Wednesday, May 22, 2024
spot_img
spot_img
spot_img
spot_img
spot_img
spot_img

5 ರೂ. ಕುರ್ಕುರೆ ತರಲಿಲ್ಲ ಎಂದು ಪತಿಗೆ divorce ನೀಡಲು ಮುಂದಾದ ಪತ್ನಿ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಇಂದಿನ ಆಧುನಿಕ ಕಾಲದಲ್ಲಿ ಚಿಕ್ಕಪುಟ್ಟ ಕಾರಣಗಳಿಂದ ವಿಚ್ಛೇದನ ಪಡೆಯುವುದು ಹೆಚ್ಚಾಗುತ್ತಿದೆ.

ಈ ಸಾಲಿಗೆ ಇದೀಗ ಹೊಸ ಸೇರ್ಪಡೆಯಾಗಿದೆ. ಗಂಡ ತನಗೆ 5 ರೂಪಾಯಿ ಕುರ್ಕುರೆ ಪ್ಯಾಕೆಟ್ ತಂದಿಲ್ಲ ಅನ್ನೋ ಕಾರಣಕ್ಕೆ ಡಿವೋರ್ಸ್ ಕೇಳಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

ಇದನ್ನು ಓದಿ : ಪುಟ್ಟ ಮಗಳನ್ನು ಮನಸೋಇಚ್ಛೆ ಹಿಗ್ಗಾಮುಗ್ಗಾ ಥಳಿಸಿದ ರಾಕ್ಷಸ ರೂಪದ ತಾಯಿ ; Video Viral.!

ಹೆಂಡತಿ ಒಂದೆರೆಡು ಸಲ ಹೇಳಿ ತಾಕೀತು ಮಾಡಿದ್ದಾಳೆ. ಆದರೆ ಆತ 5 ರೂಪಾಯಿ ಕುರ್ಕುರೆ ತರಲು ಮರೆತೇ ಹೋಗಿದ್ದಾನೆ. ಅಷ್ಟಕ್ಕೇ ಈ ಹೆಂಡತಿ ನೇರವಾಗಿ ಡಿವೋರ್ಸ್ ಕೇಳಿ ಇದೀಗ ಸುದ್ದಿಯಾಗಿದ್ದಾಳೆ.

ಆಗ್ರಾದ ದಂಪತಿ ಒಂದು ವರ್ಷದ ಹಿಂದೆ ಮದುವೆಯಾಗಿದ್ದಾರೆ. ನೂತನ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳೇನು ಇರಲಿಲ್ಲ. ಪತ್ನಿಗೆ ಹುರಿದ ತಿನಿಸುಗಳೆಂದರೆ ತುಂಬಾ ಇಷ್ಟ. ಅದರಲ್ಲೂ ಕುರ್ಕುರೆ ಪತ್ನಿಯ ನೆಚ್ಚಿನ ತಿನಿಸು.

ಆರಂಭದಲ್ಲೇ ಗಂಡ ನೆನಪಿನಲ್ಲಿಟ್ಟು ಕುರ್ಕುರೆ ತಂದುಕೊಡುತ್ತಿದ್ದ. 6 ತಿಂಗಳ ಬಳಿಕ ಪತಿಗೆ ಕೆಲಸದಲ್ಲಿ ಜವಾಬ್ದಾರಿ ಹೆಚ್ಚಿತು. ತಿರುಗಾಟ, ಸುತ್ತಾಟಕ್ಕೆ ಬ್ರೇಕ್ ಬಿದ್ದಿತು. ಆದರೂ ಪತ್ನಿಗೆ ಕುರ್ಕುರೆ ತರುತ್ತಿದ್ದ.

