Wednesday, May 22, 2024
spot_img
spot_img
spot_img
spot_img
spot_img
spot_img

Video : ಮಹಿಳೆಯ ಕುತ್ತಿಗೆಗೆ ಬೆಲ್ಟ್​​​ನಿಂದ ಬಿಗಿದು ಪ್ರಜ್ಞೆ ತಪ್ಪಿಸಿ ದುಷ್ಕರ್ಮಿಯಿಂದ ಅತ್ಯಾಚಾರ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಮಹಿಳೆಯ ಹಿಂದಿನಿಂದ ಬಂದ ದುಷ್ಕರ್ಮಿಯೋರ್ವ ಆಕೆಯ ಕುತ್ತಿಗೆಗೆ ಬೆಲ್ಟ್​​​ನಿಂದ ಬಿಗಿದು ಪ್ರಜ್ಞೆ ತಪ್ಪಿಸಿ (unconsciousness) ಅತ್ಯಾಚಾರ ಮಾಡಿರುವ ಘಟನೆ ನಡೆದಿದೆ.

ನ್ಯೂಯಾರ್ಕ್ (New York) ನಗರದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ಘಟನೆಯ ಕುರಿತಾದ ಸಿಸಿಟಿವಿ ವಿಡಿಯೋ ಕೂಡ ವೈರಲ್​​ ಆಗಿದೆ.

ಏಕಾಂತ ಸ್ಥಳದಲ್ಲಿ ಬಾಲಕಿಗೆ ಆಟೋ ಚಾಲಕನಿಂದ ಲೈಂಗಿಕ ಕಿರುಕುಳ ; Video Viral.!

ದುಷ್ಕರ್ಮಿಯೋರ್ವ ಹಿಂದೆಯಿಂದ ಬಂದು ಮಹಿಳೆಯ ಕುತ್ತಿಗೆಗೆ ಬೆಲ್ಟ್​​​ನಿಂದ ಬಿಗಿದಿದ್ದಾನೆ. ಈ ವೇಳೆ ಮಹಿಳೆ ನೆಲಕ್ಕೆ ಬಿದ್ದಿದ್ದು, ಆಕೆಯನ್ನು ಕಾರಿನ ಬಳಿ ಎಳೆದುಕೊಂಡು ಹೋಗಿ (Drag and drop) ಅತ್ಯಾಚಾರವೆಸಗಿದ್ದಾನೆ.

ಮೇ 1ರಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ನಗರದ ಬ್ರಾಂಕ್ಸ್ ಬರೋದಲ್ಲಿ ಮಹಿಳೆ ಮೇಲೆ ಈ ದಾಳಿ ನಡೆದಿದೆ. ಆದರೆ ಮಹಿಳೆ ಮೇಲೆ ದಾಳಿ (attack) ಮಾಡಿದಾತ ಯಾರೆಂದು ಇಲ್ಲಿಯವರೆಗೆ ಪತ್ತೆ ಮಾಡಲು ಸಾಧ್ಯವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.

KPSC : ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್​ ʼBʼ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಆ ವ್ಯಕ್ತಿ ಮುಖಕ್ಕೆ ಬಿಳಿ ಬಟ್ಟೆಯನ್ನು ಕಟ್ಟಿಕೊಂಡಿದ್ದ. ಮಹಿಳೆಯನ್ನು ಸುಮಾರು ದೂರದಿಂದ ಹಿಂಬಾಲಿಸಿಕೊಂಡು (following) ಬಂದು ದಾಳಿ ಮಾಡಿದ್ದಾನೆ ಎನ್ನಲಾಗಿದೆ.

ಮಹಿಳೆ ಆತನಿಂದ ತಪ್ಪಿಸಿಕೊಳ್ಳಲು ತುಂಬಾ ಒದ್ದಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಕಾರಿನ ಸಂದಿಗೆ ಎಳೆದುಕೊಂಡು ಹೋಗಿದ್ದಾನೆ. ಈ ವೇಳೆ ಕುತ್ತಿಗೆಗೆ ಬೆಲ್ಟ್​​​ ಬಿಗಿದ ಕಾರಣ ಮಹಿಳೆ ಪ್ರಜ್ಞಾ ತಪ್ಪಿದ್ದಾಳೆ. ನಂತರ ಆಕೆಯ ಮೇಲೆ ಮನಬಂದಂತೆ ಅತ್ಯಾಚಾರ ಮಾಡಿದ್ದಾನೆ.

ನಂತರ ಆ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ. ಇದೀಗ ಈ ಸಿಸಿಟಿವಿ ವಿಡಿಯೋ ಆಧಾರದ ಮೇಲೆ ಆತನನ್ನು ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇನ್ನು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಮಹಿಳೆ ಹೇಳಿಕೆಯನ್ನು ಕೂಡ ಪಡೆಯಲಾಗಿದೆ ಎಂದು ವರದಿಯಾಗಿದೆ.

spot_img
spot_img
spot_img
- Advertisment -spot_img