ಜನಸ್ಪಂದನ ನ್ಯೂಸ್, ಡೆಸ್ಕ್ : ಮಹಾನಗರ ಪಾಲಿಕೆಯ ಅಧಿಕಾರಿಯೋರ್ವನ ಮನೆ ಮೇಲೆ ಎಸಿಬಿ ರೇಡ್ ವೇಳೆ ಸಮಯದಲ್ಲಿ ಲಂಚದ ಹಣವನ್ನು ಶೌಚಾಲಯದಲ್ಲಿ ಎಸೆದು, ಫ್ಲಶ್ ಮಾಡಿದ ಘಟನೆ ನಡೆದಿದೆ.
ಮುಂಬೈನ ಮಹಾನಗರ ಪಾಲಿಕೆಯ ಅಧಿಕಾರಿ ಪ್ರಹ್ಲಾದ್ ಶಿಟೋಳೆ ಹೀಗೆ ಮಾಡಿದ್ದು, ಈಗ ಆ ಹಣವನ್ನು ಹುಡುಕಲು ಎಸಿಬಿ ಆಫೀರ್ಸ್ ದಹಿಸಾರ್ ಪ್ರದೇಶದಲ್ಲಿ ಒಟ್ಟು 20 ಚರಂಡಿಗಳನ್ನು ಹುಡುಕಾಡಿ ಹಣ ಪತ್ತೆ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನು ಓದಿ : ಬ್ಯೂಟಿ ಪಾರ್ಲರ್ ಬಂದ್ ಮಾಡಿಸಿ ಎಂದು ಪ್ರತಿಭಟನೆ ನಡೆಸಿದ ಯುವಕರು; ವಿಡಿಯೋ Viral.!
ಇನ್ನೂ ಶಿಟೋಳೆ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಹಾಗೂ ಸಾಕ್ಷಿನಾಶದ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಸೆಪ್ಟಂಬರ್ 3ರವರೆಗೂ ಶಿಟೋಳೆಯನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಬೃಹತ್ ಮುಂಬೈ ಮಹಾನಗರ ಪಾಲಿಕೆಯಿಂದ ಪಿಎನ್ಜಿ ಗ್ಯಾಸ್ ಕನೆಕ್ಷನ್ ಮಾಡಲು ಅಗ್ನಿಶಾಮಕ ಇಲಾಖೆಯಿಂದ ನೋ ಆಬ್ಜ್ಕ್ಷನ್ ಸರ್ಟಿಫಿಕೆಟ್ (NOC) ಪಡೆಯಲು ಕಂಪನಿಯೊಂದರಿಂದ ರೆಸ್ಟೋರೆಂಟ್ ಸೇವೆ ತೆಗೆದುಕೊಂಡಿತ್ತು. ಅದರ ಜವಾಬ್ದಾರಿಯನ್ನು ಈ 40 ವರ್ಷದ ವ್ಯಕ್ತಿಯೋರ್ವ ಪಡೆದುಕೊಂಡಿದ್ದ.
ಇದನ್ನು ಓದಿ : Health : ಕಾಲಿನಲ್ಲಿ ಈ ಲಕ್ಷಣ ಕಾಣಿಸಿಕೊಳ್ಳುತ್ತಿವೆಯೇ? ಇವು ಈ ಗಂಭೀರ ಕಾಯಿಲೆಯ ಲಕ್ಷಣಗಳಾಗಿರಬಹುದು.?
ಅಂತೆಯೇ ಆ ವ್ಯಕ್ತಿ ಮಹಾನಗರ ಪಾಲಿಕೆಗೆ ಭೇಟಿ ಕೊಟ್ಟು ಅರ್ಜಿಯನ್ನು ಕೊಟ್ಟಿದ್ದಾರೆ. ಬಳಿಕ ಬಿಎಂಸಿ ಹಿರಿಯ ಅಧಿಕಾರಿಯಾದ ಪ್ರಹ್ಲಾದ್ ಶಿಟೋಳೆ 1 ಲಕ್ಷದ 30 ಸಾವಿರ ರೂಪಾಯಿಗೆ ಡಿಮ್ಯಾಂಡ್ ಮಾಡಿದ್ದರು. ಅಷ್ಟು ಹಣ ನೀಡಿದರೆ ಮಾತ್ರ ಎನ್ಒಸಿ ಕೊಡುವುದಾಗಿ ಹೇಳಿದ್ದರಂತೆ.
ಇದಕ್ಕೆ ಒಪ್ಪದ ವ್ಯಕ್ತಿ ಕೊನೆಗೆ 80 ಸಾವಿರಕ್ಕೆ ಲಂಚದ ಡೀಲ್ ಬಂದು ನಿಲ್ಲುತ್ತದೆ. ಬಾಯ್ಬಿಟ್ಟು ಲಂಚ ಕೇಳದ ಶಿಟೋಳೆ ಅವರು ಕ್ಯಾಲ್ಕುಲೇಟರ್ನಲ್ಲಿ ಟೈಪ್ ಮಾಡಿ ಲಂಚದ ಹಣವನ್ನು ಉಲ್ಲೇಖಿಸುತ್ತಿದ್ದರಂತೆ.
