್ತದೆ.

ಹೆಚ್ಚಿನವರು ಮೊಬೈಲ್​​ಗಳಲ್ಲಿ ಹಲವಾರು ಅಪ್ಲಿಕೇಶನ್​ ಅನ್ನು ಬಳಸ್ತಾರೆ. ಆದ್ರೆ ಬಳಸಿದ ನಂತರ ಅದರಿಂದ ಡೈರೆಕ್ಟ್​ ಆಗಿ ಬ್ಯಾಕ್ ಬರ್ತಾರೆ. ಆದ್ರೆ ಕ್ಲಿಯರ್ ಮಾಡಲು ಹೋಗಲ್ಲ.

ಇದರಿಂದ ಬ್ಯಾಗ್​ರೌಂಡ್​ನಲ್ಲಿ (Background) ಆ ಆ್ಯಪ್​ಗಳು ರನ್ ಆಗುತ್ತಿರುತ್ತದೆ. ಇದರಿಂದ ಫೋನ್ ಚಾರ್ಜಿಂಗ್​ ಸ್ಲೋ ಆಗಬಹುದು. ಆದ್ರೆ ಆ್ಯಪ್​ಗಳನ್ನು ಬಳಸಿ ಕ್ಲಿಯರ್ ಮಾಡಿದ್ರೆ ಚಾರ್ಜಿಂಗ್ ಸ್ಪೀಡ್ ಆಗುತ್ತೆ.

ಇನ್ನೂ ಬ್ಯಾಟರಿ ಬೇಗನೆ ಖಾಲಿಯಾಗುತ್ತಿದ್ದರೆ, ಆಂಡ್ರಾಯ್ಡ್​ ಫೋನ್​ನಲ್ಲಿ ನೀವು ಸೆಟ್ಟಿಂಗ್‌ಗಳು > ಬ್ಯಾಟರಿ > ಬ್ಯಾಟರಿ ಬಳಕೆಗೆ ಹೋಗಬೇಕು. ನೀವು iOS ಬಳಕೆದಾರರಾಗಿದ್ದರೆ ಸೆಟ್ಟಿಂಗ್‌ಗಳು > ಬ್ಯಾಟರಿ ಆಯ್ಕೆಗೆ ಹೋಗಿ. ಬ್ಯಾಟರಿ ಸೇವರ್ ಮೋಡ್ ಅನ್ನು ಆನ್ ಮಾಡಿ.

ಇದು ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಸೇವರ್ ಅಥವಾ ಪವರ್ ಸೇವಿಂಗ್ ಮೋಡ್‌ನೊಂದಿಗೆ ಬರುತ್ತದೆ. ಇದರಿಂದ ನಿಮ್ಮ ಬ್ಯಾಟರಿ ಬಾಳಿಕೆಯನ್ನು ಹೆಚ್ಚಿಸಬಹುದು.

ಇದನ್ನು ಓದಿ : ಅಂಜಲಿ ಅಂಬಿಗೇರ ಮರ್ಡರ್ ಕೇಸ್ ; DCP ಸಸ್ಪೆಂಡ್.!

ನಿಮ್ಮ ಫೋನ್‌ನ ಬ್ಯಾಟರಿ ಮಟ್ಟವನ್ನು 20-80% ನಡುವೆ ಇರಿಸುವುದರಿಂದ ಬ್ಯಾಟರಿ ಉತ್ತಮವಾಗಿರುತ್ತದೆ. ನಿಮ್ಮ ಬ್ಯಾಟರಿ 20% ತಲುಪಿದಾಗ ಚಾರ್ಜ್​ಗೆ ಹಾಕಿ.

ಅಲ್ಲದೇ ಬ್ಯಾಟರಿಗೆ ಹಾನಿಯಾಗುವುದನ್ನು ತಪ್ಪಿಸಲು, ಅದನ್ನು 80% ವರೆಗೆ ಮಾತ್ರ ಚಾರ್ಜ್ ಮಾಡಿ. ರಾತ್ರಿ ಪೂರ್ತಿ ಮೊಬೈಲ್ ಅನ್ನು ಚಾರ್ಜ್​ಗೆ ಹಾಕುವುದು ಒಳ್ಳೆಯದಲ್ಲ ಎಂಬುದು ತಜ್ಞರ ಅಭಿಪ್ರಾಯ.

 

spot_img
spot_img
- Advertisment -spot_img