ಜನಸ್ಪಂದನ ನ್ಯೂಸ್, ಡೆಸ್ಕ್ : ಈ ಜಗತ್ತಿನಲ್ಲಿ ಎಂತೆಂತವೋ ಚಿತ್ರವಿಚಿತ್ರ ಘಟನೆಗಳು ನಡೆಯುತ್ತವೆ. ಸದ್ಯ ಮೂವರು ಯುವತಿಯರು ಒಬ್ಬರನ್ನೊಬ್ಬರು ಪ್ರೀತಿಸಿ ಮೂವರೂ ಮದುವೆಯಾದ ವಿಚಿತ್ರ ಘಟನೆ ನಡೆದಿದೆ.
ಈ ವಿಚಿತ್ರ ಸಂಬಂಧ ನಡೆದಿರುವುದು ಅಮೆರಿಕದ ಮಸಾಚುಸೆಟ್ಸ್ ನಲ್ಲಿ. ಇಲ್ಲಿನ ಮೂವರು ಯುವತಿಯರು ಮದುವೆಯಾಗಿದ್ದು, ಒಂದೇ ಮನೆಯಲ್ಲಿ ಒಟ್ಟಿಗೆ ಜೀವನ ಸಾಗಿಸುತ್ತಿದ್ದಾರೆ.
ಇದನ್ನು ಓದಿ : ಮಗನನ್ನು ಕೊಲ್ಲಲು ಯತ್ನಿಸಿದ ದುಷ್ಕರ್ಮಿಗಳನ್ನು ಕಲ್ಲೆಸೆದು ಓಡಿಸಿದ ತಾಯಿ ; ವಿಡಿಯೋ Viral.!
ಇವರ ಮದುವೆಗೆ ಸಂಬಂಧಿಸಿದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.
ಸಾಮಾನ್ಯವಾಗಿ ಇಬ್ಬರು ಪುರುಷರು ಅಥವಾ ಇಬ್ಬರು ಮಹಿಳೆಯರು ಪ್ರೀತಿಸಿ ಮದುವೆಯಾಗುವುದನ್ನು ಸಲಿಂಗ ವಿವಾಹ ಎನ್ನುತ್ತೇವೆ. ಇತ್ತೀಚಿನ ದಿನಗಳಲ್ಲಿ ಇದು ಸಾಮಾನ್ಯ. ಆದರೆ ಇದೀಗ ಮತ್ತೊಂದು ವಿಚಿತ್ರ ಪ್ರೇಮ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಇಲ್ಲಿ ಮೂವರು ಯುವತಿಯರು ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾಗಿದ್ದಾರೆ.
ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಪ್ರಾರಂಭದಲ್ಲಿ ಕೇಟೀ ಮತ್ತು ನೆಸ್ ಪ್ರೀತಿಸಿ 2021 ರಲ್ಲಿ ವಿವಾಹವಾಗಿದ್ದರು. ಆದರೆ ನವೆಂಬರ್ 2022 ರಲ್ಲಿ ಕೆಲ್ಲಿ ಎಂಬ ಮತ್ತೊಬ್ಬಳು ಯುವತಿ ಈ ಲೆಸ್ಬಿಯನ್ ದಂಪತಿಗಳ ಜೀವನವನ್ನು ಪ್ರವೇಶಿಸಿದರು. ಬಳಿಕ ಮೂವರು ಒಟ್ಟಿಗೆ ಬಾಳಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನು ಓದಿ : ಪಾರ್ಕ್‌ನಲ್ಲಿ ಕುಳಿತಿದ್ದ ಯುವಕನ ಮೇಲೆ ಬೆತ್ತಲೆಯಾಗಿ ಬಂದ ಯುವತಿಯಿಂದ ಲೈಂಗಿಕ ದೌರ್ಜನ್ಯ ; ವಿಡಿಯೋ Viral.!
ಈ ಮೂವರ ವಿಚಿತ್ರ ಪ್ರೇಮ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಕೆಲವೊಂದಿಷ್ಟು ಜನರು ಇವರ ಸಂಬಂಧವನ್ನು ದ್ವೇಷಿಸಿದರೆ, ಇನ್ನೂ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ಲವ್ ಡೋಂಟ್ ಜಡ್ಜ್’ ಎಂಬ ಯೂಟ್ಯೂಬ್ ಸರಣಿಯಲ್ಲಿ ಟ್ರಿಪಲ್ ರಿಲೇಶನ್ ಶಿಪ್ ಗೆ ಸಂಬಂಧಿಸಿದ ವಿಚಿತ್ರ ಪ್ರೇಮಕಥೆಯನ್ನು ಅವರು ಹಂಚಿಕೊಂಡಿದ್ದಾರೆ. ಈ ಮೂವರು ಯುವತಿಯರ ಕುಟುಂಬದ ಸದಸ್ಯರಿಗೆ ತಮ್ಮ ಮಕ್ಕಳ ಸಂಬಂಧದ ಬಗ್ಗೆ ಸಂತಸವಿಲ್ಲ