ಇದನ್ನು ಓದಿ : ಪೊಲೀಸ್ ಠಾಣೆಯಲ್ಲಿಯೇ ಅಜ್ಜಿ-ಮೊಮ್ಮಗನ ಮೇಲೆ ಅಮಾನುಷ ಹಲ್ಲೆ ; ವಿಡಿಯೋ ವೈರಲ್.!
60 ಸಾವಿರ ರೂಪಾಯಿ ಕೊಡಲು ಹೊರಟ ಸಂಪರ್ಕಾಧಿಕಾರಿಗೆ ಶಿಟೋಳೆ ಗ್ರೌಂಡ್ ಫ್ಲೋರ್‌ಗೆ ಬರಲು ಹೇಳಿ ಆಮೇಲೆ ಲಿಫ್ಟ್ ನಲ್ಲಿ ಹೋಗುವಾಗ 60 ಸಾವಿರ ರೂಪಾಯಿ ಲಂಚ ಪಡೆದಿದ್ದಾನೆ. ಆದ್ರೆ ಶಿಟೋಳೆಗೆ ಏನೋ ಒಂದು ಅನುಮಾನ ಬರುತ್ತದೆ. ಕೊಟ್ಟ ನೋಟುಗಳ ಮೇಲೆ ಒಂದು ರೀತಿಯ ಪೌಡರ್ ಇರುವುದನ್ನು ಕಂಡು ನೇರವಾಗಿ ತನ್ನ ನಾಲ್ಕನೇ ಫ್ಲೋರ್ನಲ್ಲಿರುವ ಆಫೀಸ್ಗೆ ಹೋಗಿ ದುಡ್ಡನ್ನು ಟಾಯ್ಲೆಟ್‌ನಲ್ಲಿ ಎಸೆದು ಫ್ಲಶ್ ಮಾಡಿದ್ದಾನೆ.
ಮೊದಲೇ ಎಸಿಬಿ ಅಧಿಕಾರಿಗಳು ಲಂಚದ ನೋಟಿನ ಸೀರಿಯಲ್ ನಂಬರ್ ಬರೆದಿಟ್ಟು ಕೊಂಡಿದ್ದಾರೆ. ಅದರ ಜೊತೆಗೆ ನೋಟುಗಳಿಗೆ ಒಂದು ವಿಧವಾದ ಪೌಡರ್ ಹಾಕಿದ್ದರು. ಇದರಿಂದ ಲಂಚ ತೆಗೆದುಕೊಂಡ ವ್ಯಕ್ತಿಯ ಕೈಯನ್ನು ಸೆಲ್ಯೂಷನ್ ನಲ್ಲಿ ಅದ್ದಿ ನೋಡಿದಾಗ ಅದು ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ಅದನ್ನೇ ಸಾಕ್ಷಿಯಾಗಿ ಕೋರ್ಟ್ಗೆ ಸಲ್ಲಿಕೆ ಮಾಡಲಾಗುತ್ತದೆಯಂತೆ. ಕೋರ್ಟ್ಗೆ ಸಾಕ್ಷಿ ಸಲ್ಲಿಸಲು ನೋಟುಗಳೇ ಪ್ರಮುಖವಾದ ಸಾಕ್ಷಿ.
ಇದನ್ನು ಓದಿ : Video : ಹೋಟೆಲ್‌ನಲ್ಲಿ ಇಬ್ಬರು ಯುವತಿಯರ ಜೊತೆ ಪತಿಯ ಸರಸ; ರೆಡ್ ಹ್ಯಾಂಡ್ಆಗಿ ಹಿಡಿದ ಪತ್ನಿ.!
ಹೀಗಾಗಿ ಎಸಿಬಿ ಅಧಿಕಾರಿಗಳು ಹಣವನ್ನು ರಿಕವರಿ ಮಾಡಲು 20 ಗಟಾರ್ಗಳನ್ನು ಹುಡುಕಾಡಿದ್ದಾರೆ. ಈಗಾಗಲೇ 57 ಸಾವಿರ ರೂಪಾಯಿ ಹಣವನ್ನು ಹುಡುಕಲಾಗಿದ್ದು, ಉಳಿದ ಮೂರು ಸಾವಿರ ರೂಪಾಯಿ ಕೊಚ್ಚಿಕೊಂಡು ಹೋಗಿವೆ ಎಂದು ವರದಿಯಿಂದ ತಿಳಿದು ಬಂದಿದೆ.
ಸದ್ಯ ಅಧಿಕಾರಿಯ ವಿರುದ್ಧ ಲಂಚದ ಜೊತೆಗೆ ಸಾಕ್ಷ್ಯ ನಾಶ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.