Sunday, September 15, 2024
spot_img
spot_img
spot_img
spot_img
spot_img
spot_img
spot_img

​”ನನ್ನ ಹುಡುಗ ನನ್ನಿಂದ ದೂರ ಆಗಲಿ, IAS ಅಧಿಕಾರಿ ಜೊತೆ ಮದುವೆ ಮಾಡಿಸು” ; ಬನಶಂಕರಿದೇವಿಗೆ ಯುವತಿಯ ಮನವಿ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ಡೆಸ್ಕ್ : ‌ ​”ನನ್ನ ಹುಡುಗ ನನ್ನಿಂದ ದೂರ ಆಗಲಿ.!, ತಾಯಿ ಮನೆ ಆಸ್ತಿ ನನಗೆ ಬರುವಂತೆ ಮಾಡಮ್ಮ.! ಎಂದು ಬರೆದ ಪತ್ರ ನಗರದ ಬನಶಂಕರಿ ದೇವಸ್ಥಾನದಹುಂಡಿ ಎಣಿಕೆ ಕಾರ್ಯದ (ಮೇ 24) ಸಮಯದಲ್ಲಿ ಸಿಕ್ಕಿದೆ.

ಬನಶಂಕರಿದೇವಿಯ ಹುಂಡಿಯಲ್ಲಿನ ಪತ್ರಗಳನ್ನು ಓದಿ, ಆಡಳಿತ ಮಂಡಳಿಯವರು ಒಂದು ಕ್ಷಣ ಶಾಕ್ ಆಗಿದ್ದಾರೆ. ​”ನನ್ನ ಹುಡುಗ ನನ್ನಿಂದ ದೂರ ಆಗಲಿ ಎಂದು ಬರೆದು ಹಾಕಿದ್ದಾರೆ. ನಾನು ಈಗ ಪ್ರೀತಿಸಿದ ಹುಡುಗ ನನಗೆ ಬೇಡ, IAS ಅಧಿಕಾರಿ ಜೊತೆ ಮದುವೆ ಮಾಡಿಸು ಎಂದು ಪತ್ರದಲ್ಲಿ ಬರೆಯಲಾಗಿದೆ.

ಕೆನರಾ ಬ್ಯಾಂಕ್ ನೇಮಕಾತಿ : ಅರ್ಜಿ ಸಲ್ಲಿಸಲು ಇಲ್ಲದೆ ಡೈರೆಕ್ಟ್‌ link.!

ಪತ್ರದಲ್ಲೇನಿದೆ : “ಅಮ್ಮ ನಾನು ತಪ್ಪು ಮಾಡಿದ್ದೇನೆ ಕ್ಷಮಿಸಿ, ಹಿಂದೆ ಪತ್ರ ಬರೆದಾಗ ನಾನು ಗೋಪಿನಾಥ್ ಬಿಟ್ಟರೇ ಯಾರನ್ನು ಮದುವೆ ಆಗದಂತೆ ಬಯಸಿದ್ದೆ. ಈಗ ಅವನು ನನಗೆ ಬೇಡ. ಆದಷ್ಟು ಬೇಗ ಮುಂದಿನ ವರ್ಷ ನನ್ನ ಮದುವೆಯನ್ನು, ಒಳ್ಳೆಯ ಹೆಸರು, ಕೀರ್ತಿ, ಹೃದಯವಂತ, ಗುಣವಂತ, ಸಿರಿವಂತ, ಐಶ್ವರ್ಯವಂತ ಯಾವ ಹೀರೋಗೂ ಕಡಿಮೆ ಇರಬಾರದು.

ಅಷ್ಟು ಚೆನ್ನಾಗಿರುವ ಒಳ್ಳೆಯ ಐಎಎಸ್ ಅಧಿಕಾರಿ ಜೊತೆ ಮಾಡಿಸು‌. ನನ್ನ ಗಂಡ ಬೇರೆ ಯಾವ ಹೆಂಗಸರನ್ನು, ಹುಡುಗಿಯರನ್ನು ಕೆಟ್ಟ ದೃಷ್ಟಿಯಿಂದ ನೋಡಬಾರದು.

TCSನಲ್ಲಿಉದ್ಯೋಗಾವಕಾಶ : ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ; ಇಂದೇ ಅರ್ಜಿ ಸಲ್ಲಿಸಿ.!

ನನ್ನನ್ನು ಹೆಚ್ಚಾಗಿ ಪ್ರೀತಿ ಮಾಡಬೇಕು‌. ನಾನೆಂದರೇ ಅವರಿಗೆ ಜೀವ ಆಗಿರಬೇಕು. ನನಗೆ ಮಕ್ಕಳು, ಮೊಮ್ಮಕ್ಕಳ ಜೊತೆ ಜೀವನ ಮಾಡಬೇಕು, ಇಷ್ಟು ವರ್ಷ ಕಾದಿದ್ದಕ್ಕೆ ಒಳ್ಳೆ ಹುಡುಗ ಸಿಕ್ಕಾ ಅಂತ ಆಡಿಕೊಳ್ಳುವರ ಬಾಯಿ ಮುಚ್ಚಿಸಬೇಕು ಅಂತ ಹುಡುಗನ ಜೊತೆ ಮದುವೆ ಮಾಡಿಸು” ಎಂದು ಯುವತಿ ಪತ್ರ ಬರೆದಿದ್ದಾಳೆ.

ಈ ರೀತಿಯ ಪತ್ರಗಳು ಅನೇಕ ದೇವಸ್ಥಾನದ ಹುಂಡಿಗಳಲ್ಲಿ ದೊರೆಯುತ್ತಿರುವುದು ಸಾಮಾನ್ಯವಾಗಿದೆ. ಇಂಥ ಪತ್ರಗಳನ್ನು ನೋಡಿದ ಆ ದೇವರು ಹೇಗೆ ಹರಿಸುತ್ತಾರೋ ಗೊತ್ತಿಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img