ಜನಸ್ಪಂದನ ನ್ಯೂಸ್, ಡೆಸ್ಕ್ : ಮಹಿಳೆಯ ಹಿಂದಿನಿಂದ ಬಂದ ದುಷ್ಕರ್ಮಿಯೋರ್ವ ಆಕೆಯ ಕುತ್ತಿಗೆಗೆ ಬೆಲ್ಟ್ನಿಂದ ಬಿಗಿದು ಪ್ರಜ್ಞೆ ತಪ್ಪಿಸಿ (unconsciousness) ಅತ್ಯಾಚಾರ ಮಾಡಿರುವ ಘಟನೆ ನಡೆದಿದೆ.
ನ್ಯೂಯಾರ್ಕ್ (New York) ನಗರದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ಘಟನೆಯ ಕುರಿತಾದ ಸಿಸಿಟಿವಿ ವಿಡಿಯೋ ಕೂಡ ವೈರಲ್ ಆಗಿದೆ.
ಏಕಾಂತ ಸ್ಥಳದಲ್ಲಿ ಬಾಲಕಿಗೆ ಆಟೋ ಚಾಲಕನಿಂದ ಲೈಂಗಿಕ ಕಿರುಕುಳ ; Video Viral.!
ದುಷ್ಕರ್ಮಿಯೋರ್ವ ಹಿಂದೆಯಿಂದ ಬಂದು ಮಹಿಳೆಯ ಕುತ್ತಿಗೆಗೆ ಬೆಲ್ಟ್ನಿಂದ ಬಿಗಿದಿದ್ದಾನೆ. ಈ ವೇಳೆ ಮಹಿಳೆ ನೆಲಕ್ಕೆ ಬಿದ್ದಿದ್ದು, ಆಕೆಯನ್ನು ಕಾರಿನ ಬಳಿ ಎಳೆದುಕೊಂಡು ಹೋಗಿ (Drag and drop) ಅತ್ಯಾಚಾರವೆಸಗಿದ್ದಾನೆ.
ಮೇ 1ರಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ನಗರದ ಬ್ರಾಂಕ್ಸ್ ಬರೋದಲ್ಲಿ ಮಹಿಳೆ ಮೇಲೆ ಈ ದಾಳಿ ನಡೆದಿದೆ. ಆದರೆ ಮಹಿಳೆ ಮೇಲೆ ದಾಳಿ (attack) ಮಾಡಿದಾತ ಯಾರೆಂದು ಇಲ್ಲಿಯವರೆಗೆ ಪತ್ತೆ ಮಾಡಲು ಸಾಧ್ಯವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.
KPSC : ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ ʼBʼ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಆ ವ್ಯಕ್ತಿ ಮುಖಕ್ಕೆ ಬಿಳಿ ಬಟ್ಟೆಯನ್ನು ಕಟ್ಟಿಕೊಂಡಿದ್ದ. ಮಹಿಳೆಯನ್ನು ಸುಮಾರು ದೂರದಿಂದ ಹಿಂಬಾಲಿಸಿಕೊಂಡು (following) ಬಂದು ದಾಳಿ ಮಾಡಿದ್ದಾನೆ ಎನ್ನಲಾಗಿದೆ.
ಮಹಿಳೆ ಆತನಿಂದ ತಪ್ಪಿಸಿಕೊಳ್ಳಲು ತುಂಬಾ ಒದ್ದಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಕಾರಿನ ಸಂದಿಗೆ ಎಳೆದುಕೊಂಡು ಹೋಗಿದ್ದಾನೆ. ಈ ವೇಳೆ ಕುತ್ತಿಗೆಗೆ ಬೆಲ್ಟ್ ಬಿಗಿದ ಕಾರಣ ಮಹಿಳೆ ಪ್ರಜ್ಞಾ ತಪ್ಪಿದ್ದಾಳೆ. ನಂತರ ಆಕೆಯ ಮೇಲೆ ಮನಬಂದಂತೆ ಅತ್ಯಾಚಾರ ಮಾಡಿದ್ದಾನೆ.
ನಂತರ ಆ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ. ಇದೀಗ ಈ ಸಿಸಿಟಿವಿ ವಿಡಿಯೋ ಆಧಾರದ ಮೇಲೆ ಆತನನ್ನು ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇನ್ನು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಮಹಿಳೆ ಹೇಳಿಕೆಯನ್ನು ಕೂಡ ಪಡೆಯಲಾಗಿದೆ ಎಂದು ವರದಿಯಾಗಿದೆ.
NEW: NYPD is investigating the viral footage of a 45-year-old woman getting strangled and r*ped on the sidewalk at East 152nd Street and Third Avenue.
According to new information as reported by the New York Post, the woman had been in contact the NYPD.
She was reportedly… pic.twitter.com/fz4sSO6Yt7
— Collin Rugg (@CollinRugg) May 9, 2024