Saturday, July 13, 2024
spot_img
spot_img
spot_img
spot_img
spot_img
spot_img

ಉಚಿತ ಗ್ಯಾಸ್ ಸಿಲಿಂಡರ್‌ ಪಡೆಯಲು ಮತ್ತೊಂದು ಅವಕಾಶ ; apply ಮಾಡಲು ಇಲ್ಲಿದೆ ಡೈರೆಕ್ಟ್ ಲಿಂಕ್.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಮೋದಿ ಸರ್ಕಾರವು ದೇಶದ ಬಡ ಜನರ ಅಭಿವೃದ್ಧಿಗಾಗಿ ಹಲವಾರು ಕಲ್ಯಾಣ ಯೋಜನೆಗಳು ಮತ್ತು ಯೋಜನೆಗಳನ್ನ ಒದಗಿಸುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಂತಹ ಒಂದು ಯೋಜನೆಯಾಗಿದೆ.

ಈ ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಹಾಕಿ ಗ್ಯಾಸ್ ಸಿಲಿಂಡರನ್ನು ನೀವು ಕೂಡ ಪಡೆಯಬಹುದಾಗಿದೆ. ಅರ್ಜಿ ಹಾಕಲು ಸರ್ಕಾರ ಯಾರಿಗೆ ಅವಕಾಶ ನೀಡಿದೆ? ಅರ್ಜಿ ಹಾಕಲು ಬೇಕಾಗುವ ಡಾಕುಮೆಂಟ್ ಯಾವುದು? ಅರ್ಜಿಯನ್ನು ಎಲ್ಲಿ ಮತ್ತು ಹೇಗೆ ಹಾಕುವುದು? ಅನ್ನುವಂತಹ ವಿವರವಾದ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ಇದನ್ನು ಓದಿ : ಬಂಗಾರದ ಬೈಕ್‌ನಲ್ಲಿ 5 ಕೆಜಿ ಚಿನ್ನ ತೊಟ್ಟು ಓಡಾಡೋ ಗೋಲ್ಡ್‌ಮ್ಯಾನ್ ; ವಿಡಿಯೋ ನೋಡಿ.!

PMUY ಯೋಜನೆಯ ಅರ್ಹತೆ ಈ ಕೆಳಗಿನ ಪಟ್ಟಿಯಲ್ಲಿ ವಿವರಿಸಲಾಗಿದೆ.!
* PMUY ಯೋಜನೆಯ 2 ನೇ ಹಂತಕ್ಕೆ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
* ಅಲ್ಲದೆ, ಅರ್ಜಿ ಸಲ್ಲಿಸಿದ ಮಹಿಳೆ ಭಾರತೀಯರಾಗಿರಬೇಕು. ಅಲ್ಲದೆ, ವಯಸ್ಸು 18 ವರ್ಷಗಳು ಆಗಿರಬೇಕು.
* ಗ್ರಾಮದ ಅರ್ಜಿದಾರರ ವಾರ್ಷಿಕ ಆದಾಯ 1 ಲಕ್ಷ ರೂ.ಗಿಂತ ಕಡಿಮೆ ಇರಬೇಕು.
* ಅರ್ಜಿದಾರರ ಕುಟುಂಬದ ಇತರ ಸದಸ್ಯರು ಯೋಜನೆಯ ಪ್ರಯೋಜನವನ್ನ ಪಡೆಯಬಾರದು.
* ಅರ್ಜಿ ಹಾಕುವ ಮಹಿಳೆಯ ರೇಷನ್ ಕಾರ್ಡ್ ಹೊಂದಿರಬೇಕು.

ಈ ಯೋಜನೆಗೆ ಅಗತ್ಯವಿರುವ ದಾಖಲೆ.!
* ಆಧಾರ್ ಕಾರ್ಡ್.
* ವಿಳಾಸ ಪುರಾವೆ.
* ಪಡಿತರ ಚೀಟಿ.
* ಬ್ಯಾಂಕ್ ಪಾಸ್ ಬುಕ್.
* ದೂರವಾಣಿ ಸಂಖ್ಯೆ.
* ಪಾಸ್ ಪೋರ್ಟ್ ಗಾತ್ರದ ಫೋಟೋ‌.

ಇದನ್ನು ಓದಿ : ಯುವತಿ ರೀಲ್ಸ್ ಮಾಡುವಾಗಲೇ ಬಡಿದ ಸಿಡಿಲು ; ಬೆಚ್ಚಿಬೀಳಿಸುವ ವಿಡಿಯೋ Viral.!

ಈ ಯೋಜನೆಗೆ ಅರ್ಜಿ ಪ್ರಕ್ರಿಯೆ ಹೀಗಿದೆ.!
* https://pmuy.gov.in/ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
* ಲಿಂಕ್ ಓಪನ್ ಆದ ನಂತರ ಕೆಳಗೆ ಎಳೆಯಿರಿ. ಅಲ್ಲಿ ಆನ್ಲೈನ್ ಪೋರ್ಟಲ್ ಅನ್ನುವ ಆಯ್ಕೆ ಮೇಲೆ ಒತ್ತಿ.
* ಇದರ ನಂತರ ಪುಟದ ಕೆಳಭಾಗದಲ್ಲಿ ಆನ್ ಲೈನ್ ಪೋರ್ಟಲ್ ಎಂಬ ಆಯ್ಕೆ ಇರುತ್ತದೆ. ಅದನ್ನ ಆಯ್ಕೆ ಮಾಡಿ.
* ನಂತರ ನಂತರ ನಿಮಗೆ ಡಿಸ್ಟ್ರಿಬ್ಯೂಟರ್ ಕಂಪನಿಗಳ ಹೆಸರು ತೋರಿಸುತ್ತದೆ ಅಲ್ಲಿ ನಿಮಗೆ ಬೇಕಾದ ಕಂಪನಿಯ ಮೇಲೆ ಒತ್ತಿ.
* ಆಗಾಗ್ಗೆ ನಿಮ್ಮ ಫೋನ್ ಸಂಖ್ಯೆ ಮತ್ತು ಒಟಿಪಿಯೊಂದಿಗೆ ಲಾಗ್ ಇನ್ ಮಾಡಿ. ನಂತರ ಅರ್ಜಿ ನಮೂನೆ ಬರುತ್ತದೆ.
* ಅದರಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನ ಯಾವುದೇ ತಪ್ಪುಗಳಿಲ್ಲದೆ ಭರ್ತಿ ಮಾಡಿ.
* ಅಂತಿಮವಾಗಿ, ಎಲ್ಲಾ ಮಾಹಿತಿ ಸರಿಯಾಗಿದೆ ಎಂದು ಖಚಿತಪಡಿಸಿದ ನಂತರ, ಅರ್ಜಿ ನಮೂನೆಯ ಪ್ರಿಂಟ್ಔಟ್ ತೆಗೆದುಕೊಳ್ಳಿ.

spot_img
spot_img
- Advertisment -spot_img