ಜನಸ್ಪಂದನ ನ್ಯೂಸ್, ನೌಕರಿ : ಕರ್ನಾಟಕ ಗೃಹ ಇಲಾಖೆ ಅಧೀನದ ಹುದ್ದೆಗಳ ನೇಮಕಾತಿಗಾಗಿ ಆರ್ಥಿಕ ಇಲಾಖೆಯು ಅನುಮೋದನೆ ನೀಡಿದ್ದು, ಯಾವೆಲ್ಲ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಬೇಕಾಗಿರುತ್ತದೆ ಎಂಬ ಮಾಹಿತಿ ಈಗ ಹೊರಬಿದ್ದಿದೆ.
ಸದಸ್ಯರು ಕೇಳಿದ ಮಾಹಿತಿಯ ಕುರಿತು
ವಿಧಾನ ಸಭೆಯಲ್ಲಿ ಗೃಹ ಸಚಿವರು ಹೀಗೆ ಉತ್ತರ ನೀಡಿದ್ದಾರೆ.
ಇದನ್ನು ಓದಿ : LIC ಯ ಹೌಸಿಂಗ್ ಫೈನಾನ್ಸ್ ಲಿಮಿಟೆಡ್’ನಲ್ಲಿ ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಪೊಲೀಸ್ ಇಲಾಖೆಯ 4,115 ಹುದ್ದೆ ಸೇರಿ, ಗೃಹ ಇಲಾಖೆಯ ಒಟ್ಟು 5,987 ಹುದ್ದೆ ಭರ್ತಿಗೆ ಆರ್ಥಿಕ ಇಲಾಖೆ ಅನುಮೋದನೆ ದೊರೆತಿದೆ.
ಆರ್ಥಿಕ ಇಲಾಖೆ ಅನುಮೋದನೆ ನೀಡಿರುವ ಗೃಹ ಇಲಾಖೆಯಡಿಯ ಹಲವು ಹುದ್ದೆಗಳಿಗೆ ಈಗಾಗಲೇ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ.
ಇದನ್ನು ಓದಿ : Belagavi : ಈ ತಾಲ್ಲೂಕುಗಳ ಶಾಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಣೆ..!
ಅವುಗಳನ್ನು ಹೊರತುಪಡಿಸಿ ಪೊಲೀಸ್ ಇಲಾಖೆಯ 4,115 ಕಾನ್ಸ್‌ಟೇಬಲ್ ಮತ್ತು ಪಿಎಸ್‌ಐ ಹುದ್ದೆಗೆ ಅಧಿಸೂಚನೆ ಹೊರಡಿಸಬೇಕಿದೆ.
ಗೃಹ ಇಲಾಖೆಯ ಇತರೆ 1,872 ಹುದ್ದೆಗಳಿದ್ದು, ಅವುಗಳಿಗೂ ಸಹ ಅಧಿಸೂಚನೆ ಹೊರಡಬೇಕಾಗಿರುತ್ತದೆ. ಒಟ್ಟಾರೆ 5,987 ಹುದ್ದೆಗಳಿಗೆ ಅಧಿಸೂಚನೆ ಹೊರಡಬೇಕಾಗಿದೆ.
ಇದನ್ನು ಓದಿ : BSNLಗೆ ಪೋರ್ಟ್ ಆಗ್ತೀರಾ.? ನಿಮ್ಮ ಸುತ್ತಮುತ್ತ ಟವರ್ ಇದೆಯಾ ಅಥವಾ ಇಲ್ವಾ ಅಂತ ಚೆಕ್ ಮಾಡಿಕೊಳ್ಳಿ.
ಪೊಲೀಸ್ ಇಲಾಖೆಯಲ್ಲಿ ಭರ್ತಿಗೆ ಅನುಮೋದನೆ ಪಡೆದ ಹುದ್ದೆಗಳ ವಿವರ
ಪೊಲೀಸ್ ಇಲಾಖೆಯಲ್ಲಿ ಭರ್ತಿಗೆ ಅನುಮೋದನೆ ಪಡೆದ ಹುದ್ದೆಗಳ ವಿವರ ಹೀಗಿದೆ :
* ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (ಸಿಎಆರ್/ಡಿಎಆರ್) : 2000.
* ವಿಶೇಷ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (ಕೆಎಸ್‌ಆರ್‌ಪಿ) : 1500.
ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ (2022-23) : 300.
* ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ (2023-24): 300.
* ವಿಶೇಷ ತನಿಖಾಧಿಕಾರಿ : 15.
ಪೊಲೀಸ್ ಇಲಾಖೆಯಡಿ ಇಷ್ಟು ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ.
ಆದರೆ ಇನ್ನು ಅಧಿಸೂಚನೆ ಹೊರಡಿಸಲಾಗಿಲ್ಲ. ಯಾವಾಗ ಅಧಿಸೂಚಿಸಲಾಗುವುದು ಎಂಬ ಮಾಹಿತಿಯನ್ನು ಸಹ ಬಿಡುಗಡೆ ಮಾಡಿಲ್ಲ.