Saturday, July 27, 2024
spot_img
spot_img
spot_img
spot_img
spot_img
spot_img

10th ಪಾಸಾಗಿದ್ದೀರಾ : ತಿಂಗಳಿಗೆ ರೂ.14,480 ಹಣದೊಂದಿಗೆ ITI ತತ್ಸಮಾನ ಪ್ರಮಾಣಪತ್ರ.!

spot_img

ಜನಸ್ಪಂದನ ನ್ಯೂಸ್‌, ನೌಕರಿ : ಅಂದಹಾಗೆ ಎಸ್‌ಎಸ್ಎಲ್‌ಸಿ ನಂತರ ಮುಂದೇನು.?  ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ ಡಿಪ್ಲೊಮ, ದ್ವಿತೀಯ ಪಿಯುಸಿ, ಐಟಿಐ ಕೋರ್ಸ್‌ಗಳು ಮುಂದಿನ ಶಿಕ್ಷಣಕ್ಕೆ ಇರುವ ಆಯ್ಕೆಗಳು.

ರಾಜ್ಯದ ಬಡ ಕುಟುಂಬಗಳ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ದೃಷ್ಟಿಯಿಂದ ಟೊಯೋಟಾ ಟೆಕ್ನಿಕಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ 2 ವರ್ಷದ ಟೊಯೋಟ ಕೌಶಲ್ಯ – ಕುಶಲಕರ್ಮಿ ತರಬೇತಿ ಯೋಜನೆಯನ್ನು ನೀಡುತ್ತಿದೆ.

Urine : ನಿಮ್ಮ ಮೂತ್ರದ ಬಣ್ಣದಿಂದಲೇ ತಿಳಿಯುತ್ತೇ ನಿಮ್ಮ ಆರೋಗ್ಯದ ಹೇಗಿದೆ ಎಂದು.!

2 ವರ್ಷ ತರಬೇತಿ ಕೋರ್ಸ್‌ ಪೂರ್ಣಕಾಲ ಮುಗಿಸಿದವರಿಗೆ ಐಟಿಐ (ITI) ತತ್ಸಮಾನ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಅಷ್ಟು ಮಾತ್ರವಲ್ಲದೇ ಪ್ರತಿ ತಿಂಗಳು Rs.14,480 ಸ್ಟೈಫಂಡ್ ಅನ್ನು ಈ ತರಬೇತಿ ಅವಧಿಯಲ್ಲಿ ನೀಡಲಾಗುತ್ತದೆ. ಉಚಿತ ಊಟ, ಕಡಿಮೆ ಖರ್ಚಿನ ವಸತಿ ವ್ಯವಸ್ಥೆ, ಉಚಿತ ಶಿಕ್ಷಣ ಸೌಲಭ್ಯಗಳು ಈ ಕೋರ್ಸ್‌ಗೆ ಪ್ರವೇಶ ಪಡೆದವರಿಗೆ ಸಿಗಲಿವೆ.

ಟೊಯೋಟಾ’ದಿಂದ 2 ವರ್ಷದ ಕುಶಲಕರ್ಮಿ ತರಬೇತಿ ಯೋಜನೆ :

ಟ್ರೈನಿಂಗ್ ಪ್ರೋಗ್ರಾಮ್‌ : ಟೊಯೋಟ ಕೌಶಲ್ಯ ಯೋಜನೆಯು ಒಂದು ರೀತಿಯಲ್ಲಿ ‘ಕಲಿಯಿರಿ ಮತ್ತು ಸಂಪಾದಿಸಿರಿ’ ಎಂಬ ಪರಿಕಲ್ಪನೆಯೊಂದಿಗೆ ‘ಕೈಗಾರಿಕೆಯಲ್ಲಿ ಉದ್ಯೋಗ ತರಬೇತಿ’ಯನ್ನು ನೀಡುವ ವಿಶ್ವ ದರ್ಜೆಯ ಕೌಶಲ್ಯ ತಂತ್ರಜ್ಞ ಅರಿವು ನೀಡುವ ಕೋರ್ಸ್‌.

ಕೋರ್ಸ್‌ ಅವಧಿ : 2 ವರ್ಷ (ಕೌಶಲ್ಯ, ಜ್ಞಾನ, ದೈಹಿಕ ಮತ್ತು ಮಾನಸಿಕ)
ಕೋರ್ಸ್‌ಗೆ ಸೇರಲು ವಿದ್ಯಾರ್ಹತೆ : ಎಸ್‌ಎಸ್‌ಎಲ್‌ಸಿ ತೇರ್ಗಡೆ/12 ನೇ ತರಗತಿ ಉತ್ತೀರ್ಣ ಅಥವಾ ಅನುತ್ತೀರ್ಣ.
ವಯಸ್ಸಿನ ಅರ್ಹತೆಗಳು : 18-24 ವರ್ಷದೊಳಗಿರಬೇಕು.

