Wednesday, May 22, 2024
spot_img
spot_img
spot_img
spot_img
spot_img
spot_img

Health : ಕುಳಿತಲ್ಲೇ ಕಾಲು ಅಲ್ಲಾಡಿಸ್ತೀರಾ.? ಹಾಗಿದ್ರೆ ಈ ಸುದ್ದಿ ಓದಿ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ನಾವು ಇತರರೊಂದಿಗೆ ಮಾತನಾಡುವಾಗ (talking), ಪುಸ್ತಕ ಓದುತ್ತಿರುವಾಗ (Reading), ಮೊಬೈಲ್ ನೋಡುತ್ತಾ ಕುಳಿರುವಾಗ ಗೊತ್ತಿಲ್ಲದೆ ಕಾಲು ಅಲುಗಾಡಿಸುತ್ತಿರುತ್ತೇವೆ.

ಕೆಲವರಿಗೆ ಸುಮ್ಮನೆ ಕುಳಿತಿರುವಾಗ ಕಾಲು ಅಲುಗಾಡಿಸುವ ಅಭ್ಯಾಸವಿರುತ್ತದೆ. ಆದರಲ್ಲೂ ಯುವಕರಲ್ಲಿ ಈ ಅಭ್ಯಾಸ ಜಾಸ್ತಿ ಇರುತ್ತದೆ. ಆದರೆ ಈ ಅಭ್ಯಾಸ ಆತಂಕ ಅಥವಾ ಕಳವಳ (anxiety or concern) ಉಂಟು ಮಾಡುವ ಲಕ್ಷಣವಾಗಿದೆಯಂತೆ.

ಇದನ್ನು ಓದಿ : Fake ನಂಬರ್ ಪ್ಲೇಟ್ ಬಳಸಿ ಶೋಕಿ ಮಾಡುತ್ತಿದ್ದ IPS ಅಧಿಕಾರಿ ; ಮುಂದೆನಾಯ್ತು ಗೊತ್ತಾ.?

ಅಂದಗಾಗೆಯೇ ಈ ಅಭ್ಯಾಸ ಶುರುವಾಗಲು ಮುಖ್ಯ ಕಾರಣ ಕಬ್ಬಿಣಾಂಶದ ಕೊರತೆ‌ (iron deficiency). ಹಾಗಾಗಿ ಕೆಲವರು ಕಾಲು ಅಲುಗಾಡಿಸುತ್ತಾ ಕುಳಿತಿರುತ್ತಾರೆ.

ನಿದ್ರಾಹೀನತೆಯಿಂದ ಈ ಸಮಸ್ಯೆ ಬರಬಹುದು. ಮಾತ್ರವಲ್ಲದೆ, ಹಾರ್ಮೋನ್ ಅಸಮತೋಲನದಿಂದಾಗಿ ವ್ಯಕ್ತಿಗೆ ಕಾಲನ್ನು ಅಲುಗಾಡಿಸಬೇಕು (Shake the leg) ಎಂದು ಅನಿಸುತ್ತದೆ.

ಸರಿಯಾಗಿ ನಿದ್ರೆ ಮಾಡದಿರುವುದರಿಂದ ವ್ಯಕ್ತಿಯಲ್ಲಿ ಕಾಲು ಅಲುಗಾಡಿಸುವ ಅಭ್ಯಾಸ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಹಾಗಿದ್ರೆ ಈ ಅಭ್ಯಾಸವನ್ನು ಕಡಿಮೆ ಮಾಡಲು ಏನು ಮಾಡಬೇಕು? ಎಂಬ ಪ್ರಶ್ನೆ ಅನೇಕರಲ್ಲಿ ಕಾಡಬಹುದು. ಅದಕ್ಕಾಗಿ ಕಬ್ಬಿಣಾಂಶದ ಮಾತ್ರೆಗಳನ್ನು (iron tablet’s) ಸರಿಯಾಗಿ ಸೇವಿಸಬೇಕು. ಹಾಗಿದ್ದಾಗ, ಮಾತ್ರ ಈ ಸಮಸ್ಯೆ ಕಡಿಮೆಯಾಗುವ ಸಾಧ್ಯತೆಯಿದೆ.

ಕೇವಲ ಕಬ್ಬಿಣಾಂಶ ಮಾತ್ರೆಗಳನ್ನು ಸೇವಿಸಿದರೆ ಸಾಲದು. ಅದರ ಜೊತೆಗೆ ಬಾಳೆಹಣ್ಣು, ಪಾಲಕ್, ಬಸಳೆ ಸೊಪ್ಪು, ಬೀಟ್ರೂಟ್ ಸೇವಿಸಬೇಕು.

ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸವನ್ನು ಬಿಟ್ಟುಬಿಡುವುದು ಒಳ್ಳೆಯದು.

ಇದನ್ನು ಓದಿ : Urine : ನಿಮ್ಮ ಮೂತ್ರದ ಬಣ್ಣದಿಂದಲೇ ತಿಳಿಯುತ್ತೇ ನಿಮ್ಮ ಆರೋಗ್ಯದ ಹೇಗಿದೆ ಎಂದು.!

ರಾತ್ರಿ ವೇಳೆ ಮೊಬೈಲ್ ಒತ್ತುವುದು (press), ಟಿವಿ ನೋಡುವ ಅಭ್ಯಾಸದಿಂದ ದೂರವಿರಬೇಕು ಹಾಗಿದ್ದಾಗ ಮಾತ್ರ ಕಾಲು ಅಲುಗಾಡಿಸುವ ಅಭ್ಯಾಸದಿಂದ ದೂರ ಉಳಿಯಬಹುದು.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

spot_img
spot_img
spot_img
- Advertisment -spot_img