Saturday, July 27, 2024
spot_img
spot_img
spot_img
spot_img
spot_img
spot_img

SSLCಯಲ್ಲಿ 625ಕ್ಕೆ 623 ಅಂಕ : ಕೋರ್ಟ್‌ನಲ್ಲಿ ಕೆಲಸ ; ಓದಕ್ಕೂ ಬರೆಯಕ್ಕೂ ಬರೊಲ್ಲ.!

spot_img

ಜನಸ್ಪಂದನ ನ್ಯೂಸ್‌, ಕೊಪ್ಪಳ : ಈತ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 623 ಅಂಕಗಳನ್ನು ಗಳಿಸಿ ಜಿಲ್ಲಾ ನ್ಯಾಯಾಲಯದಲ್ಲಿ ನೌಕರಿಯನ್ನೂ ಪಡೆದುಕೊಂಡಿದ್ದನು. ಆದ್ದರೂ ಸಹ ಇತನಿಗೆ ಇಂಗ್ಲೀಷ್ ಹಾಗೂ ಹಿಂದಿ ಯಾವುದೇ ಭಾಷೆಯನ್ನು ಓದಲು, ಬರೆಯಲು ಬರುವುದಿಲ್ಲ. ಅಷ್ಟೆ ಏಕೆ ಕನ್ನಡವು ಸಹ ಓದಲು, ಬರೆಯಲು ಬರುವುದಿಲ್ಲ. ಇತ ಕೊಪ್ಪಳ ನ್ಯಾಯಾಲಯದಲ್ಲಿ ಕೆಲಸ ಮಾಡುತ್ತಿದ್ದಾನೆ.

ಆ ಯುವಕನನ್ನು ಕೊಪ್ಪಳದ ಪ್ರಭು ಲಕ್ಷ್ಮೀಕಾಂತ ಲೋಕರೆ (23) ಎಂದು ಗುರುತಿಸಲಾಗಿದೆ. ಈತನಿಗೆ ವಾಸ್ತವದಲ್ಲಿ ಕನ್ನಡ, ಇಂಗ್ಲಿಷ್, ಹಿಂದಿ ಯಾವುದೇ ಭಾಷೆಯನ್ನು ಓದಲು ಹಾಗೂ ಬರೆಯಲು ಬುರುವುದೇ ಇಲ್ಲ.

10 ನೇ ತರಗತಿ ಪಾಸಾಗಿದ್ದೀರಾ.? ರಕ್ಷಣಾ ಸಚಿವಾಲಯದಲ್ಲಿ ಪರೀಕ್ಷೆಯಿಲ್ಲದೆ ಸಿಗುತ್ತೆ ನೌಕರಿ.!

ಈ ಬಗ್ಗೆ ಪರಿಶೀಲಿಸಿದ ನ್ಯಾಯಾಧೀಶರು ಇದು ಹೇಗೆ ಸಾಧ್ಯವೆಂದು ಪ್ರಶ್ನಿಸಿ, ಆತನ ಮೇಲೆ ಕೇಸ್ ದಾಖಲಿಸಿ ತನಿಖೆ ನಡೆಸುವಂತೆ ಪೊಲೀಸರಿಗೆ ಆದೇಶ ಹೊರಡಿಸಿದ್ದಾರೆ.

ಯಾವುದೇ ಭಾಷೆ ಓದಲು ಮತ್ತು ಬರೆಯಲು ಬಾರದಿದ್ದರೂ ಸಹ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 623 ಅಂಕಗಳನ್ನು ಪಡೆದು ಜೆಎಂಎಫ್‌ಸಿ ಕೋರ್ಟ್‌ನಲ್ಲಿ ಸ್ಕ್ಯಾವೆಂಜರ್ (ಅಂದ್ರೆ ಸ್ವಚ್ಚತಾ ಕೆಲಸ ಮಾಡುವ) ಆಗಿ ನೌಕರಿ ಪಡೆದು ಕಾರ್ಯ ನಿರ್ವಹಿಸುತ್ತಿದ್ದಾನೆ. ಮುಂದುವರೆದು ಈಗ ಸರ್ಕಾರದ ಮತ್ತೊಂದು ನೇಮಕಾತಿಯಲ್ಲಿ ಅರ್ಹತೆ ಪಡೆದು ಯಾದಗಿರಿ ಜಿಲ್ಲೆಯ ಕೋರ್ಟ್‌ನಲ್ಲಿ ಜವಾನ ಹುದ್ದೆಯನ್ನು ಗಿಟ್ಟಿಸಿಕೊಂಡಿದ್ದಾನೆ. ಇದೆಲ್ಲವೂ ಹೇಗೆ ಸಾಧ್ಯ ಎಂದು ನ್ಯಾಯಾಧೀಶರು ಅನುಮಾನ ವ್ಯಕ್ತಪಡಿಸಿದ್ದಾರೆ.

ದೀರ್ಘಕಾಲ ಕುಳಿತುಕೊಂಡೇ ಕೆಲಸ ಮಾಡ್ತೀರಾ.? ಹಾಗಿದ್ರೆ ಈ ಸುದ್ದಿ ಓದಿ.

ಕೊಪ್ಪಳದಲ್ಲಿ ನೌಕರಿ ಮಾಡುತ್ತಿರುವ ಪ್ರಭು ಬಾಗಲಕೋಟೆ ಜಿಲ್ಲೆಯೊಂದರ ಕೇಂದ್ರದಲ್ಲಿ ಬಾಹ್ಯ ಅಭ್ಯರ್ಥಿಯಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು, ಅದರಲ್ಲಿ 623 ಅಂಕ ಪಡೆದಿದ್ದನು. ಇದರ ಆಧಾರದಲ್ಲಿ ಕೊಪ್ಪಳ ನ್ಯಾಯಾಲಯದಲ್ಲಿ ಸ್ಕ್ಯಾವೆಂಜರ್ಸ್ ಹುದ್ದೆಯನ್ನೂ ಗಳಿಸಿದ್ದನು, ಇದಾದ ಕೆಲವೇ ದಿನಗಳಲ್ಲಿ ಪುನಃ ಜವಾನ ಹುದ್ದೆ ಗಳಿಸಿದ್ದನು.

ಹುದ್ದೆ ಮೇಲೆ ಸರ್ಕಾರಿ ಹುದ್ದೆ ಪಡೆಯುತ್ತಿದ್ದ ಪ್ರಭುವನ್ನು ನ್ಯಾಯಾಧೀಶರು ಪರಿಶೀಲನೆ ಮಾಡಿದಾಗ ಆತನಿಗೆ ಮಾತೃ ಭಾಷೆ ಕನ್ನಡ, ಇಂಗ್ಲೀಷ್ ಅಥವಾ ಹಿಂದಿ ಯಾವುದೇ ಭಾಷೆಯನ್ನು ಓದಲು ಬರೆಯಲು ಬರುವುದಿಲ್ಲ ಎಂಬುದು ಖಾತರಿಯಾಗಿದೆ. ಆಗ, ಈತನ ವಿರುದ್ಧ ಕೇಸ್ ದಾಖಲಿಸಲು ಸೂಚಿಸಿದ್ದಾರೆ. (ಎಜೇನ್ಸಿಸ್)

spot_img
spot_img
- Advertisment -spot_img