Friday, June 14, 2024
spot_img
spot_img
spot_img
spot_img
spot_img
spot_img

15 ವರ್ಷದ ಹಿಂದೆ ವ್ಯಕ್ತಿಯ ಮದುವೆಗೆ ಹೋಗಿದ್ದ ಬಾಲಕಿ, ಈಗ ಆತನ‌ 3ನೇ ಮಡದಿ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ನಾವು ನಮ್ಮ ಸುತ್ತಮುತ್ತ ಎಷ್ಟೋ ಜನ ದಂಪತಿಗಳನ್ನು ನೋಡಿರ್ತಿವಿ. ಕೆಲವು ಜೋಡಿಗಳಿಗೆ (couples) ಯಾವುದೇ ಹೊಂದಾಣಿಕೆಯೆ ಇರುವುದಿಲ್ಲ. ಗಂಡ ಎತ್ತರವಾಗಿದ್ದರೆ ಅವನ ಹೆಂಡತಿ ಕುಳ್ಳಗಿರುತ್ತಾಳೆ. ಗಂಡ ಕಪ್ಪಗಿದ್ದರೆ ಹೆಂಡತಿ ಬೆಳ್ಳಗಿರುತ್ತಾಳೆ. ಪತಿ ದೊಡ್ಡವನಾಗಿದ್ದರೆ ಅವನ ಹೆಂಡತಿ ಅವನಿಗಿಂತ ಚಿಕ್ಕವಳು.

ಆದರೆ ಇಲ್ಲೊಂದು ಜೋಡಿಯ ನಡುವೆ ವಯಸ್ಸಿನ ವ್ಯತ್ಯಾಸ (difference) ಎಷ್ಟಿತ್ತೆಂದರೆ ಜನ ಇವರನ್ನು ಅಪ್ಪ-ಮಗಳ ಜೋಡಿ ಎಂದೇ ಪರಿಗಣಿಸುತ್ತಾರೆ ಎಂಬುದು ಸುಳ್ಳಲ್ಲ.

ಇದನ್ನು ಓದಿ : ಇನ್ಸ್‌ಪೆಕ್ಟರ್ ಹಾಗೂ ACPಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ ಕಾನ್ಸ್‌ಟೇಬಲ್.!

ಈ ಜೋಡಿಯ ವಯಸ್ಸಿನ ವ್ಯತ್ಯಾಸ 38 ವರ್ಷಗಳು. ಪತಿಗೆ 62 ವರ್ಷವಾದರೆ, ಪತ್ನಿಗೆ 24 ವರ್ಷ. ಇನ್ನೂ ಇದು ಆ ವ್ಯಕ್ತಿಯ ಮೂರನೇ ಮದುವೆ (third marriage). ಈತ 24 ವರ್ಷದ ಯುವತಿಯನ್ನು ಮೂರನೇ ಮದುವೆ ಆಗಿದ್ದಾನೆ.

ಇಂಡೋನೇಷ್ಯಾದ ಬಂಕಾ ದ್ವೀಪದಿಂದ (island) ಇವರಿಬ್ಬರ ಮದುವೆಗೆ ಸಂಬಂಧಿಸಿದ ಇಂಟರೆಸ್ಟಿಂಗ್ ಸ್ಟೋರಿ ಕೂಡ ಬೆಳಕಿಗೆ ಬಂದಿದೆ.

ರೆನೆಟಾ ಎಂಬಾಕೆಗೆ ಮನೆಯಲ್ಲಿ ಒಂದು ಆಲ್ಬಮ್ ಸಿಗುತ್ತದೆ. ಅದನ್ನು ತೆರೆದು ನೋಡಿದಾಗ ನಿಜಕ್ಕೂ ಆಕೆಗೆ ಶಾಕ್​ ಆಗುತ್ತದೆ. 2009 ಈಕೆ ಒಂದು ಮದುವೆಗೆ ಅತಿಥಿಯಾಗಿ (guest) ಹೋಗಿದ್ದಳು. ಅದೇ ಮದುವೆಯ ಫೋಟೋ ಈ ಆಲ್ಬಮ್​​ನಲ್ಲಿ ಇತ್ತು.

ಈ ಆಲ್ವಮ್​​ ಈಕೆ ಪತಿಯ 2ನೇ ಮದುವೆಯದ್ದಾಗಿತ್ತು. ಅಚ್ಚರಿಯೆಂಬಂತೆ ತಾನು ಯಾರ ಮದುವೆಗೆ ಅತಿಥಿಯಾಗಿ ಹೋಗಿದ್ದೇನೊ ಆ ವ್ಯಕ್ತಿಯನ್ನೇ ಮೂರನೇ ಮದುವೆ ಆಗಿದ್ದಾಳೆ.

24 ವರ್ಷದ ರೆನಾಟಾ ಫಡೆಯಾ ತನಗಿಂತ 38 ವರ್ಷ ಹಿರಿಯ ವ್ಯಕ್ತಿಯನ್ನು ಮದುವೆಯಾಗಿದ್ದಳು. ಗಂಡನ ಎರಡನೇ ಮದುವೆಗೆ ಅತಿಥಿಯಾಗಿ ಬಂದಿದ್ದಳು. ಆದರೆ ಆಗ ಆಕೆಗೆ ಕೇವಲ 9 ವರ್ಷ ವಯಸ್ಸಾಗಿತ್ತು.

ಇದನ್ನು ಓದಿ : Special news : ಮದುವೆಯಾಗದೇ ಏಕಾಂಗಿ ಜೀವನ ನಡೆಸಲು ಇಷ್ಟ ಪಡುತ್ತಾರೆ ಈ 4 ರಾಶಿಯವರು.!

ಹತ್ತು ವರ್ಷಗಳ ನಂತರ, 2019 ರಲ್ಲಿ ಆಕೆ ಅದೇ ವ್ಯಕ್ತಿಯನ್ನು ಭೇಟಿಯಾಗಿದ್ದಳು. ನಂತರ ಇವರ ಪ್ರೀತಿಯಲ್ಲಿ (love) ಬಿದ್ದಳಂತೆ. ಆಬಳಿಕ 2020ರಲ್ಲಿ ಮದುವೆಯಾದರು. ಸದ್ಯ ಒಂದು ಮಗು ಕೂಡ ಇದೆ.

ತನ್ನ ಗಂಡನ ಎರಡನೇ ಮದುವೆಯ ಆಲ್ಬಂ ನೋಡಿದಾಗ ಈ ವಿಷಯ ತನಗೆ ತಿಳಿಯಿತು. ತನ್ನ ಪತಿಗೆ ಮೊದಲ ಮದುವೆಯಿಂದ ಮಗುವಿದೆ. ಎರಡನೇ ಮದುವೆ ಕೇವಲ 2 ವರ್ಷಗಳ ಕಾಲ ನಡೆಯಿತು. ಅದರಿಂದ ಅವರಿಗೆ ಮಕ್ಕಳಾಗಲಿಲ್ಲ. ನನ್ನನ್ನು ಮೂರನೇ ಬಾರಿಗೆ ಮದುವೆಯಾಗಿದ್ದು, ಇಬ್ಬರೂ ಸಂತೋಷದ ಜೀವನವನ್ನು ನಡೆಸುತ್ತಿದ್ದೇವೆ ಎಂದು ರೆನಾಟಾ ಹೇಳಿಕೊಂಡಿದ್ದಾಳೆ.

spot_img
spot_img
- Advertisment -spot_img