ಮೇ. 22 ರವರೆಗೂ ಕರ್ನಾಟಕಕ್ಕೆ ಆರೆಂಜ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ.!

ಲಭ್ಯ ಇರುವ ವಿದ್ಯಾರ್ಥಿ ತರಬೇತಿ ಟ್ರೇಡ್‌ಗಳು :

* ಅಸೆಂಬ್ಲಿ ಟೆಕ್ನೀಷಿಯನ್ (ಆಟೋಮೊಟಿವ್)
* ಆಟೋಮೊಟಿವ್ ಪೇಂಟ್ ಟೆಕ್ನೀಷಿಯನ್.
* ಆಟೋಮೊಟಿವ್ ವೆಲ್ಡ್‌ ಟೆಕ್ನೀಷಿಯನ್.
* ಮೆಕಟ್ರಾನಿಕ್ಸ್‌ ಟೆಕ್ನೀಷಿಯನ್ಸ್‌.
* ಲಭ್ಯತೆಯ ಆಧಾರದ ಮೇಲೆ ಸೀಟು ನೀಡಲಾಗುತ್ತದೆ.

ಕೋರ್ಸ್‌ ಪರೀಕ್ಷೆ ಮತ್ತು ಪ್ರಮಾಣ ಪತ್ರ :

e- NTC : ಐಟಿಯ ತತ್ಸಮಾನ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ ನೀಡಲಾಗುತ್ತದೆ.
ಟೊಯೊಟಾ ಜೆಐಎಂ ಸರ್ಟಿಫಿಕೇಟ್‌ ನೀಡಲಾಗುತ್ತದೆ. ಈ ಸರ್ಟಿಫಿಕೇಟ್‌ ಗಳನ್ನು ಬಳಸಿಕೊಂಡು ಮುಂದೆ ರೈಲ್ವೆ ಉದ್ಯೋಗಗಳು, ಅಬ್ರಾಡ್‌ ಹುದ್ದೆಗಳಿಗೂ ಅರ್ಜಿ ಸಲ್ಲಿಸಬಹುದಾಗಿದೆ.

ಪ್ರವೇಶ ಪಡೆಯುವ ಬಗ್ಗೆ :

Apply Online For TTTI 2 Years Toyota Kaushalya Program

ಈ ಮೇಲಿನ ಲಿಂಕ್‌ ಬಳಸಿ ಆನ್‌ಲೈನ್‌ ಅರ್ಜಿ ಸಲ್ಲಿಸಬೇಕು. ಟೊಯೋಟ ಟೆಕ್ನಿಕಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ ನಲ್ಲಿ ಪ್ರವೇಶ ಪಡೆಯಲು ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಪಾಸ್ ಆಗಬೇಕು.

Health : ಕುಳಿತಲ್ಲೇ ಕಾಲು ಅಲ್ಲಾಡಿಸ್ತೀರಾ.? ಹಾಗಿದ್ರೆ ಈ ಸುದ್ದಿ ಓದಿ.!

ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ದಿನಾಂಕ : ಮೇ 26, 2024, ಸಮಯ ಬೆಳಿಗ್ಗೆ 09ಕ್ಕೆ ಆರಂಭ.
ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ನಡೆಸುವ ಸ್ಥಳ : ಹುಬ್ಬಳ್ಳಿ, ತುಮಕೂರು, ಶಿವಮೊಗ್ಗ, ಹಾಸನ ಮತ್ತು ಬಿಡದಿ.

ವಿಶೇಷ ಸೂಚನೆ :
* ಪ್ರತಿ ತಿಂಗಳು ನೀಡುವ ಸ್ಟೈಫಂಡ್ ರೂ.14,480.
* PF, ESI ಸೌಲಭ್ಯಗಳನ್ನು ನೀಡಲಾಗುತ್ತದೆ.
* ತರಬೇತಿ ಮುಗಿದ ನಂತರ ಅರ್ಹ ಶಿಶಿಕ್ಷುಗಳು, ಅಪ್ರೆಂಟಿಸ್‌ಶಿಪ್‌ ತರಬೇತಿಗೆ ಅರ್ಹರಾಗಿರುತ್ತಾರೆ.

spot_img
spot_img
- Advertisment -spot_img