Wednesday, May 22, 2024
spot_img
spot_img
spot_img
spot_img
spot_img
spot_img

ಟೋಲ್ ಪ್ಲಾಜಾದಲ್ಲಿ ಮಹಿಳಾ ಸಿಬ್ಬಂದಿ ಮೇಲೆ ಕಾರು ಚಲಾಯಿಸಿದ ವ್ಯಕ್ತಿ ; Video Viral.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಟೋಲ್ ಕೇಳಿದ್ದಕ್ಕೆ ವ್ಯಕ್ತಿಯೊಬ್ಬ ಮಹಿಳೆ ಸಿಬ್ಬಂದಿ ಜತೆ ಅನುಚಿತವಾಗಿ ವರ್ತಿಸಿ ಆಕೆಗೆ ಕಾರಿನಿಂದ ಡಿಕ್ಕಿ ಹೊಡೆದಿರುವ ಘಟನೆ ಮೀರತ್​ನ (Mirat) ಕಾಶಿ ಟೋಲ್​ ಪ್ಲಾಜಾದಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಮಹಿಳಾ ಸಿಬ್ಬಂದಿ ಮೇಲೆ ವ್ಯಕ್ತಿಯೊಬ್ಬ ಕಾರು ಚಲಾಯಿಸಿದ ಘಟನೆ ದೆಹಲಿ-ಮೀರತ್​ ಎಕ್ಸ್​ಪ್ರೆಸ್​ವೇನ ಪರಾತ್​ಪುರ್ ಪ್ರದೇಶದ ಕಾಶಿ ಟೋಲ್ ಪ್ಲಾಜಾದಲ್ಲಿ (Toll plaza) ನಡೆದಿದೆ ಎಂದು ವರದಿ ತಿಳಿಸಿದೆ.

ಇದನ್ನು ಓದಿ : ಪುಟ್ಟ ಮಗಳನ್ನು ಮನಸೋಇಚ್ಛೆ ಹಿಗ್ಗಾಮುಗ್ಗಾ ಥಳಿಸಿದ ರಾಕ್ಷಸ ರೂಪದ ತಾಯಿ ; Video Viral.!

ಘಟನೆಯ ಕುರಿತು ವಿಡಿಯೋ ವೈರಲ್ ಆಗ್ತಿದೆ. ಈ ವಿಡಿಯೋದಲ್ಲಿ ಚಾಲಕನು ಮಹಿಳೆಯೊಂದಿಗೆ ಸಂಭಾಷಣೆ ನಡೆಸುತ್ತಿರುವುದನ್ನು ನೋಡಬಹುದಾಗಿದೆ.

ಅದೇನಾಯ್ತು ಗೊತ್ತಿಲ್ಲ, ಕಾರಿನ ವೇಗ ಹೆಚ್ಚಿಸಿದ ಚಾಲಕ ಪ್ಲಾಜಾದ ಮಹಿಳಾ ಸಿಬ್ಬಂದಿಗೆ ಡಿಕ್ಕಿ ಹೊಡೆದು ಮುಂದೆ ಸಾಗಿದ್ದಾನೆ. ಆಕೆ ಕಾರಿನ ಬಾನೆಟ್​ ಮೇಲೆ ಬಿದ್ದಿದ್ದಾರೆ. ಬಳಿಕ ಕಾರು ಮತ್ತಷ್ಟು ವೇಗವಾಗಿ (speed) ಮುಂದೆ ಹೋದಾಗ ಅವರು ಕೆಳಗೆ ಬೀಳುವುದನ್ನು ವಿಡಿಯೋದಲ್ಲಿ ಕಾಣಬಹುದು.

ಗಂಭೀರವಾಗಿ ಗಾಯಗೊಂಡ (serious injuries) ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದೆಹಲಿಯಿಂದ ಕಾರಿನಲ್ಲಿ ಬರುತ್ತಿದ್ದ ವ್ಯಕ್ತಿ ನಮ್ಮ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಟೋಲ್ ಕೇಳಿದಾಗ ಸಿಬ್ಬಂದಿ ಮೇಲೆ ಕಾರು ಚಲಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನು ಓದಿ : ಇಂದು ಕರ್ನಾಟಕದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಹೆಚ್ಚು ಮಳೆ ನಿರೀಕ್ಷೆ ; Yellow alert ಘೋಷಣೆ.!

ಈ ಕುರಿತು ಕಾಶಿ ಟೋಲ್ ಪ್ಲಾಜಾದ ವ್ಯವಸ್ಥಾಪಕ ಅನಿಲ್ ಶರ್ಮಾ ಅವರು, ಇದೊಂದು ಗಂಭೀರ ಘಟನೆಯಾಗಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಆಡಳಿತವು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

ಘಟನೆಯ ಕುರಿತು ದೂರು ದಾಖಲಾಗಿದ್ದು, ಟೋಲ್ ಬೂತ್‌ನಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಯನ್ನು ಗುರುತಿಸುವುದು ಸೇರಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

 

spot_img
spot_img
spot_img
- Advertisment -spot_img