ಜನಸ್ಪಂದನ ನ್ಯೂಸ್, ಬೆಂಗಳೂರು : ಲಿವ್ ಇನ್ ಸಂಗಾತಿಯ ಮೇಲೆ ಹಲ್ಲೆ ಮಾಡಿ ಬಳಿಕ ಮನೆಗೆ ಬೆಂಕಿ ಹಚ್ಚಿದ ಕರ್ನಾಟಕದ ಐಪಿಎಸ್ ಅಧಿಕಾರಿಯನ್ನು ತಮಿಳುನಾಡಿನಲ್ಲಿ ಅರೆಸ್ಟ್ ಮಾಡಿದ ಘಟನೆ ನಡೆದಿದೆ.
ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ ಎಂ. ಅರುಣ್ ರಂಗರಾಜನ್ (38) ಬಂಧಿತರು.
ಇದನ್ನು ಓದಿ : ಬೆಕ್ಕು, ನಾಯಿ ಸಾಕುವುದಿಲ್ಲ ಈ ಗ್ರಾಮದಲ್ಲಿ; ವಿಷ ಸರ್ಪಗಳೇ ಇಲ್ಲಿ ಸಾಕು ಪ್ರಾಣಿಗಳು.!
ಕರ್ನಾಟಕದ ಕಲಬುರಗಿಯಲ್ಲಿ ಸೇವೆಯಲ್ಲಿದ್ದ ವೇಳೆ ಈ ಅಧಿಕಾರಿ ಹೆಂಡತಿ ಮಕ್ಕಳನ್ನು ತೊರೆದು ಅಲ್ಲಿನ ವಿವಾಹಿತೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಜೊತೆ ಸಂಬಂಧ ಬೆಳೆಸಿದ್ದರು ಎಂದು ತಿಳಿದು ಬಂದಿದೆ.
ಸಧ್ಯ ತಮಿಳುನಾಡಿನ ಈರೋಡ್ ಬಳಿಯ ಗೋಬಿಚೆಟ್ಟಿಪಾಳ್ಯಂನಲ್ಲಿ ವಾಸಿಸುತ್ತಿದ್ದು, ಅಲ್ಲಿ ಸಂಗಾತಿಯ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿಸಲಾಗಿದೆ.
ಇದನ್ನು ಓದಿ : ದ್ವಿತೀಯ PUC ಪಾಸಾಗಿದ್ದೀರಾ.? ಗ್ರಾ. ಪಂ.ಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಅಲ್ಲದೇ ಆತ್ಮಹತ್ಯೆ ಮಾಡಿಕೊಳ್ಳಲು ತಮ್ಮ ಮನೆಗೆ ಅವರು ಬೆಂಕಿ ಹಚ್ಚಿದ್ದರು. ಈ ವೇಳೆ ಅಧಿಕಾರಿಯ ಮನೆಗೆ ನುಗ್ಗಿದ ಪೊಲೀಸರು ಅವರನ್ನು ಅರೆಸ್ಟ್ ಮಾಡಿದ್ದಾರೆ.
ಸೇವೆಯಿಂದ ಅಮಾನತುಗೊಂಡಿರುವ ರಂಗರಾಜನ್ ಮತ್ತು ಅವರ ಲಿವ್ ಇನ್ ಸಂಗಾತಿ ಸುಜಾತಾ (38) ಕಳೆದ ಫೆಬ್ರವರಿ ತಿಂಗಳಲ್ಲಿ ದೂರವಾಗಿದ್ದರು. ಅಂದಿನಿಂದ ರಂಗರಾಜನ್ ತನ್ನ ತಂದೆತಾಯಿಗಳೊಂದಿಗೆ ವಾಸಿಸುತ್ತಿದ್ದರು. ಮೊನ್ನೆಯಷ್ಟೇ ಸುಜಾತಾ ಆತನ ಮನೆಗೆ ವಾಪಸ್ಸಾಗಿದ್ದು, ಇಬ್ಬರು ಮತ್ತೆ ಜಗಳ ಮಾಡಿಕೊಂಡಿದ್ದಾರೆ. ಬಳಿಕ ಅವರ ಕಲಹ ತೀವ್ರಗೊಂಡಿತ್ತು.
ಇದನ್ನು ಓದಿ : ಅತ್ತೆ ಹೊಡೆದಿದ್ದಾರೆ ಎಂದು ಸಹಾಯವಾಣಿ ಕೇಂದ್ರಕ್ಕೆ Call ಮಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್; ಮುಂದೆನಾಯ್ತು ಗೊತ್ತಾ.?
ರಂಗರಾಜನ್ 2012ರಲ್ಲಿ ಛತ್ತೀಸ್‌ಗಢ ಕೇಡರ್‌ನ ಐಪಿಎಸ್ ಅಧಿಕಾರಿ. ಅವರು ಛತ್ತೀಸ್‌ಗಢದ ಇನ್ನೊಬ್ಬ ಐಪಿಎಸ್ ಅಧಿಕಾರಿ ಎಲಕ್ಕಿಯಾ ಅವರನ್ನು ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಇವರಿಬ್ಬರೂ ಕೂಡ ಕರ್ನಾಟಕಕ್ಕೆ ವರ್ಗಾವಣೆಗೊಂಡರು. ಇಲ್ಲಿ ಅವರನ್ನು ಕಲಬುರಗಿ ಜಿಲ್ಲೆಗೆ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಆಂತರಿಕ ಭದ್ರತೆ) ನೇಮಿಸಲಾಯಿತು.
ಕಲಬುರಗಿಯಲ್ಲಿ ಅರುಣ್ ಅದೇ ಜಿಲ್ಲೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸುಜಾತಾ ಅವರೊಂದಿಗೆ ವಿವಾಹೇತರ ಸಂಬಂಧ ಪ್ರಾರಂಭಿಸಿದರು. ಸುಜಾತಾ ಅವರ ಪತಿ ಕಂದಪ್ಪ ಕೂಡ ಪೊಲೀಸ್ ಇನ್ಸ್‌ಪೆಕ್ಟರ್ ಆಗಿದ್ದು, ಈ ಸಂಬಂಧ ಮೇಲಧಿಕಾರಿಗಳಿಗೆ ದೂರು ನೀಡಿದ್ದರು. ನಂತರ ಅರುಣ್ ಅವರನ್ನು ಕಾರವಾರ ಜಿಲ್ಲೆಗೆ ವರ್ಗಾಯಿಸಲಾಗಿತ್ತು.
ಇದನ್ನು ಓದಿ : Video : ಅಪಹರಿಸಿದವನ ಬಿಟ್ಟು ಬರಲ್ಲೊಪ್ಪದ ಮಗು : ಆತ ಕಿಡ್ನ್ಯಾಪರ್ ಅಲ್ಲ, ಹಾಗಾದ್ರೆ ಮತ್ಯಾರು.?
ತದ ನಂತರ ಪತ್ನಿ ಏಲಕ್ಕಿಯಾ ಅವರು ರಂಗರಾಜನ್‌ಗೆ ವಿಚ್ಛೇದನ ನೀಡಿದ್ದರು. ಇತ್ತ ಸುಜಾತಾ, ಕಂದಪ್ಪನೊಂದಿಗಿನ ತನ್ನ ಮದುವೆಯನ್ನು ಮುರಿದು ರಂಗರಾಜನ್ ಜೊತೆ ಲಿವ್ ಇನ್ ಸಂಬಂಧದಲ್ಲಿ ವಾಸಿಸಲು ನಿರ್ಧರಿಸಿದರು.