ಜನಸ್ಪಂದನ ನ್ಯೂಸ್, ಡೆಸ್ಕ್ : ಬಹಳಷ್ಟು ಮಂದಿ ಶೋಕಿಗೋಸ್ಕರ ತಮ್ಮ ವಾಹನಗಳಿಗೆ ತರಹೇವಾರಿ ನಂಬರ್ ಪ್ಲೇಟ್‌ಗಳನ್ನು (number plate) ಬಳಸಿಕೊಂಡು ಓಡಾಡುವುದನ್ನು ನೋಡಿದ್ದೇವೆ.
ಕೆಲವರು ಸಾಕಷ್ಟು ದುಡ್ಡುಕೊಟ್ಟು ಫ್ಯಾನ್ಸಿ ನಂಬರ್ ಪ್ಲೇಟ್‌ಗಳನ್ನು ಬಳಸಿದರೆ, ಇನ್ನು ಕೆಲವರು ನಕಲಿ (fake) ನಂಬರ್ ಪ್ಲೇಟ್‌ಗಳನ್ನು ಬಳಸುವುದನ್ನು ನೋಡಿದ್ದೇವೆ.
ಇದನ್ನು ಓದಿ : ಟೋಲ್ ಪ್ಲಾಜಾದಲ್ಲಿ ಮಹಿಳಾ ಸಿಬ್ಬಂದಿ ಮೇಲೆ ಕಾರು ಚಲಾಯಿಸಿದ ವ್ಯಕ್ತಿ ; Video Viral.!
ಆದರೆ ಇಲ್ಲೋರ್ವ ಡಿಜಿಪಿ ತನ್ನ ಲಕ್ಷುರಿ ಕಿಯಾ ಕಾರ್ನಿವಲ್ ಕಾರಿಗೆ ನಕಲಿ ವಿಐಪಿ ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಂಡು ಶೋಕಿ ಮಾಡುತ್ತಿದ್ದುದು ಕಂಡು ಬಂದಿದ್ದು, ಈತನ ಮೇಲೆ ಇದೀಗ ಕೇಸ್ ದಾಖಲಿಸಲಾಗಿದೆ.
ಈತ ಲಜ್ಜಾ ರಾಮ್ ಬಿಶ್ಣೋಯ್ ಎಂದು ವರದಿಯಾಗಿದ್ದು, ಡಿಜಿಪಿ ಮೇಲೆ ಮೇಘಾಲಯ ಪೊಲೀಸರು (Meghalaya police) ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.
ಈತ ತನ್ನ ಬಿಳಿ ಬಣ್ಣದ ಕಿಯಾ ಕಾರ್ನಿವಲ್‌ನಲ್ಲಿ ಈ ನಂಬರ್ ಪ್ಲೇಟ್ ಅನ್ನು (Fake Number Plate) ಬಳಕೆ ಮಾಡುತ್ತಿದ್ದ. ಈ ನಕಲಿ ನಂಬರ್ ಪ್ಲೇಟ್‌ಅನ್ನು ಬಳಸಿಕೊಂಡೇ ಹಲವು ಕಡೆ ಹೋಗಿದ್ದಾನೆ.
ಸದ್ಯಕ್ಕೆ ಈತನನ್ನು ಕೆಲಸದಿಂದ ಅಮಾನತು (suspended) ಮಾಡಿದ್ದು, ತನಿಖೆ ನಡೆಯುತ್ತಿದೆ.
ಈ ಡಿಜಿಪಿ ಲಜ್ಜಾ ರಾಮ್ ಬಿಶ್ಣೋಯ್ ತನ್ನ ಕಾರಿಗೆ ಬಳಕೆ ಮಾಡಿರುವ ನಂಬರ್ ಆತನ ಅರ್ಹತೆಗೂ ಮೀರಿದ್ದಾಗಿದೆ. ಕಿಯಾ ಕಾರ್ನಿವಲ್ ಕಾರಿನ ನಂಬರ್ ಪ್ಲೇಟ್, ML 02 A 0001 ಎಂದು ತಿಳಿದು ಬರುತ್ತದೆ.
ಇದನ್ನು ಓದಿ : ಪುಟ್ಟ ಮಗಳನ್ನು ಮನಸೋಇಚ್ಛೆ ಹಿಗ್ಗಾಮುಗ್ಗಾ ಥಳಿಸಿದ ರಾಕ್ಷಸ ರೂಪದ ತಾಯಿ ; Video Viral.!
ಇನ್ನೊಂದು ಕುತೂಹಲಕಾರಿ ವಿಷಯವೆಂದರೆ ಈತನ ಕಾರಿನಲ್ಲಿ ಕಂಡು ಬಂದ ML 02 A 0001 ಬಂಬರ್ ಪ್ಲೇಟ್, ಹ್ಯುಂಡೈ ವೆರ್ನಾ ಕಾರೊಂದರ ನಂಬರ್ ಪ್ಲೇಟ್ ಆಗಿದ್ದು ಈ ಕಾರನ್ನು ರಾಜ್ಯ ಸಾರಿಗೆ ಸಂಸ್ಥೆಯ (State Transport Corporation) ಅಡಿಯಲ್ಲಿ ರಿಜಿಸ್ಟರ್ ಮಾಡಲಾಗಿತ್ತು.
ಆ ನಂಬರ್ ಪ್ಲೇಟ್ ಈತನ ಕೈ ಹೇಗೆ ಸೇರಿತು ಎಂಬುದನ್ನು ತನಿಖೆ ಮಾಡಬೇಕಿದೆ ಎಂದು ವರದಿಯಿಂದ ತಿಳಿದು ಬಂದಿದೆ.