ಆದರೆ ವರ್ಷ ಕಳೆದ ಮೇಲೆ ಪತ್ನಿ ಪ್ರತಿ ದಿನ ಕುರ್ಕುರೆ ಬೇಕು ಎಂದಿದ್ದಾಳೆ. ಆದರೆ ಗಂಡ ಪ್ರತಿ ದಿನ ಕುರ್ಕುರೆ ತರಲು ಮರೆತು ಹೋಗಿದ್ದಾನೆ. ಒಂದೆರೆಡು ಬಾರಿ ಪತ್ನಿ ಸಿಡಿಮಿಡಿಗೊಂಡಿದ್ದಾಳೆ. ಬಳಿಕ 5 ರೂಪಾಯಿ ಕುರ್ಕುರೆ ಪ್ಯಾಕೆಟ್ ತರದ ಗಂಡನ ವಿರುದ್ದ ಮುನಿಸಿಕೊಂಡ ಪತ್ನಿ ನೇರವಾಗಿ ತವರು ಮನೆಗೆ ಹೋಗಿದ್ದಾಳೆ.

ನನ್ನ ಗಂಡ‌ ನನ್ನನ್ನು ನಿರ್ಲಕ್ಷಿಸುತ್ತಿದ್ದಾನೆ ಎಂದು ಹೇಳಿ ತವರು ಮನೆ ಸೇರಿದ್ದಾಳೆ. ಇತ್ತ ಪತಿ ಫೋನ್ ಮೂಲಕ ಮನವೊಲಿಸುವ ಪ್ರಯತ್ನ ಮಾಡಿದ್ದಾನೆ. ಆದರೆ ಏನೂ ಉಪಯೋಗವಾಗಲಿಲ್ಲ.

ಇದನ್ನು ಓದಿ : ಇಂದು ಕರ್ನಾಟಕದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಹೆಚ್ಚು ಮಳೆ ನಿರೀಕ್ಷೆ ; Yellow alert ಘೋಷಣೆ.!

2 ತಿಂಗಳ ತವರಿನಲ್ಲೇ ಉಳಿದ ಪತ್ನಿ, ಬಳಿಕ ಡಿವೋರ್ಸ್‌ಗೆ ಅರ್ಜಿ ಹಾಕಿದ್ದಾಳೆ. ಆದರೆ ಈಕೆಯ ಡಿವೋರ್ಸ್‌ನಲ್ಲಿ ನೀಡಿದ ಕಾರಣ ನೋಡಿದ ವಕೀಲರು, ಕೌನ್ಸಲಿಂಗ್ ಅಧಿಕಾರಿಗಳ ಬಳಿ ಕಳುಹಿಸಿದ್ದಾರೆ.

ಅಲ್ಲಿ ಪತ್ನಿಯ 5 ರೂಪಾಯಿ ಕುರ್ಕುರೆ ಮಾತು ಕೇಳಿ ಅಧಿಕಾರಿಗಳು ಸುಸ್ತಾಗಿದ್ದಾರೆ. 6 ತಿಂಗಳಿನಿಂದ ಪತ್ನಿಯ ವರ್ತನೆ ಬದಲಾಗಿದೆ. ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಪ್ರತಿ ದಿನ 5 ರೂಪಾಯಿ ಕುುರ್ಕುರೆ ತರಲು ಹೇಳಿದರೆ ಒಂದು ದಿನವೂ ತಂದಿಲ್ಲ ಎಂದು ದೂರಿದ್ದಾಳೆ. ಪತಿ ಹಾಗೂ ಪತ್ನಿ ಇಬ್ಬರನ್ನು ಕರೆಸಿದ ಆಗ್ರಾದ ಕೌನ್ಸಿಲಿಂಗ್ ಅಧಿಕಾರಿ ಡಾ. ಸತೀಶ್ ಖಿರ್ವಾರ್, ಆಪ್ತ ಸಮಾಲೋಚನೆ ನಡೆಸಿ, ಪತ್ನಿ ಕೊಟ್ಟ ಕಾರಣ ಕೇಳಿ ಸುಸ್ತಾಗಿದ್ದಾರೆ.

spot_img
spot_img
spot_img
- Advertisment -spot_img