Saturday, July 27, 2024
spot_img
spot_img
spot_img
spot_img
spot_img
spot_img

ಈ ಮಹಿಳೆಯರಿಗೆ ಸಿಗಲಿದೆ ಪ್ರತಿ ತಿಂಗಳು 2,000 ಬದಲಿಗೆ 2,800 ರೂ.!

spot_img

ಜನಸ್ಪಂದನ ನ್ಯೂಸ್‌, ಸರ್ಕಾರಿ ಸೌಲಭ್ಯಗಳು : ರಾಜ್ಯದಲ್ಲಿ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಅವಿವಾಹಿತ ಹಾಗೂ ವಿಚ್ಛೇದಿತ ಮಹಿಳೆಯರಿಗೆ ಆರ್ಥಿಕ ಭದ್ರತೆ ಒದಗಿಸಲು ಕರ್ನಾಟಕ ಸರ್ಕಾರ ಮನಸ್ವಿನಿ ಯೋಜನೆ ಜಾರಿ ಮಾಡಿದೆ.

ವಿವಾಹವಾಗದೆ ಅಥವಾ ಗಂಡನಿಂದ ಬೇರ್ಪಟ್ಟು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸಂಕಷ್ಟವನ್ನು ಎದುರಿಸುತ್ತಿರುವ ಮಹಿಳೆಯರಿಗೆ ಜೀವನ ರೂಪಿಸಿಕೊಳ್ಳಲು ಈ ಯೋಜನೆಯು ಸಹಾಯವಾಗಿದೆ.

ಮನಸ್ವಿನಿ ಯೋಜನೆ ಮೂಲಕ ಪ್ರತಿ ತಿಂಗಳು 800 ರೂಪಾಯಿ ಹಣ ರಾಜ್ಯದ ಮಹಿಳೆಯರಿಗೆ ನೀಡಲಾಗುವುದು. ಈ ಯೋಜನೆಯ ಪಿಂಚಣಿಯನ್ನು ಆನ್‌ಲೈನ್ ಅಥವಾ ನಾಡ ಕಚೇರಿ ಕೇಂದ್ರಗಳಲ್ಲಿ ಅಥವಾ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.

ಇದನ್ನು ಓದಿ : ವೇದಿಕೆ ಮೇಲೆಯೇ ನೆಚ್ಚಿನ ಗಾಯಕನ ಕೆನ್ನೆಗೊಂದು Kiss ಮಾಡಿ ಸಸ್ಪೆಂಡ್ ಆದ ಮಹಿಳಾ ಕಾನ್ಸ್‌ಟೇಬಲ್‌.!

ಈ ಯೋಜನೆಗೆ ಯಾರೆಲ್ಲ ಅರ್ಹರು :

  • ಫಲಾನುಭವಿಯು 40ರಿಂದ 65 ವರ್ಷ ವಯಸ್ಸಿನೊಳಗಿರಬೇಕು.
  • ಗ್ರಾಮೀಣ ಪ್ರದೇಶದಲ್ಲಿ ವಾರ್ಷಿಕ 12 ಸಾವಿರ ರೂಪಾಯಿ ಹಾಗೂ ನಗರ ಪ್ರದೇಶದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಮಹಿಳೆಯರು ಈ ಯೋಜನೆಯ ಫಲಾನುಭವಿಗಳಾಗಲು ಅರ್ಹರಾಗಿದ್ದಾರೆ.
  • ಇತರೆ ಯಾವುದೇ ಸಾಮಾಜಿಕ ಭದ್ರತಾ ಯೋಜನೆಯಡಿ ಅಥವಾ ಯಾವುದೇ ತರಹದ ಪಿಂಚಣಿ ಇತ್ಯಾದಿಗಳನ್ನು ಸಾರ್ವಜನಿಕ ಅಥವಾ ಖಾಸಗಿ ಮೂಲಗಳಿಂದ ಪಡೆಯುತ್ತಿರಬಾರದು.
  • ಈ ಮಾಸಾಶನವನ್ನು ಫಲಾನುಭವಿಯ ಬ್ಯಾಂಕ್‌ ಖಾತೆಗೆ ಅಥವಾ ಅಂಚೆ ಕಚೇರಿಯ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಜಮೆ ಮಾಡಲಾಗುತ್ತದೆ.
  • ಫಲಾನುಭವಿಗಳಾ ದವರು ವಿವಾಹ/ಮರುವಿವಾಹ ಆದರೆ, ಉದ್ಯೋ ಗ ಪಡೆದು ನಿಗದಿತ ಆದಾಯದ ಮಿತಿ ಮೀರಿದರೆ ಮಾಸಾಶನ ರದ್ದಾಗಲಿದೆ. 65ಕ್ಕಿಂ ತ ಹೆಚ್ಚು ವಯಸ್ಸಾದ ಅವಿವಾಹಿತ, ವಿಚ್ಛೇ ದನ ಪಡೆದ ಮಹಿಳೆಯರು ಇಂದಿರಾಗಾಂಧಿ ರಾಷ್ಟ್ರೀ ಯ ವೃದ್ಧಾಪ್ಯ ಯೋಜನೆಯ ಪ್ರಯೋಜನ ಪಡೆಯುವುದರಿಂದ ಅವರಿಗೆ ಮನಸ್ವಿನಿ ಯೋಜನೆ ಅನ್ವಯವಾಗುವುದಿಲ್ಲ.

