Saturday, July 27, 2024
spot_img
spot_img
spot_img
spot_img
spot_img
spot_img

Special news : ಮಧ್ಯಾಹ್ನ ಎಷ್ಟು ಗಂಟೆಗಳ ಕಾಲ ನಿದ್ದೆ ಮಾಡಿದ್ರೆ ಒಳ್ಳೆದು ಗೊತ್ತಾ.?

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ದೇಹವನ್ನು ಚಲನಶೀಲವಾಗಿಟ್ಟುಕೊಳ್ಳಲು (body motion) ನಿದ್ದೆ ಸಹಕಾರಿಯಾಗಿದೆ. ಜೊತೆಗೆ ಮೆದುಳನ್ನು ಕ್ರಿಯಾಶೀಲತೆಯಿಂದ ಕೂಡಿರುವಂತೆ ಮಾಡುತ್ತದೆ.

ಪ್ರತೀ ಆರೋಗ್ಯವಂತ ವ್ಯಕ್ತಿಗೆ 7 ರಿಂದ 8 ಗಂಟೆಗಳ ನಿದ್ದೆ ಅವಶ್ಯಕವಾಗಿರುತ್ತದೆ. ಇನ್ನೂ ಕೆಲವರಿಗೆ ಮಧ್ಯಾಹ್ನ ನಿದ್ದೆ ಮಾಡುವ ಅಭ್ಯಾಸವಿರುತ್ತದೆ.

ಇದನ್ನು ಓದಿ : Crime : ಪ್ರೀತಿ ನಿರಾಕರಿಸಿದ್ದಕ್ಕೆ ಮನೆಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ.!

ಮಧ್ಯಾಹ್ನದ ನಿದ್ದೆಯಿಂದ ಜಡತ್ವ (torpidity) ಉಂಟಾಗುತ್ತದೆ ಎನ್ನುತ್ತಾರೆ. ಹಾಗಾದರೆ ಮಧ್ಯಾಹ್ನದ ನಿದ್ದೆಯ ಅಭ್ಯಾಸ ಕೆಟ್ಟದ್ದಾ ಅಥವಾ ಒಳ್ಳೆಯದಾ ? ಅಂತ ನೋಡೋಣ ಬನ್ನಿ.

ಮಧ್ಯಾಹ್ನ 2 ಮತ್ತು 3 ರ ನಡುವೆ ನಿದ್ದೆ ಉತ್ತಮವಾಗಿರುತ್ತದೆ. ಎಷ್ಟು ವಿಶ್ರಾಂತಿ ಪಡೆಯುತ್ತೀರಿ ಎನ್ನುವದರ ಮೇಲೆ ಉತ್ತಮವಾಗಿ ಕಾರ್ಯನಿರ್ವಹಿಸುವ ಸಮಯವು ಅವಲಂಬಿತವಾಗಿರುತ್ತದೆ. ನೀವು ಚೆನ್ನಾಗಿ ವಿಶ್ರಾಂತಿ (rest) ಪಡೆದಿದ್ದರೆ, ಸಮಯವನ್ನು ಹೊಂದಿಸಿಕೊಂಡು ನಂತರ ನಿದ್ದೆ ಮಾಡುವುದು ಉತ್ತಮ.

ಹಲವು ಅಧ್ಯಯನಗಳ ಪ್ರಕಾರ ಮಧ್ಯಾಹ್ನದ ನಿದ್ದೆ ಆರೋಗ್ಯವನ್ನು ಉತ್ತಮಗೊಳಿಸುತ್ತದೆ (improves health). ಪ್ರತಿದಿನ ಊಟವಾದ ಬಳಿಕ 10 ರಿಂದ 15 ನಿಮಿಷ ನಿದ್ದೆ ಮಾಡುವುದರಿಂದ ಬಹಳಷ್ಟು ಪ್ರಯೋಜನಗಳನ್ನು ಪಡೆಯಬಹುದಾಗಿದೆ.

ಇದನ್ನು ಓದಿ : ಟೋಲ್ ಪ್ಲಾಜಾದಲ್ಲಿ ಮಹಿಳಾ ಸಿಬ್ಬಂದಿ ಮೇಲೆ ಕಾರು ಚಲಾಯಿಸಿದ ವ್ಯಕ್ತಿ ; Video Viral.!

ಮಧ್ಯಾಹ್ನದ ನಿದ್ದೆ ಮೂಡ್‌ಅನ್ನು ರಿಪ್ರೆಶ್‌ ಮಾಡುತ್ತದೆ. ಇದರೊಂದಿಗೆ ಏಕಾಗ್ರತೆ, ಸ್ಮರಣೆಯನ್ನು ಹೆಚ್ಚಿಸಲು ಮತ್ತು ಸೃಜನಶೀಲತೆಯನ್ನು (inventiveness) ಹೆಚ್ಚಿಸಲು ಸಹಾಯ ಮಾಡುತ್ತದೆ ಎನ್ನಲಾಗುತ್ತದೆ.

ಮಧ್ಯಾಹ್ನದ ಸಮಯದಲ್ಲಿ ತೆಗೆದುಕೊಳ್ಳುವ ಪವರ್ ನಾಪ್ ಒತ್ತಡವನ್ನು ಕಡಿಮೆ ಮಾಡಲು ಮತ್ತು ನಿಮ್ಮ ಗಮನವನ್ನು ಒಂದೇ ಕಡೆ ಇಡಲು ಸಾಧ್ಯವಾಗುವಂತೆ ಮಾಡುತ್ತದೆ. ಮಧ್ಯಾಹ್ನ ನಿದ್ದೆ ಮಾಡುವುದರಿಂದ ಜ್ಞಾಪಕ ಶಕ್ತಿ (memory power) ಉತ್ತಮವಾಗುತ್ತದೆ. ಮೆದುಳಿಗೆ ಕೊಂಚ ವಿಶ್ರಾಂತಿ ದೊರಕುವುದರಿಂದ ಕೆಲಸ ಮಾಡುವ ಉತ್ಸಾಹವೂ (zealotry) ಮೂಡುತ್ತದೆ.

spot_img
spot_img
- Advertisment -spot_img