Saturday, July 27, 2024
spot_img
spot_img
spot_img
spot_img
spot_img
spot_img

ಪುಟ್ಟ ಮಗಳನ್ನು ಮನಸೋಇಚ್ಛೆ ಹಿಗ್ಗಾಮುಗ್ಗಾ ಥಳಿಸಿದ ರಾಕ್ಷಸ ರೂಪದ ತಾಯಿ ; Video Viral.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಅಮ್ಮ ಎಂದರೆ ಆಕಾಶ, ಅವಳಿಗೆ ಸರಿಸಾಟಿ ಮತ್ಯಾರು ಇಲ್ಲ. ತನ್ನ ಮಕ್ಕಳಿಗೆ ತಾಯಿ ನೀಡುವ ಅನನ್ಯ ಪ್ರೀತಿಯನ್ನು ವಿವರಿಸಲು ಸಾಧ್ಯವಿಲ್ಲ. ಆದರೆ, ಇಲ್ಲೊಬ್ಬ ತಾಯಿ ತಾನು ಹೆತ್ತ ಮಗುವನ್ನು ಮನಸ್ಸಿಗೆ ಬಂದಂತೆ ಹಿಗ್ಗಾಮುಗ್ಗಾ ಥಳಿಸುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಗುಜರಾತ್​​ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ.

ಇದನ್ನು ಓದಿ : ಲಾಡ್ಜ್’ನಲ್ಲಿ ಇಬ್ಬರೊಂದಿಗೆ ರೊಮ್ಯಾನ್ಸ್ ಮಾಡುವಾಗ ಪತಿಯ ಕೈಗೆ ಸಿಕ್ಕಿಬಿದ್ದ ವೈದ್ಯೆ ; ಮುಂದೆನಾಯ್ತು ಈ Video ನೋಡಿ.!

ಮಗಳನ್ನು ಥಳಿಸುತ್ತಿರುವ ವಿಡಿಯೋವನ್ನು ಆಕೆಯ ತಂದೆಯೇ ಚಿತ್ರೀಕರಿಸಿದ್ದಾನೆ ಎಂದು ವರದಿಯಿಂದ ತಿಳಿದು ಬಂದಿದೆ.

ವಿಡಿಯೋದಲ್ಲಿರುವ ದೃಶ್ಯ :
ಮಗಳನ್ನು ತಾಯಿ ಸೌಟಿನಿಂದ ಹಿಗ್ಗಾಮುಗ್ಗಾ ಥಳಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಇದನ್ನು ವಿಡಿಯೋ ಮಾಡುತ್ತ ಸುಮ್ಮನೇ ಕುಳಿತಿರುವ ಆಕೆಯ ಪತಿ ಏನು ಹೇಳದೆ ಇರುವುದನ್ನು ನೋಡಬಹುದಾಗಿದೆ.

ನೋವನ್ನು ತಾಳಲಾರದೆ ಮಗು ಜೋರಾಗಿ ಅಳುತ್ತಿರುವುದನ್ನು ವಿಡಿಯೋದಲ್ಲಿ ಸೆರೆಯಾಗಿದೆ. ಈ ವೇಳೆ ತಾಯಿ ಮಗುವಿನ ಕತ್ತು ಹಿಸುಕುವುದನ್ನು ನೋಡಬಹುದಾಗಿದೆ.

ಇದನ್ನು ಓದಿ : ವಿಮಾನದಿಂದ ಪ್ಯಾರಾಚೂಟ್​ ಧರಿಸದೆ 12 ಸಾವಿರ ಅಡಿಗಳಿಂದ ಜಿಗಿದ ಯುವಕ ; ಮುಂದೆನಾಯ್ತು Video ನೋಡಿ.!

ಇತ್ತ ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ಹಲವರು ತಾಯಿಯ ನಡೆಗೆ ಕಿಡಿಕಾರಿದ್ದು, ವಿಡಿಯೋ ರೆಕಾರ್ಡ್​ ಮಾಡುತ್ತಿರುವ ವ್ಯಕ್ತಿ ಮಗಳನ್ನು ಹೊಡೆಯುತ್ತಿರುವುದನ್ನು ನೋಡುತ್ತ ಯಾಕೆ ಸುಮ್ಮನೇ ಕುಳಿತಿದ್ದಾರೆ. ಬಿಡಿಸುವ ಬದಲು ಸುಮ್ಮನೇ ಕುಳಿತಿರುವವರನ್ನು ಮನುಷ್ಯರು ಎಂದು ಹೇಳುವುದಿಲ್ಲ. ಕೂಡಲೇ ಪೊಲೀಸರು ಇವರುಗಲ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ.

spot_img
spot_img
- Advertisment -spot_img