ಇದನ್ನು ಓದಿ : ನೀವು ಪ್ರಕೃತಿ ಪ್ರೇಮಿಗಳೇ ; ಕರ್ನಾಟಕ ಅರಣ್ಯ ಇಲಾಖೆಯಲ್ಲಿ 1000+ ಹುದ್ದೆಗಳ ನೇಮಕಾತಿ.!

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :

  • ಅವಿವಾಹಿತರು ವಿವಾಹ ಆಗಿಲ್ಲವೆಂದು ಹಾಗೂ ವಿಚ್ಛೇ ದಿತರು ವಿಚ್ಛೇದನ ಪಡೆದಿರುವ ಬಗ್ಗೆ ಸ್ವಯಂ ಪ್ರಮಾಣ ಪತ್ರ ಸಲ್ಲಿಸಬೇಕು.
  • ಅಂತ್ಯೋದಯ ಪಡಿತರ ಚೀಟಿ ಇಲ್ಲದಿದ್ದಲ್ಲಿ ಸ್ವಯಂಘೋಷಿತ ಆದಾಯ ಪ್ರಮಾಣ ಪತ್ರ
  • ಚುನಾವಣ ಗುರುತಿನ ಚೀಟಿ ಅಥವಾ ವಿಳಾಸದ ಬಗ್ಗೆ ದೃಢೀಕೃತ ದಾಖಲೆ ಅಥವಾ ವಯಸ್ಸಿನ ಬಗ್ಗೆ ವೈದ್ಯಕೀಯ ಪ್ರಮಾಣ ಪತ್ರ
  • ಈ ಯೋಜನೆ ಅಡಿಯಲ್ಲಿ ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಅವಿವಾಹಿತ ಮತ್ತು ವಿಚ್ಛೇದಿತ ಬಡ ಮಹಿಳೆಯರಿಗೆ ಪಿಂಚಣಿ ನೀಡುತ್ತದೆ.

ಸಲ್ಲಿಕೆಯಾದ ಅರ್ಜಿಯನ್ನು ಅಟಲ್‌ಜೀ ಜನಸ್ನೇಹಿ ಕೇಂದ್ರ ಅಥವಾ ನಾಡಕಚೇರಿಗಳಲ್ಲಿ ಗ್ರಾಮ ಲೆಕ್ಕಾಧಿಕಾರಿಯು ಅರ್ಜಿದಾರರ ಹೆಸರು, ತಂದೆ/ ಗಂಡನ ಹೆಸರು ವಿಳಸಗಳನ್ನು ದಾಖಲಿಸಿಕೊಳ್ಳುತ್ತಾರೆ. ಅರ್ಜಿ ಸಲ್ಲಿಸಿದ ಒಂದು ತಿಂಗಳಲ್ಲಿ ಉಪ ತಹಸೀಲ್ದಾರ್ ಅವರು ವಿಲೇವಾರಿ ಮಾಡಲಿದ್ದಾರೆ. ಅರ್ಜಿಯಲ್ಲಿ ದಾಖಲೆಗಳು ಸರಿಯಾಗಿಲ್ಲದಿದ್ದರೆ ಅರ್ಜಿ ತಿರಸ್ಕೃತಗೊಳ್ಳುತ್ತದೆ.

spot_img
spot_img
- Advertisment -spot_img